For Quick Alerts
ALLOW NOTIFICATIONS  
For Daily Alerts

ದಿನಾ ಸೆಕ್ಸ್ ಮಾಡಿದರೆ ಮಹಿಳೆಯರು ದಪ್ಪಗಾಗುವರೇ?

|

ಪ್ರತಿ ಜೀವಿಗೂ ನಿಸರ್ಗ ಲೈಂಗಿಕ ಬಯಕೆಯನ್ನು ನೀಡಿದ್ದು ಕಾಲಕಾಲಕ್ಕೆ ಪೂರೈಸಿಕೊಳ್ಳುವ ಮೂಲಕ ಲಭಿಸುವ ಆರೋಗ್ಯಕರ ಪರಿಣಾಮಗಳ ಬಗ್ಗೆ ನಮಗೆಲ್ಲಾ ಅರಿವಿದೆ. ಲೈಂಗಿಕ ಜೀವನ ಉತ್ತಮ ಮತ್ತು ತೃಪ್ತಿಕರವಾಗಿದ್ದರೆ ಆರೋಗ್ಯವೂ ಉತ್ತಮವೇ ಇರುತ್ತದೆ ಎಂದು ಈಗಾಗಲೇ ವಿಜ್ಞಾನಿಗಳು ಸಾಬೀತುಗೊಳಿಸಿದ್ದಾರೆ. ಲೈಂಗಿಕ ಚಟುವಟಿಕೆಯಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುವುದು, ಮಾನಸಿಕ ಒತ್ತಡ ನಿವಾರಣೆ, ಸುಧಾರಿಸಿದ ನಿದ್ದೆ ಮತ್ತು ರಕ್ತಪರಿಚಲನೆಯಲ್ಲಿ ಏರುಪೇರಾಗುವಿಕೆಯನ್ನೂ ನಿಯಂತ್ರಿಸಲು ಸಾಧ್ಯ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಆರೋಗ್ಯ ತಜ್ಞರ ಪ್ರಕಾರ ಭಾವನಾತ್ಮಕ ಸಂಬಂಧದಿಂದ ಜೀವನ ಆರೋಗ್ಯಕರವಾಗಿರುತ್ತದೆ. ಆದರೆ ಈ ಜಗತ್ತಿನಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇರುವುದಿಲ್ಲ, ತಾಯಿಯ ಪ್ರೀತಿಯ ಹೊರತು! ಲೈಂಗಿಕ ಜೀವನ ತೃಪ್ತಿಕರವಾಗಿದ್ದರೆ ಇದು ಸ್ಥೂಲಕಾಯಕ್ಕೆ ಕಾರಣವಾಗಬಹುದು ಎಂದು ಕೆಲವು ಅಧ್ಯಯನಗಳು ತಿಳಿಸುತ್ತಿವೆ. ವಿವಾಹದ ಬಳಿಕ ಮಹಿಳೆಯರ ದೇಹದ ತೂಕದಲ್ಲಿ ಹೆಚ್ಚಳವಾಗುವ ಮಾಹಿತಿಯನ್ನು ಆಧರಿಸಿ ಈ ಅಧ್ಯಯನವನ್ನು ನಡೆಸಲಾಗಿದ್ದು ಇದರ ವಿವರಗಳನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.

ನಿಯಮಿತ ಲೈಂಗಿಕ ಜೀವನದಿಂದ ನಿಮ್ಮ ತೂಕ ಹೆಚ್ಚಿದೆಯೇ?

ನಿಯಮಿತ ಲೈಂಗಿಕ ಜೀವನದಿಂದ ನಿಮ್ಮ ತೂಕ ಹೆಚ್ಚಿದೆಯೇ?

ನಿಜವಾಗಿ ಹೇಳಬೇಕೆಂದರೆ ಲೈಂಗಿಕ ಚಟುವಟಿಕೆಯಿಂದ ನೇರವಾಗಿ ತೂಕ ಏರಿಕೆ ಉಂಟಾಗುವುದಿಲ್ಲ. ವಾಸ್ತವದಲ್ಲಿ, ಈ ಚಟುವಟಿಕೆಯಿಂದ ವ್ಯಾಯಾಮದಂತೆಯೇ ದೇಹದಿಂದ ಕ್ಯಾಲೋರಿಗಳು ಬಳಸಲ್ಪಡುತ್ತವೆ. ಆದರೆ ಈ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ವಿವಿಧ ರಸದೂತಗಳ ಸಮತೋಲನವೇ ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ತೂಕ ಏರಿಕೆ ಇನ್ನೂ ಕೆಲವಾರು ಅಂಶಗಳನ್ನು ಆಧರಿಸಿರುತ್ತದೆ. ಪ್ರೌಢಾವಸ್ಥೆಯ ವಯಸ್ಸು, ಮಾಸಿಕ ಋತುಚಕ್ರ ಮತ್ತು ರಜೋನಿವೃತ್ತಿಯಂತಹ ಹಲವಾರು ಅಂಶಗಳು ತೂಕವನ್ನು ನಿರ್ಧರಿಸುತ್ತವೆ.

ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಲೈಂಗಿಕ ಹಾರ್ಮೋನುಗಳಾದ DHEA (dehydroepiandrosterone-ಇದು ಮಹಿಳೆಯರಲ್ಲಿಯೂ ಪುರುಷರಲ್ಲಿಯೂ ಲೈಂಗಿಕ ರಸದೂತಗಳಿಗೆ ಪೂರ್ವಭಾವಿಯಾಗಿರುವ ರಸದೂತವಾಗಿದೆ), ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್‌ನಲ್ಲಿನ ಏರಿಳಿತವಾಗಿದ್ದು ಅದು ತೂಕ ಹೆಚ್ಚಿಸಲು ಕಾರಣವಾಗುತ್ತದೆ. ನಿಮ್ಮ ದೇಹದಲ್ಲಿ DHEA ರಸದೂತಗಳ ಕೊರತೆಯಿದ್ದರೆ ಆಗ ನೀವು ತೂಕದಲ್ಲಿ ಹೆಚ್ಚಳ ಕಾಣಿಸಿಕೊಳ್ಳಬಹುದು. ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ರಸದೂತಗಳಲ್ಲಿನ ಅಸ್ಥಿರತೆಯೂ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ನಿಮ್ಮ ರಸದೂತಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ, ಏಕೆಂದರೆ ಇದು ಅನಿರೀಕ್ಷಿತವಾದ ಸ್ಥೂಲಕಾಯವನ್ನು ತಡೆಯಲು ಸಹಾಯ ಮಾಡುತ್ತದೆ.

ವಿವಾಹದ ಬಳಿಕ ತೂಕದಲ್ಲಿ ಹೆಚ್ಚಳವೇಕೆ ಕಂಡುಬರುತ್ತದೆ?

ವಿವಾಹದ ಬಳಿಕ ತೂಕದಲ್ಲಿ ಹೆಚ್ಚಳವೇಕೆ ಕಂಡುಬರುತ್ತದೆ?

ಮದುವೆಯಾದ ಬಳಿಕ ಬಹುತೇಕ ಮಹಿಳೆಯರು ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ ಎಂಬುದು ಜನಪ್ರಿಯ ನಂಬಿಕೆ. ಮೊದಲಿಗೆ, ಇದು ಮಹಿಳೆಯರಿಗೆ ಮಾತ್ರವಲ್ಲ, ಪುರುಷರೂ ವಿವಾಹದ ಬಳಿಕ ತೂಕ ಹೆಚ್ಚಿಸಿಕೊಳ್ಳುತ್ತಾರೆ ಎಂಬುದನ್ನು ಮರೆಯಬಾರದು. ಆದರೂ, ಮದುವೆಯ ನಂತರ ತೂಕದಲ್ಲಿ ಹೆಚ್ಚಳ ಕಂಡುಬರಲು ಲೈಂಗಿಕ ಜೀವನವೇ ಕಾರಣ ಎಂಬುದು ಹಳೆಯ ನಂಬಿಕೆಯಾಗಿದೆ. ಆರೋಗ್ಯ ತಜ್ಞರ ಪ್ರಕಾರ, ತೂಕ ಹೆಚ್ಚಾಗುವುದಕ್ಕೂ ಲೈಂಗಿಕತೆಗೂ ಏನೂ ಸಂಬಂಧವಿಲ್ಲ.

ಮದುವೆಯ ನಂತರ ತೂಕದಲ್ಲಿ ಹೆಚ್ಚಳ ಕಂಡುಬರಲು ಸಂಬಂಧಕ್ಕೆ ಒಳಗಾಗಿರುವ ಸಾರ್ಥಕ ಭಾವನೆ ಮತ್ತು ಓರ್ವ ಪುರುಷನ ತೆಕ್ಕೆಯಲ್ಲಿ ಅನುಭವಿಸುವ ಸುರಕ್ಷತೆಯ ಪ್ರಜ್ಞೆಯನ್ನು ಪಡೆಯುವುದೇ ಆಗಿದೆ. ಕೆಲವು ಅಧ್ಯಯನಗಳು ಸಂಬಂಧದಲ್ಲಿರುವ ಜನರು ಒಂಟಿ ಜೀವಿಗಳಿಗಿಂತ ಹೆಚ್ಚು ಆಹಾರ ಸೇವಿಸುತ್ತಾರೆ ಎಂಬುದನ್ನು ಸಾಬೀತುಪಡಿಸುತ್ತವೆ. ಅಷ್ಟೇ ಅಲ್ಲ, ಸಾಮಾನ್ಯವಾಗಿ ವಿವಾಹಕ್ಕೂ ಮೊದಲು ತಾನು ಸ್ಥೂಲಕಾಯ ಪಡೆದರೆ ಮದುವೆಗೆ ತೊಂದರೆಯಾಗಬಹುದೋ ಎಂಬ ದಿಗಿಲಿನಿಂದ ತೂಕ ಹೆಚ್ಚಳದಿಂದ ತನ್ನನ್ನು ತಾನು ಕಾಪಾಡಿಕೊಳ್ಳುತ್ತಿದ್ದ ಯುವತಿ ವಿವಾಹದ ಬಳಿಕ ಈ ಕಟ್ಟುಪಾಡನ್ನು ಸಡಿಲಿಸುವುದೂ ಇನ್ನೊಂದು ಕಾರಣವಾಗಿದೆ. ಆದ್ದರಿಂದ, ಸೂಕ್ತ ಆಹಾರಕ್ರಮ ಮತ್ತು ನಿಯಮಿತವಾದ ವ್ಯಾಯಾಮದಿಂದ ದೇಹದ ತೂಕವನ್ನು ಹದ್ದುಬಸ್ತಿನಲ್ಲಿ ಇಡಬಹುದು.

ಲೈಂಗಿಕ ಜೀವನದಿಂದ ತೂಕದಲ್ಲಿ ಇಳಿಕೆ ಕಂಡುಬರಬಹುದೇ?

ಲೈಂಗಿಕ ಜೀವನದಿಂದ ತೂಕದಲ್ಲಿ ಇಳಿಕೆ ಕಂಡುಬರಬಹುದೇ?

ತೂಕ ಇಳಿಕೆಗೆ ವ್ಯಾಯಾಮದಂತಹ ಕಷ್ಟಪಡಬೇಕಾದ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇದರ ಬದಲಿಗೆ ಸಂತೋಷ ನೀಡುವ ಮತ್ತು ಇಷ್ಟವಾಗುವ ಕ್ರಿಯೆಯಿಂದ ತೂಕ ಇಳಿಕೆ ಸಾಧ್ಯವಾಗುವುದಾದರೆ ಏಕೆ ಬೇಡ? ಹೌದು, ದೇಹದ ಹೆಚ್ಚುವರಿ ಕ್ಯಾಲೋರಿಗಳನ್ನು ಬಳಸಿಕೊಳ್ಳಲು ಲೈಂಗಿಕ ಜೀವನ ನೆರವಾಗುತ್ತದೆ. ತಜ್ಞರ ಪ್ರಕಾರ, ನೀವು 30 ನಿಮಿಷಗಳ ಲೈಂಗಿಕ ಚಟುವಟಿಕೆಯಲ್ಲಿ ಸುಮಾರು 100 ರಿಂದ 300 ಕ್ಯಾಲೊರಿಗಳನ್ನು ಬಳಸಿಕೊಳ್ಳುತ್ತೀರಿ. ಇಷ್ಟೇ ಕ್ಯಾಲೋರಿಗಳನ್ನು ಬಳಸಿಕೊಳ್ಳಲು ನೀವು ಸಾವಿರ ಹೆಜ್ಜೆ ಅಥವಾ ಸುಮಾರು ಮುಕ್ಕಾಲು ಕಿ.ಮೀ ನಡೆಯಬೇಕಾಗುತ್ತದೆ.

ಆದರೆ ತೂಕ ಇಳಿಯುವ ಬದಲು ಹೆಚ್ಚುವುದೇಕೆ?

ಆದರೆ ತೂಕ ಇಳಿಯುವ ಬದಲು ಹೆಚ್ಚುವುದೇಕೆ?

ಲೈಂಗಿಕ ಚಟುವಟಿಕೆಯಿಂದ ಪ್ರತಿ ಬಾರಿ ಮುನ್ನೂರು ಕ್ಯಾಲೋರಿಗಳು ಖರ್ಚಾಗುತ್ತವೆ ಸರಿ, ಆದರೆ ನಿಯಮಿತವಾದ ಸುಖಕರ ಲೈಂಗಿಕ ಜೀವನ ನಡೆಸುತ್ತಿರುವ ದಂಪತಿಗಳ ತೂಕದಲ್ಲೇನೂ ಇಳಿಕೆ ಕಾಣಬರದೇ ಇರಲು ಕಾರಣವೇನು? ವಾಸ್ತವದಲ್ಲಿ, ಇಷ್ಟು ಕ್ಯಾಲೋರಿಗಳನ್ನು ಬಳಸಿಕೊಳ್ಳಲು ಅರ್ಧ ಘಂಟೆಯ ಲೈಂಗಿಕ ಚಟುವಟಿಕೆಯ ಅಗತ್ಯವಿದೆ. ಆದರೆ ಇದು ವಿಶ್ವದಲ್ಲಿ ಎಲ್ಲೋ ಒಂದೆರಡು ದಂಪತಿಗಳ ಮಟ್ಟಿಗೆ ಸಾಧ್ಯವಾಗಬಹುದೇ ಹೊರತು ಉಳಿದ ಎಲ್ಲಾ ದಂಪತಿಗಳ ಲೈಂಗಿಕ ಸಮಾಗಮ ಇದಕ್ಕೂ ಎಷ್ಟೋ ಕಡಿಮೆ ಅವಧಿಯಲ್ಲಿ ಮುಗಿಯುತ್ತದೆ. ಅಲ್ಲದೇ ಲೈಂಗಿಕ ಭಂಗಿಗಳ ಮೇಲೂ ಕ್ಯಾಲೋರಿಗಳ ದಹಿಸುವಿಕೆ ಅವಲಂಬಿಸಿರುತ್ತದೆ.

ಸಾಮಾನ್ಯ ಮತ್ತು ಆರಾಮದಾಯಕ ಭಂಗಿಗಳಲ್ಲಿ ಹೆಚ್ಚಿನ ಕ್ಯಾಲೋರಿಗಳು ದಹಿಸಲ್ಪಡುವುದಿಲ್ಲ. ಆದ್ದರಿಂದ ಕ್ಯಾಲೋರಿಗಳನ್ನು ದಹಿಸಲಿಕ್ಕಾಗಿ ಲೈಂಗಿಕ ಚಟುವಟಿಕೆ ನಡೆಸುವುದು ಎಂಬ ಕಲ್ಪನೆಯೇ ಸರಿಯಲ್ಲ. ನಿಜ ಏನೆಂದರೆ ಲೈಂಗಿಕ ಜೀವನದ ತೃಪ್ತಿಯಿಂದ ಮನಸ್ಸು ನಿರಾಳವಾಗಿ ಆಹಾರ ಪ್ರಮಾಣದಲ್ಲಿ ಹೆಚ್ಚಳ ಮತ್ತು ದೈಹಿಕ ಚಟುವಟಿಕೆಯಲ್ಲಿ ಇಳಿಕೆಯಾಗುವುದೇ ತೂಕ ಹೆಚ್ಚಳಕ್ಕೆ ಕಾರಣ. ವಿವಾಹದ ಬಳಿಕವೂ ಸೂಕ್ತ ಆಹಾರ ಕ್ರಮ, ಆರೋಗ್ಯಕರ ಜೀವನ ಕ್ರಮ ಮತ್ತು ಅವಶ್ಯವಿದ್ದಷ್ಟು ವ್ಯಾಯಾಮವನ್ನು ಮಾಡುವ ಮೂಲಕ ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯಕರವಾಗಿ ಮತ್ತು ಸೌಷ್ಠವದಲ್ಲಿ ಇರಿಸಬಹುದು.

English summary

Can Having Frequent Sex Make A Woman to Gain Weight?

Here we are discussing about Can Having Frequent Sex Make A Woman to Gain Weight?. Let’s see how true this is and if it is the reason behind weight gain soon after marriage!. Read more.
Story first published: Friday, September 4, 2020, 16:00 [IST]
X