For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದೀರಾ? ಚಳಿಗಾಲದಲ್ಲಿ ಸಿಗುವ ಈ 8 ಹಣ್ಣುಗಳು ಬೆಸ್ಟ್

|

ಬೇಸಿಗೆಗೆ ಹೋಲಿಸಿದರೆ ಮಳೆಗಾಲ ಹಾಗೂ ಚಳಿಗಾಲದಲ್ಲಿ ನಮ್ಮ ಮೈ ತೂಕ ಹೆಚ್ಚಾಗುತ್ತೆ, ಏಕೆಂದರೆ ಹೊರಗಡೆ ಹವಾಮಾನ ತಂಪಾಗಿರುವಾ ಟೀ ಜೊತೆ ನಟ್ಸ್‌ ಸವಿಯಲು ಮನಸ್ಸಾಗಲ್ಲ, ಬಜ್ಜಿ, ಬೋಂಡಾ ಬೇಕೆನಿಸುತ್ತದೆ, ಅಲ್ಲದೆ ಈ ಕಾಲಗಳಲ್ಲಿ ಬಾಯಿ ತುಂಬಾನೇ ರುಚಿ ರುಚಿಯಾದ ಆಹಾರ ಬಯಸುತ್ತೆ, ಚಳಿ ಎನ್ನುವ ಕಾರಣಕ್ಕೆ ಕೆಲವೊಮ್ಮೆ ವರ್ಕೌಟ್‌ ಮಾಡಲು ಹಿಂದೇಟು ಹಾಕುತ್ತೇವೆ, ಇವೆಲ್ಲದರ ಪರಿಣಾಮ ನಮ್ಮ ದೇಹದ ಮೇಲೆ ಕಾಣುತ್ತದೆ.

winter fruits weight loss

ಚಳಿಗಾಲದಲ್ಲಿ ತೂಕ ಕಡಿಮೆಯಾಗಬೇಕೆ? ತೂಕ ಕಡಿಮೆಯಾಗಲು ಡಯಟ್‌ ಮಾಡುತ್ತಿದ್ದೀರಾ? ಚಳಿಗಾಲದಲ್ಲಿ ಈ ಹಣ್ಣುಗಳನ್ನು ಪ್ರತಿದಿನ ತಿನ್ನಿ, ಬೇಗನೆ ತೂಕ ಇಳಿಕೆಯಾಗುತ್ತೆ:
ಕಿತ್ತಳೆ:

ಕಿತ್ತಳೆ:

ಕಿತ್ತಳೆಯಲ್ಲಿ ವಿಟಮಿನ್‌ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ನೀವು ಕಿತ್ತಳೆ ತಿಂದರೆ ಮೈ ತೂಕ ಕಡಿಮೆಯಾಗಲು ತುಂಬಾನೇ ಸಹಕಾರಿ. ಅಲ್ಲದೆ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳಲು ತುಂಬಾನೇ ಸಹಕಾರಿ. ತ್ವಚೆ ಹೊಳಪು ಕೂಡ ಹೆಚ್ಚುವುದು.

ಅಂಜೂರ

ಅಂಜೂರ

ಅಂಜೂರದಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಇದು ಹೊಟ್ಟೆ ಬೊಜ್ಜು ಕರಗಿಸಲು ತುಂಬಾನೇ ಸಹಕಾರಿ. ಇದರಲ್ಲಿ ಸತು, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ, ರಂಜಕ ಇದೆ.

ಸೀಬೆ

ಸೀಬೆ

ಚಳಿಗಾಲದಲ್ಲಿ ಸೀಬೆಕಾಯಿ ಮಿಸ್‌ ಮಾಡದೆ ತಿನ್ನಿ. ಸೀಬೆಕಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಅಲ್ಲದೆ ಚಳಿಗಾಲದಲ್ಲಿ ಕಾಡುವ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ.

 ಸೀತಾಫಲ

ಸೀತಾಫಲ

ಸೀತಾಫಲ ವಿಟಮಿನ್‌ ಎ, ಸಿ ಮತ್ತು ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಮತ್ತು ಸತು ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೀತಾಫಲ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಹೋಗಲಾಡಿಸಬಹುದು.

ಪೈನಾಪಲ್

ಪೈನಾಪಲ್

ಪೈನಾಪಲ್‌ನಲ್ಲಿ ಕೂಡ ನಾರಿನಂಶ ಚೆನ್ನಾಗಿದೆ. ಅಲ್ಲದೆ ಪೈನಾಪಲ್‌ನಲ್ಲಿ ಬ್ರೋಮೆಲಿನ್ ಕಿಣ್ವ ಇರುವುದರಿಂದ ಹೊಟ್ಟೆ ಬೊಜ್ಜು ಕರಗಿಸಲು ತುಂಬಾನೇ ಸಹಕಾರಿ.

 ದಾಳಿಂಬೆ

ದಾಳಿಂಬೆ

ನಿಮ್ಮ ಆಹಾರಕ್ರಮದಲ್ಲಿ ದಾಳಿಂಬೆ ಸೇರಿಸಿ. ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡುತ್ತದೆ, ರಕ್ತವನ್ನು ಶುದ್ಧೀಕರಿಸುತ್ತದೆ, ಹಿಮೋಗ್ಲೋಬಿನ್‌ ಹೆಚ್ಚಾಗುತ್ತದೆ.

ಸ್ಟಾರ್‌ಫ್ರೂಟ್‌

ಸ್ಟಾರ್‌ಫ್ರೂಟ್‌

ಸ್ಟಾರ್‌ಫ್ರೂಟ್‌ನಲ್ಲಿ ನಾರಿನಂಶ ಅಧಿಕವಿದೆ. ಇದರಿಂದ ಚಯಪಚಯ ಕ್ರಿಯೆ ಹೆಚ್ಚಾಗುವುದು, ಇದರಿಂದ ಹೊಟ್ಟೆ ಬೊಜ್ಜು ಕರಗಲು ಸಹಕಾರಿ. ಅಲ್ಲದೆ ಸ್ಟಾರ್‌ಫ್ರೂಟ್‌ ಹೊಟ್ಟೆಯ ಆರೋಗ್ಯ ವೃದ್ಧಿಸುತ್ತದೆ.

ಗ್ರೇಪ್‌ಫ್ರೂಟ್

ಗ್ರೇಪ್‌ಫ್ರೂಟ್

ಮಧುಮೇಹ ಇರುವವರಿಗೆ ಈ ಹಣ್ಣು ತುಂಬಾನೇ ಸಹಕಾರಿ. ಅಲ್ಲದೆ ಕ್ಯಾಲೋರಿ ಕರಗಿಸಲು ತುಂಬಾನೇ ಸಹಕಾರಿ, ಇದರಿಂದ ತೂಕ ಇಳಿಕೆಯಾಗುವುದು.

ಬಾಳೆಹಣ್ಣು

ಬಾಳೆಹಣ್ಣು

ಬೆಳಗ್ಗೆ ಒಂದು ಬಾಳೆಹಣ್ಣು ತಿನ್ನಿ. ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ, ಮೆಗ್ನಿಷ್ಯಿಯಂ, ವಿಟಮಿನ್‌ ಸಿ ಇರುವುದರಿಂದ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಜೊತೆಗೆ ಮೈ ತೂಕ ಕಾಪಾಡಲು ಸಹಕಾರಿ.

English summary

If You Are In Weight Loss Journey, Include These Winter Fruits

These winter fruits help to loose weight loss, read on....
X
Desktop Bottom Promotion