For Quick Alerts
ALLOW NOTIFICATIONS  
For Daily Alerts

ಕೀಟೋ ಡಯಟ್‌: ಕೊಬ್ಬಿನಂಶ, ನಾನ್‌ವೆಜ್‌ ತಿಂದು ತೂಕ ಇಳಿಸುವ ವಿಧಾನ

|

ಬೊಜ್ಜು ಮೈ ಕರಗಿಸಲು ಅನೇಕ ರೀತಿಯ ಆಹಾರಕ್ರಮಗಳಿವೆ. ಇಲ್ಲಿ ನಾವು ಕೀಟೋ ಡಯಟ್/ ಆಹಾರಕ್ರಮದ ಬಗ್ಗೆ ಹೇಳಿದ್ದೇವೆ. ಈ ಡಯಟ್‌ನ ವಿಶೇಷತೆಯೆಂದರೆ ಇದರಲ್ಲಿ ಕಾರ್ಬ್ಸ್‌ ತಿನ್ನುವ ಬದಲು ಪ್ರೊಟೀನ್ ಹಾಗೂ ಕೊಬ್ಬಿನ ಆಹಾರಗಳನ್ನು ತಿಂದು ಮೈ ಬೊಜ್ಜು ಕರಗಿಸಲಾಗುವುದು.

Keto Diet For Weight Loss

ನಾನ್‌ವೆಜ್‌ ಪ್ರಿಯರಾಗಿದ್ದರೆ ಹೇಳಿ ಮಾಡಿಸಿದ ಡಯಟ್‌ ಪ್ಲ್ಯಾನ್‌ ಇದಾಗಿದೆ. ಚಿಕನ್‌ ಹಾಗೂ ಮೀನನ್ನು ಗ್ರಿಲ್ಡ್ ಮಾಡಿ ಸವಿಯುತ್ತಾ ಮೈತೂಕ ಕಡಿಮೆ ಮಾಡಬಹುದು. ಕೆಲವೇ ತಿಂಗಳಿನಲ್ಲಿ ಮೈ ತೂಕ ಕಡಿಮೆ ಮಾಡಿ, ಆಕರ್ಷಕ ಹಾಗೂ ಆರೋಗ್ಯಕರ ಮೈ ತೂಕ ನಿಮ್ಮದಾಗಿಸಬಹುದು. ಇಲ್ಲಿ ನಾವು ಕೀಟೋ ಡಯಟ್ ಎಂದರೇನು, ಇದನ್ನು ಪಾಲಿಸುವ ವಿಧಾನ ಹೇಗೆ, ಇದು ಹೇಗೆ ಪ್ರಯೋಜನಕಾರಿ ಎಂದು ನೋಡೋಣ:

 ಕೀಟೋ ಡಯಟ್‌:

ಕೀಟೋ ಡಯಟ್‌:

ಕೀಟೊ ಡಯಟ್ ಪಾಲಿಸುವವರು ಅತ್ಯಂತ ಕಡಿಮೆ ಕಾರ್ಬೋಹೈಡ್ರೇಟ್‌ ಇರುವ ಆಹಾರವನ್ನಷ್ಟೇ ತಿನ್ನಬೇಕು. ಮೊದಲೇ ಹೇಳಿದಂತೆ ಈ ಆಹಾರಕ್ರಮದ ವಿಶೇಷತೆ ಎಂದರೆ ಇದರಲ್ಲಿ ಕೊಬ್ಬಿನಂಶದ ಆಹಾರವನ್ನು ತಿನ್ನಲಾಗುವುದು. ಆದ್ದರಿಂದ ಮೀನು, ಚಿಕನ್ ತಿನ್ನುತ್ತಾ ಈ ಡಯಟ್‌ ಪಾಲಿಸಬಹುದು. ಇನ್ನು

ಪನ್ನೀರ್‌, ಚೀಸ್, ಸೋರೆಕಾಯಿ, ಸಮುದ್ರಾಹಾರ, ಹೂಕೋಸು, ಬ್ರೊಕೋಲಿ, ಬೆಣ್ಣೆಹಣ್ಣು, ಮೊಟ್ಟೆಯ ಬಿಳಿ, ತೆಂಗಿನೆಣ್ಣೆ, ಆಲೀವ್ ಎಣ್ಣೆ, ಮೊಸರು, ನಟ್ಸ್, ಬೆಣ್ಣೆ, ಕಾಫಿ ಡಾರ್ಕ್ ಚಾಕಲೇಟ್‌ ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು. ಆದರೆ ಅನ್ನ ಮುಂತಾದ ಕಾರ್ಬೋಹೈಡ್ರೇಟ್ಸ್ ಆಹಾರ ಸೇವಿಸುತ್ತಿಲ್ಲ.

 ಕೀಟೋ ಡಯಟ್ ಹೇಗೆ ಪರಿಣಾಮಕಾರಿ?

ಕೀಟೋ ಡಯಟ್ ಹೇಗೆ ಪರಿಣಾಮಕಾರಿ?

ಸಾಮಾನ್ಯವಾಗಿ ನಾವು ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ ಆಹಾರ ಸೇವಿಸಿದಾಗಲಿವರ್‌ನಲ್ಲಿ ಕೆಟೋನ್ಸ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ದೇಹಕ್ಕೆ ಅಗ್ಯತವಿರುವ ಶಕ್ತಿಯನ್ನು ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಿ ಪಡೆದುಕೊಳ್ಳುತ್ತದೆ. ಹೀಗಾಗಿ ಮೈ ಬೊಜ್ಜು ಕರಗುತ್ತದೆ.

ಕಾರ್ಬ್ಸ್ ತಿಂದಾಗ ಏನಾಗುತ್ತದೆ?

ಕಾರ್ಬ್ಸ್ ತಿಂದಾಗ ಏನಾಗುತ್ತದೆ?

ದೇಹಕ್ಕೆ ಶಕ್ತಿ ತುಂಬಲು ಕಾರ್ಬ್ಸ್ ತುಂಬಾ ಅವಶ್ಯಕ. ಕಾರ್ಬೋಹೈಡ್ರೇಟ್‌ ಆಹಾರ ಸೇವಿಸಿದಾಗ ನಮ್ಮ ದೇಹದಲ್ಲಿ ಗ್ಲೂಕೋಸ್ ಹಾಗೂ ಇನ್ಸುಲಿನ್ ಉತ್ಪತ್ತಿಯಾಗುತ್ತದೆ. ಈ ಇನ್ಸುಲಿನ್‌ ನಮ್ಮ ರಕ್ತನಾಳವನ್ನು ಸೇರಿ , ಶಕ್ತಿಯಾಗಿ ಪರಿವರ್ತನೆಯಾಗಿ ದೇಹಕ್ಕೆ ಬೇಕಾದ ಶಕ್ತಿಯನ್ನು ತುಂಬುವುದು, ಅದೇ ಅಧಿಕ ಕಾರ್ಬ್ಸ್ ತಿಂದಾಗ ಶಕ್ತಿಯಾಗಿ ಪರಿವರ್ತನೆಯಾಗಿ ಮಿಕ್ಕ ಅಂಶ ದೇಹದಲ್ಲಿ ಕೊಬ್ಬಿನಂಶವಾಗಿ ಬೆಳೆಯುವುದು. ಕೀಟೋ ಡಯಟ್‌ ಈ ಕೊಬ್ಬಿನಂಶವನ್ನೇ ಶಕ್ತಿಯನ್ನಾಗಿ ಪರಿವರ್ತಿಸಿ ಬೊಜ್ಜನ್ನು ಕರಗಿಸುವುದು.

ಈ ಡಯಟ್‌ ನಿಮಗೆ ತುಂಬಾ ಸರಳ ಅನಿಸಬಹುದು, ಆದರೆ ತುಂಬಾ ಸಮಯ ಪಾಲಿಸಲು ಕಟ್ಟುನಿಟ್ಟಿನ ಆಹಾರಕ್ರಮ ಪಾಲಿಸುವುದು ಅವಶ್ಯಕ. ಇದನ್ನು ಪಾಲಿಸುವಾಗ ಕೂಡ ಸರಿಯಾದ ರೀತಿಯಲ್ಲಿ ಪಾಲಿಸಬೇಕು, ಇಲ್ಲದಿದ್ದರೆ ದೇಹದ ಮೇಲೆ ಅಡ್ಡ ಪರಿಣಾಮ ಬೀರಬಹುದು, ಈ ಡಯಟ್‌ ವಿಷಯದಲ್ಲಿ ಅಲ್ಲ,ಯಾವುದೇ ಡಯಟ್‌ ಪಾಲಿಸುವುದಾದರೂ ನೀವು ಅದನ್ನು ಪಾಲಿಸುವ ವಿಧಾನ ತಿಳಿದುಕೊಳ್ಳುವುದು ಅವಶ್ಯಕ.

ಕೀಟೋ ಡಯಟ್‌ ಪಾಲಿಸುವಾಗ ಈ ಅಂಶಗಳು ನಿಮ್ಮ ಗಮನದಲ್ಲಿರಲಿ

 ಮೊದಲಿಗೆ ಬಳಲಿಕೆ ಉಂಟಾಗುವುದು

ಮೊದಲಿಗೆ ಬಳಲಿಕೆ ಉಂಟಾಗುವುದು

ಇದ್ದಕ್ಕಿದ್ದಂತೆ ಕಾರ್ಬ್ಸ್ ತಿನ್ನುವುದು ನಿಲ್ಲಿಸಿದಾಗ ನಿಮ್ಮ ದೇಹಕ್ಕೆ ಆಹಾರದ ಮೂಲಕ ಕಾರ್ಬೋಹೈಡ್ರೇಟ್ ದೊರೆಯದೆ ಸುಸ್ತು ಕಾಣಿಸಿಕೊಳ್ಳುವುದು. ಈ ಡಯಟ್‌ನಲ್ಲಿ ಸಂಪೂರ್ಣ ಕಾರ್ಬ್ಸ್ ಬಿಡಬೇಡಿ, ದಿನದಲ್ಲಿ 100-150ಗ್ರಾಂನಷ್ಟು ಕಾರ್ಬ್ಸ್ ಸೇವಿಸಬೇಕು.

ಕಾರ್ಬೋಹೈಡ್ರೇಟ್ಸ್ ಇರುವ ಆಹಾರ ತಿಂದಾಗ ದೇಹಕ್ಕೆ ಶಕ್ತಿ ದೊರೆಯುತ್ತದೆ, ಆದರೆ ಈ ಡಯಟ್‌ನಲ್ಲಿ ಕಾರ್ಬೋಹೈಟ್ರೇಟ್ಸ್ ಕಡಿಮೆ ಪ್ರಮಾಣದಲ್ಲಿರುತ್ತದೆ, ಇದರಿಂದಾಗಿ ದೇಹಕ್ಕೆ ಶಕ್ತಿ ದೊರೆಯದೆ ಪ್ರಾರಂಭದಲ್ಲಿ ಸುಸ್ತು ಅನಿಸುವುದು. ಕೆಲವೊಮ್ಮೆ ತಲೆಸುತ್ತು ಕೂಡ ಬರಬಹುದು. ನಿಮ್ಮ ಚಯಪಚಯ ಕ್ರಿಯೆ ಈ ಡಯಟ್‌ಗೆ ಹೊಂದಿಕೊಂಡ ಬಳಿಕ ಸರಿಯಾಗುವುದು.

ಕೊಬ್ಬಿನಂಶ ಬಳಸಲೇಬೇಕು?

ಕೊಬ್ಬಿನಂಶ ಬಳಸಲೇಬೇಕು?

ನೀವು ತೂಕ ಬೇಗ ಕಡಿಮೆಯಾಗಲಿ ಎಂದು ಕಾರ್ಬ್ಸ್ ಜೊತೆಗೆ ಕೊಬ್ಬು ಬಿಡುವ ನಿರ್ಧಾರ ಮಾಡಿದರೆ ನಿಮ್ಮ ಆರೋಗ್ಯ ಜೋಕೆ! ಹೌದು ಈ ಡಯಟ್‌ನಲ್ಲಿ ಕೊಬ್ಬಿನಂಶ ಸೇವಿಸಲೇಬೇಕು. ಇಲ್ಲದಿದ್ದರೆ ಪೋಷಕಾಂಶದ ಕೊರತೆಯಿಂದ ನಿತ್ರಾಣ ಉಂಟಾಗಿವುದು, ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ಕೊಬ್ಬಿನಂಶದ ಆಹಾರ ಸೇವಿಸಲೇಬೇಕು.

ನೀವು ಪನ್ನೀರ್, ತುಪ್ಪ ಮುಂತಾದ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಲೇಬೇಕು.

ಬಗೆ-ಬಗೆಯ ಕೊಬ್ಬಿನಂಶ ಬಳಸಿ

ಬಗೆ-ಬಗೆಯ ಕೊಬ್ಬಿನಂಶ ಬಳಸಿ

ಒಂದೇ ಬಗೆಯ ಆಹಾರ ಸೇವಿಸುವುದು ಬೋರ್ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದಲ್ಲ. ಈ ಆಹಾರಕ್ರಮದಲ್ಲಿ ಒಂದೇ ಬಗೆಯ ಆಹಾರಕ್ಕಿಂ ತ ಬೇರೆ-ಬೇರೆ ಬಗೆಯಲ್ಲಿ ಮಾಡಿ ತಿನ್ನುವುದರಿಂದ ಈ ಡಯಟ್‌ ಪಾಲಿಸುವುದು ಕೂಡ ಇಂಟೆರೆಸ್ಟಿಂಗ್ ಆಗಿರುತ್ತದೆ.

ಉದಾಹರಣೆಗೆ ಒಂದು ದಿನ ಚಿಕನ್, ಫಿಶ್ ಅನ್ನು ಗ್ರಿಲ್ಡ್ ಮಾಡಿ ತಿಂದರೆ, ಮತ್ತೊಂದು ದಿನ ಬೇಯಿಸಿ ತಿನ್ನುವುದು ಅಥವಾ ಸ್ವಲ್ಪ ಫ್ರೈ ಮಾಡಿ ತಿನ್ನುವುದು ಮಾಡಿ. ಇದರಿಂದ ಬಾಯಿಗೆ ಸ್ವಲ್ಪ ಭಿನ್ನ ರುಚಿ ದೊರೆಯುವುದರ ಜತೆಗೆ ಈ ಕೀಟೊ ಆಹಾರಕ್ರಮ ಬೋರ್ ಅನಿಸುವುದಿಲ್ಲ.

ಪ್ರೊಟೀನ್ ಪ್ರಮಾಣ

ಪ್ರೊಟೀನ್ ಪ್ರಮಾಣ

ನೀವು ಎಷ್ಟು ಪ್ರಮಾಣದ ಪ್ರೊಟೀನ್ ತೆಗೆದುಕೊಳ್ಳುತ್ತೀರಿ ಎನ್ನುವುದು ಕೂಡ ಮುಖ್ಯ. ಪ್ರೊಟೀನ್ ಕಡಿಮೆಯಾದರೆ ಸುಸ್ತು ಅನಿಸುವುದು. ಇನ್ನು ಅಧಿಕ ಪ್ರೊಟೀನ್ ಹಾಗೂ ಕೊಬ್ಬಿನಂಶದ ಆಹಾರ ತಿಂದರೆ ಈ ಡಯಟ್‌ ಪಾಲಿಸಿದ ಪ್ರಯೋಜನ ಕಾಣುವುದಿಲ್ಲ.

ತಜ್ಞರ ಪ್ರಕಾರ ಕೀಟೊ ಡಯಟ್‌ನಲ್ಲಿ ಅಧಿಕ ಕೊಬ್ಬಿನಂಶವಿದ್ದು, ಪ್ರೊಟೀನ್ ಎಷ್ಟು ಬೇಕೋ ಅಷ್ಟಿದ್ದರೆ ಮಾತ್ರ ತೂಕ ಇಳಿಕೆಗೆ ಸಹಕಾರಿ.

ಈ ಆಹಾರಕ್ರಮ ಪಾಲಿಸುವವರು ಅವರ ಮೈ ತೂಕಕ್ಕೆ ಅನುಸಾರ ಪ್ರೊಟೀನ್‌ ತೆಗೆದುಕೊಳ್ಳಬೇಕು. ಕೆಜಿಗೆ 0.7-0.9 ಗ್ರಾಂನಷ್ಟು ಪ್ರೊಟೀನ್‌ ತೆಗೆದುಕೊಳ್ಳಬೇಕು.

ನಾರಿನಂಶವಿರುವ ಆಹಾರ ಸೇವಿಸಿ

ನಾರಿನಂಶವಿರುವ ಆಹಾರ ಸೇವಿಸಿ

ನಿಮ್ಮ ಆಹಾರದಲ್ಲಿ ನಾರಿನಂಶದ ಆಹಾರಗಳು ಹೆಚ್ಚಿರಲಿ, ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನಿ. ನಾರಿನಂಶವಿರುವ ಆಹಾರ ಜೀರ್ಣಕ್ರಿಯೆಗೆ ಸಹಕಾರಿ, ಬರೀ ಪ್ರೊಟೀನ್ ಇರುವ ಆಹಾರ ತಿಂದರೆ ಮಲಬದ್ಧತೆ ಉಂಟಾಗುವುದು, ಅದನ್ನು ತಡೆಗಟ್ಟುವಲ್ಲಿ ನಾರಿನಂಶವಿರುವ ಆಹಾರ ಸಹಕಾರಿ

ಈ ಆಹಾರ ಸೇವಿಸಬೇಡಿ

ಈ ಆಹಾರ ಸೇವಿಸಬೇಡಿ

ಫಾಸ್ಟ್ ಫುಡ್ಸ್, ಪಿಜ್ಜಾ, ಬರ್ಗರ್, ಅನ್ನ, ಚಾಕಲೇಟ್‌, ಕ್ಯಾಂಡಿ, ಸಕ್ಕರೆ, ಓಟ್ಸ್, ಕಾರ್ನ, ಹಣ್ಣುಗಳು, ಹಾಲು, ಗೆಡ್ಡೆ-ಗೆಣಸುಗಳು, ಕೆರೆ ಮೀನು, ಕುರಿ ಮಾಂಸ ಇವುಗಳನ್ನು ಈ ಡಯಟ್ ಪಾಲಿಸುವವರು ತಿನ್ನುವಂತಿಲ್ಲ.

ಸಲಹೆ : ಈ ಡಯಟ್‌ ಸೂಕ್ತ ರೀತಿಯಲ್ಲಿ ಪಾಲಿಸಿದರೆ ತೂಕವೂ ಕಡಿಮೆಯಾಗುವುದು, ಆರೋಗ್ಯವೂ ಚೆನ್ನಾಗಿರುತ್ತದೆ. ಒಮ್ಮೆ ಸರಿಯಾದ ತೂಕಕ್ಕೆ ಬಂದಾಗ ಸಮತೋಲನ ಆಹಾರ ತೆಗೆದುಕೊಳ್ಳಿ. ನಂತರ ವ್ಯಾಯಾಮ ಮಾಡಿ. ಹೀಗೆ ಮಾಡಿದರೆ ಆಕರ್ಷಕ ಮೈ ತೂಕ ಪಡೆಯಬಹುದು.

English summary

Keto Diet: What to Eat and Avoid for Weight Loss

If you are non veg lover, want to loose weight then here is best way to loose weight through keto diet, have a look.
X
Desktop Bottom Promotion