ಸೈಲೆಂಟ್ ಕಿಲ್ಲರ್, 'ಹೊಟ್ಟೆಯ ಕ್ಯಾನ್ಸರ್‌' ಬಗ್ಗೆ ಇರಲಿ ಎಚ್ಚರ!!

By: manu
Subscribe to Boldsky

ಕ್ಯಾನ್ಸರ್ ಎನ್ನುವುದು ಜೀವ ಹಿಂಡುವ ಭಯಂಕರ ರೋಗ. ಇದು ಒಮ್ಮೆ ದೇಹದೊಳಗೆ ಪ್ರವೇಶಿಸಿದರೆ ಆ ವ್ಯಕ್ತಿಯನ್ನು ಹಿಂಡಿಹಿಪ್ಪೆ ಮಾಡಿ ಬಿಸಾಕುತ್ತದೆ. ಮೊದಲ ಹಂತದಲ್ಲಿಯೇ ಚಿಕಿತ್ಸೆ ಸಿಗದೇ ಇದ್ದರೆ ಪ್ರಾಣಾಪಾಯವಾಗುವುದು ಖಚಿತ. ಅದರಲ್ಲೂ ಹೊಟ್ಟೆಯ ಕ್ಯಾನ್ಸರ್ ಸಹಿಸಲು ಸಾಧ್ಯವಾಗದ ನೋವನ್ನು ನೀಡುವುದು. ಬೇರೆ ವಿಧದ ಕ್ಯಾನ್ಸರ್‌ಗಳು ಮೊದಲೇ ತಮ್ಮ ಲಕ್ಷಣಗಳನ್ನು ತೋರಿಸಿದರೆ ಹೊಟ್ಟೆಯ ಕ್ಯಾನ್ಸರ್ ಮಾತ್ರ ಅದರ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇದನ್ನು ಪತ್ತೆಹಚ್ಚುವುದು ಸ್ವಲ್ಪ ಕಠಿಣ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಹೊಟ್ಟೆ ನೋವು ಕಾಣಿಸಿಕೊಂಡಾಗ ಪ್ರತಿಯೊಬ್ಬರು ಇದು ಸಾಮಾನ್ಯ ಹೊಟ್ಟೆ ನೋವೆಂದು ಭಾವಿಸುತ್ತಾರೆ. ಆದರೆ ಹೊಟ್ಟೆನೋವು ಒಂದು ದಿನಕ್ಕಿಂತ ಹೆಚ್ಚು ಮತ್ತು ಪದೇ ಪದೇ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಸರಿಯಾದ ಪರೀಕ್ಷೆಗಳನ್ನು ತಕ್ಷಣ ನಡೆಸಿ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯಬೇಕು. ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

ಯಾಕೆಂದರೆ ಈ ಹೊಟ್ಟೆನೋವು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಹೊಟ್ಟೆಯ ಕ್ಯಾನ್ಸರ್ ತನ್ನ ಸುಳಿವನ್ನು ಸುಲಭದಲ್ಲಿ ಬಿಟ್ಟುಕೊಡುವುದಿಲ್ಲ. ಆದರೂ ಕೆಲವೊಂದು ಲಕ್ಷಣಗಳು ಕಾಣಿಸಿಕೊಂಡರೆ ನೀವು ಎಚ್ಚರ ವಹಿಸಿ ಎನ್ನಲು ಈ ಲೇಖನವನ್ನು ನಿಮ್ಮ ಮುಂದಿಡಲಾಗಿದೆ... 

ಮಲದಲ್ಲಿ ರಕ್ತ ಅಥವಾ ವಾಂತಿ

ಮಲದಲ್ಲಿ ರಕ್ತ ಅಥವಾ ವಾಂತಿ

ಮಲದಲ್ಲಿ ರಕ್ತ ಅಥವಾ ವಾಂತಿಯಲ್ಲಿ ರಕ್ತ ಕಾಣಿಸಿಕೊಂಡರೆ ಆಗ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಯಾಕೆಂದರೆ ಇದು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿರುವ ಸಾಧ್ಯತೆಯಿದೆ.

ಹಸಿವು ಬೇಗನೆ ಮಾಯವಾಗುವುದು

ಹಸಿವು ಬೇಗನೆ ಮಾಯವಾಗುವುದು

ಹಸಿವು ಬೇಗನೆ ಮಾಯವಾಗುವುದು ಹೊಟ್ಟೆಯ ಕ್ಯಾನ್ಸರ್‌ನ ಮತ್ತೊಂದು ಲಕ್ಷಣಗಳಲ್ಲಿ ಒಂದಾಗಿದೆ. ನಿಮಗೆ ಬೇಗನೆ ಹೊಟ್ಟೆ ತುಂಬಿದಂತೆ ಆಗುತ್ತಾ ಇದ್ದರೆ ಇದನ್ನು ಕಡೆಗಣಿಸದೆ ವೈದ್ಯರಲ್ಲಿ ಹೇಳಿ.

ಹೊಟ್ಟೆ ನೋವು

ಹೊಟ್ಟೆ ನೋವು

ಕೆಲವೊಂದು ಸಂದರ್ಭಗಳಲ್ಲಿ ಹೊಟ್ಟೆಯ ನೋವು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳಲ್ಲಿ ಒಂದಾಗಿರಬಹುದು. ಹೊಟ್ಟೆ ನೋವು ನಿರಂತರವಾಗಿದ್ದರೆ ಇದರ ಬಗ್ಗೆ ಗಮನಹರಿಸಿ.

ಕಾರಣವಿಲ್ಲದೆ ತೂಕ ಕಳೆದುಕೊಳ್ಳುವುದು

ಕಾರಣವಿಲ್ಲದೆ ತೂಕ ಕಳೆದುಕೊಳ್ಳುವುದು

ತೂಕ ಕಳೆದುಕೊಳ್ಳಲು ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೂ ನಿಮ್ಮ ತೂಕ ಕಡಿಮೆಯಾಗುತ್ತಾ ಇದೆ ಎಂದಾದರೆ ಖಂಡಿತವಾಗಿಯೂ ನೀವು ಇದನ್ನು ಪರೀಕ್ಷಿಸಿಕೊಳ್ಳಿ. ಹಠಾತ್ ಆಗಿ ತೂಕ ಕಡಿಮೆಯಾದರೆ ಇದರ ಬಗ್ಗೆ ಎಚ್ಚರ ವಹಿಸಿ.

ಕಡಿಮೆಯಾಗದ ಎದೆಯುರಿ

ಕಡಿಮೆಯಾಗದ ಎದೆಯುರಿ

ಎದೆಯುರಿ, ಅಜೀರ್ಣ ಮತ್ತು ಇತರ ಕೆಲವೊಂದು ಸಾಮಾನ್ಯ ಎನ್ನುವಂತಹ ಸಮಸ್ಯೆಗಳು ಹೊಟ್ಟೆಯ ಕ್ಯಾನ್ಸರ್ ನ ಲಕ್ಷಣವಾಗಿರಬಹುದು. ಈ ಸಮಸ್ಯೆಗಳು ಯಾವುದರಿಂದಾಗಿ ಬರುತ್ತಾ ಇದೆ ಎಂದು ವೈದ್ಯರು ಹೇಳಲಿ.

 ಹೊಟ್ಟೆ ಉಬ್ಬರ, ಭೇದಿ ಮತ್ತು ಮಲಬದ್ಧತೆ

ಹೊಟ್ಟೆ ಉಬ್ಬರ, ಭೇದಿ ಮತ್ತು ಮಲಬದ್ಧತೆ

ಹೊಟ್ಟೆಯಲ್ಲಿ ಬೆಳೆಯುತ್ತಿರುವ ಕ್ಯಾನ್ಸರ್ ಹೊಟ್ಟೆಯಲ್ಲಿ ಉಬ್ಬರ ಉಂಟಾಗುವಂತೆ ಮಾಡಬಹುದು ಅಥವಾ ಕರುಳಿನ ಕ್ರಿಯೆಗಳನ್ನು ಅಸಾಮಾನ್ಯಗೊಳಿಸಬಹುದು. ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಾ ಇದ್ದರೆ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯಿರಿ.

English summary

Hidden symptoms of stomach cancer you need to know

There are several symptoms of stomach cancer that you need to be aware of. Read this article to find out.
Please Wait while comments are loading...
Subscribe Newsletter