For Quick Alerts
ALLOW NOTIFICATIONS  
For Daily Alerts

ತೂಕ ಹೆಚ್ಚಿಸುವ ಬೆಳಗ್ಗಿನ ಕೆಲವು ಕೆಟ್ಟ ಅಭ್ಯಾಸಗಳು

|

ದೇಹವನ್ನು ಆರೋಗ್ಯಕರ ಹಾಗೂ ಫಿಟ್ ಆಗಿಡುವುದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಪ್ರಮುಖ ಉದ್ದೇಶವಾಗಿದೆ. ಈ ಕಾರಣದಿಂದಾಗಿ ಪ್ರತಿಯೊಬ್ಬರು ದೇಹದ ತೂಕ ಸಮತೋಲನದಲ್ಲಿ ಇಟ್ಟುಕೊಳ್ಳಲು ಬಯಸುವರು. ದೇಹದ ತೂಕ ಹೆಚ್ಚಳವಾಗಿದ್ದರೆ ಆಗ ದೀರ್ಘಕಾಲದ ರೋಗಗಳು, ಹೃದಯದ ಕಾಯಿಲೆ, ಮಧುಮೇಹ, ದೀರ್ಘಕಾಲಿಕ ಕಿಡ್ನಿ ಕಾಯಿಲೆ, ಹಲವಾರು ಕ್ಯಾನ್ಸರ್ ಗಳು ಮತ್ತು ಮಸ್ಕ್ಯುಲೋಸ್ಕೆಲಿಟಲ್ ಕಾಯಿಲೆಗಳು ಕಾಣಿಸುವುದು. ಆದರೆ ಬೆಳಗ್ಗೆ ನಾವು ಅನುಸರಿಸಿಕೊಂಡು ಹೋಗುವಂತಹ ಕೆಲವೊಂದು ಅಭ್ಯಾಸಗಳಿಂದಾಗಿ ದೇಹದ ತೂಕ ಹೆಚ್ಚಳವಾಗುವುದು ಎಂದು ಹೇಳಲಾಗುತ್ತದೆ. ತೂಕ ಹೆಚ್ಚಳಕ್ಕೆ ಕಾರಣವಾಗುವಂತಹ ಐದು ಅಭ್ಯಾಸಗಳು ಯಾವುದು ಎಂದು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಉಪಾಹಾರ ತ್ಯಜಿಸುವುದು

ಉಪಾಹಾರ ತ್ಯಜಿಸುವುದು

ಉಪಾಹಾರವು ದೇಹಕ್ಕೆ ಶೇಕಡಾ 80ರಷ್ಟು ಶಕ್ತಿ ನೀಡುತ್ತದೆ ಎಂದು ನಿಮಗೆ ತಿಳಿದಿದೆಯಾ ಮತ್ತು ನೀವು ಉಪಾಹಾರ ತ್ಯಜಿಸಿದರೆ ಆಗ ಚಯಾಪಚಾಯ ಕ್ರಿಯೆಗೆ ಹಾನಿಯಾಗುವುದು. ಇದು ದೇಹಕ್ಕೆ ಶಕ್ತಿ ನೀಡುವುದು ಮಾತ್ರವಲ್ಲದೆ, ಗ್ಲೂಕೋಸ್ ಮಟ್ಟವನ್ನು ಸ್ಥಿರವಾಗಿ ಇಡುತ್ತದೆ ಮತ್ತು ರಕ್ತದಲ್ಲಿ ಇರುವಂತಹ ಒತ್ತಡದ ಹಾರ್ಮೋನ್ ಕಾರ್ಟಿಸಾಲ್ ನ್ನು ಇದು ತಗ್ಗಿಸುವುದು. ಉಪಾಹಾರ ತ್ಯಜಿಸಿದರೆ ಆಗ ಅದು ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗುವುದು. ಆರೋಗ್ಯಕಾರಿ ಉಪಾಹಾರದೊಂದಿಗೆ ನೀವು ದಿನವನ್ನು ಆರಂಭಿಸಿಕೊಳ್ಳಿ.

ನೀರಿಗಿಂತ ಹೆಚ್ಚು ಕಾಫಿ ಮತ್ತು ಚಹಾ ಸೇವಿಸುವುದು

ನೀರಿಗಿಂತ ಹೆಚ್ಚು ಕಾಫಿ ಮತ್ತು ಚಹಾ ಸೇವಿಸುವುದು

ದಿನದಲ್ಲಿ ನೀವು ಹೆಚ್ಚು ಚಹಾ ಮತ್ತು ಕಾಫಿ ಕುಡಿಯುತ್ತಲಿದ್ದರೆ ಆಗ ಇದನ್ನು ನೀವು ಕಡೆಗಣಿಸಲೇಬೇಕು. ಯಾಕೆಂದರೆ ಪ್ರತಿದಿನವೂ ನೀವು ಎದ್ದ ಬಳಿಕ ಒಂದು ಲೊಟ ನೀರು ಕುಡಿಯಬೇಕು. ಇದಕ್ಕೆ ಸ್ವಲ್ಪ ಲಿಂಬೆರಸ ಹಾಕಿಕೊಂಡು ಕುಡಿಯಬಹುದು. ನೀರು ಸೇವಿಸುವುದರಿಂದ ದೇಹದಲ್ಲಿ ಸರಿಯಾದ ತಾಪಮಾನ ಮತ್ತು ಪೋಷಕಾಂಶಗಳನ್ನು ಸಮತೋಲನದಲ್ಲಿ ಇಡಲು ನೆರವಾಗುವುದು. ಇದು ಅತಿಯಾಗಿ ತಿನ್ನುವುದರಿಂದ ನಿಮ್ಮನ್ನು ತಡೆಯುವುದು. ಯಾಕೆಂದರೆ ಉಪಾಹಾರವು ಹೊಟ್ಟೆ ತುಂಬಿದಂತೆ ಮಾಡುವುದು.

ಅತಿಯಾದ ನಿದ್ರೆ

ಅತಿಯಾದ ನಿದ್ರೆ

ನಿತ್ಯವು ಬೇಗನೆ ಏಳುವುದರಿಂದ ಆರೋಗ್ಯ ಮತ್ತು ದೇಹದ ತೂಕಕ್ಕೆ ಒಳ್ಳೆಯದು. ಮನುಷ್ಯನ ದೇಹಕ್ಕೆ ನಿದ್ರೆಯು ಅತೀ ಅಗತ್ಯವಾಗಿರುವುದು. ಆದರೆ ಅತಿಯಾದ ನಿದ್ರೆ ಅಥವಾ ನಿದ್ರಾಹೀನತೆಯು ಹಸಿವಿನ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದಾಗಿ ಅತಿಯಾಗಿ ತಿನ್ನಬೇಕಾಗುತ್ತದೆ. ವಯಸ್ಕರು ದಿನಕ್ಕೆ 7ರಿಂದ 9 ಗಂಟೆ ನಿದ್ರೆ ಮಾಡಿದರೆ ಇಂತಹ ಪರಿಸ್ಥಿತಿ ತಪ್ಪಿಸಬಹುದು ಎಂದು ಅಧ್ಯಯನಗಳು ಹೇಳಿವೆ.

ಅತಿಯಾದ ಸಂಸ್ಕರಿತ ಆಹಾರ ಸೇವನೆ

ಅತಿಯಾದ ಸಂಸ್ಕರಿತ ಆಹಾರ ಸೇವನೆ

ಅನಾರೋಗ್ಯಕರ ಉಪಾಹಾರ ಸೇವನೆಯಿಂದಾಗಿ ದೇಹಕ್ಕೆ ಉದಾಸೀನತೆ ಕಾಡಬಹುದು ಮತ್ತು ಇದರಿಂದ ನೀವು ತೂಕ ಹೆಚ್ಚಳವಾಗಬಹುದು. ಇದರಿಂದ ಸರಿಯಾಗಿರದೆ ಇರುವ ಉಪಾಹಾರವು ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುವುದು. ಆರೋಗ್ಯಕರ ಆಹಾರ ಕ್ರಮಗಳಾಗಿರುವ ಮೊಸರು, ಬೀಜಗಳು, ಓಟ್ ಮೀಲ್, ಗ್ರೀನ್ ಟೀ, ಹಣ್ಣುಗಳು ಇತ್ಯಾದಿಗಳನ್ನು ಸೇವಿಸಿ.

ಬೆಳಗ್ಗಿನ ಬಿಸಿಲಿನಿಂದ ದೂರವಿರುವುದು

ಬೆಳಗ್ಗಿನ ಬಿಸಿಲಿನಿಂದ ದೂರವಿರುವುದು

ನೀವು ಬೆಳಗ್ಗೆ ಎದ್ದ ಬಳಿಕ ಹಾಗೆ ಉದಾಸೀನ ಮಾಡಬೇಡಿ. ಸೂರ್ಯನ ಬಿಸಿಲಿಗೆ ಸ್ವಲ್ಪ ಮೈಯೊಡ್ಡಿಕೊಳ್ಳಿ. ಬೆಳಗ್ಗಿನ ಬಿಸಿಲನ್ನು ಪಡೆಯದೆ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಬಿಸಿಲಿನಿಂದಾಗಿ ಜೀರ್ಣಕ್ರಿಯೆಯು ಹೆಚ್ಚಾಗುವುದು. ಪ್ರಖರ ಯುವಿ ಕಿರಣಗಳು ನಮ್ಮ ದೇಹಕ್ಕೆ ಬೇಕಾಗಿರುವಂತಹ ಪೋಷಕಾಂಶಗಳನ್ನು ನೀಡುವುದು ಮತ್ತು ಇದರಿಂದ ಆರೋಗ್ಯಕಾರಿ ಜೀವನ ನಡೆಸಬಹುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಬೆಳಗ್ಗೆ ಬಿಸಿಲಿಗೆ ಮೈಯೊಡ್ಡಿದರೆ ಆಗ ದೇಹವು ತುಂಬಾ ಉಲ್ಲಾಸಿತವಾಗುವುದು ಮತ್ತು ಇದು ಶಕ್ತಿ ಮತ್ತು ಧನಾತ್ಮಕತೆ ಹೆಚ್ಚು ಮಾಡುವುದು, ಒತ್ತಡ ತಗ್ಗಿಸುವುದು, ಗೊಂದಲ, ಕೋಪ ಮತ್ತು ಖಿನ್ನತೆ ಕಡಿಮೆ ಮಾಡುವುದು. ಇದರಿಂದಾಗಿ ತಜ್ಞರು ಕೂಡ ದಿನಾ ಬೆಳಗ್ಗೆ ಸುಮಾರು 20-30 ನಿಮಿಷ ಕಾಲ ಬಿಸಿಲಿಗೆ ಮೈಯೊಡ್ಡಬೇಕು ಎಂದು ಹೇಳುವರು.

English summary

These Morning Habits May Result in Weight Gain!

Various studies say that excessive weight is a risk factor in several chronic diseases, including cardiovascular disease, diabetes mellitus, chronic kidney disease, many cancers and a line-up of musculoskeletal disorders. For instance, your morning routine plays a vital role when it comes to weight gain.
Story first published: Saturday, June 1, 2019, 16:12 [IST]
X
Desktop Bottom Promotion