For Quick Alerts
ALLOW NOTIFICATIONS  
For Daily Alerts

  ದಿನಕ್ಕೆ ಒಂದೂವರೆ ಲೀಟರಿನಷ್ಟು ನೀರು ಕುಡಿದರೆ ಸಾಕು, ತೂಕ ಇಳಿಯುತ್ತೆ!

  |

  ನೀರು ನಮ್ಮ ದೇಹಕ್ಕೆ ಅತ್ಯಂತ ಅಗತ್ಯವಿರುವ ಆಹಾರವಾಗಿದೆ. ಇಡಿಯ ದಿನ ಸಾಕಷ್ಟು ನೀರನ್ನು ಕುಡಿಯುತ್ತಿರಲು ನಮ್ಮ ಹಿರಿಯರು ಸಲಹೆ ಮಾಡುವ ಹಿಂದೆ ನೀರಿನ ಕೊರತೆಯುಂಟಾಗಬಾರದೆಂಬ ಕಾಳಜಿಯೇ ಆಗಿದೆ. ನಮ್ಮ ದೇಹದ 73%ರಷ್ಟು ಭಾಗ ನೀರಿನಿಂದ ಕೂಡಿದೆ ಹಾಗೂ ನಮ್ಮ ದೇಹದ ಪ್ರತಿ ಅಂಗದ ಕಾರ್ಯ ಸುಸೂತ್ರವಾಗಿ ಜರುಗಲು ನೀರು ಅಗತ್ಯವಾಗಿ ಬೇಕು. ನೀರು ಕುಡಿಯುವ ಮೂಲಕ ನಮ್ಮ ದೇಹಕ್ಕೆ ಅಗತ್ಯವಾದ ತೇವಾಂಶ ದೊರಕುತ್ತದೆ, ಪೋಷಕಾಂಶಗಳು ಸೂಕ್ತವಾಗಿ ಎಲ್ಲಾ ಕಡೆ ಪೂರೈಕೆಯಾಗುತ್ತವೆ, ಮೂತ್ರಪಿಂಡ, ಹೃದಯ, ಮೆದುಳು ಮೊದಲಾದ ಪ್ರಮುಖ ಅಂಗಗಳ ಕ್ಷಮತೆ ಹೆಚ್ಚುತ್ತದೆ ಹಾಗೂ ಸ್ನಾಯುಗಳು ದೃಢಗೊಳ್ಳಲೂ ನೆರವಾಗುತ್ತದೆ.

  ಅಲ್ಲದೇ ದೇಹದ ತಾಪಮಾನವನ್ನು ಸೂಕ್ತ ಮಟ್ಟದಲ್ಲಿರಿಸಲು ನೀರು ನೆರವಾಗುತ್ತದೆ. ನಾವು ಸೇವಿಸುವ ಆಹಾರದಿಂದ ಪಡೆಯುವ ಪೋಷಕಾಂಶಗಳನ್ನು ಅಂಗಾಂಶ ಹಾಗೂ ಎಲ್ಲಾ ಜೀವಕೋಶಗಳಿಗೆ ತಲುಪಿಸಲು ಹಾಗೂ ತ್ಯಾಜ್ಯಗಳನ್ನು ವಿಸರ್ಜಿಸಲೂ ನೀರು ಅಗತ್ಯವಾಗಿದೆ. ಅಲ್ಲದೇ ಇನ್ನೊಂದು ಅಚ್ಚರಿಯ ಗುಣವೆಂದರೆ ದೇಹದ ತೂಕ ಕಳೆದುಕೊಳ್ಳಲೂ ನೀರು ನೆರವಾಗುತ್ತದೆ! ತೂಕ ಕಳೆದುಕೊಳ್ಳಲು ಕೊಬ್ಬನ್ನು ಕರಗಿಸಬೇಕು, ಇದಕ್ಕೆ ನೀರು ನೇರವಾಗಿ ನೆರವಾಗುವುದಿಲ್ಲ ನಿಜ, ಆದರೆ ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವಿಸದಿರಲು ಹಾಗೂ ಕಲ್ಮಶಗಳನ್ನು ನಿವಾರಿಸುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ. 

  ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

  ಇಂದಿನ ಲೇಖನದಲ್ಲಿ ತೂಕ ಇಳಿಕೆಗೆ ನೀರು ಹೇಗೆ ನೆರವಾಗುತ್ತದೆ ಎಂಬ ವಿಷಯದಲ್ಲಿ ಹತ್ತು ಪ್ರಮುಖ ಮಾಹಿತಿಗಳನ್ನು ನೋಡೋಣ. ಇದರ ಜೊತೆಗೇ, ನೀರಿನ ಸೇವನೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು, ತಲೆನೋವು ಕಡಿಮೆಯಾಗುವುದು ಹಾಗೂ ಒಟ್ಟಾರೆ ಮನೋಭಾವವನ್ನೂ ನೀರು ಕುಡಿಯುವ ಮೂಲಕ ಪಡೆಯಬಹುದು. ದೇಹದ ನೀರಿನ ಅಗತ್ಯ ಪೂರೈಕೆಯಾದಾಗಲೇ ಮನಸ್ಸು ನಿರಾಳವಾಗಿರುತ್ತದೆ ಹಾಗೂ ಚಟುವಟಿಕೆಯಿಂದ ನಿತ್ಯದ ಕೆಲಸಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಪ್ರತಿ ವಯಸ್ಕರಿಗೂ ದಿನಕ್ಕೆ ಸುಮಾರು ಒಂದೂವರೆ ಲೀಟರಿನಷ್ಟು ನೀರು ಕುಡಿಯಬೇಕು. ಆದರೆ ಅಷ್ಟೂ ನೀರನ್ನು ಒಮ್ಮೆಲೇ ಕುಡಿಯಬಾರದು, ಕೊಂಚ ಕೊಂಚವಾಗಿ, ಸಮಪ್ರಮಾಣದಲ್ಲಿ ದಿನದಲ್ಲಿ ಹಲವು ಬಾರಿ ಕುಡಿಯಬೇಕು. ಬನ್ನಿ, ಈ ಪರಿಯ ನೀರು ಕುಡಿಯುವುದರಿಂದ ತೂಕ ಇಳಿಕೆಯಲ್ಲಿ ಹೇಗೆ ನೆರವಾಗುತ್ತದೆ ಎಂದು ನೋಡೋಣ.... 

  ಹೊಟ್ಟೆ ತುಂಬಿರುವ ಭಾವನೆ

  ಹೊಟ್ಟೆ ತುಂಬಿರುವ ಭಾವನೆ

  ಊಟ ಮಾಡಿದ ಕೊಂಚ ಹೊತ್ತಿನ ಬಳಿಕ ಹೊಟ್ಟೆ ಖಾಲಿಯಾಗಿದ್ದಂತೆ ಅನ್ನಿಸಿದರೆ ಆಗ ಮನಸ್ಸಿಗೆ ರುಚಿಯಾದ ಬಿರಿಯಾನಿ ಅಥವಾ ಆ ಕ್ಷಣದಲ್ಲಿ ಕಣ್ಣಿಗೆ ಕಂಡ ಸುಂದರವಾದ ಆಹಾರವಸ್ತುವನ್ನು ತಿನ್ನುವ ಬಯಕೆಯಾಗುತ್ತದೆ. ಹೀಗೆ ಆಗಬೇಕೆಂದೇ ಎಲ್ಲೆಡೆ ಕಣ್ಣಿಗೆ ರಾಚುವಂತೆ ಸಿದ್ಧ ಆಹಾರಗಳ ಪೋಸ್ಟರುಗಳನ್ನು ಅಂಟಿಸಿರುತ್ತಾರೆ. ಈ ಸಮಯದಲ್ಲಿ ಬೇರೇನೂ ಯೋಚಿಸದೇ ಕುಳಿತು, ಒಂದು ದೊಡ್ಡ ಲೋಟ ತಣ್ಣೀರು ಕುಡಿದು ಒಂದು ನಿಮಷ ಹಾಗೇ ಇದ್ದ ಬಳಿಕ ಅದೇ ಬಿರಿಯಾನಿಯನ್ನು ಕಲ್ಪಿಸಿಕೊಳ್ಳಿ ಅಥವಾ ಇದುವರೆಗೆ ಹಸಿವನ್ನು ಕೆರಳಿಸಿದ್ದ ಆ ಭಿತ್ತಿಪತ್ರವನ್ನು ನೋಡಿ, ಈಗ ಮೊದಲಿನಂತೆ ಅದನ್ನು ತಿನ್ನದಿದ್ದರೆ ಪ್ರಾಣವೇ ಹೋಗುತ್ತದೆ ಎಂಬ ಭಾವನೆ ಬರುವುದಿಲ್ಲ! ಇದೇ ನೀರಿನ ಮಹಿಮೆ. ನೀರು ಹೊಟ್ಟೆಯಲ್ಲಿದ್ದಾಗ ಅನಗತ್ಯ ಆಹಾರ ತಿನ್ನಲು ಮನಸ್ಸನ್ನು ಪ್ರೇರೇಪಿಸದೇ ಇರುವ ಮೂಲಕ ಹೆಚ್ಚುವರಿ ಆಹಾರ ಸೇವನೆಯಿಂದ ತಡೆಯುತ್ತದೆ.

  ಸ್ನಾಯುಗಳು ಬಲಗೊಳ್ಳಲು ನೆರವಾಗುತ್ತದೆ

  ಸ್ನಾಯುಗಳು ಬಲಗೊಳ್ಳಲು ನೆರವಾಗುತ್ತದೆ

  ಸ್ನಾಯುಗಳನ್ನು ಹುರಿಗಟ್ಟಿಸಲು ಕೇವಲ ವ್ಯಾಯಾಮ ಮಾತ್ರವೇ ಸಾಕಾಗುವುದಿಲ್ಲ. ಬದಲಿಗೆ ಉತ್ತಮ ಅಹಾರ ಹಾಗೂ ಸಾಕಷ್ಟು ನೀರು ಸಹಾ ಅಗತ್ಯ. ನಿಮ್ಮ ನಿತ್ಯದ ವ್ಯಾಯಾಮಕ್ಕೂ ಕೊಂಚ ಹೊತ್ತಿನ ಮುನ್ನ ಸೂಕ್ತ ಪ್ರಮಾಣದ ನೀರನ್ನು ಸೇವಿಸಿ, ಮೂತ್ರ ವಿಸರ್ಜನೆಯ ಬಳಿಕವೇ ನಿಮ್ಮ ವ್ಯಾಯಾಮಗಳನ್ನು ಪ್ರಾರಂಭಿಸಬೇಕು. ಸ್ನಾಯುಗಳಲ್ಲಿರುವ ನೀರು ಅಂಗಾಂಶ ರಚನೆಗೆ ಸೂಕ್ತ ಬೆಂಬಲ ನೀಡುತ್ತದೆ ಹಾಗೂ ಸ್ನಾಯುಗಳು ಬೆಳೆಯಲು ನೆರವಾಗುತ್ತದೆ. ಯಾವಾಗ ಸ್ನಾಯುಗಳು ಹುರಿಗಟ್ಟುತ್ತವೆಯೋ ಆಗ ಹೆಚ್ಚು ವ್ಯಾಯಾಮವನ್ನು ನಿರ್ವಹಿಸಲು ಸಾಧ್ಯ ಹಾಗೂ ಹೆಚ್ಚು ಹೊತ್ತು ವ್ಯಾಯಾಮದಲ್ಲಿ ತೊಡಗಿರಬಹುದು. ಇವೆರಡರಿಂದಲೂ ಹೆಚ್ಚು ಹೆಚ್ಚಾಗಿ ಕ್ಯಾಲೋರಿಗಳನ್ನು ಕರಗಿಸಿ ತೂಕ ಇಳಿಕೆಯ ಗುರಿಯನ್ನು ಶೀಘ್ರವಾಗಿ ಸಾಧಿಸಬಹುದು.

  ಜೀರ್ಣಕ್ರಿಯೆಗೆ ನೆರವಾಗುತ್ತದೆ

  ಜೀರ್ಣಕ್ರಿಯೆಗೆ ನೆರವಾಗುತ್ತದೆ

  ತೂಕ ಹೆಚ್ಚಳಕ್ಕೆ ಕೊಬ್ಬಿನ ಸಂಗ್ರಹ ಪ್ರಮುಖವಾದಿದ್ದರೂ ಅಜೀರ್ಣತೆಯೂ ಇನ್ನೊಂದು ಕಾರಣವಾಗಿದೆ. ಒಂದು ವೇಳೆ ಅಜೀರ್ಣತೆಯ ಕಾರಣ ಹೊಟ್ಟೆಯುಬ್ಬರಿಕೆಯುಂಟಾಗಿದ್ದರೆ ಸೂಕ್ತ ಪ್ರಮಾಣದ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ನಮ್ಮ ಬಾಯಿಯಲ್ಲಿರುವ ಲಾಲಾರಸವೂ ಬಹುತೇಕ ನೀರಿನಿಂದ ಕೂಡಿದೆ. ಇದು ಆಹಾರದಲ್ಲಿರುವ ಕರಗುವ ನಾರನ್ನು ಕರಗಿಸಿಕೊಂಡು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಈ ಮೂಲಕ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಒಂದು ವೇಳೆ ಜೀರ್ಣಕ್ರಿಯೆ ಅಪೂರ್ಣವಾಗಿದ್ದರೆ ಇವು ಹೊರಹೋಗಲು ಹೆಚ್ಚು ಹೊತ್ತು ತೆಗೆದುಕೊಳ್ಳುತ್ತವೆ ಹಾಗೂ ಈ ಅವಧಿಯಲ್ಲಿ ಸೇವಿಸಿದ ಇತರ ಹೊತ್ತಿನ ಆಹಾರಗಳ ಮೂಲಕವೂ ಇವು ದೇಹದಲ್ಲಿ ಸಂಗ್ರಹಗೊಳ್ಳುತ್ತಾ ಹೋಗುತ್ತವೆ.

  ಮೂಳೆಸಂಧುಗಳಿಗೆ ಜಾರುಕವಾಗಿದೆ

  ಮೂಳೆಸಂಧುಗಳಿಗೆ ಜಾರುಕವಾಗಿದೆ

  ನಮ್ಮ ಮೂಳೆಗಳ ಚಲನೆಗೆ ಸಂದುಗಳಲ್ಲಿ ಸಾಕಷ್ಟು ಜಾರುಕದ್ರವವಿರಲೇಬೇಕು. ದೇಹದಲ್ಲಿ ಸಾಕಷ್ಟು ನೀರಿನ ಪ್ರಮಾಣವಿದ್ದಾಗ ಮಾತ್ರವೇ ಈ ಸಂದುಗಳಲ್ಲಿರುವ ಜಾರುಕದ್ರವವೂ ಮೂಳೆಗಳ ಚಲನೆ ಸುಲಭವಾಗಿಸುತ್ತದೆ. ನೀರಿನ ಕೊರತೆಯಿಂದ ಈ ಜಾರುಕದ್ರವದ ಪ್ರಮಾಣವೂ ಕಡಿಮೆಯಾಗುತ್ತದೆ ಹಾಗೂ ಈ ಭಾಗದಲ್ಲಿ ಹೆಚ್ಚಿನ ಘರ್ಷಣೆಯುಂಟಾಗಿ ಉರಿಯೂತ ಹಾಗೂ ನೋವು ಮತ್ತು ಸುಲಭವಾಗಿ ಪೆಟ್ಟಾಗುವ ಸಂಭವ ಹೆಚ್ಚುತ್ತದೆ. ಸಂಧಿವಾತದಿಂದ ಬಳಲುವ ವ್ಯಕ್ತಿಗಳು ಹೆಚ್ಚು ನೀರನ್ನು ಕುಡಿಯಬೇಕು ಹಾಗೂ ಈ ಮೂಲಕ ಮೂಳೆಸಂದುಗಳಲ್ಲಿ ಜಾರುಕದ್ರವದ ಪ್ರಮಾಣ ಹೆಚ್ಚಿರುವಂತೆ ಕಾಪಾಡಿಕೊಳ್ಳಬೇಕು.

  ದೇಹದಿಂದ ಕಲ್ಮಶ ಹಾಗೂ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತದೆ

  ದೇಹದಿಂದ ಕಲ್ಮಶ ಹಾಗೂ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತದೆ

  ದೇಹದ ರಕ್ತವನ್ನು ಮೂತ್ರಪಿಂಡಗಳು ಸೋಸಿ ಮೂತ್ರದ ರೂಪದಲ್ಲಿ ಸಂಗ್ರಹಿಸಿ ವಿಸರ್ಜಿಸುವ ಹಾಗೂ ಜೀರ್ಣಕ್ರಿಯೆಯ ಬಳಿಕ ಆಹಾರದ ತ್ಯಾಜ್ಯಗಳನ್ನು ದೊಡ್ಡಕರುಳು ಮಲವಿಸರ್ಜನೆಯ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಷಗಳು ಹೊರಹಾಕಲೂ ನೀರು ಅಗತ್ಯವಾಗಿ ಬೇಕು. ನಿತ್ಯವೂ ಸಾಕಷ್ಟು ನೀರನ್ನು ಕುಡಿಯುವ ಮೂಲಕ ಕರುಳುಗಳ ಒಳಗೆ ಜೀರ್ಣಗೊಂಡ ಆಹಾರ ಚಲಿಸಲು ಹಾಗೂ ಸುಲಭವಾಗಿ ವಿಸರ್ಜನೆಯಾಗಲು ನೆರವಾಗುತ್ತದೆ. ಈ ಮೂಲಕ ದಿನವಿಡೀ ತಾಜಾತನ ಹಾಗೂ ಲವಲವಿಕೆಯಿಂದಿರಲು ಸಾಧ್ಯವಾಗುತ್ತದೆ. ಈ ಕ್ರಿಯೆಗೆ ದೇಹದ ಜೀವರಾಸಾಯನಿಕ ಕ್ರಿಯೆ ಕೊಬ್ಬನ್ನು ಒಡೆದು ಬಳಸಿಕೊಳ್ಳಬೇಕಾಗುತ್ತದೆ. ಈ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಇಳಿಕೆಯಾಗುತ್ತದೆ ಹಾಗೂ ದೇಹದಾರ್ಢ್ಯತೆ ಹೆಚ್ಚುತ್ತದೆ.

  ನೀರಿನಲ್ಲಿ ಕ್ಯಾಲೋರಿಗಳೇ ಇಲ್ಲ

  ನೀರಿನಲ್ಲಿ ಕ್ಯಾಲೋರಿಗಳೇ ಇಲ್ಲ

  ಇಂದು ನೀರಿನ ಬದಲು ಬುರುಗು ಬರುವ (carbonated drinks), ಖ್ಯಾತ ಸಂಸ್ಥೆಗಳ ಲಘು ಪಾನೀಯಗಳನ್ನು ಹೆಸರು ಹೇಳಿಯೇ ಕುಡಿಯುವುದು ಪ್ರತಿಷ್ಠೆಯ ವಿಷಯವಾಗಿದೆ. ಆದರೆ ಈ ಪಾನೀಯಗಳಲ್ಲಿ ಅತಿ ಹೆಚ್ಚು ಪ್ರಮಾಣದ ಸಕ್ಕರೆ ಇದ್ದು ಇದು ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದರೆ ನೀರಿನಲ್ಲಿ ಕ್ಯಾಲೋರಿಗಳೇ ಇಲ್ಲದಿರುವ ಕಾರಣ ತೂಕ ಇಳಿಸಬೇಕೆಂದಿದ್ದರೆ ನೀರನ್ನೇ ಕುಡಿಯಬೇಕು.

  ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ

  ದೇಹದ ಚೈತನ್ಯವನ್ನು ಹೆಚ್ಚಿಸುತ್ತದೆ

  ದೇಹದಲ್ಲಿ ಸದಾ ಚೈತನ್ಯ ತುಂಬಿ ತುಳುಕುತ್ತಿರುವಂತಿರಬೇಕಾದರೆ ನಿತ್ಯವೂ ಸೂಕ್ತ ಪ್ರಮಾಣದ ನೀರನ್ನು ಕುಡಿಯುತ್ತಿರಬೇಕು. ಈ ಮೂಲಕ ದೇಹದ ಎಲ್ಲಾ ಚಟುವಟಿಕೆಗಳು ಸೂಕ್ತವಾಗಿ ಜರುಗುತ್ತವೆ ಹಾಗೂ ಇದಕ್ಕೆ ಅಗತ್ಯವಾದ ಶಕ್ತಿ ಪೂರ್ಣಪ್ರಮಾಣದಲ್ಲಿ ಲಭಿಸುತ್ತದೆ. ಅಲ್ಲದೇ ಹೆಚ್ಚಿನ ಚೈತನ್ಯ ಹೆಚ್ಚು ಹೆಚ್ಚು ವ್ಯಾಯಾಮ ಮಾಡಲೂ ಪ್ರೇರಣೆ ನೀಡುತ್ತದೆ ಹಾಗೂ ಈ ಮೂಲಕ ಶೀಘ್ರದಲ್ಲಿಯೇ ಹೆಚ್ಚು ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

  ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

  ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

  ನಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿರಬೇಕಾದರೆ ನೀರು ಅಗತ್ಯವಾಗಿದೆ. ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ದೇಹದ ಎಲ್ಲಾ ಅಂಗಗಳು ಆರೋಗ್ಯಕರವಾಗಿರುತ್ತವೆ. ಒಂದು ವೇಳೆ ಈ ಶಕ್ತಿ ಕೊಂಚವೂ ಕಡಿಮೆಯಾದರೆ ದೇಹಕ್ಕೆ ಯಾವುದೋ ಕಾಯಿಲೆ ಆವರಿಸುವ ಸಾಧ್ಯತೆ ಹೆಚ್ಚುತ್ತದೆ ಹಾಗೂ ಕಾಯಿಲೆ ಇದ್ದಾಗ ಇದನ್ನು ಎದುರಿಸಲು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ ಹಾಗೂ ಈ ಸಮಯದಲ್ಲಿ ದೇಹದ ಇತರ ಚಟುವಟಿಕೆ ಹಾಗೂ ವ್ಯಾಯಾಮಗಳಿಗೆ ಬಿಡುವ್ ನೀಡಬೇಕಾಗುತ್ತದೆ. ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಉತ್ತಮವಾಗಿರಿಸಿಕೊಳ್ಳಬೇಕು ಹಾಗೂ ಇದಕ್ಕೆ ಸಾಕಷ್ಟು ನೀರು ಕುಡಿಯುತ್ತಿರಬೇಕಾಗುವುದು ಅನಿವಾರ್ಯ.

  ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

  ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳಿಸುತ್ತದೆ

  ಒಂದು ವೇಳೆ ನಿಮ್ಮ ಸೊಂಟದ ಸುತ್ತ ಹೆಚ್ಚೇ ಕೊಬ್ಬು ಇದ್ದರೆ ಹಾಗೂ ಇದನ್ನು ಕರಗಿಸಬಯಸುತ್ತೀರಾದರೆ ನಿಮ್ಮ ದೇಹದ ಜೀವ ರಾಸಾಯನಿಕ ಕ್ರಿಯೆಯನ್ನೂ ಕೊಂಚ ಹೆಚ್ಚಿಸಬೇಕಾಗುತ್ತದೆ. ಇದಕ್ಕೆ ಸೂಕ್ತ ಪ್ರಮಾಣದ ನೀರಿದ್ದರೆ ಮಾತ್ರ ಈ ಕ್ರಿಯೆ ಸೂಕ್ತವಾಗಿ ನಡೆಯಲು ಸಾಧ್ಯ. ಜೀವ ರಾಸಾಯನಿಕ ಕ್ರಿಯೆ ಚುರುಕುಗೊಂಡಷ್ಟೂ ಹೆಚ್ಚು ಹೆಚ್ಚಾಗಿ ಕ್ಯಾಲೋರಿಗಳು ದಹಿಸಲ್ಪಡುತ್ತವೆ ಹಾಗೂ ಈ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ಕೊಬ್ಬು ಬಳಸಲ್ಪಡುವ ಮೂಲಕ ನಿಧಾನವಾಗಿ ಸೊಂಟದ ಸುತ್ತಳತೆ ಕಡಿಮೆಯಾಗುತ್ತಾ ಬರುತ್ತದೆ.

  English summary

  Ways Drinking More Water Can Help You Lose Weight

  Water is the vital necessity of every individual. You may have heard your elder advising you to drink an adequate amount of water. It comprises 73% of our body composition and is responsible for the proper functioning of the organs. It keeps you hydrated, improves circulation of nutrients, and improves muscle strength, heart health, and kidney functioning. Besides, it also helps in regulating your body temperature. But out of all its function, water plays a vital role in transferring the nutrients from the food that you consume to your tissues, so that our body can gain energy from it. But you will be surprised to know that water can aid in the promotion of weight loss.
  Story first published: Tuesday, February 13, 2018, 23:32 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more