Just In
Don't Miss
- Technology
ಅಗ್ಗದ ಬೆಲೆಗೆ ಬ್ರಾಡ್ಬ್ಯಾಂಡ್ ಕನೆಕ್ಷನ್ ಬೇಕೆ?..ಇದು ಬೆಸ್ಟ್ ಪ್ಲ್ಯಾನ್ ನೋಡಿ!
- News
Karnataka Budget 2023: ಕನ್ನಡಪರ ಕಾರ್ಯಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇಳಿದ ಅನುದಾನವೆಷ್ಟು?
- Automobiles
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
- Sports
Ranji Trophy: ಜಾರ್ಖಂಡ್ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ: ಸೆಮಿಫೈನಲ್ ಪ್ರವೇಶಿಸಿದ ಬೆಂಗಾಲ್
- Finance
ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯ, ದರ ಇಲ್ಲಿ ಪರಿಶೀಲಿಸಿ
- Movies
ಕೆಜಿಎಫ್ 2 ಕಲೆಕ್ಷನ್ನಲ್ಲಿ 400 ಕೋಟಿ ಏರಿಕೆ; 200 ಕೋಟಿ ಕ್ಲಬ್ ಸೇರಿದ ಜೇಮ್ಸ್, ವಿಕ್ರಾಂತ್ ರೋಣ! ಹೇಗೆ ಸಾಧ್ಯ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಈ ಪ್ರೊಟೀನ್ ಆಹಾರ ಸೇವಿಸಿದರೆ ಬೇಗನೆ ತೂಕ ಕಡಿಮಯಾಗುತ್ತೆ!
ಫಿಟ್ ಆಗಿ ಇರಬೇಕು, ತೂಕ ಕೊಂಚ ಕಳೆದುಕೊಳ್ಳಬೇಕು ಎಂದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..? ಎಲ್ಲರೂ ಹೀಗೆ ಇಷ್ಟಪಡುತ್ತಾರೆ. ನಮ್ಮ ತೂಕ ಜಾಸ್ತಿಯಾಗಲು ಪ್ರಮುಖ ಕಾರಣ ನಾವು ಸೇವಿಸುವ ಆಹಾರ. ಹೌದು, ಜನರು ತಮ್ಮ ಹಸಿವಿನ ಸಂಕಟವನ್ನು ನಿಭಾಯಿಸಲು ಸುಲಭವಾಗಿ ಲಭ್ಯವಿರುವ ಲಘು ಆಹಾರಗಳಿಗೆ ಆಗಾಗ್ಗೆ ತಿರುಗುತ್ತಾರೆ. ಈ
ಆಹಾರಗಳು ಸಾಮಾನ್ಯವಾಗಿ ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳಲ್ಲಿ ಅಧಿಕವಾಗಿರುತ್ತವೆ. ಹೀಗಾಗಿ ಇಂತಹ ಆಹಾರಗಳು ನಿಮ್ಮ ತೂಕವನ್ಮು ಹೆಚ್ಚಿಸುತ್ತದೆ.
ನೀವು ತೂಕವನ್ನು ಕಡಿಮೆಗೊಳಿಸಲು ಬಯಸಿದರು ಇಂತಹ ಆಹಾರಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತಲೇ ಇರುತ್ತದೆ. ಹೀಗಾಗಿ ನೀವು ಈ ಸಮಯದಲ್ಲಿ ಪ್ರೋಟೀನ್ ಯುಕ್ತ ಆಹಾರವನ್ನು ಸೇವಿಸಬೇಕು. ತೂಕ ಹೆಚ್ಚಿಸುವ ಸ್ನಾಕ್ಸ್ ಬಿಟ್ಟು ಉತ್ತಮ ಆಹಾರವನ್ನು ಸೇವಿಸಬೇಕು. ಇನ್ನು ಈ ಪ್ರೋಟಿನ್ ಯುಕ್ತ ಆಹಾರಗಳು ಸ್ನಾಯುಗಳ ನಿರ್ಮಾಣ, ತೂಕ ನಷ್ಟ ಮತ್ತು ತಿಂದ ನಂತರ ನಿಮ್ಮನ್ನು ಆರೋಗ್ಯವಾಗಿ ಇಡುತ್ತದೆ.
ಹಾಗಾದರೆ ಯಾವ ರೀತಿಯ ಆಹಾರ ಸೇವಿಸಬೇಕು..? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಗ್ರೀಕ್ ಯೋಗರ್ಟ್!
ನೀವು ವೈಟ್ ಲಾಸ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದರೆ ಗ್ರೀಕ್ ಯೋಗರ್ಟ್ ಉತ್ತಮ ಆಯ್ಕೆಯಾಗಿದೆ. ಹೌದು, ಕ್ಯಾಲ್ಸಿಯಂನ ಉತ್ತಮ ಮೂಲವಾಗಿರುವುದರ ಹೊರತಾಗಿ, ಗ್ರೀಕ್ ಯೋಗರ್ಟ್ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿದೆ. ಇದು ಪೌಷ್ಠಿಕಾಂಶವನ್ನು ಮಾತ್ರವಲ್ಲದೆ ಅತಿಯಾಗಿ ತಿನ್ನುವುದನ್ನು ತಪ್ಪಿಸಲು ನಿಮ್ಮ ಹೊಟ್ಟೆಯನ್ನು ತುಂಬಿದ ಹಾಗೇ ಇಡುತ್ತದೆ. ಇದರ ಪ್ರೋಟೀನ್ ಹೊಟ್ಟೆ ತುಂಬಿಸುತ್ತದೆ. ನೆನಪಿಡಿ, ತೂಕ ಕಡಿಮೆಗೊಳಿಸಲು ನಿಮ್ಮ ಗುರಿಯಾಗಿದ್ದರೆ ಗ್ರೀಕ್ ಮೊಸರು ಸಾಮಾನ್ಯ ಮೊಸರುಗಿಂತ ಉತ್ತಮವಾಗಿರುತ್ತದೆ. ಗ್ರೀಕ್ ಮೊಸರು ಬಳಕೆ ಮಾಡಬಹುದು.

ತರಕಾರಿಗಳು!
ತರಕಾರಿ ಅನೇಕರಿಗೆ ಆಗೇ ಬರೋದಿಲ್ಲ, ತರಕಾರಿ ಎಂದರೇ ಅನೇಕರು ಊಟನೇ ಮಾಡೋದಿಲ್ಲ. ನಿಮಗೊಂದು ನೆನಪಿರಲಿ ತರಕಾರಿ ಸೇವನೆ ನಿಮ್ಮನ್ನು ಆರೋಗ್ಯವಾಗಿ ಇಡುವುದಲ್ಲದೇ ನಿಮ್ಮ ತೂಕವನ್ನು ಕಡಿಮೆಗೊಳಿಸುತ್ತದೆ. ತರಕಾರಿಗಳು ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ, ಅದರಿಂದ ತರಕಾರಿಯಿಂದ ನಾವು ಸ್ನಾಕ್ಸ್ ಅನ್ನು ತಯಾರಿಸಬಹುದು. ನೀವು ಕೆಲವು ತರಕಾರಿಗಳನ್ನು ಕುದಿಸಿ ಬಾಯಿಲ್ಡ್ ವೆಜಿಟೇಬಲ್ಸ್ ಮಾಡಬಹುದು, ಸ್ವಲ್ಪ ಸಲಾಡ್ ಮಾಡಬಹುದು ಅಥವಾ ಆರೋಗ್ಯಕರ ಸ್ಯಾಂಡ್ವಿಚ್ ಮಾಡಬಹುದು. ಹೂಕೋಸು, ಕೋಸುಗಡ್ಡೆ, ಎಲೆಕೋಸು, ಲೆಟಿಸ್ ಮತ್ತು ಹಸಿರು ಬಟಾಣಿಗಳು ತೂಕ ನಷ್ಟ ಸ್ನೇಹಿ ತರಕಾರಿಗಳಾಗಿದ್ದು ತೂಕ ಕಡಿಮೆ ಮಾಡಿಕೊಳ್ಳಲು ಈ ತರಕಾರಿಗಳನ್ನು ಬಳಕೆ ಮಾಡಿ.

ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ!
ಪ್ರೋಟೀನ್ ಮತ್ತು ವಿಟಮಿನ್ ಬಿ ಜಾಸ್ತಿಯಾಗಿರುವುದನ್ನು ಹೊರತುಪಡಿಸಿ ತೂಕ ಇಳಿಸಿಕೊಳ್ಳಲು ಬೇಯಿಸಿದ ಮೊಟ್ಟೆ ಉತ್ತಮ ಆಯ್ಕೆಯಾಗಿದೆ. ಹೌದು, ಮೊಟ್ಟೆಗಳು ತೂಕವನ್ನು ಕಳೆದುಕೊಳ್ಳುವ ಒಂದು ಉತ್ತಮ ಮಾರ್ಗವಾಗಿದೆ ಏಕೆಂದರೆ ಅವು ನಿಮ್ಮ ಚಯಾಪಚಯ ದರವನ್ನು ಹೆಚ್ಚಿಸಬಹುದು ಮತ್ತು ಕ್ಯಾಲೊರಿಗಳನ್ನು ವೇಗವಾಗಿ ಬರ್ನ್ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿಯೇ ಜಿಮ್ ಗೆ ಹೋಗುವ ಜನರು ಮೊಟ್ಟೆಯನ್ನು ಸೇವಿಸುತ್ತಾರೆ. ಅನೇಕರು ಮೊಟ್ಟೆ ವೈಟ್ ತಿನ್ನುವುದು ಜಾಸ್ತಿ.

ಪೀನಟ್ ಬಟರ್!
ಪೀನಟ್ ಬಟರ್ ಅಥವಾ ಕಡಲೆ ಕಾಯಿ ಬೆಣ್ಣೆ ತೂಕ ನಷ್ಟಕ್ಕೆ ಮತ್ತು ದೇಹವನ್ನು ಅತ್ಯುತ್ತಮವಾಗಿಗೊಳಿಸಲು ಇದು ಅತ್ಯುತ್ತಮ ಆಹಾರವಾಗಿದೆ. ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯಲು ನಿಮಗೆ ಸಮಯವಿಲ್ಲದಿದ್ದಾಗ ಪೀನಟ್ ಬಟರ್ ಸ್ಯಾಂಡ್ ವಿಚ್ ಮಾಡಿ ಸೇವಿಸಬಹುದು. ಇದರಲ್ಲಿ ಹೆಚ್ಚು ಪ್ರೊಟೀನ್ ಇರುವುದರಿಂದ ಜಿಮ್ ಗೆ ಹೋಗುವವರು ಹೆಚ್ಚು ಬಳಕೆ ಮಾಡುತ್ತಾರೆ. ಇದು ಸೂಪರ್ ಟೇಸ್ಟಿಯಾಗಿದ್ದು ಮತ್ತು ನಿಮ್ಮನ್ನು ದೀರ್ಘಕಾಲ ಪೂರ್ಣವಾಗಿರಿಸುತ್ತದೆ. ಹೀಗಾಗಿ ತೂಕ ಇಳಿಸಲು ಹಾಗೂ ನಿಮ್ಮ ದೇಹವನ್ನು ಫಿಟ್ ಆಗಿ ಇಡಲು ಇದು ಅತ್ಯುತ್ತಮ ಪ್ರೋಟೀನ್ ಫುಡ್ ಆಗಿದೆ.

ಬಾದಾಮಿ!
ಬದಾಮಿಯು ಟೇಸ್ಟಿ ಮತ್ತು ಲಘು ಆಹಾರಕ್ಕಾಗಿ ಅನುಕೂಲಕರವಾಗಿರುವುದರ ಜೊತೆಗೆ, ಬಾದಾಮಿಯು ಪ್ರೋಟೀನ್, ವಿಟಮಿನ್ ಇ, ರೈಬೋಫ್ಲಾವಿನ್, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಂತಹ ಹಲವಾರು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದಲ್ಲದೆ, ನೀವು ಬಾದಾಮಿಯನ್ನು ನೆನೆಸಿದಾಗ, ಇದು ಲಿಪೇಸ್ ನಂತಹ ಕೆಲವು ಕಿಣ್ವಗಳನ್ನು ಬಿಡುಗಡೆ ಮಾಡುತ್ತದೆ, ಅದು ಚಯಾಪಚಯವನ್ನು ವೇಗಗೊಳಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೀಗಾಗಿ ಜಿಮ್ ಗೆ ಹೋಗುವ ಜನರು ರಾತ್ರಿ ನೀರಿನಲ್ಲಿ ಬದಾಮಿಯನ್ನು ನೆನೆಸಿಟ್ಟು ಬೆಳಗ್ಗೆ ಸೇವಿಸುತ್ತಾರೆ.

ಹುರಿದ ಕಡಲೆ ಸೇವಿಸಿ!
ಇದು ಬಜೆಟೆಡ್ ಪ್ರೋಟಿನ್ ಆಹಾರವಾಗಿದೆ. ನಿಮಗೆ ಸ್ವಲ್ಪ ಸಮಯವಿದ್ದರೆ, ನೀವು ಕಾಳುಗಳು ಮತ್ತು ಕಡಲೆಗಳನ್ನು ನಿಮ್ಮ ಆಹಾರ ಪದ್ದತಿಗೆ ಬಳಕೆ ಮಾಡಬಹುದು. ಹುರಿದ ಕಡಲೆ ಪ್ರೋಟೀನ್, ಫೋಲೇಟ್, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ತಾಮ್ರ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿವೆ. ಈ ಆಹಾರ ತೂಕ ನಷ್ಟವನ್ನು ಸುಲಭಗೊಳಿಸುತ್ತದೆ. ಹೀಗಾಗಿ ಹುರಿದ ಕಡಲೆಯನ್ನು ಸೇವಿಸಬಹುದು. ಜಿಮ್ ಗೆ ಹೋಗುವವರು ಕೂಡ ಈ ವಸ್ತುವನ್ನು ಸೇವಿಸಬಹುದು.

ಹಣ್ಣುಗಳು!
ಹಣ್ಣುಗಳ ಸೇವನೆಯಿಂದ ಆರೋಗ್ಯ ಉತ್ತಮವಾಗುವುದಲ್ಲದೇ ನಿಮಗೆ ಉತ್ತಮ ಪ್ರೊಟೀನ್ ಕೂಡ ಸಿಗುತ್ತದೆ. ನೀವು ಕೂಡಲೇ ಏನಾದರು ಆಹಾರ ಸೇವಿಸಬೇಕು ಎಂದು ಮುಂದಾದರೆ ಹಣ್ಣುಗಳನ್ನು ಸೇವನೆ ಮಾಡಬಹುದು ಅಡುಗೆ ಮಾಡಲು ನಿಮ್ಮ ಮನಸ್ಸು ಬೇಡ ಎಂದರೆ ಕಿತ್ತಳೆ, ಪೇರಲ, ದಾಳಿಂಬೆ, ಕಲ್ಲಂಗಡಿ, ಸೇಬು, ಬಾಳೆಹಣ್ಣು ಮತ್ತು ಕಿವಿಯಂತಹ ಹಣ್ಣುಗಳನ್ನು ತೆಗೆದುಕೊಳ್ಳಿ. ಇವುಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಅಲ್ಲದೇ ಮೆಟಾಬಾಲಿಸಂ ಕೂಡ ಹೆಚ್ಚಿಸುತ್ತದೆ. ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ.

ಕಾಟೇಜ್ ಚೀಸ್!
ಕಾಟೇಜ್ ಚೀಸ್ ಆರೋಗ್ಯಕರ ಮತ್ತು ಹೆಚ್ಚಿನ ಪ್ರೋಟೀನ್‌ಗಾಗಿ ಮಾತ್ರವಲ್ಲದೆ ಅದರ ಬಹುಮುಖತೆಗಾಗಿಯೂ ಬಳಸಲ್ಪಡುತ್ತದೆ. ಇದು ಕ್ಯಾಲ್ಸಿಯಂ ಅನ್ನು ಸಹ ಹೊಂದಿದೆ ಮತ್ತು ನಮ್ಮ ದೇಹವು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅನ್ನು ಪಡೆದಾಗ, ನಾವು ಹೆಚ್ಚು ಕೊಬ್ಬನ್ನು ಸುಡುತ್ತೇವೆ ಎಂದು ಅಧ್ಯಯನಗಳು ತಿಳಿಸುತ್ತವೆ.

ಚಿಯಾ ಬೀಜಗಳ ಪುಡಿಂಗ್!
ಚಿಯಾ ಬೀಜಗಳ ಪುಡಿಂಗ್ ಟೇಸ್ಟಿ ಮತ್ತು ಆರೋಗ್ಯಕರ ತಿಂಡಿ ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗಿದೆ. ಸೂಪರ್‌ಫುಡ್ ಆಗಿರುವುದರಿಂದ, ಚಿಯಾ ಬೀಜಗಳು ಅದರ ಹೆಚ್ಚಿನ ಪ್ರೋಟೀನ್ ಮತ್ತು ಇತರ ಪೋಷಕಾಂಶಗಳಾದ ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್‌ಗಳು, ಫೈಬರ್, ಫಾಸ್ಫರಸ್ ಮತ್ತು ಮ್ಯಾಂಗನೀಸ್‌ನಿಂದಾಗಿ ಆರೋಗ್ಯ ಪ್ರಯೋಜನಗಳಿಂದ ತುಂಬಿವೆ. ಆದ್ದರಿಂದ, ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಇದು ಸಹಾಯ ಮಾಡುತ್ತದೆ. ಹೀಗಾಗಿ ನೀವು ಚಿಯಾ ಬೀಜಗಳ ಪುಡಿಂಗ್ ಬಳಸಬಹುದು.