For Quick Alerts
ALLOW NOTIFICATIONS  
For Daily Alerts

ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್‌ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ

|

ಸೇಬು, ಬೀಟ್ರೂಟ್, ಮತ್ತು ಗಜ್ಜರಿ ಅಥವಾ ಕ್ಯಾರೆಟ್ - ಈ ಮೂರನ್ನೂ ಸೇರಿಸಿ ತಯಾರಿಸಬಹುದಾದ ಜ್ಯೂಸ್ ಅದೆಂತಹ ಜಾದೂ ಮಾಡಬಲ್ಲದು ಎಂದು ನಿಮಗೆ ತಿಳಿದಿದೆಯೇ? ಹಲವಾರು ಆರೋಗ್ಯ ಸಮಸ್ಯೆಗಳನ್ನ ಪರಿಹರಿಸುವ ಸಾಮರ್ಥ್ಯ ಈ ಅದ್ಭುತ ಜ್ಯೂಸ್ ಗೆ ಇದೆ!! ನಿಮ್ಮ ಶರೀರದ ಒಟ್ಟಾರೆ ಆರೋಗ್ಯವನ್ನ ಉತ್ತಮಗೊಳಿಸಿ, ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳನ್ನ ಹತ್ತಿರ ಸುಳಿಯಗೊಡದಂತೆ ನೋಡಿಕೊಳ್ಳಬಲ್ಲದು ಈ ಜ್ಯೂಸ್.

ಈ ಜ್ಯೂಸ್ ನ ತಯಾರಿಕೆಯಲ್ಲಿ ಬಳಸಲಾಗುವ ಮೂರು ವಸ್ತುಗಳನ್ನ ಇಂಗ್ಲೀಷ್ ಭಾಷೆಯ ವರ್ಣಮಾಲೆಯ ಆಧಾರದ ಮೇಲೆ (ಆಲ್ಫ಼ಬೆಟಿಕಲ್ ಆರ್ಡರ್) ಜೋಡಿಸಿದರೆ ಈ ಜ್ಯೂಸ್ ಗೆ "ಎಬಿಸಿ" ಜ್ಯೂಸ್ ಎಂಬ ಇನ್ನೊಂದು ಸುಂದರ ಹೆಸರು ಸೃಷ್ಟಿಯಾಗುತ್ತದೆ. ಈ ಜ್ಯೂಸ್ ನ ಆರೋಗ್ಯ ಲಾಭಗಳನ್ನ ನಿಮ್ಮದಾಗಿಸಿಕೊಳ್ಳೋದಕ್ಕೆ ಇರೋ ಒಂದು ಉಪಾಯ ಅಂದರೆ ಈ ಜ್ಯೂಸನ್ನ ಸ್ವತ: ನೀವೇ ತಯಾರಿಸಿ ಕುಡಿಯುವುದು!!

ಸೇಬು, ಬೀಟ್ರೂಟ್, ಮತ್ತು ಕ್ಯಾರೆಟ್ ಗಳನ್ನ ಪ್ರತ್ಯೇಕವಾಗಿ ಪರಿಗಣಿಸಿದರೂ ಕೂಡ, ಈ ಒಂದೊಂದು ಆಹಾರವಸ್ತುವೂ ಅದ್ಭುತ ಆರೋಗ್ಯದಾಯಕ. ಅಂತಹದ್ದರಲ್ಲಿ ಆ ಮೂರನ್ನೂ ಒಟ್ಟಿಗೆ ಸೇರಿಸಿ ಜ್ಯೂಸ್ ಮಾಡಿ ಕುಡಿದರೆ, ಅದು ಅದೆಂತಹ ಅದ್ಭುತ ಪೇಯ ಆಗಬಲ್ಲದೆಂದು ನೀವೇ ಊಹಿಸಿ!! ಈ ಜ್ಯೂಸನ್ನು ಪ್ರತಿದಿನವೂ ಕುಡಿಯುವುದರಿಂದ ನಿಮ್ಮ ಒಟ್ಟಾರೆ ಆರೋಗ್ಯ ಹೇಗೆ ಸುಧಾರಿಸಬಲ್ಲದೆಂಬುದರ ಕುರಿತು ಈ ಲೇಖನದಿಂದ ಮಾಹಿತಿ ಪಡೆದುಕೊಳ್ಳಿ

ತೂಕನಷ್ಟ ಹೊಂದಲು ನೆರವಾಗುತ್ತದೆ

ತೂಕನಷ್ಟ ಹೊಂದಲು ನೆರವಾಗುತ್ತದೆ

ಈ ಜ್ಯೂಸ್ ನಲ್ಲಿರೋ ಕ್ಯಾಲರಿಗಳ ಪ್ರಮಾಣ ಅತ್ಯಂತ ಕಡಿಮೆ. ಹಾಗಾಗಿ ತೂಕವನ್ನ ಕಳಕೊಳ್ಳ ಬಯಸೋವಂತವರಿಗೆ ಈ ಜ್ಯೂಸ್ ಹೇಳಿಮಾಡಿಸಿದ್ದಾಗಿದೆ. ಈ ಜ್ಯೂಸ್ ಸೇವನೆಯ ಬಳಿಕ ಬಹಳ ಕಾಲದವರೆಗೆ ನಿಮ್ಮ ಹೊಟ್ಟೆಯು ತುಂಬಿಕೊಂಡಿರುವಂತಹ ಅನುಭವವಾಗುತ್ತದೆ. ಹಾಗಾದಾಗ, ಎರಡು ಊಟಗಳ ಮಧ್ಯೆ ಏನನ್ನಾದರೂ ಜಗಿಯುವ ನಿಮ್ಮ ಅಭ್ಯಾಸಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಜೊತೆಗೆ ಈ ಜ್ಯೂಸ್ ನಲ್ಲಿ ನಾರಿನಂಶ ತುಂಬಾ ಹೆಚ್ಚು. ಹಾಗಾಗಿ ಇದು ಚಯಾಪಚಯ ಕ್ರಿಯೆಯನ್ನ ಮತ್ತಷ್ಟು ಹೆಚ್ಚಿಸಿ, ತೂಕನಷ್ಟವನ್ನ ಹೊಂದುವ ನಿಮ್ಮ ಕನಸಿಗೆ ದಾರಿಯನ್ನ ಇನ್ನಷ್ಟು ಸುಲಭ ಮಾಡಿಕೊಡುತ್ತದೆ.

ದೇಹದ ನಂಜನ್ನ ತೊಡೆದು ಹಾಕುತ್ತದೆ

ದೇಹದ ನಂಜನ್ನ ತೊಡೆದು ಹಾಕುತ್ತದೆ

ನಮ್ಮ ಶರೀರದ ಪ್ರಮುಖ ಅಂಗಾಂಗಗಳ ನಂಜನ್ನ ಹಾಗೂ ಶರೀರದ ಇತರ ಭಾಗಗಳಲ್ಲಿರಬಹುದಾದ ಎಲ್ಲ ಹಾನಿಕಾರಕ ವಿಷವಸ್ತುಗಳನ್ನ ತೊಳೆದು ಹೊರಹಾಕಲು, ಪೇಯವೊಂದನ್ನು ಕುಡಿಯುವ ಅಗತ್ಯ ನಮಗೆ ಆಗಾಗ್ಗೆ ಇರುತ್ತದೆ. ಈ ಸೇಬು, ಬೀಟ್ರೂಟ್, ಹಾಗೂ ಕ್ಯಾರೆಟ್ ಸಂಗಮದ ಜ್ಯೂಸ್, ದೇಹದ ಎಲ್ಲ ಹಾನಿಕಾರಕ ನಂಜನ್ನೂ ತೊಳೆದು ನಿವಾರಿಸಬಲ್ಲದು. ಪಿತ್ತಕೋಶ, ಮೂತ್ರಪಿಂಡ, ಹಾಗೂ ಕರುಳುಗಳಲ್ಲಿರಬಹುದಾದ ವಿಷವೆಲ್ಲವನ್ನೂ ಈ ಜ್ಯೂಸ್ ತೊಳೆದು ಶರೀರದಿಂದ ಹೊರಹಾಕುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಸೇಬು, ಬೀಟ್ರೂಟ್, ಹಾಗೂ ಕ್ಯಾರೆಟ್ ಮಿಶ್ರಣದ ಈ ಜ್ಯೂಸ್ ದೇಹದ ಪ್ರಮುಖ ಅಂಗಾಂಗಗಳನ್ನ ವಿಷಮುಕ್ತವನ್ನಾಗಿಸುತ್ತದೆ ಹಾಗೂ ರಕ್ತದ ಪರಿಚಲನೆಯನ್ನ ಇನ್ನಷ್ಟು ಉತ್ತೇಜಿಸುತ್ತದೆ. ಈ ಪ್ರಕ್ರಿಯೆಯು ತ್ವಚೆಯ ಆರೋಗ್ಯವನ್ನ ಕಾಪಾಡುತ್ತದೆ ಹಾಗೂ ದೇಹದಲ್ಲಿರುವ ಮುಕ್ತ ರಾಡಿಕಲ್ ಗಳ ವಿರುದ್ಧ ಸೆಣೆಸಲು ದೇಹಕ್ಕೆ ನೆರವಾಗುತ್ತದೆ. ಈ ಜ್ಯೂಸ್ ಅನ್ನ ಕುಡಿಯುವುದರಿಂದ ಕೆಂಪು ರಕ್ತಕಣಗಳ ಉತ್ಪಾದನೆಯೂ ಹೆಚ್ಚಾಗುತ್ತದೆ ಹಾಗೂ ಆ ಮೂಲಕ ಶರೀರದ ಹಿಮೋಗ್ಲೋಬಿನ್ ನ ಮಟ್ಟವೂ ಹೆಚ್ಚುತ್ತದೆ.

ತ್ವಚೆಯನ್ನ ಆರೋಗ್ಯವಾಗಿರಿಸಿಕೊಳ್ಳೋದಕ್ಕೆ ಹೇಳಿ ಮಾಡಿಸಿರೋವಂತಹದ್ದು!!

ತ್ವಚೆಯನ್ನ ಆರೋಗ್ಯವಾಗಿರಿಸಿಕೊಳ್ಳೋದಕ್ಕೆ ಹೇಳಿ ಮಾಡಿಸಿರೋವಂತಹದ್ದು!!

ಈ ಎಬಿಸಿ ಜ್ಯೂಸನ್ನ ಕುಡಿಯೋದ್ರಿಂದ ಆಗೋ ಮತ್ತೊಂದು ಪ್ರಮುಖ ಲಾಭ ಏನು ಗೊತ್ತಾ ? ನೀವು ತಾರುಣ್ಯಭರಿತರಾಗಿ ಕಾಣೋದಕ್ಕೆ ಯಾವುದರ ಅಗತ್ಯ ಇದೆ ಹೇಳಿ ?!! ಅದೇ ಕಲೆ, ಸುಕ್ಕು ರಹಿತವಾದ ಕಾಂತಿಯುತ ತ್ವಚೆ!! ಅಂತಹ ತ್ವಚೆಯನ್ನ ನಿಮ್ಮದಾಗಿಸಿಕೊಳ್ಳೋ ನಿಟ್ಟಿನಲ್ಲಿ ಈ ಜ್ಯೂಸ್ ಗಿಂತ ಉತ್ತಮವಾದದ್ದು ಬೇರೊಂದಿಲ್ಲ!! ಈ ಜ್ಯೂಸ್ ನ ತಯಾರಿಕೆಯಲ್ಲಿ ಬಳಸೋ ಮೂರೂ ವಸ್ತುಗಳಲ್ಲೂ ವಿಟಮಿನ್ ಎ ಸಮೃದ್ಧವಾಗಿದೆ. ಈ ವಿಟಮಿನ್ ಎ ಯಲ್ಲಿ ವಯಸ್ಸಾಗೋದನ್ನ ಪ್ರತಿಬಂಧಿಸುವ ಗುಣಲಕ್ಷಣಗಳಿದ್ದು, ಅವಧಿಗಿಂತಲೂ ಮೊದಲೇ ನಿಮ್ಮ ತ್ವಚೆ ತಾರುಣ್ಯವನ್ನ ಕಳೆದುಕೊಳ್ಳೋದನ್ನ ಇದು ತಪ್ಪಿಸುತ್ತದೆ. ಕ್ಯಾರೆಟ್ ನಲ್ಲಿರೋ ಬೀಟಾ ಕ್ಯಾರೊಟಿನ್, ತ್ವಚೆಯು ಮುಪ್ಪಾಗುವ ಪ್ರಕ್ರಿಯೆಯನ್ನ ನಿಧಾನಗೊಳಿಸುವಲ್ಲಿ ಸಹಕರಿಸುತ್ತದೆ.

ಆರೋಗ್ಯಯುತವಾದ ಹೃದಯವನ್ನ ನಿಮ್ಮದಾಗಿಸಿಕೊಳ್ಳೋಕೆ ಕುಡಿಯಿರಿ ಎಬಿಸಿ ಜ್ಯೂಸ್!!

ಆರೋಗ್ಯಯುತವಾದ ಹೃದಯವನ್ನ ನಿಮ್ಮದಾಗಿಸಿಕೊಳ್ಳೋಕೆ ಕುಡಿಯಿರಿ ಎಬಿಸಿ ಜ್ಯೂಸ್!!

ಬೀಟ್ರೂಟ್ ಹಾಗೂ ಕ್ಯಾರೆಟ್ ಗಳಲ್ಲಿ ಬೀಟಾ ಕ್ಯಾರೊಟಿನ್ ಹಾಗೂ ಲ್ಯುಟೀನ್ ಗಳಿದ್ದು, ಇವು ಹೃದಯವನ್ನ ಆರೋಗ್ಯವಾಗಿರಿಸುತ್ತವೆ. ಸೇಬು ರಕ್ತದೊತ್ತಡವನ್ನ ನಿಯಂತ್ರಣದಲ್ಲಿಡುತ್ತದೆ. ಸೇಬಿನಲ್ಲಿ ಕ್ಯಾರೆಟಿನೋಯ್ಡ್ ಗಳು ಉತ್ತಮ ಪ್ರಮಾಣದಲ್ಲಿದ್ದು, ಇದು ದೇಹದ ಕೊಲೆಸ್ಟೆರಾಲ್ ನ ಮಟ್ಟವನ್ನ ಹದ್ದುಬಸ್ತಿನಲ್ಲಿಡುತ್ತದೆ.

ಎಬಿಸಿ ಜ್ಯೂಸ್ ಕುಡಿಯಿರಿ; ಚುರುಕು ದೃಷ್ಟಿಯನ್ನ ನಿಮ್ಮದಾಗಿಸಿಕೊಳ್ಳಿ!!

ಈ ತಲೆಮಾರಿನವರು ಕಣ್ಣುಗಳು ನಿಟ್ಟಿರುವುದು ಬಹುತೇಕ ಇವೆರಡೇ ವಸ್ತುಗಳ ಮೇಲೆ: ಒಂದು ಲ್ಯಾಪ್ ಟಾಪ್ ಹಾಗೂ ಅದನ್ನ ಬಿಟ್ಟರೆ ಇನ್ನೊಂದು ಸ್ಮಾರ್ಟ್ ಫ಼ೋನ್! ಇವುಗಳನ್ನ ಎವೆಯಿಕ್ಕದೇ ಒಂದೇ ಸಮನೆ ನೋಡುತ್ತಾ ಇದ್ದರೆ ನಮ್ಮ ಕಣ್ಣುಗಳು ಬಲುಬೇಗನೇ ಒಣಗಿ, ಆಯಾಸಗೊಳ್ಳುತ್ತವೆ. ಇದು ಮುಂದೆ ಬಗೆಬಗೆಯ ಕಣ್ಣಿನ ತೊಂದರೆಗಳಿಗೆ ದಾರಿಮಾಡಿಕೊಡುತ್ತದೆ. ಎಬಿಸಿ ಜ್ಯೂಸ್ ನಲ್ಲಿ ವಿಟಮಿನ್ ಎ ಅತ್ಯುನ್ನತ ಮಟ್ಟದಲ್ಲಿರುತ್ತದೆ. ಇದು ನಿಮ್ಮ ಕಣ್ಣುಗಳು ಶುಷ್ಕಗೊಂಡು ಆಯಾಸಗೊಳ್ಳದಂತೆ ತಡೆಯುತ್ತದೆ. ಜೊತೆಗೆ ಇದು ನಿಮ್ಮ ದೃಷ್ಟಿಯನ್ನೂ ಸುಧಾರಿಸುವಲ್ಲಿ ನೆರವಾಗುತ್ತದೆ.

ರೋಗನಿರೋಧಕ ಶಕ್ತಿಯನ್ನ ಹೆಚ್ಚು ಮಾಡುತ್ತದೆ

ನಿಮ್ಮ ದೇಹದ ಒಟ್ಟಾರೆ ಆರೋಗ್ಯಕ್ಕೆ ಪೂರಕವಾದಂತಹ ಎಲ್ಲ ಪೋಷಕಾಂಶಗಳ ಸದ್ಗುಣಗಳಿಂದ ಸಮೃದ್ಧವಾಗಿದೆ ಈ ಜ್ಯೂಸ್. ಈ ಪೋಷಕಾಂಶಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನ ಉತ್ತೇಜಿಸುವಲ್ಲಿ ನೆರವಾಗುತ್ತವೆ. ರೋಗನಿರೋಧಕ ಶಕ್ತಿಯು ಉತ್ತಮ ಸ್ಥಿತಿಯನ್ನು ತಲುಪಿದಾಗ, ನಮ್ಮ ದೇಹವು ಸೋಂಕಿಗೊಳಗಾಗುವ ಅಥವಾ ಯಾವುದೇ ಅಲರ್ಜಿಗಳಿಗೆ ತುತ್ತಾಗುವ ಅಪಾಯ ಇಲ್ಲವಾಗುತ್ತದೆ.

ಶರೀರದ ಪಾಲಿಗೆ ಅಮೃತದಂತಿರುವ ಈ ಎಬಿಸಿ ಜ್ಯೂಸ್ ಅನ್ನ ತಯಾರಿಸೋ ಬಗೆ ಹೇಗೆ ? ಇಲ್ಲಿದೆ ನೋಡಿ....

ಶರೀರದ ಪಾಲಿಗೆ ಅಮೃತದಂತಿರುವ ಈ ಎಬಿಸಿ ಜ್ಯೂಸ್ ಅನ್ನ ತಯಾರಿಸೋ ಬಗೆ ಹೇಗೆ ? ಇಲ್ಲಿದೆ ನೋಡಿ....

ಬೇಕಾಗುವ ಸಾಮಗ್ರಿಗಳು:

1 ಲೋಟದಷ್ಟು ನೀರು

1 ಟೇಬಲ್ ಚಮಚದಷ್ಟು ಜೇನುತುಪ್ಪ (ಬಯಸಿದಲ್ಲಿ ಮಾತ್ರ)

1 ಟೇಬಲ್ ಚಮಚದಷ್ಟು ಲಿಂಬೆಹಣ್ಣಿನ ರಸ (ಬಯಸಿದಲ್ಲಿ ಮಾತ್ರ)

ಕ್ಯಾರೆಟ್

ಬೀಟ್ರೂಟ್

ಆಪಲ್ (ಸೇಬು)

ತಯಾರಿಕೆಯ ವಿಧಾನ:

ಆಪಲ್, ಬೀಟ್ರೂಟ್, ಹಾಗೂ ಕ್ಯಾರೆಟ್ ಗಳನ್ನ ಚೆನ್ನಾಗಿ ತೊಳೆದುಕೊಳ್ಳಿರಿ. ಸಿಪ್ಪೆಯನ್ನ ತೆಗೆದು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿಟ್ಟುಕೊಳ್ಳಿ.

ಈ ಚೂರುಗಳನ್ನ ಬ್ಲೆಂಡರ್ ನಲ್ಲಿ ಹಾಕಿರಿ ಹಾಗೂ ಅದಕ್ಕೆ ನೀರನ್ನು ಸೇರಿಸಿರಿ.

ಬ್ಲೆಂಡರ್ ನಲ್ಲಿರುವ ಜ್ಯೂಸ್ ಅನ್ನು ಲೋಟವೊಂದಕ್ಕೆ ಸೋಸಿ ಸಂಗ್ರಹಿಸಿರಿ. ಅಗತ್ಯವಿದ್ದಲ್ಲಿ, ರುಚಿಗೆ ಬೇಕಾದ ಹಾಗೆ ಲಿಂಬೆ ರಸ ಹಾಗೂ ಜೇನುತುಪ್ಪವನ್ನ ಸೇರಿಸಿಕೊಳ್ಳಿ ಇಲ್ಲವಾದಲ್ಲಿ ಹಾಗೆಯೇ ಕುಡಿದರೂ ಆದೀತು. ಈ ವಿಸ್ಮಯಕರ ಜ್ಯೂಸ್ ನ ಸ್ವಾದವನ್ನ ಆನಂದಿಸಿರಿ!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಅನ್ನು ಕುಡಿಯೋದ್ರಿಂದ ನಿಮ್ಮ ಶರೀರಕ್ಕೆ ಇದರ ಸಂಪೂರ್ಣ ಲಾಭ ದೊರೆಯುತ್ತದೆ.

ಇಂತಹ ಸುಲಭ ಪೇಯದ ಬಗ್ಗೆ ಈ ಹಿಂದೆ ನೀವೆಂದಾದರೂ ಕೇಳಿದ್ದಿದೆಯೇ ? ಇದರ ಕುರಿತು ನಿಮ್ಮ ಅನಿಸಿಕೆಗಳನ್ನ ನಮ್ಮೊಡನೆ ಹಂಚಿಕೊಳ್ಳಿರಿ. ಆರೋಗ್ಯಕ್ಕೆ ಸಂಬಂಧಿಸಿದ ಬರಹಗಳಿಗಾಗಿ ನಮ್ಮ ಜಾಲತಾಣಕ್ಕೆ ಭೇಟಿ ನೀಡುತ್ತಾ ಇರಿ.....

English summary

Apple, Carrot, And Beetroot Juice Benefits For Your Health

Apple, carrot and beetroot juice benefits for your health, how? read on...
X
Desktop Bottom Promotion