For Quick Alerts
ALLOW NOTIFICATIONS  
For Daily Alerts

ಪ್ರೊಟೀನ್‌ ಶೇಕ್‌ Vs ಗ್ರೀನ್‌ ಟೀ: ವರ್ಕೌಟ್‌ ಬಳಿಕ ಯಾವುದು ಕುಡಿದರೆ ಒಳ್ಳೆಯದು?

|

ಫಿಟ್ನೆಸ್‌ ಕಡೆ ತುಂಬಾ ಗಮನ ಕೊಡುವವರಿಗೆ ಗ್ರೀನ್‌ಟೀ ಹಾಗೂ ಪ್ರೋಟೀನ್‌ ಶೇಕ್‌ ತೆಗೆದುಕೊಳ್ಳುವ ಅಭ್ಯಾಸವಿದ್ದೇ ಇರುತ್ತದೆ. ಏಕೆಂದರೆ ಫಿಟ್ನೆಸ್‌ಗೆ ಎರಡೂ ಮುಖ್ಯ, ಆದರೆ ವರ್ಕೌಟ್‌ ಬಳಿಕ ಎರಡರಲ್ಲಿ ಯಾವುದು ಕುಡಿದರೆ ಒಳ್ಳೆಯದು ಎಂಬುವುದು ಗೊತ್ತೇ? ಇಲ್ಲ ಅಂದರೆ ಮುಂದೆ ಓದಿ:

ವರ್ಕೌಟ್‌ ಬಳಿಕ ದೇಹವನ್ನು ಹೈಡ್ರೇಟ್‌ ಮಾಡ್ಬೇಕು

ವರ್ಕೌಟ್‌ ಮಾಡಿದಾಗ ದೇಹ ಬೆವರುವುದರಿಂದ ದೇಹಕ್ಕೆ ನೀರಿನಂಶ ಅಗ್ಯತವಿರುತ್ತದೆ. ಅಲ್ಲದೆ ದೇಹಕ್ಕೆ ಶಕ್ತಿ ಕೂಡ ಬೇಕಾಗುವುದು,ಹಾಗಾಗಿ ವರ್ಕೌಟ್‌ ಬಳಿಕ ಪ್ರೊಟೀನ್ ಶೇಕ್‌ ತೆಗೆದುಕೊಳ್ಳುತ್ತಾರೆ. ಪ್ರೊಟೀನ್‌ ಶೇಕ್‌ ಬದಲಿಗೆ ಕೆಲವರು ಗ್ರೀನ್‌ ಟೀ ಕೂಡ ತೆಗೆದುಕೊಳ್ಳುತ್ತಾರೆ. ಇವೆರಡರಲ್ಲಿ ಯಾವುದುಒಳ್ಳೆಯದು ಎಂದು ನೋಡುವುದಾದರೆ....

ಗ್ರೀನ್‌ ಟೀ ಪ್ರಯೋಜನಗಳು

ಗ್ರೀನ್‌ ಟೀ ಮೂ ಬೊಜ್ಜು ಕರಗಿಸುವಲ್ಲಿ ತುಂಬಾನೇ ಪರಿಣಾಮಕಾರಿಯಾಗಿದೆ, ಆದ್ದರಿಂದ ಫಿಟ್ನೆಸ್‌ ಪ್ರಿಯರ ಡಯಟ್‌ನಲ್ಲಿ ಗ್ರೀನ್‌ ಟೀ ಇದ್ದೇ ಇರುತ್ತದೆ.

* ಇನ್ನು ಗ್ರೀನ್‌ ಟೀ ಚಯಪಚಯ ಕ್ರಿಯೆ ಉತ್ತಮವಾಗಿಸುತ್ತೆ, ಇದರಿಂದ ಕ್ಯಾಲೋರಿ ಕರಗಿಸಲು ಮತ್ತಷ್ಟು ಸಹಕಾರಿ. ಗ್ರೀನ್‌ ಟೀ ಹೃದಯದ ಬಡಿತ ಸಮತೋಲನದಲ್ಲಿರುವಂತೆ ಮಾಡುತ್ತದೆ ಅಲ್ಲದೆ ಇದರಲ್ಲಿ Antioxidants ಅಧಿಕವಿರುವುದರಿಂದ ವರ್ಕೌಟ್‌ ಬಳಿಕ ಮೈಕೈ ನೋವು, ಸ್ನಾಯುಗಳ ಊತವಿದ್ದರೆ ಕಡಿಮೆಯಾಗುವುದು.

* ಇಷ್ಟಲ್ಲದೆ ಗ್ರೀನ್‌ ಟೀಯಲ್ಲಿ ಕ್ಯಾಲೋರಿ ಕೂಡ ಕಡಿಮೆ.

ಪ್ರೊಟೀನ್‌ ಶೇಕ್‌ ಪ್ರಯೋಜನಗಳನ್ನು ನೋಡುವುದಾದರೆ

*ಇವುಗಳನ್ನು ಮಾಡುವುದು ಸುಲಭ, ಬಾಯಿಗೆ ರುಚಿ ಹಾಗೂ ಸ್ನಾಯುಗಳನ್ನು ಬಲವಾಗಿಸುತ್ತೆ, ಅಲ್ಲದೆ ದೇಹಕ್ಕೆ ಅಗ್ಯತವಿರುವ ಪ್ರೊಟೀನ್‌ ಸಿಗುತ್ತದೆ. ದೇಹದಲ್ಲಿ ಚಯಪಚಯ ಕ್ರಿಯೆ ಉತ್ತಮವಾಗಿಸುತ್ತೆ, ಅಲ್ಲದೆ ನೀವು ವರ್ಕೌಟ್‌ ಬಳಿಕ ಚಿಕನ್‌, ದಾಲ್‌ ಅಂತ ಪ್ರಾಪರ್‌ ಡಯಟ್‌ ಫುಡ್‌ ಮಿಸ್ ಮಾಡಿದರೂ ಪ್ರೊಟೀನ್‌ ಶೇಕ್‌ ಕುಡಿದು ದೇಹಕ್ಕೆ ಅಗತ್ಯವಿರುವ ಪ್ರೊಟೀನ್‌ ಒದಗಿಸಬಹುದು.

ತೂಕ ಇಳಿಕೆಗೆಯಾದರೆ ಯಾವುದು ಒಳ್ಳೆಯದು
ನೀವು ತೂಕ ಇಳಿಸಲು ವರ್ಕೌಟ್‌ ಮಾಡುತ್ತಿದ್ದರೆ ವ್ಯಾಯಾಮವಾದ ಬಳಿಕ ಗ್ರೀನ್‌ ಟೀ ಕುಡಿಯುವುದು ಒಳ್ಳೆಯದು.
ಅದೇ ನೀವು ಮಸಲ್‌ ಬಿಲ್ಡ್ ಮಾಡಲು ವರ್ಕೌಟ್‌ ಮಾಡುತ್ತಿದ್ದರೆ ವರ್ಕೌಟ್‌ ಬಳಿಕ ಪ್ರೊಟೀನ್‌ ಶೇಕ್‌ ಬೆಸ್ಟ್.

English summary

Post Workout Drink : Green Tea Vs Proteins Shake : Which One Better After Workout in Kannada

Green Tea Vs Proteins Shake: After workout whether it's good green tea or protein shake, have a look
Story first published: Thursday, November 17, 2022, 17:39 [IST]
X
Desktop Bottom Promotion