For Quick Alerts
ALLOW NOTIFICATIONS  
For Daily Alerts

ಇದೇನಿದು, ಹೃದಯದ ಆರೋಗ್ಯಕ್ಕೆ ವೈನ್ ಒಳ್ಳೆಯದಂತೆ!

ವೈನ್ ಕುಡಿಯುವ ವೈನ್ ಪ್ರಿಯರಿಗೊಂದು ಸಂತಸದ ಸುದ್ದಿ. ವೈನ್ ಸೇವನೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು ಆದರೆ ಕುಡಿಯುವಾಗ ಮಿತಿ ಇರಲಿ. ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಆದರೆ ಮಿತವಾಗಿ ವೈನ್ ಕುಡಿಯುವುದರಿಂದ ಪ್ರಯೋಜನಗಳು ನೋಡಿ ಇಂತಿವೆ...

By Hemanth
|

ವೈನ್ ಕುಡಿಯುವ ವೈನ್ ಪ್ರಿಯರಿಗೊಂದು ಸಂತಸದ ಸುದ್ದಿ. ಪ್ರತಿನಿತ್ಯ ವೈನ್ ಸೇವನೆ ಹೃದಯದ ಸ್ವಾಸ್ಥ್ಯಕ್ಕೆ ಒಳ್ಳೆಯದು ಆದರೆ ಕುಡಿಯುವಾಗ ಮಿತಿ ಇರಲಿ! ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಆದರೆ ಮಿತವಾಗಿ ವೈನ್ ಕುಡಿಯುವುದರಿಂದ ಪ್ರಯೋಜನಗಳು ನೋಡಿ ಇಂತಿವೆ....

ಇಂಗ್ಲಿಷ್‌ನಲ್ಲಿ ಒಂದು ಗಾದೆಯಿದೆ. ಓಲ್ಡ್ ಈಸ್ ಗೋಲ್ಡ್' ಎಂದು. ಇದರರ್ಥ ಹಳೆಯದ್ದು ಚಿನ್ನ ಎಂದು. ಹೆಚ್ಚಿನ ಸಂದರ್ಭದಲ್ಲಿ ನಿಜವಾಗಿರುತ್ತದೆ. ಮನೆಯಲ್ಲಿ ಕೆಲವೊಂದು ಹಳೆಯ ವಸ್ತುಗಳನ್ನು ಮೂಲೆಗೆ ಹಾಕಿದ್ದರೂ ಅದು ಮುಂದೆ ಒಂದು ದಿನ ಖಂಡಿತವಾಗಿಯೂ ಉಪಯೋಗಕ್ಕೆ ಬಂದೇ ಬರುತ್ತದೆ. ದ್ರಾಕ್ಷಿ ರಸ ಅಂದರೆ ವೈನ್ ಬಗ್ಗೆ ಈ ಮಾತು ತುಂಬಾ ಹೊಂದಿಕೊಳ್ಳುತ್ತದೆ.

healthy heart

ಯಾಕೆಂದರೆ ವೈನ್ ಎಷ್ಟು ಹಳೆಯದ್ದಾಗಿರುತ್ತದೆಯಾ ಅಷ್ಟು ರುಚಿಯಾಗಿರುತ್ತದೆಯಂತೆ. ಇದರಿಂದ ವಿದೇಶಗಳಲ್ಲಿ ತುಂಬಾ ಹಳೆಯ ವೈನ್‌ಗಳಿಗೆ ತುಂಬಾ ಬೇಡಿಕೆಯಿರುತ್ತದೆ. ಅದರಲ್ಲೂ ಹಳೆಯ ವೈನ್ ನಿಂದ ತಯಾರಿಸುವಂತಹ ಆಹಾರಗಳು ತುಂಬಾ ರುಚಿಕರವಾಗಿರುತ್ತದೆ.

1098ರಿಂದ 1179ರ ತನಕ ಬದುಕಿದ್ದ ಸನ್ಯಾಸಿನಿ ಹಿಲ್ಡೆಗ್ಯಾರ್ಡ್ ವ್ಯಾನ್ ಬಿಯಾಂಗ್ ಬರೆದಿರುವಂತಹ ಅಡುಗೆಯ ಪುಸ್ತಕದಲ್ಲಿ ಹಳೆಯ ವೈನ್‌ನಿಂದ ತಯಾರಿಸುವಂತಹ ಆಹಾರವು ಹೃದಯಕ್ಕೆ ತುಂಬಾ ಒಳ್ಳೆಯದು. ಇದು ಹಲವಾರು ರೋಗಗಳನ್ನು ನಿವಾರಿಸುವುದು ಮಾತ್ರವಲ್ಲದೆ ಹಲವಾರು ರೋಗಗಳು ಬರದಂತೆ ತಡೆಯುತ್ತದೆ ಎಂದು ತಿಳಿದುಬರುತ್ತದೆ. ಹೃದಯದ ಕಾಯಿಲೆ ಇರುವವರಿಗೆ ತಯಾರಿಸಬಹುದಾದ ಆಹಾರದ ಬಗ್ಗೆ ತಿಳಿದುಕೊಳ್ಳುವ.

ಹೃದಯಕ್ಕಾಗಿ ವೈನ್

ಇದು ಹೃದಯದ ಆರೋಗ್ಯಕ್ಕೆ ಬಳಸುವಂತಹ ತುಂಬಾ ಪರಿಣಾಮಕಾರಿ ಆಹಾರವೆನ್ನಾಗುತ್ತದೆ. ಇದು ಹೃದಯಾಘಾತದ ಸಂದರ್ಭದಲ್ಲಿ ತುಂಬಾ ಸುಧಾರಣೆ ಮಾಡುವುದು. ರಕ್ತದೊತ್ತಡ, ಎದೆನೋವು ಮತ್ತು ಹೃದಯಾಘಾತವಾಗುವಂತಹ ಹೃದಯದ ರೋಗಿಗಳಿಗೆ ಇದು ಅತ್ಯುತ್ತಮವಾಗಿದೆ. ಹೃದಯಸ್ತಂಭನಕ್ಕೆ ಇದು ತುಂಬಾ ಪರಿಣಾಮಕಾರಿ.

ಬೇಕಾಗುವ ಸಾಮಗ್ರಿಗಳು
*ವೈನ್(ಮನೆಯಲ್ಲಿ ತಯಾರಿಸಿದ ವೈನ್)- 1 ಲೀಟರ್
*ವೈನ್ ವಿನೇಗರ್ 2 ಚಮಚ ರೆಡ್ ವೈನ್ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
*ನೈಸರ್ಗಿಕ ಜೇನುತುಪ್ಪ 300 ಗ್ರಾಂ
*ಪಾರ್ಸ್ಲಿಯ ಕಾಂಡಗಳು 10

ತಯಾರಿಸುವ ವಿಧಾನ
*ಪಾರ್ಸ್ಲಿಯ ಕಾಂಡಗಳನ್ನು ಬೇರಿನ ಸಮೇತವಾಗಿ ಒಂದು ಲೀಟರ್ ಶುದ್ಧ ವೈನ್‌ನಲ್ಲಿ ಹಾಕಿಡಿ.

*ಇದಕ್ಕೆ ಎರಡು ಚಮಚ ವಿನೇಗರ್ ಹಾಕಿ.
*ಇದನ್ನು ಹತ್ತು ನಿಮಿಷ ಕಾಲ ಬೇಯಿಸಿ.
*ಇದಕ್ಕೆ ಜೇನುತುಪ್ಪ ಹಾಕಿಕೊಂಡು ಮತ್ತೆ ನಾಲ್ಕು ನಿಮಿಷ ಕಾಲ ಬೇಯಿಸಿ.
*ಇದನ್ನು ಗಾಳಿಸಿಕೊಂಡು ಒಂದು ಬಾಟಲಿಗೆ ಹಾಕಿಡಿ.
*ಬಾಟಲಿಯನ್ನು ಮುಚ್ಚಿಡಿ.
*ಇದು ಹೃದಯಕ್ಕೆ ತುಂಬಾ ಆರೋಗ್ಯಕಾರಿ ಆಹಾರವೆಂದು ಪರಿಗಣಿಸಲಾಗಿದೆ.

ಸೇವಿಸಬೇಕಾದ ಪ್ರಮಾಣ
*ಪ್ರತೀ ದಿನ ಎರಡು ಚಮಚದಷ್ಟು ಮಿಶ್ರಣವನ್ನು ಸೇವಿಸಿ. ಹೃದಯದ ಕಾಯಿಲೆಯು ತೀವ್ರವಾಗಿದ್ದರೆ ಇದನ್ನು ಹಲವಾರು ತಿಂಗಳ ಕಾಲ ಸೇವಿಸಬೇಕು.
*ಆದರೆ ಹೃದಯದ ಕಾಯಿಲೆ ತೀವ್ರವಾಗಿದ್ದರೂ ದಿನದಲ್ಲಿ ಮೂರು ಚಮಚ ಮಾತ್ರ ಸೇವನೆ ಮಾಡಿ.... (ಯಾವುದಕ್ಕೂ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಿ)

English summary

Eight hundred year old wine recipe for a healthy heart

Heart-healthy foods are abundant and this article focuses on just one recipe that makes use of wine. Are you now wondering - is wine good for the heart? Then, the answers are in the writings of the nun Hildegard. This nun lived between 1098 and 1179 and her recipes were found in the ancient writings. Her writings include the cure for diseases and drugs for almost all diseases. Now, let's take a look at the wine recipe for heart patients.
X
Desktop Bottom Promotion