For Quick Alerts
ALLOW NOTIFICATIONS  
For Daily Alerts

ಕೇಕ್‌, ಡೆಸರ್ಟ್ ಸವಿಯಬೇಕು, ಆದರೆ ಮೈ ತೂಕ ಹೆಚ್ಚಬಾರದೆ?

|

ಕ್ರಿಸ್ಮೆಸ್‌, ಹೊಸ ವರ್ಷ ಆಚರಣೆ ಎಂದ ಮೇಲೆ ಕೇಳಬೇಕಾ? ಡೆಸರ್ಟ್‌, ಕೇಕ್‌ಗಳದ್ದೇ ಮೇಲುಗೈ. ನಾನು ಡಯಟ್‌ ಮಾಡಬೇಕು, ಸ್ವೀಟ್‌ ತಿನ್ನಬಾರದು, ಈ ವರ್ಷ ಏನಾದರೂ ಸರಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಹೊಸ ವರ್ಷದ ರೆಸ್ಯೂಲೇಷನ್ ಮಾಡಿಕೊಂಡಿದ್ದರೂ ಬಣ್ಣ-ಬಣ್ಣದ ಕೇಕ್, ಡೆಸರ್ಟ್, ಪೇಸ್ಟ್ರಿ ನೋಡುವಾಗ ಪರ್ವಾಗಿಲ್ಲ ಇವತ್ತೊಂದು ಪೀಸ್‌ ತಿಂದು ಬಿಡುವ ಎಂದು ಮನಸ್ಸು ಬಯಸಿಯೇ ಬಯಸುತ್ತದೆ.

 Eat Dessert and Cake Without Gaining Weight

ಇತರ ದಿನಗಳಲ್ಲಿ ಬೇಕಾದರೆ ಸ್ವೀಟ್‌, ಡೆಸರ್ಟ್‌ಗಳಿಂದ ದೂರವಿರಬಹುದು. ಆದರೆ ಹಬ್ಬ ಹರಿದಿನಗಳು ಬಂದರೆ ಆ ದಿನ ಸಿಹಿ ಸವಿಯದಿದ್ದರೆ ಆ ಹಬ್ಬ ಆಚರಣೆಯ ಮಜಾ ಸಿಗುವುದಾದರೂ ಹೇಗೆ ಅಲ್ವಾ? ಆದ್ದರಿಂದ ಹಬ್ಬದ ಸಮಯದಲ್ಲಿ, ಫಂಕ್ಷನ್‌ಗಳನ್ನು ಸಿಹಿ ಬಯಸುವ ನಿಮ್ಮ ನಾಲಗೆಗೆ ಖಂಡಿತ ಮೋಸ ಮಾಡಬೇಡಿ. ಹಾಗಾದರೆ ಕ್ಯಾಲೋರಿ ಕತೆಯೇನು, ದಪ್ಪಗಾದರೆ ಎಂಬ ಭಯನಾ? ಇಲ್ಲಿ ನಾವು ನೀಡಿರುವ ಟಿಪ್ಸ್‌ ಪಾಲಿಸಿದರೆ ಸಾಕು ಸಿಹಿಯನ್ನೂ ಸವಿಯಬಹುದು, ಮೈ ಕಟ್ಟನ್ನೂ ಕಾಪಾಡಬಹುದು.

ಶುಗರ್ ಫ್ರೀ ಸ್ವೀಟ್

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಶುಗರ್ ಫ್ರೀ ಅಂತ ಲೇಬಲ್ ಹಾಕಿರುವ ಅನೇಕ ಸಿಹಿ ವಸ್ತುಗಳು ಸಿಗುತ್ತವೆ. ಸಕ್ಕರೆ ಬದಲಿಗೆ ಫ್ರಕ್ಟೋಸ್‌ ಬಳಸಿರುವ ಸಿಹಿ ಪದಾರ್ಥಗಳನ್ನು ಬಳಸಬಹುದು. ಇದು ಸುಕ್ರೋಸ್‌ಗೆ ಪರ್ಯಾಯವಾದ ಯಾವುದೇ ಅಪಾಯವಿಲ್ಲದ ಸಿಹಿ ವಸ್ತಾಗಿದೆ. ಆದರೆ ಇದನ್ನು ದಿನನಿತ್ಯ ಬಳಸುವುದು ಒಳ್ಳೆಯದಲ್ಲ ಎನ್ನುವುದು ಕೆಲ ಆಹಾರ ತಜ್ಞರ ಅಭಿಪ್ರಾಯವಾಗಿದೆ. ಆದರೆ ಅಪರೂಪಕ್ಕೆ ತಿಂದರೆ ಏನೂ ತೊಂದರೆಯಿಲ್ಲ, ಇದರಿಂದ ಮೈ ತೂಕವೂ ಹೆಚ್ಚಾಗುವುದಿಲ್ಲ.

ಜೇನು

ಮಿಲ್ಕ್‌ ಶೇಕ್‌, ಸಲಾಡ್‌ ಮಾಡುವಾಗ ಸಿಹಿಗಾಗಿ ಜೇನು ಹಾಕಿ. ಆದರೆ ಸಿಹಿ ತಿಂಡಿ ಮಾಡುವಾಗ ಜೇನು ಬಳಸಬೇಡಿ. ಏಕೆಂದರೆ ಜೇನು ಬೇಯಿಸಿದಾಗ ಅದರ ಗುಣಗಳು ಇಲ್ಲವಾಗುತ್ತದೆ, ಇದರಿಂದ ಫುಡ್‌ ಪಾಯಿಸನ್‌ ಕೂಡ ಉಂಟಾಗಬಹುದು. ಯೋಗರ್ಟ್, ಸ್ಮೂತಿ, ಬೇಯಿಸದೆ ಮಾಡುವ ಡೆಸರ್ಟ್‌ಗಳಿಗೆ ಸಕ್ಕರೆ ಬದಲಿಗೆ ಜೇನು ಬಳಸಬಹುದು.

ತರಕಾರಿಯನ್ನು ಮೊದಲು ತಿನ್ನಿ

ಕೇಕ್‌ ಅಥವಾ ಡೆಸರ್ಟ್ ತಿನ್ನುವ ಮೊದಲು ತರಕಾರಿಯನ್ನು ತಿನ್ನಿ, ನಂತ ಕೇಕ್ ತಿನ್ನಿ, ಇದರಿಂದ ಜೀರ್ಣಕ್ರಿಯೆ ತುಂಬಾ ಸಹಕಾರಿ ಹಾಗೂ ತರಕಾರಿ ತಿಂದು ಹೊಟ್ಟೆ ತುಂಬಿರುವುದರಿಂದ ಸ್ವಲ್ಪ ಕಡಿಮೆ ಸ್ವೀಟ್‌ ತಿನ್ನುತ್ತೇವೆ.

ತಿಂದ ಬಳಿಕ ವರ್ಕೌಟ್‌ ಮಾಡಲು ಮರೆಯದಿರಿ

ನಾವು ಏನೇ ತಿಂದರೂ ಅದನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ದೇಹಕ್ಕೆ ಇದ್ದರೆ ಸಾಕು. ಆದ್ದರಿಂದ ಹೆಚ್ಚು ಸ್ವೀಟ್‌, ಕೇಕ್ ತಿಂದ ಸ್ವಲ್ಪ ಹೆಚ್ಚು ವರ್ಕೌಟ್‌ ಮಾಡಿ. ಹಬ್ಬದ ಅಡುಗೆ ತಿಂದ ಬಳಿಕ ಬಿಸಿಬಿಸಿಯಾದ ನೀರು ಕುಡಿಯಿರಿ. ಮಾರನೆಯದ ದಿನ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಕಿ ಕುಡಿಯಿರಿ.

ಸಿಹಿಯನ್ನು ಅಪರೂಪಕ್ಕೆ ತಿಂದರೆ ಮೈ ತೂಕ ಹೆಚ್ಚಾಗುವುದಿಲ್ಲ, ಆದ್ದರಿಂದ ತಿನ್ನಬೇಕೆಂದು ಅನಿಸಿದಾಗ ತಿನ್ನಿ, ನಂತರ ವರ್ಕೌಟ್‌ ಮಾಡಿ ಅಷ್ಟೇ ಸಾಕು. ಇಷ್ಟು ಮಾಡಲ ನೀವು ಸಿದ್ಧ ಎಂದಾದರೆ ಹಬ್ಬದ ಅಡುಗೆ, ಕೇಕ್ ಅನ್ನು ಸವಿಯಬಹುದು ನೋಡಿ.

English summary

Ways to Eat Dessert and Cake Without Gaining Weight

You love to eat cake and dessert but scare to get weight? Are you looking for Ways to Eat Dessert and Cake Without Gaining Weight, Follow these simple tips and enjoy the sweet.
X
Desktop Bottom Promotion