For Quick Alerts
ALLOW NOTIFICATIONS  
For Daily Alerts

ಸಮಂತಾ, ರಶ್ಮಿಕಾ, ತಮನ್ನಾ, ನಯನತಾರ, ಅನುಷ್ಕಾರ ಗ್ಲಾಮರಸ್ ಮೈ ಮಾಟದ ಸೀಕ್ರೆಟ್‌ ಇದೇ ನೋಡಿ

|

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಮಂತಾ ಪ್ರಭು, ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ, ನಯನತಾರ, ಅನುಷ್ಕಾ ಶೆಟ್ಟಿ ಇವರಿಗೆಲ್ಲಾ ತುಂಬಾನೇ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಈ ನಟಿಯರು ತಮ್ಮ ನಟನೆಯಿಂದ ಅಷ್ಟೇ ಅಲ್ಲ, ಗ್ಲಾಮರಸ್‌ ಮೈ ಮಾಟದಿಂದಲೂ ಗಮನ ಸೆಳೆಯುತ್ತಾರೆ. ಅನುಷ್ಕಾಶೆಟ್ಟಿ ಈ ಹಿಂದೆ ಒಂದು ಚಿತ್ರಕ್ಕಾಗಿ ಮೈ ತೂಕ ಹೆಚ್ಚಿಸಿಕೊಂಡಿದ್ದರೂ ನಂತರ ತಮ್ಮ ಮೈಮಾಟ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಈ ನಟಿಯರನ್ನು ನೋಡುವಾಗ ಅಬ್ಬಾ ಎಂಥ ಮೈಮಾಟ ಎಂದು ಎಲ್ಲರಿಗೂ ಅನಿಸುತ್ತೆ, ಆದರೆ ಅಂಥ ಮೈ ಮಾಟ ಅವರಿಗೆ ಸುಮ್ಮನೆ ಬಂದಿಲ್ಲ. ತಮ್ಮ ಸೌಂದರ್ಯ ಕಾಪಾಡಲು ಅಷ್ಟು ಕಷ್ಟಪಡುತ್ತಾರೆ ಕೂಡ, ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ವರ್ಕೌಟ್ ವೀಡಿಯೋ ಹಂಚಿಕೊಂಡಿದ್ದರು, ಅದರಲ್ಲಿಅವರು ಫಿಟ್ನೆಸ್‌ಗಾಗಿ ಎಷ್ಟೊಂದು ಶ್ರಮ ಪಡುತ್ತಾರೆ ಎಂದು ನೋಡಬಹುದು.

ಎಲ್ಲರೂ ತಮ್ಮ ನೆಚ್ಚಿನ ಸೆಲೆಬ್ರಿಟಿಯ ಅಂದ ಚೆಂದವನ್ನು ಹೊಗಳುತ್ತಾರೆ, ಆದರೆ ಅವರ ಫಿಟ್ನೆಸ್‌ ಸೀಕ್ರೆಟ್‌ ತಿಳಿದುಕೊಂಡರೆ ನಿಮ್ಮ ಮೈ ಮಾಟ ಹಾಗೂ ಆರೋಗ್ಯ ಕೂಡ ಹೆಚ್ಚಿಸಬಹುದು. ಬನ್ನಿ ನಿಮ್ಮ ನೆಚ್ಚಿನ ಸೆಲೆಬ್ರಿಟಿಯ ಫಿಟ್ನೆಸ್‌ ಸೀಕ್ರೆಟ್ ತಿಳಿಯೋಣ:

ಸಮಂತಾ ಪ್ರಭು:

ಸಮಂತಾ ಪ್ರಭು:

ಸಮಂತಾ ಫಿಟ್ನೆಸ್‌ ಬಗ್ಗೆ ಎರಡು ಮಾತೇ ಇಲ್ಲ.. ವಯಸ್ಸು 35 ದಾಟಿದೆ ಆದರೆ ಅವರ ಛಾರ್ಮ್‌ ಅಂದಿನಂತೆಯೇ ಈಗಲೂ ಇದೆ, ಈ ಕಾರಣದಿಂದಲೇ ಇಂಡಸ್ಟ್ರಿಗೆ ಬಂದು ಇಷ್ಟು ವರ್ಷಗಳು ಕಳೆದಿದ್ದರೂ ಈಗಲೂ ಟಾಪ್‌ ಸ್ಥಾನದಲ್ಲಿ ಇರಲು ಸಾಧ್ಯವಾಗಿರುವುದೂ... ಈಗಲೂ ಅವರ ಪೋಟೋಶೂಟ್‌ಗಳನ್ನು ನೋಡುವಾಗ ವಾವ್‌! ಎಷ್ಟೊಂದು ಚೆನ್ನಾಗಿದ್ದಾರೆ ಎಂದು ಖಂಡಿತ ಅನಿಸುತ್ತೆ. ಸಮಂತಾ ಪ್ರತಿದಿನ ವರ್ಕೌಟ್ ಮಾಡುತ್ತಾರೆ. ವರ್ಕೌಟ್ ಮಿಸ್‌ ಆದ ದಿನ ಜಾಗಿಂಗ್‌ ಅಥವಾ ಇತರ ಎಕ್ಸಸೈಜ್‌ ಮಾಡುತ್ತಾರೆ. ಇವರು ಕಾರ್ಡಿಯೋ ಹಾಗೂ ಹೆವಿ ವೇಯ್ಟ್‌ ಟ್ರೈನಿಂಗ್‌ ಮಾಡುತ್ತಾರೆ. ಡಯಟ್‌ನಲ್ಲಿ ಅವರು ಅತ್ಯಧಿಕ ಪ್ರೊಟೀನ್‌ ಇರುವ ಆಹಾರ ಸೇವಿಸುತ್ತಾರೆ. ಸಾಕಷ್ಟು ನೀರು ಕುಡಿಯುತ್ತಾರೆ, ತಾಜಾ ಜ್ಯೂಸ್‌ ಕುಡಿಯುತ್ತಾರೆ.

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ

ತಮನ್ನಾ ತಮ್ಮ ದಿನ ಪ್ರಾರಂಭಿಸುವುದು ಒಂದು ಲೋಟ ಬಿಸಿ ನೀರಿನ ಮೂಲಕ. ಬಿಸಿ ನೀರಿಗೆ ಸ್ವಲ್ಪ ಜೇನು ಮತ್ತು ನಿಂಬೆರಸ ಹಾಕಿ ಕುಡಿಯುತ್ತಾರೆ, ನಂತರ ಒಂದು ಮುಷ್ಠಿಯಷ್ಟು ಬಾದಾಮಿ ಅಥವಾ ಡ್ರೈ ಫ್ರೂಟ್ಸ್ ಸೇವಿಸುತ್ತಾರೆ. ಇವರು ಕೂಡ ಅಷ್ಟೇ ದಿನವಿಡೀ ನೀರು, ಜ್ಯೂಸ್‌, ಎಳನೀರು ಅಂತ ಕುಡಿಯುತ್ತಲೇ ಇರುತ್ತಾರೆ. ಪ್ರತಿದಿನ ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುತ್ತಾರೆ. ಕಾರ್ಡಿಯೋ ಮತ್ತು ವೇಯ್ಟ್‌ ಟ್ರೈನಿಂಗ್‌ ಮಾಡುತ್ತಾರೆ. ಯೋಗ ಮತ್ತು ಸ್ವಿಮ್ಮಿಂಗ್‌ ತಮ್ಮ ಫಿಟ್ನೆನೆಸ್‌ಗಾಗಿ ಮಾಡುತ್ತಾರೆ.

ನಯನತಾರ

ನಯನತಾರ

ನಯನತಾರಾ ಅವರ ಡಯಟ್‌ ಪ್ಲ್ಯಾನ್‌ ಟೈಮ್‌ ಟು ಟೈಮ್‌ ಬದಲಾಗುತ್ತಾ ಇರುತ್ತದೆ. ಅವರು ಆರೋಗ್ಯಕರ ಡಯಟ್ ಕಡೆ ತುಂಬಾನೇ ಗಮನ ಕೊಡುತ್ತಾರೆ. ಪ್ರತಿದಿನ ವ್ಯಾಯಾಮ ಮಾಡುತ್ತಾರೆಎ, ಯೋಗ ಮಾಡುತ್ತಾರೆ. ಇವರು ಸಂಸ್ಕರಿಸಿದ ಆಹಾರ ಹಾಗೂ ಸಕ್ಕರೆ ಸೇವಿಸುವುದಿಲ್ಲ.

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ

ಅನುಷ್ಕಾ ಶೆಟ್ಟಿ ತಮ್ಮ ಫಿಟ್ನೆಸ್‌ಗಾಗಿ ಯೋಗ, ಧ್ಯಾನ ಹಾಗೂ ಕಾರ್ಡಿಯೋ ಮಾಡುತ್ತಾರೆ. ಅನುಷ್ಕಾ ಶೆಟ್ಟಿ ಡಯಟ್‌ನಲ್ಲಿ ಹಸಿರು ತರಕಾರಿಗಳು ಅಧಿಕವಿರುತ್ತದೆ. ಹಣ್ಣುಗಳು, ಸಲಾಡ್, ಗ್ಲುಟೇನ್ ಫ್ರೀ ಡಯಟ್‌ ಫಾಲೋ ಮಾಡ್ತಾರೆ. ಅವರು ಮಲಗುವ 2-3 ಗಂಟೆಯ ಮೊದಲೇ ಆಹಾರ ಸೇವಿಸುತ್ತಾರೆ.

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಕಿಕ್‌ಬಾಕ್ಸಿಂಗ್, ಸ್ಕಿಪ್ಪಿಂಗ್‌, ಡ್ಯಾನ್ಸ್‌, ಸ್ವಿಮ್ಮಿಂಗ್‌, ಸ್ಪಿನ್ನಿಂಗ್‌, ಯೋಗ, ವಾರದಲ್ಲಿ ನಾಲ್ಕು ಬಾರಿ ಕ್ವಿಕ್‌ ವಾಕ್‌ ಮಾಡುತ್ತಾರೆ. ಇವರು ಕಾರ್ಡಿಯೋ ಹಾಗೂ ವೇಯ್ಟ್‌ ಟ್ರೈನಿಂಗ್‌ನಲ್ಲಿ ಸಮತೊಲನ ಕಾಪಾಡುತ್ತಾರೆ. ಇವರು ತಮ್ಮ ದಿನವನ್ನು ಆ್ಯಪಲ್ ಸೈಡರ್ ವಿನೆಗರ್‌ನಿಂದ ಪ್ರಾರಂಭಿಸುತ್ತಾರೆ. ಇವರು ದಕ್ಷಿಣ ಭಾರತದ ಅಡುಗೆ ತುಂಬಾ ಇಷ್ಟ ಪಡುತ್ತಾರೆ, ಆದರೆ ಅನ್ನ ತಿನ್ನುವುದು ಕಡಿಮೆ ಮಾಡಿದ್ದಾರೆ. ಇವರು ತರಕಾರಿ ಹೆಚ್ಚಾಗಿ ಸೇವಿಸುತ್ತಾರೆ. ಸಲಾಡ್, ಹಸಿ ತರಕಾರಿ ಹೆಚ್ಚಾಗಿ ಸೇವಿಸುತ್ತಾರೆ.

English summary

South Actresses Samantha, Rashmika, Tamannaah, Nayanthara, Anushka Shetty Fitness Secrets in Kannada

South Actresses Samantha, Rashmika, Tamannaah, Nayanthara, Anushka Shetty Fitness Secrets in Kannada, read on...
X
Desktop Bottom Promotion