ಮೆಣಸಿನಕಾಯಿಗಳನ್ನು ಸೇವಿಸಿದರೆ, ಹೃದಯದ ಆರೋಗ್ಯ ವೃದ್ಧಿ!

By Arshad
Subscribe to Boldsky

ಖಾರಪ್ರಿಯರಿಗೊಂದು ಒಳ್ಳೆಯ ಸುದ್ದಿ. ಏಕೆಂದರೆ ಖಾರಕ್ಕಾಗಿ ಮೆಣಸಿನಕಾಯಿಗಳನ್ನು (ಹಸಿ ಮೆಣಸಿನಕಾಯಿ, ಕೆಂಪು ಮೆಣಸಿನಕಾಯಿ, ಒಣಮೆಣಸಿನ ಕಾಯಿ) ಸೇವಿಸುತ್ತಾ ಬಂದಿರುವವರ ಆರೋಗ್ಯ, ಅದರಲ್ಲೂ ವಿಶೇಷವಾಗಿ ಹೃದಯದ ಆರೋಗ್ಯ ಅತ್ಯುತ್ತಮವಾಗಿರುವುದು ಕಂಡುಬಂದಿದ್ದು ಹೃದಯಕ್ಕೆ ಪೂರಕ ಆಹಾರ ಎಂಬ ಹೆಗ್ಗಳಿಕೆಯನ್ನೂ ಈಗ ಮೆಣಸಿನಕಾಯಿಗಳು ಪಡೆದುಕೊಂಡಿದೆ. ಆದ್ದರಿಂದ ಖಾರ ಇಷ್ಟವಿಲ್ಲದವರೂ ಸಹಾ ತಮ್ಮ ಹೃದಯಕ್ಕಾದರೂ ಕೊಂಚ ಮೆಣಸಿನಕಾಯಿಗಳನ್ನು ತಮ್ಮ ನಿತ್ಯದ ಆಹಾರಗಳಲ್ಲಿ ಸೇರಿಸಿಕೊಳ್ಳುವಂತೆ ಇತ್ತೀಚಿನ ಸಂಶೋಧನೆಯಲ್ಲಿ ತಿಳಿಸಲಾಗಿದೆ.

European Journal of Public Health ಎಂಬ ಆರೋಗ್ಯ ಮಾಧ್ಯಮದಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ ನಿತ್ಯವೂ ನಿಯಮಿತ ಪ್ರಮಾಣದಲ್ಲಿ ಮೆಣಸಿನಕಾಯಿಗಳನ್ನು ಸೇವಿಸುವುದರಿಂದ ಜೀರ್ಣಾಂಗಗಳಿಗಾಗಲೀ ಜೀವರಾಸಾಯನಿಕ ವ್ಯವಸ್ಥೆಗಾಗಲೀ ಯಾವುದೇ ತೊಂದರೆ ಇರುವುದಿಲ್ಲ ಎಂದು ತಿಳಿಸಿದೆ. ಇದಕ್ಕೂ ಮುನ್ನ ಮೆಣಸಿನಕಾಯಿಗಳನ್ನು ಸೇವಿಸಿದರೆ ಇದರಿಂದ ಹೊಟ್ಟೆಯಲ್ಲಿ ಆಮ್ಲೀಯತೆ ಮತ್ತು ಎದೆಯುರಿ ಉಂಟಾಗುತ್ತದೆ ಎಂದು ಭಾವಿಸಲಾಗಿತ್ತು.       ಹೋ.. ಖಾರದಿಂದ ವಾವ್! ಅನ್ನುವಂತಹ ಮೈಕಟ್ಟು

 Add chillies to your diet to keep your heart healthy
 

ಆದರೆ ಈ ಬಗ್ಗೆ ನಡೆದ ಸಂಶೋಧನೆಯಲ್ಲಿ ಸುಮಾರು ನಾಲ್ಕು ವಾರಗಳ ಕಾಲ ಕೇವಲ ಮೆಣಸಿನಕಾಯಿಗಳನ್ನು ಮತ್ತು ಮೆಣಸಿನ ಆಧಾರಿತ ಆಹಾರಗಳನ್ನು ತಿನ್ನಿಸಿ ಅವರ ಆರೋಗ್ಯದ ಅಂಕಿಅಂಶಗಳನ್ನು ಪರಿಶೀಲಿಸಿದ ಬಳಿಕ ಮೆಣಸಿನಕಾಯಿಗಳನ್ನು ಸೇವನೆಯಿಂದ ಹೃದಯದ ಕ್ಷಮತೆ ಹೆಚ್ಚಿಸುವುದು ಮತ್ತು ರಕ್ತದ ಒತ್ತಡ ಸಮರ್ಪಕ ಮಟ್ಟಕ್ಕೆ ಬಂದಿರುವುದನ್ನು ಕಂಡುಕೊಳ್ಳಲಾಗಿದೆ.

ಅಂದರೆ ಇದರರ್ಥ ದಿನಕ್ಕೆ ಎಷ್ಟು ಬೇಕಾದರೂ ಮೆಣಸಿನಕಾಯಿಗಳನ್ನು ತಿನ್ನಬಹುದು ಎಂದಲ್ಲ. ಅಂಕಿ ಅಂಶಗಳನ್ನು ಕಲೆಹಾಕಿ ವಿಶ್ಲೇಷಿಸಿದ ಬಳಿಕ ಇತರ ಆಹಾರಗಳೊಂದಿಗೆ ಪ್ರತಿದಿನಕ್ಕೆ ಗರಿಷ್ಠ ಮೂವತ್ತು ಗ್ರಾಂ ಮೆಣಸಿನಕಾಯಿಗಳನ್ನು ನಿಮ್ಮ ದಿನ ನಿತ್ಯದ ಆಹಾರ ಕ್ರಮದಲ್ಲಿ ಸೇವಿಸಿದರೆ ಉತ್ತಮ ಎಂದು ತಿಳಿದುಬಂದಿದೆ. ಅದೂ ಅಲ್ಲದೇ ಒಂದೆರಡೇ ದಿನದಲ್ಲಿಯೂ ಇದರ ಪರಿಣಾಮ ಅರಿವಾಗದು. ಇದರ ಪರಿಣಾಮ ಕಂಡುಬರಲು ಪ್ರಾರಂಭವಾಗುವುದೇ ಎರಡು ವಾರಗಳ ಬಳಿಕ. ನಾಲ್ಕು ವಾರಗಳ ಬಳಿಕ ಉತ್ತಮ ಪರಿಣಾಮ ಕಂಡುಬಂದಿದೆ. ಭಾರತೀಯ ಹಸಿಮೆಣಸಿನ 10 ಪ್ರಯೋಜನಗಳು ನಿಮಗೆ ಗೊತ್ತೇ?

 Add chillies to your diet to keep your heart healthy
 

ಅಚ್ಚರಿಯ ವಿಷಯವೆಂದರೆ ಮೆಣಸಿನಕಾಯಿಗಳ ಸೇವನೆಯಿಂದ ಎಲ್ಲರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದರೂ ಮಧ್ಯವಯಸ್ಸು ದಾಟಿದ ಪುರುಷರಲ್ಲಿ ಹೆಚ್ಚು ಸುಧಾರಣೆ ಕಂಡುಬಂದಿದೆ. ಬನ್ನಿ, ಈಗ ದಿನಕ್ಕೆ ಮೂವತ್ತು ಗ್ರಾಂ ಮೆಣಸಿನಕಾಯಿಗಳನ್ನು ತಿನ್ನಬಹುದು ಎಂದು ವೈದ್ಯರೂ ಅಪ್ಪಣೆ ನೀಡಿ ಆಯ್ತಲ್ಲ, ಇನ್ನೇಕ ತಡ, ಇದನ್ನು ಹೇಗೆ ಸೇವಿಸಬೇಕು ಎಂದು ನೋಡೋಣ: ಸಾರಿನ ಪುಡಿ, ಮೆಣಸಿನ ಪುಡಿ, ಖಾರದಪುಡಿ

 Add chillies to your diet to keep your heart healthy
 

* ಪ್ರತಿಬಾರಿ ತಾಜಾ ಕೊಯ್ದ ಹಸಿಮೆಣಸಿನಕಾಯಿಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಲು ಹೆಚ್ಚಿನ ಆದ್ಯತೆ ನೀಡಿ. ಹೆಚ್ಚಿನ ಪರಿಣಾಮಕ್ಕಾಗಿ ಹಸಿಮೆಣಸಿನಕಾಯಿಗಳನ್ನು ಚಿಕ್ಕದಾಗಿ ಕೊಚ್ಚಿ ನಿಮ್ಮ ನೆಚ್ಚಿನ ಕರಿ ಮತ್ತು ದಾಲ್‌ಗಳ ಮೇಲೆ ಹಸಿಯಾಗಿ ಚಿಮುಕಿಸಿ ಸೇವಿಸಿ.

* ಬರೆಯ ಹಸಿರು ಮೆಣಸಿನಕಾಯಿಗಳೇ ಆಗಬೇಕೆಂದಿಲ್ಲ, ಕೆಂಪು ಮೆಣಸಿನಕಾಯಿ, ಒಣಮೆಣಸಿನ ಕಾಯಿ ಉತ್ತಮ ಆರೋಗ್ಯವರ್ಧಕಗಳಾಗಿವೆ.

* ಮೆಣಸಿನಕಾಯಿಗಳ ಉತ್ತಮ ಪ್ರಯೋಜನ ಪಡೆಯಬೇಕಾದರೆ ತಾಜಾ ಮೆಣಸಿನಕಾಯಿಗಳನ್ನೇ ಉಪಯೋಗಿಸುವುದು ಉತ್ತಮ. ಕೆಂಪು ಮೆಣಸಿನ ಪುಡಿ ರುಚಿ ನೀಡಿದರೂ ಹಸಿಮೆಣಸಿನ ಆರೋಗ್ಯಕರ ಗುಣಗಳನ್ನು ಹೊಂದಿರಲಾರದು.

For Quick Alerts
ALLOW NOTIFICATIONS
For Daily Alerts

    English summary

    Add chillies to your diet to keep your heart healthy

    If you love spicy food here is some good news for you. Adding more spice to your food, namely chillies can help boost your heart health and keep heart diseases at bay. Even if you don’t like too much spice in your food, adding a dash of chillies can still help you reap some of its benefits.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more