Latest Updates
-
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ?
ಹೊಟ್ಟೆ ತುಂಬಾ ಇಡ್ಲಿ ತಿಂದ್ರೆ, ತೂಕ ಇಳಿಸಿಕೊಳ್ಳಬಹುದಂತೆ! ಇದಕ್ಕೆ ಕಾರಣಗಳು ಇಲ್ಲಿದೆ ನೋಡಿ
ಪ್ರತಿಯೊಬ್ಬ ಭಾರತೀಯನ ಅತಿ ಪ್ರಿಯವಾದ ತಿಂಡಿ ಎಂದರೆ ಅದು ಇಡ್ಲಿ. ಇಡ್ಲಿ - ಸಾಂಬಾರ್ , ಇಡ್ಲಿ - ಚಟ್ನಿ ಇವುಗಳ ಸಂಯೋಜನೆ ಹಾಗು ಜೋಡಿ ಬಹಳ ಹಳೆಯದು . ಇಡ್ಲಿ ಇಷ್ಟವಿಲ್ಲ ಎಂದು ಯಾರೂ ಹೇಳುವುದೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ಎಂತಹ ಕಲ್ಲು ಮನಸ್ಸಿನ ವ್ಯಕ್ತಿಯೇ ಆದರೂ ತನಗೆ ಮನಸೋಲುವಂತೆ ಮಾಡುವುದೇ ಈ ಮೃದುವಾದ ಇಡ್ಲಿ . ನೋಡಲು ತೆಳ್ಳಗೆ ಬೆಳ್ಳಗೆ ಮೃದುವಾಗಿ ಹಬೆಯ ಮೇಲೆ ಬೆಂದು ಮನುಷ್ಯನ ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವ ಗುಣವನ್ನು ಹೊಂದಿರುವುದೇ ಈ ಇಡ್ಲಿ ಎಂಬ ತಿಂಡಿ .
ಇಡ್ಲಿ ಬಹಳ ಹಿಂದಿನಿಂದಲೂ ತನ್ನ ಅಂದ ಚೆಂದವನ್ನು ಕಾಪಾಡಿಕೊಂಡಿರುವುದರ ಜೊತೆಗೆ ತಿನ್ನುವವರಿಗೆ ಆರೋಗ್ಯ ಭಾಗ್ಯ ಕೊಡುವ ಕಾಮಧೇನುವಾಗಿದೆ . ನೀವು ಗಮನಿಸಿರಬಹುದು , ಆರೋಗ್ಯವಾಗಿ ಇರುವವರನ್ನು ಬಿಡಿ . ಆಸ್ಪತ್ರೆಯಲ್ಲಿನ ರೋಗಿಗಳಿಗೂ ವೈದ್ಯರು ಸೂಚಿಸುವುದೇ ಈ ಇಡ್ಲಿಯನ್ನು. ವಿಶ್ವದಾದ್ಯಂತ ಪ್ರಖ್ಯಾತಿ ಪಡೆದಿರುವ ಇಡ್ಲಿಯ ಹುಟ್ಟಿಗೆ ನಮ್ಮ ದಕ್ಷಿಣ ಭಾರತ ಕಾರಣ ಎಂದು ಬಹಳ ಹೆಮ್ಮೆಯಿಂದ ಹೇಳಬಹುದು . ಮನುಷ್ಯನ ಆರೋಗ್ಯಕ್ಕೆ ಒಳ್ಳೆಯ ಪ್ರಯೋಜನಗಳನ್ನು ಒದಗಿಸುವುದರ ಜೊತೆಗೆ ದಪ್ಪನೆಯ ದೇಹ ಹೊಂದಿರುವ ಮತ್ತು ಬೊಜ್ಜು ಹೊಂದಿರುವವರಿಗೆ ಇಡ್ಲಿ ನಿಜಕ್ಕೂ ಒಬ್ಬ ವೈದ್ಯನಿದ್ದಂತೆ . ಆದ್ದರಿಂದ ಈ ವರ್ಷದ ಇಡ್ಲಿ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುವುದರ ಜೊತೆಗೆ ಇಡ್ಲಿಯಿಂದಾಗುವ ಪ್ರಯೋಜನಗಳನ್ನು ತಿಳಿಯೋಣ. ಇಡ್ಲಿ ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ. ಇಡ್ಲಿ ಹಬೆಯ ಮೇಲೆ ಬೇಯುವುದರಿಂದ ಸಾಮಾನ್ಯವಾಗಿ ಇದರಲ್ಲಿ ಕ್ಯಾಲೋರಿ ಕಡಿಮೆಯೇ ಇರುತ್ತದೆ . ನಿಮಗೆ ಇದು ಬರೀ ಅಕ್ಕಿಯ ಹಿಟ್ಟೇ ಎಂದು ಬೇಜಾರಾದರೆ , ಇಡ್ಲಿ ಹಿಟ್ಟಿಗೆ ಕಾಳುಗಳನ್ನು ಮತ್ತು ಬೇಳೆಗಳನ್ನು ಪುಡಿ ಮಾಡಿ ಹಾಕಿ ಹಾಗು ಅಲಂಕಾರಕ್ಕೆಂದು ತರಕಾರಿಯನ್ನು ಹಾಕಿ ಬೆರೆಸಿ ಮಸಾಲೆ ಇಡ್ಲಿಯ ರೀತಿ ಮಾಡಿ ಅದರ ರುಚಿಯನ್ನು ಇನ್ನಷ್ಟು ಹೆಚ್ಚಿಸಬಹುದು . ನೋಡಲೂ ಮತ್ತು ತಿನ್ನಲು ಬಹಳ ಇಷ್ಟವಾಗುತ್ತದೆ .

ಜೀರ್ಣವಾಗುವುದರಲ್ಲಿ ಇಡ್ಲಿ ಮೊದಲು
ಇಡೀ ದಕ್ಷಿಣ ಭಾರತದ ಆಹಾರಗಳ ಇತಿಹಾಸದಲ್ಲೇ ಅತಿ ಬೇಗನೆ ಜೀರ್ಣವಾಗುವ ಆಹಾರ ಇಡ್ಲಿ . ಇದಕ್ಕೆ ಕಾರಣ ಇಡ್ಲಿ ಹಿಟ್ಟಿನಲ್ಲಾಗುವ ಫರ್ಮೆಂಟೇಶನ್ ಪ್ರಕ್ರಿಯೆ . ಫರ್ಮೆಂಟೇಶನ್ ನಿಂದ ಇಡ್ಲಿ ಸುಲಭವಾಗಿ ಜೀರ್ಣವಾಗುತ್ತದೆ . ಅಲ್ಲದೆ ಇಡ್ಲಿ ಒಳ ಸೇರಿದ ಮೇಲೆ ದೇಹದಲ್ಲಿ ಖನಿಜಗಳನ್ನು ಮತ್ತು ಜೀವಸತ್ವ ಗಳನ್ನು ಬೇರ್ಪಡಿಸುವ ಪ್ರಕ್ರಿಯೆ ಪ್ರಾರಂಭವಾಗುವುದರಿಂದ ಇನ್ನಷ್ಟು ಸುಲಭವಾಗಿ ಜೀರ್ಣವಾಗಲು ಅನುಕೂಲವಾಗುತ್ತದೆ .

ಇಡ್ಲಿ ನಿಜಕ್ಕೂ ಹೊಟ್ಟೆ ತುಂಬಿಸುತ್ತದೆ
ಇಡ್ಲಿಯಲ್ಲಿ ಫೈಬರ್ ಮತ್ತು ಪ್ರೋಟೀನ್ ಅಂಶ ಯಥೇಚ್ಛವಾಗಿರುವುದರಿಂದ ಇಡ್ಲಿಯನ್ನು ತಿಂಡಿಯಾಗಿ ಸೇವಿಸಿದ ನಂತರ ಹೊಟ್ಟೆ ಹಸಿವೇ ಆಗುವುದಿಲ್ಲ . ಇದರಿಂದ ನೀವು ಮತ್ತೆ ಮತ್ತೆ ಊಟ ಮಾಡಬೇಕು ಎನಿಸುವುದಿಲ್ಲ . ನಿಮ್ಮ ದೇಹದ ತೂಕವನ್ನು ಗಣನೀಯವಾಗಿ ಮತ್ತು ಪರೋಕ್ಷವಾಗಿ ನಿಯಂತ್ರಣಕ್ಕೆ ತರಬಹುದು .
Most Read: ಪ್ರಪಂಚದಲ್ಲೇ ಅತ್ಯಂತ ನ್ಯೂಟ್ರೀಷಿಯಸ್ ಆಹಾರ 'ಇಡ್ಲಿ'..

ಫೈಬರ್ ಅಂಶ ಹೇರಳವಾಗಿದೆ
ಇಡ್ಲಿಯಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಬಹುಬೇಗನೆ ಜೀರ್ಣವಾಗುತ್ತದೆ ಮತ್ತು ಇದರಿಂದಲೂ ತೂಕ ಕಡಿಮೆ ಮಾಡಿಕೊಳ್ಳಲು ಅನುಕೂಲಕರವಾಗಿದೆ . ಇನ್ನು ಅರೋಗ್ಯ ತಜ್ಞರ ಪ್ರಕಾರ ಹಬೆಯಲ್ಲಿ ಬೇಯಿಸಿದ ಯಾವುದೇ ಆಹಾರ ಅಥವಾ ಇಡ್ಲಿಯನ್ನು ಸಿಟ್ರಸ್ ಯುಕ್ತ ಹಣ್ಣುಗಳಾದ ಕಿತ್ತಳೆ ಮತ್ತು ದ್ರಾಕ್ಷಿ ಹಣ್ಣುಗಳೊಡನೆ ಸೇವಿಸಿದರೆ ನಮ್ಮ ದೇಹಕ್ಕೆ ಬೇಡದಿರುವ ಕೊಬ್ಬಿನ ಅಂಶ ಕಡಿಮೆ ಮಾಡಿ ಕಾರ್ಬೋಹೈಡ್ರೇಟ್ ಗಳು ಸುಖಾಸುಮ್ಮನೆ ಸೇರಿಕೊಳ್ಳುವುದನ್ನು ತಪ್ಪಿಸುತ್ತದೆ .

ಆಹಾರ ತಜ್ಞರ ಪ್ರಕಾರ
ಇಡ್ಲಿ ಹಿಟ್ಟು ತಯಾರು ಮಾಡಲು ಎಲ್ಲರೂ ಉದ್ದಿನ ಬೇಳೆಗಳನ್ನು ಉಪಯೋಗಿಸುವುದರಿಂದ ಸಹಜವಾಗಿಯೇ ಬೇಯಿಸಿದ ಇಡ್ಲಿಯಲ್ಲಿ ಕಬ್ಬಿಣದ ಅಂಶ ಸೇರಿರುತ್ತದೆ . ಆಹಾರ ತಜ್ಞರ ಪ್ರಕಾರ ಪ್ರತಿದಿನವೂ ನಾವು ಬೆಳಗಿನ ಉಪಹಾರಕ್ಕಾಗಿ ನಿಯಮಿತವಾದ ಇಡ್ಲಿ ಸೇವನೆ ಮಾಡುತ್ತಾ ಬಂದರೆ ಪುರುಷರ ದೇಹಕ್ಕೆ ಬೇಕಾದ 8 ಮಿಲಿಗ್ರಾಮ್ ನಷ್ಟು ಮತ್ತು ಸ್ತ್ರೀಯರ ದೇಹಕ್ಕೆ ಬೇಕಾದ 18 ಮಿಲಿಗ್ರಾಮ್ ನಷ್ಟು ಕಬ್ಬಿಣದ ಅಂಶ ಬೆಳಗ್ಗೆಯೇ ಇಡ್ಲಿಯಲ್ಲೇ ಸಿಕ್ಕಂತಾಗುತ್ತದೆ . ಇದರಿಂದ ಇಡೀ ದಿನ ಯಾವ ಸುಸ್ತೂ ಇಲ್ಲದೆ ಚೈತನ್ಯವಾಗಿ ನಮ್ಮ ನಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ವಿಯಾಗಿ ತೊಡಗಿಕೊಳ್ಳಲು ಅನುಕೂಲವಾಗುತ್ತದೆ .

ಇಡ್ಲಿ ವಿಷಯದಲ್ಲಿ ನಾವು ಕೊಡುವ ತೀರ್ಪು
ಮಾನವನ ದೇಹದ ಮೇಲೆ ಯಾವುದಾದರೂ ಒಂದು ಆಹಾರ ಕಡಿಮೆ ಅಡ್ಡ ಪರಿಣಾಮ ಅಥವಾ ಅಡ್ಡ ಪರಿಣಾಮ ವನ್ನೇ ಬೀರದ ಒಂದು ಆಹಾರ ಇದ್ದರೆ ಅದು ಇಡ್ಲಿ ಮಾತ್ರ . ಇಡ್ಲಿ ನೋಡಲು ಚೆಂದ ,ಮಾಡಲು ಸುಲಭ , ತಿನ್ನಲು ರುಚಿ , ಜೀರ್ಣವಾಗುವುದರಲ್ಲಿ ಮತ್ತು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳ ಅನುಕೂಲವನ್ನು ಒದಗಿಸುವುದರಲ್ಲಿ ಮೇಲು ಗೈ . ಹೀಗಾಗಿ ನಮ್ಮ ಇಡೀ ದಿನ ಸಂತೋಷದಿಂದ ಚೈತನ್ಯದಿಂದ ಕೂಡಿರಬೇಕಾದರೆ ಬೆಳಗಿನ ಉಪಹಾರಕ್ಕೆ ಇಡ್ಲಿಯೇ ನಮ್ಮ ಮೊದಲ ಆಯ್ಕೆ .



Click it and Unblock the Notifications