For Quick Alerts
ALLOW NOTIFICATIONS  
For Daily Alerts

ಹೊಟ್ಟೆ ಬೊಜ್ಜು ಕರಗಲು ಆ್ಯಪಲ್ ಸಿಡರ್‌ ವಿನೆಗರ್‌ ಎಷ್ಟು ಹೊತ್ತಿಗೆ ಸೇವಿಸಬೇಕು? ಹೇಗೆ ಸೇವಿಸಬೇಕು ಗೊತ್ತಾ?

|

ಈಗ ಹೆಚ್ಚಿನವರ ದೊಡ್ಡ ಸಮಸ್ಯೆಯೆಂದರೆ ಹೊಟ್ಟೆ ಬೊಜ್ಜು. ಹಳೆಯ ಪೋಟೋ ನೋಡುತ್ತಾ ಛೇ ಹೇಗಿದ್ದೆ, ಹೇಗಾದೆ ಎಂದು ಅಂದ್ಕೊಳ್ಳುತ್ತೇವೆ... ಈ ಹೊಟ್ಟೆ ಬೊಜ್ಜು ಒಂದು ಕರಗಿದರೆ ಸಾಕು ನನ್ನ ದೇಹದ ಶೇಪ್ ಸೂಪರ್‌ ಆಗಿರುತ್ತೆ ಎಂದು ಅಂದ್ಕೊಳ್ಳುತ್ತೇವೆ, ಹಾಗಾಗಿ ಹೊಟ್ಟೆ ಬೊಜ್ಜು ಕರಗಲು ಏನು ಮಾಡಬೇಕು ಎಂದು ಕೆಲ ರೆಸಿಪಿ ನೋಡುವುದು, ಹೊಟ್ಟೆ ಬೊಜ್ಜಿಗೆ ಯಾವ ವ್ಯಾಯಾಮ ಒಳ್ಳೆಯದು ಎಂದು ಸರ್ಚ್‌ ಮಾಡುವುದು ಎಲ್ಲಾ ಮಾಡುತ್ತೇವೆ. ಆದರೆ ಸರಿಯಾದ ಮಾರ್ಗದಲ್ಲಿ ಹೊಟ್ಟೆ ಬೊಜ್ಜು ಕರಗಿಸಲು ಪ್ರಯತ್ನಿಸುವವರು ಕೆಲವೇ ಕೆಲವು ಜನರು. ಅವರಷ್ಟೇ ಪ್ರಯೋಜನವನ್ನು ಕಾಣಲು ಸಾಧ್ಯ.

ಹೊಟ್ಟೆ ಬೊಜ್ಜು ಕರಗಿಸಲು ಆ್ಯಪಲ್ ಸಿಡರ್‌ ವಿನೆಗರ್ ಒಳ್ಳೆಯದು ಎಂದು ಗೊತ್ತಿರಬಹುದು. ರಶ್ಮಿಕಾ ಮಂದಣ್ಣ ಅವರ ಫಿಟ್ನೆಸ್‌ ರುಟೀನ್‌ ಡಯಟ್‌ನಲ್ಲಿ ಆ್ಯಪಲ್ ಸಿಡರ್‌ ವಿನೆಗರ್‌ಗೆ ಪ್ರಮುಖ ಸ್ಥಾನವಿದೆ. ತುಂಬಾ ಜನ ಸೆಲೆಬ್ರಿಟಿಗಳು ತಮ್ಮ ಮೈ ತೂಕ ಕಾಪಾಡಿಕೊಳ್ಳಲು ಇದನ್ನು ಬಳಸುತ್ತಿದ್ದಾರೆ.

ಹೊಟ್ಟೆ ಬೊಜ್ಜು ಕರಗಿಸಲು ಆ್ಯಪಲ್ ಸಿಡರ್‌ ವಿನೆಗರ್‌ ಬೆಸ್ಟ್‌. ಇದು ಬಹುತೇಕ ಎಲ್ಲರಿಗೆ ಗೊತ್ತಿರುವ ವಿಷಯ, ಆದರೆ ಆ್ಯಪಲ್ ಸಿಡರ್‌ ವಿನೆಗರ್‌ ಹೇಗೆ ಕುಡಿದರೆ ಬೊಜ್ಜು ಕರಗಿಸಲು ಹೆಚ್ಚು ಪರಿಣಾಮಕಾರಿ ಎಂಬುವುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ, ಈ ಲೇಖನದಲ್ಲಿ ಇದರ ಕುರಿತು ವಿವರವಾಗಿ ಹೇಳಲಾಗಿದೆ ನೋಡಿ:

ಆ್ಯಪಲ್ ಸಿಡರ್‌ ವಿನೆಗರ್‌ ವಿನೆಗರ್‌ ತೂಕ ಇಳಿಕೆಗೆ ಹೇಗೆ ಸಹಕಾರಿ?

ಆ್ಯಪಲ್ ಸಿಡರ್‌ ವಿನೆಗರ್‌ ವಿನೆಗರ್‌ ತೂಕ ಇಳಿಕೆಗೆ ಹೇಗೆ ಸಹಕಾರಿ?

ಮೊದಲಿಗೆ ಆ್ಯಪಲ್ ಸಿಡರ್‌ ವಿನೆಗರ್‌ ತೂಕ ಇಳಿಕೆಗೆ ಹೇಗೆ ಸಹಕಾರಿ ಎಂಬುವುದನ್ನು ತಿಳಿಯೋಣ. ಆ್ಯಪಲ್ ಸಿಡರ್‌ ವಿನೆಗರ್‌ನಲ್ಲಿ ಕ್ಯಾಲೋರಿ ಅಂಶ ತುಂಬಾನೇ ಕಡಿಮೆ ಇದೆ. ಇದು ದೇಹವನ್ನು ಡಿಟಾಕ್ಸ್‌ ಮಾಡುವಲ್ಲಿ ಸಹಕಾರಿ. ಇದು ರಕ್ತದಲ್ಲಿರುವ ಟ್ರೈಗ್ಲಿಸರೈಡ್‌ಗಳು (triglycerides) ಕಡಿಮೆ ಮಾಡಿ ಕೊಬ್ಬು ಕರಗುವಂತೆ ಮಾಡುತ್ತದೆ.

ಹೊಟ್ಟೆ ಹಸಿವು ಕಡಿಮೆಯಾಗುವುದು

ಹೊಟ್ಟೆ ಹಸಿವು ಕಡಿಮೆಯಾಗುವುದು

ಆ್ಯಪಲ್ ಸಿಡರ್‌ ವಿನೆಗರ್‌ ಕುಡಿಯುವುದರಿಂದ ಬೇಗನೆ ಹಸಿವು ಆಗುವುದಿಲ್ಲ, ಇದರಿಂದಾಗಿ ಆಗಾಗ ತಿನ್ನುವುದನ್ನು ತಪ್ಪಿಸಬಹುದು, ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರದ ಕಡೆ ಮಾತ್ರ ಗಮನ ನೀಡಿದರೆ ಆ್ಯಪಲ್ ಸಿಡರ್‌ ವಿನೆಗರ್‌ ಹೊಟ್ಟೆ ಬೊಜ್ಜು ಕರಗಿಸುವಲ್ಲಿ ತುಂಬಾನೇ ಪರಿಣಾಮಕಾರಿಯಾಗಿದೆ.

ಆ್ಯಪಲ್ ಸಿಡರ್‌ ವಿನೆಗರ್‌ ಹೇಗೆ ಕುಡಿಯಬೇಕು

ಆ್ಯಪಲ್ ಸಿಡರ್‌ ವಿನೆಗರ್‌ ಹೇಗೆ ಕುಡಿಯಬೇಕು

ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಆ್ಯಪಲ್ ಸಿಡರ್‌ ವಿನೆಗರ್‌ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು. ಇದನ್ನು ಊಟಕ್ಕೆ ಅರ್ಧ ಅಥವಾ ಒಂದು ಗಂಟೆ ಮೊದಲು ಸೇವಿಸಿ. ದಿನದಲ್ಲಿ ಒಂದು ಲೋಟ ಕುಡಿದರೆ ಸಾಕು. ಹೆಚ್ಚಾದರೆ ಅಮತವೂ ವಿಷ ಎಂದು ಹೇಳುವಂತೆ ಯಾವುದೂ ಅತಿಯಾದರೆ ಒಳ್ಳೆಯದಲ್ಲ.

ಆ್ಯಪಲ್ ಸಿಡರ್‌ ವಿನೆಗರ್‌ ಯಾವಾಗ ಕುಡಿದರೆ ಒಳ್ಳೆಯದು?

ಆ್ಯಪಲ್ ಸಿಡರ್‌ ವಿನೆಗರ್‌ ಯಾವಾಗ ಕುಡಿದರೆ ಒಳ್ಳೆಯದು?

ನಿಮಗೆ ಬೆಸ್ಟ್‌ ರಿಸಲ್ಟ್‌ಗೆ ಆ್ಯಪಲ್ ಸಿಡರ್‌ ವಿನೆಗರ್‌ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೊರೆಯುವ ಪ್ರಮುಖ ಪ್ರಯೋಜನವೆಂದರೆ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ.

ಸೂಚನೆ: ಆ್ಯಪಲ್ ಸಿಡರ್‌ ವಿನೆಗರ್‌ ಅನ್ನು ಹಾಗೇ ಕುಡಿಯಬೇಡಿ, ನೀರಿನಲ್ಲಿ ಮಿಶ್ರ ಮಾಡಿಯೇ ಕುಡಿಯಬೇಕು.

* ಇನ್ನು ಆ್ಯಪಲ್ ಸಿಡರ್‌ ವಿನೆಗರ್‌ ತುಂಬಾ ಹೊತ್ತು ಬಾಯಲ್ಲಿ ಇಡಬೇಡಿ, ಹಲ್ಲುಗಳಿಗೆ ಒಳ್ಳೆಯದು.

ಆ್ಯಪಲ್ ಸಿಡರ್‌ ವಿನೆಗರ್‌ ಇತರ ಪ್ರಯೋಜನಗಳು

ಆ್ಯಪಲ್ ಸಿಡರ್‌ ವಿನೆಗರ್‌ ಇತರ ಪ್ರಯೋಜನಗಳು

* ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ

* ಅಜೀರ್ಣ ಸಮಸ್ಯೆ ತಡೆಗಟ್ಟತ್ತೆ

* ಅಲ್ಲದೆ ಆ್ಯಪಲ್ ಸಿಡರ್‌ ವಿನೆಗರ್‌ ತ್ವಚೆಯ ಹೊಳಪು ಹೆಚ್ಚಿಸುತ್ತೆ, ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

English summary

What's The Best Time To Drink Apple Cider vinegar to Lose Weight?

What's the best time to drink apple cider vinegar to lose weight?, Read on...
Story first published: Wednesday, June 22, 2022, 17:48 [IST]
X
Desktop Bottom Promotion