For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳುವ ಸೀಕ್ರೆಟ್ಸ್: ಅಪ್ಪಿತಪ್ಪಿಯೂ ಈ ಆಹಾರಗಳನ್ನು ರಾತ್ರಿ ಸೇವಿಸಬೇಡಿ

|

ತೂಕ ಇಳಿಸಿಕೊಳ್ಳಬೇಕೆಂದು ನೀವು ಬಯಸಿದ್ದೀರಾ? ಹಾಗಾದರೆ ನೀವು ಕೆಲವೊಂದು ಕಠಿಣ ವ್ಯಾಯಮ ಹಾಗೂ ಆಹಾರ ಪಥ್ಯ ಮಾಡಬೇಕು ಎಂದು ವೈದ್ಯರು ಅಥವಾ ಪೋಷಕಾಂಶ ತಜ್ಞರು ಹೇಳಬಹುದು. ಆದರೆ ಇದು ನಿಮ್ಮಿಂದ ಸಾಧ್ಯವೇ ಎನ್ನುವ ಪ್ರಶ್ನೆ ಹಾಕಿಕೊಳ್ಳಿ. ಯಾಕೆಂದರೆ ಕಠಿಣ ವ್ಯಾಯಾಮ ಮಾಡಿಕೊಂಡು ಅದರೊಂದಿಗೆ ಆಹಾರ ಪಥ್ಯ ಕೂಡ ಮಾಡಬೇಕೆಂದರೆ ಅದು ಸ್ವಲ್ಪ ಕಠಿಣ ಸವಾಲು. ಇದಕ್ಕಾಗಿ ನೀವು ರಾತ್ರಿ ಊಟದಲ್ಲಿ ಕೆಲವೊಂದು ಬದಲಾವಣೆ ಮಾಡಬೇಕು.

ನೀವು ರಾತ್ರಿ ವೇಳೆ ಮಾಡುವಂತಹ ಊಟವು ಕಾರ್ಬ್ರೋಹೈಡ್ರೇಟ್ಸ್ ಗಳಿಂದ ಕಡಿಮೆ ಇರಬೇಕು. ಯಾಕೆಂದರೆ ರಾತ್ರಿ ವೇಳೆ ಚಯಾಪಚಯ ಕ್ರಿಯೆಯು ತುಂಬಾ ನಿಧಾನಗತಿಯಲ್ಲಿರುವ ಕಾರಣದಿಂದಾಗಿ ಕಾರ್ಬ್ರೋಹೈಡ್ರೇಟ್ಸ್ ಗಳನ್ನು ವೇಗವಾಗಿ ಕರಗಿಸಲು ಸಾಧ್ಯವಾಗದು. ನೀವು ರಾತ್ರಿ ಊಟ ಮತ್ತು ನಿದ್ದೆಗೆ ತೆರಳು ಮಧ್ಯೆ ಕನಿಷ್ಠ ಎರಡು ಗಂಟೆ ಅಂತರವನ್ನು ಇಟ್ಟುಕೊಳ್ಳಬೇಕು. ಇದರಿಂದ ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗುವುದು. ನೀವು ಒಂದು ವಾರ ತನಕ ಸವಾಲು ಹಾಕಿಕೊಂಡು ರಾತ್ರಿ ವೇಳೆ ಊಟಕ್ಕೆ ಈ ಐದು ಆಹಾರಗಳನ್ನು ಸೇವನೆ ಮಾಡಬೇಡಿ. ಆಗ ನೀವು ಅದ್ಭುತವಾಗಿ ತೂಕ ಇಳಿಕೆ ಮಾಡಿಕೊಳ್ಳಬಹುದು. ಆ ಐದು ಆಹಾರಗಳು ಯಾವುದು ಎಂದು ತಿಳಿಯಲು ಸ್ಕ್ರೋಲ್ ಡೌನ್ ಮಾಡುತ್ತಾ ಸಾಗಿ...

ಪಾಸ್ತಾ ರಾತ್ರಿ ವೇಳೆ ತಿನ್ನುವ ತಿಂಡಿಯಲ್ಲ!

ಪಾಸ್ತಾ ರಾತ್ರಿ ವೇಳೆ ತಿನ್ನುವ ತಿಂಡಿಯಲ್ಲ!

ಮನೆಯಲ್ಲೇ ಮಾಡಿದಂತಹ ಪಾಸ್ತಾಕ್ಕಿಂತ ಉತ್ತಮವಾಗಿರುವುದು ನಿಮಗೆ ಮತ್ತೊಂದು ಸಿಗಲಾರದು. ನಾವು ಇದನ್ನು ಒಪ್ಪಿ ಕೊಳ್ಳುತ್ತೇವೆ. ಆದರೆ ನೀವು ರಾತ್ರಿ ವೇಳೆಯ ಈ ತಿಂಡಿಗೆ ನೀವು ಸ್ವಲ್ಪ ಸಮಯ ನೀಡಬೇಕೆಂದು ನಿಮಗನಿ ಸುತ್ತಿದೆಯಾ? ನೀವು ಬೆಳಗ್ಗೆ ವೇಳೆ ಪಾಸ್ತಾ ತಿಂದರೆ ಅದರಿಂದ ಹೆಚ್ಚು ಹಾನಿಯಾಗದು. ಪಾಸ್ತಾದಲ್ಲಿ ಅತೀ ಹೆಚ್ಚಿನ ಕ್ಯಾಲರಿಯೊಂದಿಗೆ ಕಾರ್ಬ್ರೋಹೈಡ್ರೇಟ್ಸ್ ಗಳು ಇವೆ ಎಂದು ನಿಮಗೆ ತಿಳಿದಿದೆಯಾ? ನೀವು ಇದರಿಂದಾಗಿ ಸುಮಾರು 400 ಕ್ಯಾಲರಿಯನ್ನು ಒಂದು ಪಿಂಗಾಣಿಯಲ್ಲಿ

ಸೇವಿಸಬಹುದು. ಅದರಲ್ಲೂ ಪಾಸ್ತಾಕ್ಕೆ ಚೀಸ್ ಹಾಕಿದ್ದರಂತೂ ಅದು ಮತ್ತಷ್ಟು ಕ್ಯಾಲರಿಯನ್ನು ನಿಮ್ಮ ದೇಹಕ್ಕೆ ಸೇರಿಸುವುದು.

ರಾತ್ರಿ ವೇಳೆ ಪಿಜ್ಜಾ ಪಾರ್ಟಿ ಮಾಡಬೇಡಿ

ರಾತ್ರಿ ವೇಳೆ ಪಿಜ್ಜಾ ಪಾರ್ಟಿ ಮಾಡಬೇಡಿ

ರಾತ್ರಿ ವೇಳೆ ನೀವು ಯಾವತ್ತೂ ಪಿಜ್ಜಾ ತಿನ್ನಲು ಹೋಗಬೇಡಿ. ಪಿಜ್ಜಾದಲ್ಲಿ ಹೆಚ್ಚಿನ ಕ್ಯಾಲರಿ ಇದೆ ಮತ್ತು ತಜ್ಞರ ಪ್ರಕಾರ ರಾತ್ರಿ ಮಲಗುವ ಮೊದಲು ಪಿಜ್ಜಾ ಸೇವನೆ ತುಂಬಾ ಹಾನಿಕರ. ನಿಮಗೆ ಪಿಜ್ಜಾ ಸೇವನೆಯಿಂದಾಗಿ ಕಾರ್ಬ್ರೋಹೈಡ್ರೇಟ್ಸ್ ಜತೆಗೆ ಹೆಚ್ಚಿನ ಮಟ್ಟದ ಪರ್ಯಾಪ್ತ ಕೊಬ್ಬು ಸಿಗುವುದು. ಇದರಿಂದ ನಿಮ್ಮ ಹೊಟ್ಟೆಯಲ್ಲಿ ಇದು ಕರಗದೆ ಕೊಬ್ಬು ಸಂಗ್ರಹವಾಗುವುದು. ಇದರಿಂದ ದೇಹದ ತೂಕ ಹೆಚ್ಚಳವಾಗುವುದು. ನೀವು ಇದರ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ನಿಮಗೆ ರಾತ್ರಿ ವೇಳೆ ತುಂಬಾ ಹಸಿವಾಗಿದ್ದರೆ ಆಗ ನೀವು ಬೇಯಿಸಿದ ಮೊಟ್ಟೆ, ಒಂದು ತುಂಡು ಚೀಸ್, ತರಕಾರಿ ಸೂಪ್ ಕುಡಿಯಬಹುದು.

Most Read: 2019ರಲ್ಲಿ ಕೇತುವಿನ ಚಲನೆ: ರಾಶಿಚಕ್ರಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ನೋಡಿ

ಐಸ್ ಕ್ರೀಮ್ ತಿನ್ನುವುದು ಕೂಡ ಕೆಟ್ಟ ಕ್ರಮ

ಐಸ್ ಕ್ರೀಮ್ ತಿನ್ನುವುದು ಕೂಡ ಕೆಟ್ಟ ಕ್ರಮ

ರಾತ್ರಿ ಮಲಗುವ ಮೊದಲು ಹೆಚ್ಚಿನ ಸಕ್ಕರೆಯಂಶ ಹೊಂದಿರುವಂತಹ ಐಸ್ ಕ್ರೀಮ್, ಚಾಕಲೇಟ್, ಕೇಕ್, ಕುಕ್ಕಿಸ್ ಗಳನ್ನು ತಿನ್ನುವುದರಿಂದ ರಾತ್ರಿ ವೇಳೆ ಕನಸುಗಳು ಬೀಳುವುದು ಮತ್ತು ಇದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುವುದು. ಐಸ್ ಕ್ರೀಮ್ ನಲ್ಲಿ ಹೆಚ್ಚಿನ ಮಟ್ಟದ ಕೊಬ್ಬು ಮತ್ತು ಕ್ಯಾಲರಿ ಇದೆ. ನೀವು ನಿದ್ರಿಸುವ ಮೊದಲು ದೇಹವು ಇಷ್ಟು ಮಟ್ಟದ ಕ್ಯಾಲರಿ ದಹಿಸುವಂತಹ ಸಾಧ್ಯತೆಗಳು ತುಂಬಾ ಕಡಿಮೆಯಾಗಿರುವುದು. ಇದರಿಂದಾಗಿ ನೀವು ಸೇವಿಸಿದ ಎಲ್ಲಾ ಸಕ್ಕರೆ ಪ್ರಮಾಣವು ಕೊಬ್ಬು ಆಗಿ ಪರಿವರ್ತನೆ ಆಗುವುದು.

ರಾತ್ರಿ ವೇಳೆ ಖಾರದ ಪದಾರ್ಥಗಳನ್ನು ಸೇವಿಸಬೇಡಿ

ರಾತ್ರಿ ವೇಳೆ ಖಾರದ ಪದಾರ್ಥಗಳನ್ನು ಸೇವಿಸಬೇಡಿ

ಖಾರದ ಮತ್ತು ಕರಿಮೆಣಸು ಹಾಕಿದ ಆಹಾರವು ಹೊಟ್ಟೆಯನ್ನು ತಲ್ಲಣಗೊಳಿಸಬಹುದು. ಆಹಾರಕ್ಕೆ ಹೆಚ್ಚು ಖಾರ ಹಾಕುವುದರಿಂದಾಗಿ ಅದರಲ್ಲಿ ಹೆಚ್ಚಿನ ಮಟ್ಟದ ರಾಸಾಯನಿಕ ಇರುವುದು ಮತ್ತು ಇದು ಸಂವೇದನೆಯನ್ನು ಉತ್ತೇಜಿಸುವುದು. ಇದರಿಂದಾಗಿ ನಿದ್ರೆ ಬರಲು ಕಷ್ಟವಾಗಬಹುದು. ನಿಮಗೆ ಸಲಹೆ: ಹಗಲಿನಲ್ಲಿ ಮೆಣಸು ಅಥವಾ ಕರಿಮೆಣಸು ಹಾಕಿರುವಂತಹ ಆಹಾರ ಸೇವನೆ ಮಾಡುವುದು ಒಳ್ಳೆಯದು. ಇದು ಚಯಾಪಚಯ ಹೆಚ್ಚಿಸುವುದು.

Most Read: ನಾಟಿ ಔಷಧಿಗಳು: ಶೀತ ಹಾಗೂ ಕೆಮ್ಮಿನ ಸಮಸ್ಯೆ ಒಂದೇ ದಿನಗಳಲ್ಲಿ ಮಂಗಮಾಯ!

ತೂಕ ಕಳೆದುಕೊಳ್ಳಲು ರಾತ್ರಿ ವೇಳೆ ನೀವು ಅನ್ನ ಸೇವಿಸಬೇಡಿ

ತೂಕ ಕಳೆದುಕೊಳ್ಳಲು ರಾತ್ರಿ ವೇಳೆ ನೀವು ಅನ್ನ ಸೇವಿಸಬೇಡಿ

ಬೆಳ್ತಿಗೆ ಅಕ್ಕಿಯು ಬಿಳಿ ಬ್ರೆಡ್ ನಷ್ಟೇ ಕೆಟ್ಟದಾಗಿರುವುದು. ಇದರಲ್ಲಿ ಹೆಚ್ಚಿನ ಪೋಷಕಾಂಶಗಳು ಕೂಡ ಇರುವುದಿಲ್ಲ. ಅನ್ನವು ಹೆಚ್ಚುವರಿಯಾಗಿರುವಂತಹ ಕೊಬ್ಬನ್ನು ಶೇಖರಣೆ ಮಾಡಲು ನೆರವಾಗುವುದು ಮತ್ತು ಇದರಿಂದ ತೂಕ ಕಳೆದುಕೊಳ್ಳಲು ಕಷ್ಟವಾಗಬಹುದು. ಸಲಹೆ: ನಾರಿನಾಂಶ, ವಿಟಮಿನ್ ಗಳು ಮತ್ತು ಪೋಷಕಾಂಶಗಳು ಇರುವಂತಹ ಕುಚ್ಚಲಕ್ಕಿಯನ್ನು ನೀವು ರಾತ್ರಿ ವೇಳೆ ಸೇವಿಸಿ. ರಾತ್ರಿ ವೇಳೆ ಒಂದು ಪಿಂಗಾಣಿ ಕುಚ್ಚಲಕ್ಕಿ ಸೇವನೆ ಮಾಡಿದರೆ ದೀರ್ಘ ಕಾಲ ತನಕ ಹೊಟ್ಟೆ ತುಂಬಿರುವುದು.

English summary

Weight Loss Secrets: Things You Should Never Eat at Night

Got a minute? Then you have got time to start shedding those extra pounds! Here is the list of food items you need to ditch to see your weighing scale go down. Remember this thumb rule - Your dinner should always be light on carbohydrates as your body in unable to burn these quickly due to the worn-out metabolism at night. You should maintain a gap of two hours between bedtime and dinner, so that the body gets time to metabolize the nutrients.Make wise choices, challenge yourself for a week and ditch these five things from your dinner and see the miracle.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more