For Quick Alerts
ALLOW NOTIFICATIONS  
For Daily Alerts

ಊಟಕ್ಕೂ ಮುನ್ನ ಈ ನಾಲ್ಕು ಬಗೆಯ ಸಲಾಡ್ ಸೇವನೆಯಿಂದ ಅಧಿಕ ಕೊಬ್ಬನ್ನು ಇಳಿಸಿಕೊಳ್ಳಬಹುದು

|

ಕಳೆದ ಎರಡು ವರ್ಷಗಳಲ್ಲಿ, ಆರೋಗ್ಯ ಮತ್ತು ಫಿಟ್ ಆಗಿರುವುದರ ಮಹತ್ವದ ಬಗ್ಗೆ ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿದೆ. ಈಗ ಹೊಸ ವರ್ಷ ಶುರುವಾಗಿರೋದ್ರಿಂದ ಎಷ್ಟೋ ಜನ ಆರೋಗ್ಯವಾಗಿರಬೇಕು, ದೇಹದಲ್ಲಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಿ ಫಿಟ್ ಆಗ್ಬೇಕು ಅಂತ ರೆಸಲ್ಯೂಶನ್ ಕೂಡ ಮಾಡಿರ್ತಾರೆ. ಆದರೆ, ತೂಕವನ್ನು ಕಡಿಮೆ ಮಾಡುವಲ್ಲಿ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಇಂದು ನಾವು ನಿಮ್ಮ ಗುರಿಯನ್ನು ತಲುಪಲು ಸಹಾಯ ಮಾಡುವ ಅಂತಹ ಕೆಲವು ಸಲಾಡ್‌ಗಳ ಬಗ್ಗೆ ಹೇಳುತ್ತಿದ್ದೇವೆ.

ತೂಕ ಕಡಿಮೆ ಮಾಡಲು ಸಹಾಯ ಮಾಡುವ ಸಲಾಡ್‌ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

1. ಎಲೆಕೋಸು-ಟೊಮ್ಯಾಟೊ ಸಲಾಡ್:

1. ಎಲೆಕೋಸು-ಟೊಮ್ಯಾಟೊ ಸಲಾಡ್:

ಎಲೆಕೋಸು ಮತ್ತು ಟೊಮೆಟೊಗಳಲ್ಲಿ ವಿಟಮಿನ್ ಎ ಮತ್ತು ವಿಟಮಿನ್-ಸಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಜೊತೆಗೆ ಮೆಗ್ನೀಸಿಯಮ್, ಕಬ್ಬಿಣ, ಗಂಧಕ ಮತ್ತು ಕ್ಯಾಲ್ಸಿಯಂ ಕೂಡ ಇದರಲ್ಲಿ ಹೇರಳವಾಗಿದೆ. ಇವುಗಳ ಸೇವನೆಯಿಂದ ತೂಕ ಕಡಿಮೆಯಾಗುವುದರೊಂದಿಗೆ ದೃಷ್ಟಿ ಮತ್ತು ರೋಗನಿರೋಧಕ ಶಕ್ತಿಯೂ ಉತ್ತಮವಾಗಿರುತ್ತದೆ. ಎಲೆಕೋಸು-ಟೊಮೇಟೊ ಸಲಾಡ್ ಸೇವನೆಯೊಂದಿಗೆ, ನೀವು ರಾತ್ರಿ ಊಟ ಮಾಡುವ ಅಗತ್ಯವಿಲ್ಲ. ನೀವು ಇದಕ್ಕೆ ನಿಂಬೆ, ಶುಂಠಿ, ಸೌತೆಕಾಯಿ ಮತ್ತು ತುಳಸಿಯನ್ನು ಕೂಡ ಸೇರಿಸಬಹುದು.

2. ಮೊಳಕೆಗಟ್ಟಿದ ಕಾಳುಗಳ ಸಲಾಡ್:

2. ಮೊಳಕೆಗಟ್ಟಿದ ಕಾಳುಗಳ ಸಲಾಡ್:

ತೂಕ ನಷ್ಟ ಮತ್ತು ಉತ್ತಮ ಜೀರ್ಣಕ್ರಿಯೆಗೆ ಮೊಳಕೆಭರಿತ ಕಾಳುಗಳ ಸೇವನೆ ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ನೀವು ಬೆಳಗಿನ ಉಪಾಹಾರಕ್ಕಾಗಿ ಸಹ ಅವುಗಳನ್ನು ಸೇವಿಸಬಹುದು, ಆದರೆ ರಾತ್ರಿಯ ಊಟದಲ್ಲಿ ಈ ಮೊಳಕೆ ಕಾಳುಗಳ ಸಲಾಡ್ ಅನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಮೊಗ್ಗುಗಳ ಸಲಾಡ್‌ನಲ್ಲಿ ನೀವು ಹೆಸರುಕಾಳು, ಕಡಲೆ, ಟೊಮೆಟೊ, ಶುಂಠಿ, ಮೂಲಂಗಿ, ಮೆಂತ್ಯ ಮತ್ತು ಕೊತ್ತಂಬರಿ ಸೊಪ್ಪನ್ನು ಬಳಸಬಹುದು. ಇದು ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆಯಿಂದಲೂ ಪರಿಹಾರ ನೀಡುತ್ತದೆ.

3. ಕಾರ್ನ್ ಸಲಾಡ್:

3. ಕಾರ್ನ್ ಸಲಾಡ್:

ತೂಕವನ್ನು ಕಳೆದುಕೊಳ್ಳಲು, ಸರಿಯಾದ ಜೀರ್ಣಕ್ರಿಯೆಯನ್ನು ಹೊಂದಿರುವುದು ಮುಖ್ಯ. ಕಾರ್ನ್‌ನಲ್ಲಿರುವ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದರಿಂದ ತಯಾರಿಸಿದ ಸಲಾಡ್ ಕೂಡ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಬ್ರೊಕೊಲಿ, ಹಸಿರು ಕ್ಯಾಪ್ಸಿಕಂ, ಟೊಮೆಟೊ, ಹಸಿರು ಬೀನ್ಸ್ ಮತ್ತು ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಬಹುದು. ಇದನ್ನು ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ ಮತ್ತು ನಿಮ್ಮ ತೂಕ ನಿಯಂತ್ರಣದಲ್ಲಿರುತ್ತದೆ.

4. ಮೊಟ್ಟೆ ಟೊಮ್ಯಾಟೊ ಸಲಾಡ್:

4. ಮೊಟ್ಟೆ ಟೊಮ್ಯಾಟೊ ಸಲಾಡ್:

ಬೇಯಿಸಿದ ಮೊಟ್ಟೆಗಳಲ್ಲಿ ಪ್ರೋಟೀನ್‌ ಹೇರಳವಾಗಿರುತ್ತದೆ. ಆ ವಿಷಯಕ್ಕಾಗಿ, ಪ್ರೋಟೀನ್‌ನ ಅತ್ಯುತ್ತಮ ಜೈವಿಕ ಲಭ್ಯವಿರುವ ಮೂಲ ಎಂದು ಮೊಟ್ಟೆಗಳನ್ನು ಕರೆಯಲಾಗುತ್ತದೆ. ಪ್ರೋಟೀನ್ ಸ್ನಾಯುಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಜತೆಗೆ ನಿಮ್ಮ ಹೊಟ್ಟೆ ತುಂಬುವುದರಿಂದ ನೀವು ಇತರೆ ಸ್ನ್ಯಾಕ್ಸ್‌ ಅನ್ನು ತಿನ್ನಬೇಕು ಎಂದೆನಿಸುವುದಿಲ್ಲ. ಅಲ್ಲದೆ, ನಿಮ್ಮ ಹೊಟ್ಟೆ ಪೂರ್ಣ ಎಂದು ಭಾವಿಸುವುದರಿಂದ ನಿಯಂತ್ರಿತ ರೀತಿಯಲ್ಲಿ ತಿನ್ನುತ್ತೀರಿ, ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೀರಿ. ಮೊಟ್ಟೆಯ ಬದಲಿಗೆ ಪನ್ನೀರ್ ಸಹ ಬಳಸಬಹುದು. ಜೊತೆಗೆ ಟೊಮ್ಯಾಟೊ, ಈರುಳ್ಳಿ, ಬೆಳ್ಳುಳ್ಳಿ ಲವಂಗ, ಮೊಟ್ಟೆ (ಬೇಯಿಸಿದ), ಕಲ್ಲು ಉಪ್ಪು, ಕರಿಮೆಣಸು, ಆಲಿವ್ ಎಣ್ಣೆ ಸೇರಿಸಿದರೆ, ಸಲಾಡ್ ರೆಡಿ.

Read more about: health fitness ಆರೋಗ್ಯ
English summary

Types of Salads to Eat Before Meals to Reduce Excess Body Fat in Kannada

Here we talking about Types of Salads to Eat Before Meals to Reduce Excess Body Fat in Kannada, read on
Story first published: Saturday, January 8, 2022, 17:46 [IST]
X
Desktop Bottom Promotion