For Quick Alerts
ALLOW NOTIFICATIONS  
For Daily Alerts

ಸಿಹಿ ಕುಂಬಳಕಾಯಿ ಬೀಜದಿಂದ ತೂಕ ಇಳಿಕೆ ಹೇಗೆ?

|

ನಾವೆಲ್ಲಾ ಕಾಯಿಲೆ ದೂರವಿಟ್ಟು ಆರೋಗ್ಯಕರ ಜೀವನ ನಡೆಸಬೇಕೆಂದರೆ ನಮ್ಮ ಆಹಾರ ಶೈಲಿ ಕೂಡ ಪ್ರಮುಖವಾಗಿರುತ್ತದೆ.ಈಗ ಹೆಚ್ಚಿನವರ ಸಮಸ್ಯೆ ಹೊಟ್ಟೆ ಹಾಗೂ ಸೊಂಟದ ಸುತ್ತ ಸಂಗ್ರಹವಾಗುತ್ತಿರುವ ಬೊಜ್ಜು. ಕೆಲವರು ಡಯಟ್ ಹೆಸರಿನಲ್ಲಿ ದೇಹಕ್ಕೆ ಅಗ್ಯತವಾದ ಪೋಷಕಾಂಶಗಳನ್ನು ನೀಡುವುದೇ ಇಲ್ಲ. ಇದರಿಂದ ಆರೋಗ್ಯಕ್ಕೆ ಅಪಾಯಕಾರಿ.

How To Reduce Weight By Pumpkin Seed

ನಾವು ತೂಕ ಇಳಿಕೆಗೆ ಆಹಾರವನ್ನು ಸೇವಿಸುವಾಗ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು. ಇಲ್ಲಿ ನಾವು ಸಿಹಿ ಕುಂಬಳಕಾಯಿ ಬೀಜ ಹೇಗೆ ತೂಕ ಇಳಿಕೆಗೆ ಸಹಕಾರಿ ಎಂಬುವುದು ಹೇಳಿದ್ದೇವೆ. ಈಗಂತೂ ಹೆಚ್ಚಿನವರು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಮನೆಯಲ್ಲಿಯೇ ಇರುವಾಗ ತಿನ್ನುವ ಚಟ ಕೂಡ ಅಧಿಕವಾಗಿರುತ್ತದೆ, ಇವೆಲ್ಲ ಕೂಡ ತೂಕ ಹೆಚ್ಚಾಗಲು ಒಂದು ಕಾರಣವಾಗಿದೆ. ತೂಕ ನಿಯಂತ್ರಣ ಮಾಡಲು ಸಿಹಿ ಕುಂಬಳಕಾಯಿ ಬೀಜ ಹೀಗೆಲ್ಲಾ ಸಹಕಾರಿ ನೋಡಿ:

ಸಿಹಿ ಕುಂಬಳಕಾಯಿ ಬೀಜ ಬಿಸಾಡಬೇಡಿ

ಸಿಹಿ ಕುಂಬಳಕಾಯಿ ಬೀಜ ಬಿಸಾಡಬೇಡಿ

ಸಿಹಿ ಕುಂಬಳಕಾಯಿ ಕತ್ತರಿಸಿದಾಗ ಹೆಚ್ಚಿನವರು ಅದರ ಬೀಜ ಬಿಸಾಡುತ್ತಾರೆ. ಆದರೆ ಈ ಬೀಜ ಎಷ್ಟೊಂದು ಆರೋಗ್ಯಕರ ಎಂಬುವುದು ಗೊತ್ತೇ? ಇದು ಆರೋಗ್ಯಕರ ಮಾತ್ರವಲ್ಲ ರುಚಿಕರ ಕೂಡ ಹೌದು. ಇದನ್ನು ಒಣಗಿಸಿ ತಿನ್ನಬಹುದು.

 ತೂಕ ಇಳಿಕೆಗೆ ಸಹಕಾರಿ

ತೂಕ ಇಳಿಕೆಗೆ ಸಹಕಾರಿ

ಕುಂಬಳಕಾಯಿ ಬೀಜ ತೂಕ ಇಳಿಕೆಗೆ ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ. ಸಿಹಿ ಕುಂಬಳಕಾಯಿ ಬೀಜದಲ್ಲಿ ವಿಟಮಿನ್ ಬಿ, ಮೆಗ್ನಿಷ್ಯಿಯಂ, ಕಬ್ಬಿಣದಂಶ, ಪ್ರೊಟೀನ್ ಇದೆ. ಅಲ್ಲದೆ ಇದರಲ್ಲಿ ಆರೋಗ್ಯಕರ ಕೊಬ್ಬಿನಂಶವಿದ್ದು ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ತುಂಬಾನೇ ಸಹಕಾರಿ.

ಸಿಹಿ ಕುಂಬಳಾಯಿ ಬೀಜ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಕೂಡ ನಿಯಂತ್ರಣದಲ್ಲಿಡಬಹುದು, ಅಲ್ಲದೆ ಈ ಬೀಜ ಸಂತಾನೋತ್ಪತ್ತಿ ಸಾಮಾರ್ಥ್ಯ ಹೆಚ್ಚಿಸುತ್ತದೆ, ಅಲ್ಲದೆ ಕೆಲವೊಂದು ಕ್ಯಾನ್ಸರ್ ವಿರುದ್ಧವೂ ಹೋರಾಡುತ್ತದೆ.

ಸಿಹಿ ಕುಂಬಳಕಾಯಿ ಬೀಜ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಶಕ್ತಿಯನ್ನು ತುಂಬುತ್ತದೆ ಹಾಗೂ ನಿಮ್ಮ ಮೂಡ್ ಚೆನ್ನಾಗಿರುವಂತೆ ಅಂದರೆ ಬೇಗನೆ ಕೋಪ, ಬೇಸರ ಉಂಟಾಗುವುದು ಇವೆಲ್ಲಾ ತಡೆಯುತ್ತದೆ.

ಸಿಹಿ ಕುಂಬಳಕಾಯಿ ಬೀಜದಲ್ಲಿರುವ ನಾರಿನಂಶ

ಸಿಹಿ ಕುಂಬಳಕಾಯಿ ಬೀಜದಲ್ಲಿರುವ ನಾರಿನಂಶ

ತೂಕ ಇಳಿಕೆಗೆ ನಾರಿನಂಶವಿರುವ ಆಹಾರ ಸೇವನೆ ಮಾಡಬೇಕು. ಸಿಪ್ಪೆ ಸಹಿತ ಕುಂಬಳಕಾಯಿ ಬೀಜದಲ್ಲಿ 28 ಗ್ರಾಂನಲ್ಲಿ 1.1ಗ್ರಾಂನಷ್ಟು ನಾರಿನಂಶವಿರುತ್ತದೆ. ಈ ನಾರಿನಂಶ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವಂತೆ ಮಾಡುತ್ತದೆ. ತೂಕ ಇಳಿಕೆಯಾಗಬೇಕೆಂದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯ ಬೇಕಾಗಿರುವುದು ಅವಶ್ಯಕ. ಇದರಲ್ಲಿ ಸತುವಿನಂಶ ಉತ್ತಮವಾಗಿದ್ದು, ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯುತ್ತದೆ.

 ಸಿಹಿ ಕುಂಬಳಕಾಯಿ ಬೀಜ ಹೇಗೆಲ್ಲಾ ಬಳಸಬಹುದು?

ಸಿಹಿ ಕುಂಬಳಕಾಯಿ ಬೀಜ ಹೇಗೆಲ್ಲಾ ಬಳಸಬಹುದು?

  • ಸಿಹಿ ಕುಂಬಳಕಾಯಿ ಬೀಜವನ್ನು ಸ್ನ್ಯಾಕ್ಸ್ ರೀತಿ ಬಳಸಬಹುದು, ಇದಲ್ಲದೆ ಸ್ಮೂತಿ, ಗ್ರೀಕ್ ಯೋಗರ್ಟ್, ಫ್ರೂಟ್‌ ಸಲಾಡ್‌ಗಳಲ್ಲಿ ಬಳಸಬಹುದು.
  • ತಿನ್ನುವ ಆಹಾರ ಜೊತೆಗೆ ಇದನ್ನು ಸ್ವಲ್ಪ ಹಾಕಿ ತಿನ್ನಬಹುದು
  • ಕೇಕ್ ಮುಂತಾದ ವಸ್ತುಗಳು ಮಾಡುವಾಗ ಬಳಸಬಹುದು (ತೂಕ ಇಳಿಕೆಯಾಗಬೇಕೆಂದರೆ ಕೇಕ್ ತಿನ್ನಬೇಡಿ, ಮಕ್ಕಳಿಗೆ ನೀಡುವ ಕೇಕ್‌ನಲ್ಲಿ ಬಳಸಬಹುದು)
English summary

How to Eat Pumpkin Seeds for Weight Loss

Here we have given information how you can include pumpkin seeds in your diet to loose weight read on.
X
Desktop Bottom Promotion