ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಇಂತಹ ಆಹಾರಗಳಲ್ಲಿದೆ!

By: hemanth
Subscribe to Boldsky

ಒತ್ತಡ ಹಾಗೂ ದೇಹಕ್ಕೆ ಬೇಕಾದ ವ್ಯಾಯಾಮ ಮಾಡಲು ಸಮಯವಿಲ್ಲದೆ ಇರುವುದು ಇಂದಿನ ದಿನಗಳಲ್ಲಿ ಜನರ ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ದೇಹವನ್ನು ಹಲವಾರು ರೋಗಗಳು ಕಾಡುತ್ತದೆ. ಪ್ರಮುಖವಾಗಿ ಅನಾರೋಗ್ಯಕರ ಆಹಾರದಿಂದಾಗಿ ಕೊಬ್ಬು ಹೆಚ್ಚಾಗುತ್ತದೆ. ಇದು ಹೃದಯಘಾತ ಹಾಗೂ ಇತರ ಕಾಯಿಲೆಗಳಿಗೆ ರಹದಾರಿಯಾಗುವುದು. ಹೃದಯಾಘಾತದ 7 ಲಕ್ಷಣಗಳು-ಯಾವುದಕ್ಕೂ ಎಚ್ಚರಿಕೆಯಿಂದಿರಿ!

ಅಪಧಮನಿಗಳಲ್ಲಿ ತಡೆಯಾಗುವುದರಿಂದ ಸರಿಯಾಗಿ ರಕ್ತಸಂಚಾರವಾಗದೆ ಹೃದಯಾಘಾತ ಉಂಟಾಗುತ್ತದೆ. ಈ ಲೇಖನದಲ್ಲಿ ಹೃದಯಾಘಾತವನ್ನು ತಡೆಯುವಂತಹ ಕೆಲವೊಂದು ಆಹಾರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ಆಹಾರಗಳು ಹೃದಯವನ್ನು ಕಾಪಾಡುತ್ತದೆ. ಈ ಆಹಾರಗಳು ಅಪಧನಿಮಗಳನ್ನು ಸ್ವಚ್ಛಗೊಳಿಸಿ ಯಾವುದೇ ರೀತಿಯ ತಡೆಯಾಗದಂತೆ ನೋಡಿಕೊಳ್ಳುತ್ತದೆ. ಹಲವಾರು ರೀತಿಯ ಹಣ್ಣುಗಳು ಹಾಗೂ ತರಕಾರಿಗಳು ಹೃದಯದ ಆರೋಗ್ಯವನ್ನು ಕಾಪಾಡುವುದು. ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ

ನೈಸರ್ಗಿಕವಾಗಿ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನುವುದು ಮತ್ತಷ್ಟು ಒಳ್ಳೆಯದು. ಈ ಆಹಾರಗಳು ಹೃದಯದ ಆರೋಗ್ಯವನ್ನು ಕಾಪಾಡಿ ಹೃದಯಾಘಾತವಾಗದಂತೆ ತಡೆಯುವುದು. ಏನು ತಿನ್ನುತ್ತೇವೆ ಮತ್ತು ಏನು ಕುಡಿಯುತ್ತೇವೆ ಎನ್ನುವುದು ತುಂಬಾ ಮುಖ್ಯವಾಗಿರುತ್ತದೆ. ಇದರಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಸಿಗುವುದು. ಹೃದಯಾಘಾತವನ್ನು ತಡೆಯುವಂತಹ ಕೆಲವೊಂದು ಆಹಾರಗಳ ಬಗ್ಗೆ ತಿಳಿದುಕೊಳ್ಳಿ.....    

ಸಾಲ್ಮನ್ ಮೀನು

ಸಾಲ್ಮನ್ ಮೀನು

ಸಾಲ್ಮನ್ ಮೀನಿನಲ್ಲಿ ಆರೋಗ್ಯಕರ ಕೊಬ್ಬಿನಾಮ್ಲವಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತದೆ ಮತ್ತು ಉರಿಯೂತವನ್ನು ತಡೆಯುತ್ತದೆ. ಹೃದಯಾಘಾತಕ್ಕೆ ಕೊಲೆಸ್ಟ್ರಾಲ್ ಮತ್ತು ಉರಿಯೂತ ಪ್ರಮುಖ ಕಾರಣವಾಗಿದೆ.

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್ ನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಇದೆ. ರಕ್ತನಾಳಗಳು ಹಾನಿಗೊಳಗಾಗುವುದನ್ನು ಇದು ತಡೆಯುತ್ತದೆ ಹಾಗೂ ರಕ್ತದೊತ್ತಡವನ್ನು ಸಾಮಾನ್ಯವಾಗಿಡುವುದು. ದಿನಕ್ಕೆ ಎರಡು ಲೋಟ ಕಿತ್ತಳೆ ಜ್ಯೂಸ್ ಕುಡಿದರೆ ಹೃದಯಾಘಾತದಿಂದ ಪಾರಾಗಬಹುದು ಎಂದು ಅಧ್ಯಯನಗಳು ಹೇಳಿವೆ.

ಬೀಜಗಳು

ಬೀಜಗಳು

ಬೀಜಗಳು ತುಂಬಾ ಆರೋಗ್ಯಕಾರಿ ಆಹಾರವಾಗಿದೆ. ಇದು ಕೊಬ್ಬಿನಾಮ್ಲಗಳು, ಅಪರ್ಯಾಪ್ತ ಕೊಬ್ಬು ಮತ್ತು ಒಮೆಗಾ3 ಕೊಬ್ಬಿನಾಮ್ಲವು ಬೀಜಗಳಲ್ಲಿ ಇದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುವುದು ಮಾತ್ರವಲ್ಲದೆ ಗಂಟು ಹಾಗೂ ಹೃದಯದ ಆರೋಗ್ಯವು ಚೆನ್ನಾಗಿರುವುದು.

ಅರಿಶಿನ

ಅರಿಶಿನ

ಅರಿಶಿನದಲ್ಲಿ ತುಂಬಾ ಬಲಿಷ್ಠವಾಗಿರುವಂತಹ ಉರಿಯೂತ ಶಮನಕಾರಿ ಗುಣವಾದ ಸಿರ್ಕುಮಿನ್ ಲಭ್ಯವಿದ್ದು, ಇದು ಉರಿಯೂತವನ್ನು ಕಡಿಮೆ ಮಾಡಿ ಅತಿಯಾಗಿ ಕೊಬ್ಬು ಶೇಖರಣೆಯಾಗದಂತೆ ನೋಡಿಕೊಳ್ಳುವುದು. ಅರಿಶಿನವನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಹೃದಯಾಘಾತವನ್ನು ತಡೆಯಬಹುದು.

ಗ್ರೀನ್ ಟೀ

ಗ್ರೀನ್ ಟೀ

ಹೃದಯಾಘಾತವನ್ನು ತಡೆಯುವಂತಹ ಮತ್ತೊಂದು ಪ್ರಮುಖವಾಗಿರುವ ಆಹಾರವೆಂದರೆ ಅದು ಗ್ರೀನ್ ಟೀ. ಗ್ರೀನ್ ಟೀಯಲ್ಲಿರುವ ಕಾಟೆಚಿನ್ ಎನ್ನುವ ಅಂಶವು ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಹೃದಯವನ್ನು ಕಾಪಾಡುವುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಚಯಾಪಚಾಯ ಕ್ರಿಯೆಯನ್ನು ವೃದ್ಧಿಸುವುದು. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ ಫಲಿತಾಂಶ ನೀಡುವುದು.

 
English summary

Foods That Will Clean your Arteries And Protect You Heart Attack

One of the most dangerous conditions of our time is heart attack and we will do everything to protect ourselves from it. This article will give you a list of some of the best foods that will help prevent heart attacks.
Story first published: Friday, December 16, 2016, 8:04 [IST]
Please Wait while comments are loading...
Subscribe Newsletter