For Quick Alerts
ALLOW NOTIFICATIONS  
For Daily Alerts

ಬ್ಲೂಬೆರ್ರಿ ಪ್ರತಿದಿನ ತಿಂದರೆ ತೂಕ ಇಳಿಕೆಯ ಜೊತೆಗೆ ಈ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು

|

ನಾವು ದಿನವೂ ಸೇವಿಸುವ ಆಹಾರಗಳ ಜೊತೆಗೆ ಹೆಚ್ಚಿನ ಪೋಷಕಾಂಶಗಳು ಹಾಗೂ ಜೀವಸತ್ವಗಳು ನಮ್ಮ ದೇಹಕ್ಕೆ ಸೇರಬೇಕಾದರೆ ನಾವು ಇತರ ಆಹಾರಗಳನ್ನೂ ಸೇವಿಸಬೇಕಾಗುತ್ತದೆ. ಹಾಗಾದರೆ ಅಂತಹ ಆಹಾರಗಳು ಯಾವವು ಅಂದ್ರೆ, ಉತ್ತಮ ಹಸಿರು ತರಕಾರಿಗಳು ಅಥವಾ ಹಣ್ಣುಗಳು. ಅದರಲ್ಲೂ ಬ್ಲೂಬೆರ್ರಿಯಂತಹ ಹಣ್ಣುಗಳು ಸಕಲ ಜೀವಸತ್ವಗಳ ಕೇಂದ್ರವಾಗಿದ್ದು, ಹಲವು ರೋಗ ನಿವಾರಕಕಗಳೂ ಹೌದು. ಅದು ಹೇಗೆ ಎಂಬಿತ್ಯಾದಿ ಮಾಹಿತಿಗಳಿಗಾಗಿ ಮುಂದೆ ಓದಿ.

ತಾಜಾ, ಒಣಗಿದ, ಪೇಸ್ಟ್ ಅಥವಾ ಜ್ಯೂಸ್, ಹೀಗೆ ಪ್ರತಿದಿನ ಯಾವುದೇ ರೂಪದಲ್ಲಿ ನೀವು ಬ್ಲೂಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಎಲ್ಲಾ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಅಗಾಧವಾಗಿ ಹೊಂದಿರುವ ಬ್ಲೂಬೆರ್ರಿ ಹಣ್ಣುಗಳನ್ನು (ನೀಲಿ ಬಣ್ಣದ ಬೀಜಗಳಿಲ್ಲದ ಹಣ್ಣು) ಅತ್ಯುತ್ತಮ ಆಹಾರ ಎಂದೇ ಕರೆಯಲಾಗುತ್ತದೆ - ಆದ್ದರಿಂದ ವಿವಿಧ ಬಗೆಯ ಬೆರ್ರಿ ಹಣ್ಣುಗಳು ನಿಮ್ಮ ಆರೋಗ್ಯಕ್ಕೆ ಅತೀ ಮುಖ್ಯ ಹಾಗೂ ಅದ್ಭುತವಾಗಿದೆ.

ಜರ್ನಲ್ ಆಫ್ ಜೆರೊಂಟಾಲಜಿ ಸರಣಿ ಎ ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಪ್ರತಿದಿನ 200 ಗ್ರಾಂ ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ತಿಳಿಸುತ್ತದೆ. ಈ ಅಧ್ಯಯನದಲ್ಲಿ 40 ಭಾಗವಹಿಸಿದ್ದು, ಅವರು ಒಂದು ತಿಂಗಳ ಅವಧಿಯಲ್ಲಿ 200 ಗ್ರಾಂ ಬ್ಲೂಬೆರ್ರಿ ರಸವನ್ನು ಕುಡಿಯುವುದರಿಂದ ಉಂಟಾಗುವ ಪರಿಣಾಮಗಳನ್ನು ಗಮನಿಸಿದೆ. ಪ್ರತಿದಿನ ಈ ಪ್ರಮಾಣದ ಶುದ್ಧ ಬ್ಲೂಬೆರ್ರಿ ರಸವನ್ನು ಕುಡಿಯುವುದರಿಂದ ರಕ್ತನಾಳಗಳ ಕಾರ್ಯವು ಸುಧಾರಿಸುತ್ತದೆ ಮತ್ತು ಆದ್ದರಿಂದ ಅಧಿಕ ರಕ್ತದೊತ್ತಡದ ಲಕ್ಷಣಗಳು ಕಡಿಮೆಯಾಗುತ್ತವೆ ಎಂದು ಅಧ್ಯಯನದಿಂದ ಕಂಡುಬಂದಿದೆ.

ಆದರೆ ಇದು ಪ್ರತಿದಿನ ಬ್ಲೂಬೆರ್ರಿಹಣ್ಣುಗಳನ್ನು ಸೇವಿಸುವುದರಿಂದ ಉಂಟಾಗುವ ಕೇವಲ ಒಂದು ಪ್ರಯೋಜನವಾಗಿದೆ. ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಹೆಚ್ಚಿನ ಬ್ಲೂಬೆರ್ರಿಹಣ್ಣುಗಳನ್ನು ಸೇರಿಸುವುದರ ಮೂಲಕ ನೀವು ಪಡೆಯಬಹುದಾದ ಇನ್ನೂ ಕೆಲವು ಪ್ರಯೋಜನಗಳು ಇಂತಿವೆ.

1. ತೂಕ ಇಳಿಸಲು ಸಹಾಯ ಮಾಡುತ್ತದೆ:

1. ತೂಕ ಇಳಿಸಲು ಸಹಾಯ ಮಾಡುತ್ತದೆ:

ತೂಕ ಇಳಿಸಲು ಸೇವಿಸಬಹುದಾದಂತಹ ಆಹಾರಗಳಲ್ಲಿ ಬ್ಲೂಬೆರ್ರಿ ಹಣ್ಣುಗಳು ಸೂಕ್ತವಾದ ಹಣ್ಣು. ಅವುಗಳು ಫೈಬರ್ ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ ಮತ್ತು ಹೆಚ್ಚು ಸಮಯ ನಿಮಗೆ ಹಸಿವಾಗದಂತೆ ಮಾಡುತ್ತವೆ. ಹಾಗೆಯೆ ಬೆರ್ರಿ ಹಣ್ಣುಗಳಲ್ಲಿ ಕ್ಯಾಲೊರಿಗಳೂ ಬಹಳ ಕಡಿಮೆ. ಇದು ತಿನ್ನುವ ಕಡುಬಯಕೆಗಳನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವುದರ ಜೊತೆಗೆ ತೂಕವನ್ನು ಇಳಿಸುವಲ್ಲಿ ಸಹಕರಿಸುತ್ತದೆ.

2. ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟುವಲ್ಲಿ ಸಹಾಯಕ:

2. ವಯಸ್ಸಾದಂತೆ ಕಾಣುವುದನ್ನು ತಡೆಗಟ್ಟುವಲ್ಲಿ ಸಹಾಯಕ:

ಬ್ಲೂಬೆರ್ರಿ ಹಣ್ಣುಗಳು ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ, ಅದು ನಿಮ್ಮ ಚರ್ಮ ಮತ್ತು ಕೂದಲಿನ ಗುಣಮಟ್ಟವನ್ನು ಸುಧಾರಿಸುವುದು ಮಾತ್ರವಲ್ಲದೆ ವಯಸ್ಸಿಗೆ ಸಂಬಂಧಿಸಿದ ಜೀವಕೋಶದ ಹಾನಿಯ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬ್ಲೂಬೆರ್ರಿ ಹಣ್ಣುಗಳನ್ನು ತಿನ್ನುವುದು ನಿಮ್ಮ ವಯಸ್ಸಾದಂತೆ ಕಾಣುವ ಲಕ್ಷಣವನ್ನು ಸ್ವಾಭಾವಿಕವಾಗಿ ನಿಧಾನಗೊಳಿಸಲು ಸಹಾಯ ಮಾಡುತ್ತದೆ.

3. ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ:

3. ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ:

ಬ್ಲೂಬೆರ್ರಿ ಹಣ್ಣುಗಳಲ್ಲಿನ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳು ಸಾಕಷ್ಟು ಪ್ರಮಾಣದಲ್ಲಿದ್ದು, ದೇಹ ಮತ್ತು ಮೆದುಳಿನ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ, ಇದರಿಂದಾಗಿ ಮೆದುಳಿನ ಕಾರ್ಯವು ಸುಧಾರಿಸುತ್ತದೆ. ಬ್ಲೂಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ನೆನಪಿನ ಶಕ್ತಿಗೆ ಧನಾತ್ಮಕವಾಗಿ ಸಂಬಂಧವಿದೆ. ಅರಿವಿನ ಸಾಮರ್ಥ್ಯಗಳು ಮತ್ತು ಅಧ್ಯಯನಗಳು ಇದು ವಯಸ್ಸಿಗೆ ಸಂಬಂಧಿಸಿದ ಅರಿವಿನ ಕುಸಿತವನ್ನು ಅಂದರೆ ವಯಸ್ಸಾದಂತೆ ನೆನಪುಗಳನ್ನು ಕಳೆದುಕೊಳ್ಳುವುದನ್ನು ನಿಧಾನಗೊಳಿಸುತ್ತದೆ ಎಂದು ತೋರಿಸುತ್ತವೆ.

4. ಹೃದ್ರೋಗವನ್ನು ತಡೆಯಬಹುದು:

4. ಹೃದ್ರೋಗವನ್ನು ತಡೆಯಬಹುದು:

ಬ್ಲೂಬೆರ್ರಿಗಳ ನಿಯಮಿತ ಸೇವನೆಯು ಸುಧಾರಿತ ರಕ್ತದೊತ್ತಡದ ಮಟ್ಟಗಳು, ಉತ್ತಮ ಇನ್ಸುಲಿನ್ ಸಂವೇದನೆ ಮತ್ತು ಕಡಿಮೆ ಸಾಂದ್ರತೆಯ ಲಿಪೊಪ್ರೋಟೀನ್ (ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್) ಮಟ್ಟದಲ್ಲಿನ ಇಳಿಕೆಗೆ ಸಹಾಯ ಮಾಡುತ್ತದೆ. ಈ ಎಲ್ಲಾ ಪ್ರಯೋಜನಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಅತ್ಯಂತ ಮುಖ್ಯ. ಆದ್ದರಿಂದ, ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಬ್ಲೂಬೆರ್ರಿ ಹಣ್ಣುಗಳನ್ನು ತಿನ್ನುವುದು ಹೃದ್ರೋಗವನ್ನು ತಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ.

5. ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ:

5. ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ:

ಕ್ರ್ಯಾನ್ಬೆರ್ರಿ ಗಳಂತಹ ಬೆರ್ರಿ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ತಿಳಿದುಬಂದಿದೆ. ಇದು ವಿಶೇಷವಾಗಿ ಮೂತ್ರನಾಳದ ಸೋಂಕಿನ ಸಂದರ್ಭದಲ್ಲಿ ಅನ್ವಯಿಸುತ್ತದೆ, ಅದರಲ್ಲೂ ಮಹಿಳೆಯರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಬೆರ್ರಿ ಹಣ್ಣುಗಳನ್ನು ತಿನ್ನುವುದು ಮೂತ್ರನಾಳ ಮತ್ತು ಗಾಳಿಗುಳ್ಳೆಯ ಸೋಂಕನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

6. ಕ್ಯಾನ್ಸರ್ ತಡೆಗಟ್ಟಬಹುದು:

6. ಕ್ಯಾನ್ಸರ್ ತಡೆಗಟ್ಟಬಹುದು:

ಉತ್ಕರ್ಷಣ ನಿರೋಧಕಗಳು, ಫೈಟೊಕೆಮಿಕಲ್ಸ್, ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಗಳು ಸಮೃದ್ಧವಾಗಿರುವ ಬೆರ್ರಿ ಹಣ್ಣುಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಆಮೂಲಾಗ್ರ ಹಾನಿಯನ್ನು ತಡೆಯುತ್ತವೆ. ಈ ಎರಡೂ ಅಂಶಗಳು ಹೆಚ್ಚಿನ ಕ್ಯಾನ್ಸರ್ ಅಪಾಯಗಳಿಗೆ ಸಂಬಂಧಿದ್ದು. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ಬ್ಲೂಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ.

FAQ's
  • ಬ್ಲೂ ಬೆರ್ರಿ ಏಕೆ ಒಳ್ಳೆಯದು?

    ಹೃದಯದ ಆರೋಗ್ಯಕ್ಕೆ, ಮೂಳೆಯ ಆರೋಗ್ಯಕ್ಕೆ, ರಕ್ತದೊತ್ತಡ ನಿಯಂತ್ರಿಸಲು. ಮಧುಮೇಹ ನಿಯಂತ್ರಿಸಲು ಬ್ಲೂ ಬೆರ್ರಿ ತುಂಬಾನೇ ಸಹಕಾರಿ. ಇದನ್ನು ಹಣ್ಣಾಗಿಯೂ ಸೇವಿಸಬಹುದು, ಒಣ ಹಣ್ಣಾಗಿಯೂ ಸೇವಿಸಬಹುದು.

  • ಬ್ಲೂ ಬೆರ್ರಿ ಪ್ರತಿನಿತ್ಯ ತಿನ್ನಬಹುದಾ?

    ಕೆಲವೊಂದು ಅಧ್ಯಯನದ ಪ್ರಕಾರ ದಿನಾ ಒಂದು ಕಪ್ ಬ್ಲೂ ಬೆರ್ರಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲ್ಲದೆ ದಿನಾ ಸ್ವಲ್ಪ ಪ್ರಮಾಣದಲ್ಲಿ ಬ್ಲೂ ಬೆರ್ರಿ ತಿನ್ನುವುದರಿಂದ ಚಯಪಚಯ ಕ್ರಿಯೆಗೆ ಒಳ್ಳೆಯದು ಜೊತೆಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

English summary

Reasons Why You Should Eat Blueberries Every Day

Here are reasons you should eat blueberries every day, Read on...
X
Desktop Bottom Promotion