For Quick Alerts
ALLOW NOTIFICATIONS  
For Daily Alerts

ಮೈ ತೂಕ ಕಡಿಮೆಯಾಗಲು ಪಾಲಿಸುವ ಆಹಾರಕ್ರಮದಲ್ಲಿ ಈ ತಪ್ಪುಗಳನ್ನು ಮಾಡದಿರಿ

|

ಮೈ ತೂಕ ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ಕಡಿಮೆ ಮಾಡಲು ಡಯಟ್‌ ಮಾಡುವವರು ತುಪ್ಪ ಬೇಡ ನಾನು ಯಾವುದೇ ಕೊಬ್ಬಿನಂಶ ತಿನ್ನಲ್ಲ, ಪಿಜ್ಜಾ, ಬರ್ಗರ್ ಎಂದರೆ ತುಂಬಾನೇ ಇಷ್ಟ ಆದರೆ ಈಗ ಡಯಟ್‌ನಲ್ಲಿದ್ದೇನೆ ಹೀಗೆ ಹೇಳುವುದನ್ನು ನೀವು ಕೇಳಿರಬಹುದು, ಬಹುಶಃ ನೀವು ತೂಕ ಇಳಿಕೆಗೆ ಡಯಟ್‌ನಲ್ಲಿದ್ದರೆ ಹೀಗೆ ಹೇಳುತ್ತಿರಲೂಬಹುದು. ತೂಕ ಇಳಿಕೆಗೆ ಆಹಾರಕ್ರಮ ಸರಿಯಾಗಿರಬೇಕು ಹಾಗಂತ ನಮಗೆ ಇಷ್ಟವಾದ ಆಹಾರವನ್ನು ತಿನ್ನದೇ ಇರುವುದು ಅಥವಾ ಒಂದು ಹೊತ್ತು ಊಟ ಬಿಡುವುದು ಅಲ್ಲ.

ಅಲ್ಲದೆ ನಿಮಗೆ ಐಸ್‌ಕ್ರೀಮ್‌ ಅಂದ್ರೆ ತುಂಬಾನೇ ಇಷ್ಟ ಅಂದ್ಕೊಳ್ಳೋಣ, ಮೈ ತೂಕ ಹೆಚ್ಚಾಗುತ್ತದೆ ಎಂದು ನಾವು ಅದನ್ನು ಸ್ವಲ್ಪ ಸಮಯ ತಿನ್ನದೇ ಇರಬಹುದು. ಆದರೆ ಅದನ್ನು ನೋಡುತ್ತಿದ್ದಂತೆ ತಿನ್ನುವ ಬಯಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಇನ್ನು ಕೆಲವರು ತೆಳ್ಳಗಾಗಬೇಕೆಂದು ಒಂದು ಹೊತ್ತು ಊಟ ಬಿಡುವುದು ಅಥವಾ ಸ್ವಲ್ಪವೇ ತಿನ್ನುವುದು ಮಾಡುತ್ತಾರೆ. ಈ ರೀತಿ ಎಷ್ಟು ದಿನ ಇರಬಹುದು, ಒಂದು ವೇಳೆ ನೀವು ತುಂಬಾ ಸಮಯ ಈ ರೀತಿ ಆಹಾರ ಬಿಡುತ್ತಿದ್ದರೆ ಅಥವಾ ದೇಹಕ್ಕೆ ಅಗ್ಯತವಿರುವ ಆಹಾರ ಸೇವಿಸದೇ ಹೋದರೆ ಪೋಷಕಾಂಶದ ಕೊರತೆ ಉಂಟಾಗಿ ಕಾಯಿಲೆ ಬೀಳುವಂತಾಗುವುದು.

ಆದ್ದರಿಂದ ನೀವು ತೂಕ ಇಳಿಕೆಗಾಗಿ ಮಾಡುವ ಯಾವ ಕಾರ್ಯಗಳನ್ನು ಮಾಡಬಾರದು ಎಂದು ಇಲ್ಲಿ ಹೇಳಲಾಗಿದೆ ನೋಡಿ:

1. ಸರಿಯಾಗಿ ತಿನ್ನದೇ ಇರುವುದು

1. ಸರಿಯಾಗಿ ತಿನ್ನದೇ ಇರುವುದು

ನೀವು ಕಡಿಮೆ ತಿನ್ನುವ ಕಡೆ ಗಮನ ನೀಡುವುದಕ್ಕಿಂತ ನಿಧಾನವಾಗಿ ತಿನ್ನುವುದರತ್ತ ಗಮನ ಹರಿಸಿ. ನಿಧಾನವಾಗಿ ತಿಂದರೆ ಫುಲ್‌ ಮೀಲ್ಸ್ ತೊಂದರೆಯಿಲ್ಲ. ಆದರೆ ಅವಸರ-ಅವಸರವಾಗಿ ತಿನ್ನುವ ಅಭ್ಯಾಸ ಮೈ ತೂಕ ಹೆಚ್ಚಿಸುತ್ತೆ ಎಂಬುವುದು ನೆನಪಿರಲಿ.

2. ತುಂಬಾ ಬಿಗಿಯಾದ ಉಡುಪು ಧರಿಸುವುದು

2. ತುಂಬಾ ಬಿಗಿಯಾದ ಉಡುಪು ಧರಿಸುವುದು

ಇದನ್ನು ಕೆಲವರು ಟ್ರೈ ಮಾಡುತ್ತಾರೆ. ಊಟಕ್ಕೆ ಮುಂಚೆ ಬಿಗಿಯಾದ ಉಡುಪು ಧರಿಸುವುದು, ಆಗ ತುಂಬಾ ತಿನ್ನುವುದಕ್ಕೆ ಸಾಧ್ಯವಾಗಲ್ಲ ಎಂಬ ಲೆಕ್ಕಾಚಾರ ಅವರದ್ದು. ಆದರೆ ಇದು ತೂಕ ಇಳಿಕೆಯ ಸರಿಯಾದ ವಿಧಾನವಲ್ಲ. ನಿಮ್ಮ ತುಕ ಇಳಿಕೆಗೂ, ನೀವು ಧರಿಸುವ ಬಟ್ಟೆಗೂ ಸಂಬಂಧವಿಲ್ಲ. ನೀವು ತೂಕ ಇಳಿಯಲು ಸರಿಯಾದ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು.

 3. ಆಹಾರದ ಬದಲಿಗೆ ಶೇಕ್ಸ್ ತೆಗೆದುಕೊಳ್ಳುವುದು

3. ಆಹಾರದ ಬದಲಿಗೆ ಶೇಕ್ಸ್ ತೆಗೆದುಕೊಳ್ಳುವುದು

ಕೆಲವರು ಆಹಾರದ ಬದಲಿಗೆ ಶೇಕ್ಸ್ ಅಷ್ಟೇ ತೆಗೆದುಕೊಳ್ಳುತ್ತಾರೆ. ಆದರೆ ತೂಕ ಇಳಿಕೆಗೆ ಇದು ಸರಿಯಾದ ವಿಧಾನವಲ್ಲ, ಏನೋ ಅರ್ಜೆಂಟ್‌ ಇರುತ್ತೆ, ಆಹಾರ ತೆಗೆದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಒಮ್ಮೊಮ್ಮೆ ತೆಗೆದುಕೊಳ್ಳಬಹುದು, ಅದೇ ತೂಕ ಇಳಿಕೆಗೆ ಈ ವಿಧಾನ ಸರಿಯಲ್ಲ, ಏಕೆಂದರೆ ಇದರಲ್ಲಿ ನಾರಿನಂಶ ಕಡಿಮೆ ಇರುತ್ತದೆ, ಆದ್ದರಿಂದ ತುಂಬಾ ಬೇಗನೆ ಹಸಿವು ಉಂಟಾಗುತ್ತದೆ. ಅಲ್ಲದೆ ಈ ಶೇಕ್ಸ್‌ ದೇಹದಲ್ಲಿ ಸಕ್ಕರೆಯಂಶ ಹೆಚ್ಚುವಂತೆ ಮಾಡುತ್ತದೆ, ಆದ್ದರಿಂದ ಆರೋಗ್ಯಕರವಲ್ಲ.

4. ಒಂದೇ ಬಗೆಯ ಆಹಾರ ಸೇವನೆ

4. ಒಂದೇ ಬಗೆಯ ಆಹಾರ ಸೇವನೆ

ಕೆಲವರು ಒಂದೇ ಬಗೆಯ ಆಹಾರ ಸೇವಿಸುವ ಅಥವಾ ಒಂದೇ ರೀತಿಯ ಆಹಾರಕ್ರಮವನ್ನು ಪಾಲಿಸಿ ತೂಕ ಇಳಿಸಬೇಕೆಂದು ಬಯಸುತ್ತಾರೆ. ಆದರೆ ಈ ರೀತಿ ಎಷ್ಟು ದಿನ ತಾನೆ ತಿನ್ನಲು ಸಾಧ್ಯವಾಗುತ್ತೆ, ಬೇಗನೆ ಬೋರಾಗುತ್ತೆ. ಅಲ್ಲದೆ ನಮ್ಮ ದೇಹಕ್ಕೆ ಅಗ್ಯತವಾದ ಪೋಷಕಾಂಶವೂ ಸಿಗುವುದಿಲ್ಲ. ನಮ್ಮ ದೇಹಕ್ಕೆ ಆರೋಗ್ಯವಾಗಿರಲು ನಾನಾ ಬಗೆಯ ವಿಟಮಿನ್ಸ್ ಹಾಗೂ ಪೋಷಕಾಂಶ ಬೇಕು, ಅವುಗಳು ಒಂದೇ ಬಗೆಯ ಆಹಾರದಿಂದ ಸಿಗಲು ಸಾಧ್ಯವಿಲ್ಲ.

5. ಕಾರ್ಬ್ಸ್ ತಿನ್ನದೇ ಇರುವುದು

5. ಕಾರ್ಬ್ಸ್ ತಿನ್ನದೇ ಇರುವುದು

ಕಾರ್ಬ್ಸ್ ಅಧಿಕ ತಿನ್ನುವುದರಿಂದ ಮೈ ತೂಕ ಹೆಚ್ಚಾಗುತ್ತೆ, ಆದರೆ ಕಾರ್ಬ್ಸ್ ತಿನ್ನದೇ ದೇಹಕ್ಕೆ ಬೇಕಾದ ಶಕ್ತಿ ದೊರೆಯುವುದಿಲ್ಲ. ಅಲ್ಲದೆ ತುಂಬಾ ಸಮಯ ಈ ರೀತಿಯ ಆಹಾರಕ್ರಮ ಪಾಲಿಸಲು ಸಾಧ್ಯವಿಲ್ಲ, ಒಂದು ವೇಳೆ ಪಾಲಿಸಿದರೆ ಆರೋಗ್ಯವೂ ಸರಿಯಿರಲ್ಲ.

ಲೋ ಕಾರ್ಬ್ ಡಯಟ್ ತುಂಬಾ ಟೈಮ್ ಪಾಲಿಸಿದರೆ ಕಿಡ್ನಿಯಲ್ಲಿ ಕಲ್ಲು, ಸಂಧಿವಾತ, ಗೌಟ್‌ ಮುಂತಾದ ಸಮಸ್ಯೆ ಕಂಡು ಬರುವುದು.

6. ಕೊಬ್ಬು ಸೇವಿಸದೇ ಇರುವುದು

6. ಕೊಬ್ಬು ಸೇವಿಸದೇ ಇರುವುದು

ಕೊಬ್ಬಿನಂಶ ತಿಂದ್ರೆ ಮೈ ತೂಕ ಹೆಚ್ಚಾಗುತ್ತದೆ. ಆದ್ರೆ ಕೊಬ್ಬು ತಿನ್ನಲೇಬಾರದು ಎಂದಲ್ಲ, ಒಳ್ಳೆಯ ಕೊಬ್ಬು ಸೇವಿಸಬೇಕು, ಕೆಟ್ಟ ಕೊಬ್ಬು ದೂರವಿಡಬೇಕು. ತುಪ್ಪ, ನಟ್ಸ್‌ನಲ್ಲಿರುವ ಕೊಬ್ಬಿನಂಶ, ಬೆಣ್ಣೆ ಹಣ್ಣು, ಆಲೀವ್‌ ಎಣ್ಣೆ ಇವೆಲ್ಲಾ ಆರೋಗ್ಯಕ್ಕೆ ಬೇಕು. ಆದ್ದರಿಂದ ನೀವು ಡಯಟ್‌ ಮಾಡುವುದಾದರೆ ಕೊಬ್ಬನ್ನು ದೂರವಿಡುವ ತಪ್ಪು ಮಾಡಬೇಡಿ. ತಿನ್ನಬೇಕು, ಆದರೆ ಮಿತಿಯಲ್ಲಿ ತಿನ್ನಿ.

 7. ಇಷ್ಟದ ಆಹಾರವನ್ನು ದೂರವಿಡಬೇಡಿ

7. ಇಷ್ಟದ ಆಹಾರವನ್ನು ದೂರವಿಡಬೇಡಿ

ಮೈ ತೂಕ ಕಡಿಮೆ ಮಾಡಲು ಆಹಾರಕ್ರಮ ಪಾಲಿಸಿ, ಅಪರೂಪಕ್ಕೆ ನಿಮಗೆ ಇಷ್ಟವಾದ ಆಹಾರ ತಿನ್ನುವುದರಲ್ಲಿ ಏನೂ ತಪ್ಪಿಲ್ಲ. ಪಿಜ್ಜಾ ಇಷ್ಟನೋ ತಿನ್ನಿ, ಆದರೆ ದಿನಾ ತಿನ್ನುವ ಬಾಯಿ ಚಟಕ್ಕೆ ಬ್ರೇಕ್‌ ಹಾಕಿ.

ನಾವು ಇಷ್ಟಪಟ್ಟ ಆಹಾರ ತಿನ್ನದೇ ಇದ್ದಾಗ ಮನಸ್ಸಿಗೆ ಬೇಸರವಾಗುತ್ತೆ, ಆಗ ನಾಬು ಪಾಲಿಸುವ ಆಹಾರಕ್ರಮ ಬೋರಾಗಲಾರಂಭಿಸುತ್ತೆ. ಆದ್ದರಿಂದ ದಿನದಲ್ಲಿ ಒಂದು ದಿನ ಸವಿಯಿರಿ, ಇದರಿಂದ ಮನಸ್ಸಿಗೆ ತೃಪ್ತಿಯಾಗುತ್ತದೆ.

ನಾವು ಇಲ್ಲಿ ಹೇಳಿರುವ ಅಂಶವನ್ನು ಅಳವಡಿಸಿದ್ದೇ ಆದರೆ ನೀವು ಪಾಲಿಸುತ್ತಿರುವ ಆಹಾರಕ್ರಮ ಆರೋಗ್ಯಕರ ತೂಕ ಇಳಿಕೆಗೆ ಸಹಾಯ ಮಾಡುತ್ತೆ, ಆಲ್‌ ದಿ ಬೆಸ್ಟ್.

English summary

Tips That Don't Work for Weight Loss, Say Dietitians in Kannada

Tips That Don't Work for Weight Loss, Say Dietitians, Read on...
Story first published: Monday, March 15, 2021, 17:27 [IST]
X
Desktop Bottom Promotion