For Quick Alerts
ALLOW NOTIFICATIONS  
For Daily Alerts

ಈ ಟಿಪ್ಸ್ ಪಾಲಿಸಿದರೆ ಮಳೆಗಾಲದಲ್ಲಿ ಮೈ ತೂಕ ಹೆಚ್ಚಲ್ಲ

|

ಮಳೆಗಾಲ ಬಂತೆಂದರೆ ಹೆಚ್ಚಿನವರು ಒಂದೆರಡು ಕೆಜಿ ತೂಕ ಹೆಚ್ಚಾಗುತ್ತಾರೆ, ಅದಕ್ಕೆ ಕಾರಣ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರ ಹಾಗೂ ನಮ್ಮ ಜೀವನಶೈಲಿಯಾಗಿರುತ್ತದೆ. ಹೊರಗಡೆ ಧೋ... ಅಂತ ಮಳೆ ಸುರಿಯುವಾಗ ಯಾರೂ ಹೊರಗಡೆ ಓಡಾಡಲು ಬಯಸುವುದಿಲ್ಲ, ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಹೋಗುತ್ತಾರೆ. ಇನ್ನು ವಾಕಿಂಗ್, ಜಾಗಿಂಗ್ ಇವೆಲ್ಲಾ ಸ್ಟಾಪ್ ಆಗುವುದು.

ಮನೆಯಲ್ಲೇ ಥ್ರೆಡ್ ಮಿಲ್ ಇದ್ದವರಲ್ಲಿ ಕೆಲವರಷ್ಟೇ ವ್ಯಾಯಾಮ ಮಾಡುತ್ತಾರೆ, ಏಕೆಂದರೆ ಮಳೆಗಾಲದಲ್ಲಿ ಬೆಚ್ಚಗೆ ಮಲಗುವುದು ಅಥವಾ ಒಂದು ಕಡೆ ಕೂತು ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೇವೆ. ಇನ್ನು ಆಹಾರ ವಿಷಯಕ್ಕೆ ಬರುವುದಾದರೆ ಎಣ್ಣೆಯಲ್ಲಿ ಕರಿದ ಬಜ್ಜಿ, ವಡೆ ಈ ರೀತಿಯ ಆಹಾರಗಳೇ ಹೆಚ್ಚು ಇಷ್ಟವಾಗುವುದು. ಅಲ್ಲದೆ ಆಷಾಢ ಮಾಸದಲ್ಲಿ ಅನೇಕ ವಿಶೇಷ ತಿನಿಸುಗಳನ್ನು ತಯಾರಿಸಲಾಗುವುದು. ಈ ಸಮಯದಲ್ಲಿ ನಾನ್‌ವೆಜ್‌ ತಿನ್ನುವವರಾದರೆ ತುಸು ಅಧಿಕವೇ ಬಳಸುತ್ತಾರೆ, ಇವೆಲ್ಲದರ ಪರಿಣಾಮ ಮೈ ತೂಕ ಹೆಚ್ಚಾಗುವುದು.

ಮಳೆಗಾಲದಲ್ಲಿಯೂ ನಿಮ್ಮ ಫಿಟ್ನೆಸ್ ಕಾಪಾಡಲು ಬಯಸುವುದಾದರೆ ಈ ಕೆಲವೊಂದು ಟಿಪ್ಸ್ ಪಾಲಿಸಿ:

ಮಳೆಗಾಲದಲ್ಲಿಯೂ ನಿಮ್ಮ ಫಿಟ್ನೆಸ್ ಕಾಪಾಡಲು ಬಯಸುವುದಾದರೆ ಈ ಕೆಲವೊಂದು ಟಿಪ್ಸ್ ಪಾಲಿಸಿ:

* ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ ಸೇವಿಸಿ ಅಲ್ಲದೆ ಸ್ವಲ್ಪ-ಸ್ವಲ್ಪ ಸೇವಿಸಿಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗುವುದು, ಆದ್ದರಿಂದ ಜೀರ್ಣಕ್ರಿಯೆಗೆ ಸುಲಭವಾಗುವ ಆಹಾರ ತಯಾರಿಸಿ ಸೇವಿಸಬೇಕು. ಈ ಸಮಯದಲ್ಲಿ ಹಸಿ ತರಕಾರಿಗಳನ್ನು ಸೇವಿಸಬೇಡಿ. ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನಿ, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಕಡಿಮೆ ತಿನ್ನಿ. ಅಲ್ಲದೆ ಸ್ವಲ್ಪ ದೈಹಿಕ ಚಟುವಟಿಕೆ ಇರಲಿ. ಒಂದೇ ಕಡೆ ಕೂರುವುದಕ್ಕಿಂತ ಮೆಯೊಳಗೇ ಸ್ವಲ್ಪ ಓಡಾಡಿ. ಆಹಾರ ಸೇವಿಸಿದ ಬಳಿಕ ಒಂದು 10 ನಿಮಿಷ ಮನೆಯಲ್ಲಿ ಅಥವಾ ವರಾಂಡದಲ್ಲಿ ನಡೆಯಿರಿ.

ಇನ್ನು ಆಹಾರವನ್ನು 3 ಹೊತ್ತು ತಿನ್ನುವ ಬದಲಿಗೆ ಅದೇ ಆಹಾರವನ್ನು 6-7 ಬಾರಿ ಸೇವಿಸಿ, ಅಂದ್ರೆ ನೀವು 3 ದೋಸೆ ತಿನ್ನುವುದಾದರೆ ಬೆಳಗ್ಗೆ 2 ತಿಂದು 10 ಗಂಟೆ 1 ತಿನ್ನಿ.. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ, ಮೈ ತೂಕವೂ ಹೆಚ್ಚುವುದಿಲ್ಲ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಮಳೆಗಾಲದಲ್ಲಿ ಬೇಸಿಗೆಯಷ್ಟು ದಾಹವಾಗುವುದಿಲ್ಲ, ಹಾಗಂತ ನೀರು ಕುಡಿಯುವುದನ್ನು ಕಡಿಮೆ ಮಾಡಬೇಡಿ. ದಿನಕ್ಕೆ 8 ಲೋಟ ಬಿಸಿ ನೀರು ಕುಡಿಯಿರಿ, ಊಟಕ್ಕೆ ಮುನ್ನ ಹಾಗೂ ಊಟವಾದ ಬಳಿಕ ಒಮದು ಲೋಟ ಬಿಸಿ ನೀರು ಕುಡಿಯುವ ಅಭ್ಯಾಸ ತೂಕ ಇಳಿಕೆಗೆ ಸಹಾಯ ಮಾಡುವುದು.

ಸೂಪ್ ಮಾಡಿ ಕುಡಿಯಿರಿ

ಸೂಪ್ ಮಾಡಿ ಕುಡಿಯಿರಿ

ತಣ್ಣನೆಯ ಆಹಾರಗಳು ಹಾಗೂ ಪಾನೀಯಗಳನ್ನು ಈ ಸಮಯದಲ್ಲಿ ಸೇವಿಸಬೇಡಿ. ಸೂಪ್ ಮಾಡಿ ಕುಡಿಯಿರಿ. ಇದು ಜೀರ್ಣಕ್ರಿಯೆಗೂ ಒಳ್ಳೆಯದು ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುವುದು.

ಶುಂಠಿ ಟೀ ಕುಡಿಯಿರಿ

ಶುಂಠಿ ಟೀ ಕುಡಿಯಿರಿ

ಮಳೆಗಾಲದಲ್ಲಿ ಶುಂಠಿ ಟೀ ಕುಡಿಯುವುದರಿಂದ ಶೀತ, ಕೆಮ್ಮು ಮುಂತಾದ ಸಮಸ್ಯೆ ಕಾಡುವುದಿಲ್ಲ ಅಲ್ಲದೆ ತೂಕ ಇಳಿಕೆಗೆ ಕೂಡ ಸಹಕಾರಿಯಾಗಿದೆ. ಟೀಗೆ ಹೆಚ್ಚು ಸಕ್ಕರೆ ಬಳಸಬೇಡಿ.

ಮನೆಯೊಳಗೇ ಮಾಡಬಹುದಾದ ವ್ಯಾಯಾಮ ಮಾಡಿ

ಮನೆಯೊಳಗೇ ಮಾಡಬಹುದಾದ ವ್ಯಾಯಾಮ ಮಾಡಿ

ಯೋಗ ಮಾಡಲು ನಿಮಗೆ ಹೆಚ್ಚು ಸ್ಥಳ ಬೇಕಾಗಿಲ್ಲ, ಇದರ ಜೊತೆಗೆ ಫುಶ್‌ ಅಪ್‌, ಸ್ಕ್ವ್ಯಾಟ್ , ಬಸ್ಕಿ, ಸೈಕ್ಲಿಂಗ್ ಮುಂತಾದ ವ್ಯಾಯಾಮ ಮಾಡಬಹುದು ಇವೆಲ್ಲಾ ನಿಮ್ಮ ಮೈಯನ್ನು ಫಿಟ್‌ ಆಗಿಡಲು ಸಹಕಾರಿಯಾಗಿದೆ.

ಸರಿಯಾದ ಸಮಯಕ್ಕೆ ನಿದ್ದೆ ಮಾಡಿ

ಸರಿಯಾದ ಸಮಯಕ್ಕೆ ನಿದ್ದೆ ಮಾಡಿ

ನಿದ್ದೆ ಅಧಿಕ ಮಾಡಿದರೂ ಕಷ್ಟ, ಕಡಿಮೆ ನಿದ್ದೆ ಮಾಡಿದರೂ ಕಷ್ಟ. ದಿನದಲ್ಲಿ 8 ಗಂಟೆ ನಿದ್ದೆ ಮಾಡಿ. ಇನ್ನು ಮಧ್ಯಾಹ್ನ ಹೊತ್ತು ಮಲಗುವ ಅಭ್ಯಾಸವಿದ್ದರೆ ಅದನ್ನು ಬಿಡಲು ಪ್ರಯತ್ನಿಸಿ. ಮಧ್ಯಾಹ್ನ 10 ನಿಮಿಷ ಚಿಕ್ಕ ನಿದ್ದೆ ಮಾಡುವುದರಿಂದ ತೊಂದರೆಯಿಲ್ಲ, ಆದರೆ ಗಂಟೆಗಟ್ಟಲೆ ನಿದ್ದೆ ಮಾಡುವ ಅಭ್ಯಾಸವಿದ್ದರೆ ಮೈ ತೂಕ ಹೆಚ್ಚುವುದು.

English summary

Weight Loss Diet in Monsoon: Diet Tips to Shed Kilos in Rainy Season in Kannada

Weight Loss Diet in Monsoon: Diet tips to shed kilos in rainy season in Kannada....
Story first published: Monday, July 26, 2021, 10:57 [IST]
X
Desktop Bottom Promotion