For Quick Alerts
ALLOW NOTIFICATIONS  
For Daily Alerts

ಬಳುಕುವ ಬಳ್ಳಿಯಂತಾದ ನಮಿತಾ! ಆಕೆಯ ತೂಕ ಇಳಿಕೆಯ ರಹಸ್ಯ ಇದೇ ನೋಡಿ

|

ನೀಲಕಂಠ , ನಮಿತಾ ಐ ಲವ್ ಯೂ ಚಿತ್ರಗಳಲ್ಲಿ ನಟಿಸಿರುವ ನಮಿತಾ ಎಂಬ ಮಾದಕ ನಟಿಯ ನೆನಪಿದೆಯೇ? ನೋಡಲಿಕ್ಕೆ ಗುಂಡ-ಗುಂಡಗೆ ಇದ್ದ ನಮಿತಾ ಬೆರಳಿಣಿಕೆಯಷ್ಟು ಕನ್ನಡ ಚಿತ್ರದಲ್ಲಿ ನಟಿಸಿದ್ದರೂ ತನ್ನ ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ಮನಸ್ಸಿನಲ್ಲಿಯೂ ಈಗಲೂ ನೆಲಿಸಿದ್ದಾರೆ. ಈ ಮಾದಕ ನಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಬಳಕುವ ಮೈ ಮೈಕಟ್ಟು ಪಡೆದಿರುವ ನಮಿತಾ ಮೊದಲಿಗಿಂತಲೂ ಮಾದಕವಾಗಿ ಕಾಣುತ್ತಿದ್ದಾರೆ.

ಸ್ವಲ್ಪ ಗುಂಡಗಿನ ಮೈಕಟ್ಟು ಹೊಂದಿದ್ದ ನಮಿತಾ ವರ್ಷಗಳು ಕಳೆಯುತ್ತಿದ್ದಂತೆ ತುಂಬಾ ದಪ್ಪಗಾಗಲಾರಂಭಿಸಿದರು. ಇದರಿಂದ ಅವರ ವೃತ್ತಿ ಜೀವನಕ್ಕೆ ತೊಂದರೆ ಉಂಟಾಯಿತು, ಅವಕಾಶಗಳು ಕಡಿಮೆಯಾದವು. 2017 ನವೆಂಬರ್‌ನಲ್ಲಿ ಮದುವೆಯಾದ ನಮಿತಾ ಇದೀಗ ಸ್ಲಿಮ್‌ ಬ್ಯೂಟಿಯಾಗಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಮದುವೆಯಾದ ಬಳಿಕ ಎಲ್ಲರು ದಪ್ಪಗಾದರೆ, ಗುಂಡಗೆ ಇದ್ದ ನಮಿತಾ ಬಳಕುವ ಮೈಕಟ್ಟಿನಿಂದ ಮತ್ತಷ್ಟು ಅಕರ್ಷಕವಾಗಿ ಕಾಣುತ್ತಿದ್ದಾರೆ.

ಪಿಜ್ಜಾ, ಐಸ್‌ಕ್ರೀಮ್‌ ಅಂತ ತಿನ್ನುತ್ತಾ ಮೈ ತೂಕ ಹೆಚ್ಚಿಸಿಕೊಳ್ಳುತ್ತಿದ್ದ ನಮಿತಾ ಆರೋಗ್ಯಕರ ಜೀವನಶೈಲಿ ಮೂಲಕ ತೂಕ ಕಡಿಮೆಯಾಗಿ ತೂಕ ಕಡಿಮೆಯಾಗ ಬಯಸುವವರಿಗೆ ಸ್ಪೂರ್ತಿಯಾಗಿದ್ದಾರೆ.

ಆಕರ್ಷಕ ಮೈಕಟ್ಟಿಗಾಗಿ ನಮಿತಾ ತನ್ನ ಜೀವನಶೈಲಿಯಲ್ಲಿ ಮಾಡಿದ ಬದಲಾವಣೆಗಳೇನು, ಅವರ ಆಹಾರಕ್ರಮ ಹೇಗಿತ್ತು ಎಂದು ನೋಡೋಣ ಬನ್ನಿ:

ವ್ಯಾಯಾಮ:

ನಮಿತಾ ಜಿಮ್‌ನಲ್ಲಿ ವೇಟ್ ಲಿಫ್ಟಿಂಗ್, ಪೈಲ್ಯಾಟ್ಸ್, ಫುಶ್‌ಅಪ್, ಬೈಸೆಪ್ಸ್ ವ್ಯಾಯಾಮ ಮಾಡುತ್ತಾರೆ. ಇನ್ನು ಇವರು ಕಿಕ್ ಬಾಕ್ಸಿಂಗ್ ತರಬೇತಿ ಕೂಡ ಪಡೆದಿದ್ದಾರೆ. ಪ್ರತಿದಿನ ತಪ್ಪದೆ ಜಿಮ್‌ಗೆ ಹೋಗಿ ಬೆವರಿಳಿಸುತ್ತಿದ್ದರು. ಇನ್ನು ಇವರು ಪ್ರಸಿದ್ದ ಡಯಟಿಷಿಯನ್ ರುಜುತಾ ದ್ವಿವೇಕರ್ ಸಲಹೆ ಮೇರೆಗೆ ಯೋಗ ಅಬ್ಯಾಸ ಅರಂಭಿಸಿದರು. ಹಥಾ ಹಾಗೂ ಬಿಕ್ರಮ್ ಯೋಗ ಅಭ್ಯಾಸ ಕೂಡ ತೂಕ ಇಳಿಕೆಯಲ್ಲಿ ತುಂಬಾ ಸಹಕಾರಿಯಾಯಿತು.

ಡಯಟಿಷಿಯನ್ ರುಜುತಾ ನಮಿತಾರಿಗೆ ನೀಡಿದ ಸಲಹೆಗಳು

1. ಬ್ರೇಕ್‌ಫಾಸ್ಟ್‌ ಹಾಗೂ ಮಧ್ಯಾಹ್ನ ಊಟ, ರಾತ್ರಿ ಊಟ ಮಾಡುವ ಬದಲು ಆಹಾರವನ್ನು 7-8 ಬಾರಿ ವಿಂಗಡಿಸಿ ತಿನ್ನುವಂತೆ ಸಲಹೆ ನೀಡಲಾಯಿತು. ಆದ್ದರಿಂದ ತಿನ್ನುವ ಆಹಾರದ ಪ್ರಮಾಣದಲ್ಲಿ ಭಾಗ ಮಾಡಿ ಸ್ವಲ್ಪ- ಸ್ವಲ್ಪ ಆಹಾರವನ್ನಷ್ಟೇ ತೆಗೆದುಕೊಳ್ಳುತ್ತಿದ್ದರು.

2. ರುಜುತಾರವರ ಸಲಹೆ ಮೆರೆಗೆ ಪ್ರತಿದಿನ 7-8 ಗ್ಲಾಸ್ ಬಿಸಿ ಬಿಸಿ ನೀರು ಕುಡಿಯುವುದು ರೂಢಿಸಿಕೊಂಡರು.

3. ಜಂಕ್ ಫುಡ್‌, ಸಿಹಿ ಪದಾರ್ಥಗಳು ಹಾಗೂ ಸಂಸ್ಕರಿಸಿದ ಆಹಾರವನ್ನು ದೂರವಿಟ್ಟರು.

4. ಕಡಿಮೆ ಕ್ಯಾಲೋರಿಯ ಆಹಾರ ಸೇವನೆ ಮಾಡಲಾರಂಭಿಸಿದರು.

5. ಆರೋಗ್ಯಕರ ಕೊಬ್ಬಿನಂಶ ಇರುವ ಆಹಾರವನ್ನು ಮಿತಿಯಲ್ಲಿ ತಿನ್ನುತ್ತಿದ್ದರು. ಉದಾಹರಣೆಗೆ ತುಪ್ಪ ಹಾಕಿ 2 ಚಿಕ್ಕ ದೋಸೆ ತಿನ್ನುವುದು, ಇದರಿಂದ ದೇಹಕ್ಕೆ ಒಮೆಗಾ 3, ಒಮೆಗಾ 9, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಇ ಮತ್ತು ಕೆ ಪೋಷಕಾಂಶಗಳು ದೊರೆಯುತ್ತದೆ.

6. ಕೆಂಪಕ್ಕಿ ಅನ್ನ, ಓಟ್ಸ್, ಬೇಳೆ, ಧಾನ್ಯಗಳನ್ನು ಆಹಾರದಲ್ಲಿ ಬಳಸುವುದು. ಸೋಡಾ, ಕ್ಯಾಂಡಿ, ಪೇಸ್ಟ್ರಿ ಇವುಗಳನ್ನು ಮುಟ್ಟಲು ಹೋಗುತ್ತಿರಲಿಲ್ಲ.

7. ಹಾಲು ಹಾಗೂ ಚೀಸ್ ಬಳಸುತ್ತಿದದ್ರು. ಇವು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹಾಗೂ ತ್ವಚೆ ಆರೋಗ್ಯಕ್ಕೆ ಒಳ್ಳೆಯದು.

ನಮಿತಾರ ಆಹಾರಕ್ರಮ

ಬ್ರೇಕ್‌ಫಾಸ್ಟ್: ಚಪಾತಿ, ಮ್ಯೂಸ್ಲಿ ಅಥವಾ ಇಡ್ಲಿ ತಿನ್ನುತ್ತಿದ್ದರು. ಇದರ ಜತೆಗೆ ಒಂದು ಲೋಟ ಹಾಲು ಅಥವಾ ತಾಜಾ ಹಣ್ಣುಗಳನ್ನು ಸೇವಿಸುತ್ತಿದ್ದರು.

ಬೆಳಗ್ಗೆ ಸ್ನ್ಯಾಕ್ಸ್: ಬ್ರೌನ್‌ ಬ್ರೆಡ್‌ನಿಂದ ತಯಾರಿಸಿದ ಒಂದು ವೆಜ್ ಸ್ಯಾಂಡ್‌ವಿಚ್ ಅಥವಾ ಪ್ರೊಟೀನ್ ಶೇಕ್

ಲಂಚ್:ದಾಲ್, ರೋಟಿ ಹಾಗೂ ಪಲ್ಯ, ಸಲಾಡ್ ಹಾಗೂ ಸೂಪ್

ಸಂಜೆ: ಸೋಯಾ ಹಾಲು ಅಥವಾ ಡ್ರೈ ಫ್ರೂಟ್ಸ್

ರಾತ್ರಿ ಊಟಕ್ಕೆ: ದಾಲ್, ತರಕಾರಿಗಳು, 1 ಕಪ್ ಮೊಸರು, ಕೆಂಪಕ್ಕಿ ಅನ್ನ ಹಾಗೂ ತರಕಾರಿ ಸೂಪ್

ನಮಿತಾ ಕಳೆದುಕೊಂಡ ತೂಕವೆಷ್ಟು?

ನಮಿತಾ ತನ್ನ ತೂಕ ಇಳಿಕೆಯ ಕುರಿತು ಹೇಳುತ್ತಾ ಡಯಟಿಷಿಯನ್ ರುಜುತಾ ಅವರನ್ನು ಭೇಟಿ ಮಾಡುವ ಮುನ್ನ ಥ್ರೆಡ್‌ ಮಿಲ್‌ನಲ್ಲಿ ಓಡಿ, ಹಾಗೂ ಬರೀ ಎಲೆಕೋಸು ಮಾತ್ರ ತಿಂದು ಸ್ವಲ್ಪ ತೂಕ ಕಡಿಮೆ ಮಾಡಿಕೊಳ್ಳುತ್ತಿದ್ದೆ, ಆದರೆ ಸ್ವಲ್ಪ ದಿನಗಳಲ್ಲಿ ಮತ್ತೆ ತೂಕ ಹೆಚ್ಚಾಗುತ್ತಿತ್ತು. ಆದರೆ ಈಗ ಬಾಯಿಗೆ ರುಚಿಕರವಾಗಿ, ದೇಹಕ್ಕೆ ಆರೋಗ್ಯಕರವಾಗಿ ತಿಂದು ತೂಕ ಕಡಿಮೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.

90 ಕೆಜಿಗಿಂತಲು ಹೆಚ್ಚು ತೂಕ ಹೊಂದಿದ್ದ ನಮಿತಾ ಇದೀಗ ಮೂರು ತಿಂಗಳಿನಲ್ಲಿ 18 ಕೆಜಿ ತೂಕ ಕಡಿಮೆ ಮಾಡಿಕೊಂಡು 76 ಕೆಜಿ ಮೈ ತೂಕ ಹೊಂದಿದ್ದಾರೆ. ಮೈ ತೂಕ 70 ಕೆಜಿಗಿಂತಲೂ ಕಡಿಮೆಯಾಗಬೇಕೆಂದು ಬಯಸುತ್ತಿರುವ ನಮಿತಾ ಅದರತ್ತ ತಮ್ಮ ಗಮನ ಹರಿಸಿದ್ದಾರೆ. ಅರೋಗ್ಯಕರ ಜೀವನಶೈಲಿ ಹಾಗೂ ಆಹಾರಶೈಲಿ ಪಾಲಿಸಿದರೆ ಮೈ ತೂಕ ಕಡಿಮೆಮಾಡಿಕೊಳ್ಳುವುದು ಕಷ್ಟವೇನಿಲ್ಲ ಎಂಬುವುದನ್ನು ನಮಿತಾ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

English summary

Actress Namita Weight Loss Secrets

Actress Namita has shed lots of weight,today her weight gain is a thing of the past. Here Lifestyle and Diet helped her to loose weight. Here we have given what diet plan she has followed to loose weight.
X