For Quick Alerts
ALLOW NOTIFICATIONS  
For Daily Alerts

ಒಂದೆರಡು ವಾರದಲ್ಲಿಯೇ ದೇಹದ ತೂಕ ಇಳಿಸಬೇಕಾ? ಈ ಟಿಪ್ಸ್ ಅನುಸರಿಸಿ

By Divya
|

ತೂಕ ಇಳಿಸಬೇಕು ಎಂದು ಮನಸ್ಸು ಬಯಸುತ್ತದೆ. ಆದರೆ ಆಹಾರದ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಪಾರ್ಟಿ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಎಲ್ಲರಿಗಿಂತ ನಾನೇ ದಪ್ಪ ಎನಿಸುವುದು ನಿಜ... ಆದರೆ ನಿತ್ಯವೂ ವ್ಯಾಯಾಮ ಮಾಡಲು ಸಾಧ್ಯವಿಲ್ಲ ಎನ್ನುವುದು ಕೆಲವರ ಅಭಿಪ್ರಾಯವಾದರೆ. ಇನ್ನೂ ಕೆಲವರು ನಾನು ಯಾವುದೇ ಅತಿ ಕೊಬ್ಬಿರುವ ಆಹಾರವನ್ನು ತಿನ್ನುವುದಿಲ್ಲ. ಆದರೂ ದಿನದಿಂದ ದಿನಕ್ಕೆ ತೂಕ ಹೆಚ್ಚುತ್ತಲೇ ಇದೆ ಎನ್ನುವುದು ಆಗಿರಬಹುದು. ಒಟ್ಟಿನಲ್ಲಿ ಕಾರಣಗಳು ಬೇರೆ ಬೇರೆ ಆಗಿದ್ದರೂ ಸಮಸ್ಯೆ ಒಂದೇ ಎನ್ನುವುದು ದೃಢವಾದದ್ದು. ದೇಹಕ್ಕೆ ಅನಗತ್ಯವಾಗಿ ಇರುವ ಕೊಬ್ಬನ್ನು ಕರಗಿಸಲು ಅನೇಕ ವ್ಯಾಯಾಮ, ಔಷಧಿ, ಚಿಕಿತ್ಸಾ ವಿಧಾನಗಳೆಲ್ಲವೂ ಇದೆ. ಆದರೆ ಅವುಗಳನ್ನು ಅನುಸರಿಸಲು ಮತ್ತು ಪಡೆದುಕೊಳ್ಳಲು ಕೆಲವು ಸಮಸ್ಯೆಗಳು ಇರುತ್ತವೆ.

ಅಂತಹ ಸಮಸ್ಯೆಗಳಿಂದಾಚೆ ಇರುವ ಯಾವುದಾದರೂ ತೂಕ ಇಳಿಸುವ ವಿಧಾನಗಳನ್ನು ನೀವು ಹುಡುಕುತ್ತಿದ್ದೀರಿ ಎಂದಾದರೆ ಈ ಮುಂದಿರುವ ವಿವರಣೆ ಒಳ್ಳೆಯ ಮಾಹಿತಿಯನ್ನು ಕೊಡುವುದು. ಹೌದು, ನೈಸರ್ಗಿಕವಾಗಿ ದೊರೆಯುವ ಕೆಲವು ಉತ್ಪನ್ನಗಳು ಬಹು ಬೇಗ ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅವುಗಳ ಬಳಕೆಯ ವಿಧಾನ ಹಾಗೂ ಅದರ ಮಹತ್ವವನ್ನು ನಾವು ತಿಳಿದಿರಬೇಕಷ್ಟೆ. ಹಾಗಾದರೆ ಇನ್ನೇಕೆ ತಡ... ಇಲ್ಲಿರುವ ವಸ್ತುಗಳ ಬಗ್ಗೆ ಇರುವ ವಿವರಣೆಯನ್ನು ಗಮನಿಸಿ... ತೂಕ ಇಳಿಸುವುದರ ಬಗ್ಗೆ ಯೋಚಿಸಿ.....

ಲಿಂಬೆರಸ ಮತ್ತು ಒಂದು ದೊಡ್ಡಚಮಚ ಜೇನು

ಲಿಂಬೆರಸ ಮತ್ತು ಒಂದು ದೊಡ್ಡಚಮಚ ಜೇನು

* ಸುಮಾರು ಮೂರು ದೊಡ್ಡಚಮಚ ಲಿಂಬೆರಸ ಮತ್ತು ಒಂದು ದೊಡ್ಡಚಮಚ ಜೇನನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ

* ಇದಕ್ಕೆ ಒಂದು ದೊಡ್ಡ ಲೋಟ ಉಗುರುಬೆಚ್ಚನೆಯ ನೀರನ್ನು ಸೇರಿಸಿ ಕಲಕಿ.

* ಈ ಪೇಯವನ್ನು ಪ್ರತಿದಿನ ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ

ಬಳಿಕ ಕನಿಷ್ಠ ಮುಕ್ಕಾಲು ಗಂಟೆ ಏನನ್ನೂ ಸೇವಿಸದಿರಿ. ಈ ಅವಧಿಯಲ್ಲಿ ಸಾಧ್ಯವಾದಷ್ಟು ದೈಹಿಕ ವ್ಯಾಯಾಮಗಳನ್ನು ಮಾಡಿ.

ಹರಳೆಣ್ಣೆ ಚರ್ಮಕ್ಕೆ ಉಜ್ಜಿಕೊಳ್ಳಿ!

ಹರಳೆಣ್ಣೆ ಚರ್ಮಕ್ಕೆ ಉಜ್ಜಿಕೊಳ್ಳಿ!

ರಿಸಿನಸ್ ಕಮ್ಯೂನಿಸ್ ಎಂಬ ಸಸ್ಯ ಪ್ರಬೇಧಕ್ಕೆ ಸೇರಿದ ಸಸ್ಯದ ಕಾಯಿಗಳ ಬೀಜಗಳನ್ನು ಚೆನ್ನಾಗಿ ಒಣಗಿಸಿ ಹಿಂಡಿ ತೆಗೆದ ಎಣ್ಣೆಯೇ ಹರಳೆಣ್ಣೆ. ಸುಮಾರು ಜೇನಿನಷ್ಟು ಸ್ನಿಗ಼್ಧವಾಗಿರುವ ಈ ಎಣ್ಣೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಇನ್ನು ಹರಳೆಣ್ಣೆಯನ್ನು ಅಡುಗೆಗೆ ಬಳಸುವ ಹೊರತಾಗಿ ಹರಳೆಣ್ಣೆಯನ್ನು ಚರ್ಮದ ಮೇಲೆ ನೇರವಾಗಿ ಹಚ್ಚಿಕೊಳ್ಳಬಹುದು. ಇದರಿಂದಲೂ ತೂಕ ಇಳಿಕೆಗೆ ನೆರವಾಗುತ್ತದೆ. ಚರ್ಮಕ್ಕೆ ಹಚ್ಚಿದಾಗ ಈ ಎಣ್ಣೆ ನಿಧಾನವಾಗಿ ಚರ್ಮದಾಳಕ್ಕೆ ಇಳಿದು ಕೊಬ್ಬನ್ನು ಕರಗಿಸಲು ಪ್ರಚೋದನೆ ನೀಡುತ್ತದೆ.

ಶುಂಠಿ

ಶುಂಠಿ

ತಾಜಾ ಶುಂಠಿಯ ಮೂಲವು ನಿಮ್ಮ ದೇಹಕ್ಕೆ ಪ್ರಯೋಜನಕಾರಿ ಮತ್ತು ತೂಕವನ್ನು ಉಂಟುಮಾಡುವ ಪೋಷಕಾಂಶಗಳಿಂದ ತುಂಬಿರುತ್ತದೆ. ಶುಂಠಿಯು ಜನಪ್ರಿಯ ಜೀರ್ಣಕಾರಿ ಚಿಕಿತ್ಸಾ ವಿಧಾನವಾಗಿದೆ ಮತ್ತು ನೀವು ಉತ್ತಮಗೊಳ್ಳಲು ಸಹಾಯ ಮಾಡಬಹುದು. ಶುಂಠಿಯ ಚಹಾವನ್ನು ಕುಡಿಯಬಹುದು.ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆಯಾಗುವುದು.

ಹಸಿ ಪಪ್ಪಾಯಿ

ಹಸಿ ಪಪ್ಪಾಯಿ

ಹಸಿ ಪಪ್ಪಾಯಿಯನ್ನು ತುಂಬಾ ಸಣ್ಣ ತುಂಡುಗಳನ್ನಾಗಿ ಮಾಡಿಕೊಂಡು ಇತರ ಹಣ್ಣುಗಳೊಂದಿಗೆ ಬೆಳಿಗ್ಗಿನ ಉಪಹಾರಕ್ಕೆ ಸೇವಿಸಬಹುದು. ಇದರಿಂದ ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು. ಹಸಿ ಪಪ್ಪಾಯಿಯು ಬೊಜ್ಜಿನ ಸಮಸ್ಯೆಗೆ ರಾಮಬಾಣವಾಗಿದೆ. ಗರ್ಭಿಣಿಯರಿಗೆ ಇದು ನಿಷಿದ್ಧ.

ಮೆಂತೆ

ಮೆಂತೆ

ಭಾರತೀಯ ಅಡುಗೆ ಮನೆಯಲ್ಲಿ ಹೆಚ್ಚು ಲಭ್ಯವಾಗುವ ಮೆಂತೆಯ ಕಮಾಲು ಹೆಚ್ಚಿನವರಿಗೆ ಗೊತ್ತಿಲ್ಲ. ದೇಹದ ಕೊಬ್ಬು ಕರಗಿಸುವ ಅದ್ಭುತ ಮದ್ದಾಗಿರುವ ಇದು ಫೈಬರ್ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕ್ಯಾಲೋರಿ ಇಲ್ಲವೇ ಇಲ್ಲ ಮತ್ತು ಹಸಿವಾಗುವಿಕೆಯನ್ನೂ ಇದು ತಡೆಯುತ್ತದೆ. ಇದು ಆಯುರ್ವೇದದಲ್ಲಿ ತಿಳಿಸಿರುವ ಉತ್ತಮ ಪರಿಹಾರವಾಗಿದೆ. ರಾತ್ರಿ ಒಂದು ಚಮಚದಷ್ಟು ಮೆಂತೆಯನ್ನು ನೆನೆಸಿಡಿ. ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಈ ನೀರನ್ನು ಸೇವಿಸಿ. ಹುರಿದ ಮೆಂತೆ ಬೀಜಗಳನ್ನು ಮೊಸರು ಅಥವಾ ಸಲಾಡ್‌ಗಳಲ್ಲಿ ಬಳಸಿ.

ಅಲೋವೆರಾ

ಅಲೋವೆರಾ

ನಿಜಕ್ಕೂ ಅದ್ಭುತ ಗಿಡಮೂಲಿಕೆಯಾಗಿ ಅಲೋವೆರಾ ಪ್ರಸಿದ್ಧಗೊಂಡಿದೆ. ಉತ್ತಮ ತ್ವಚೆ, ಉತ್ತಮ ಜೀರ್ಣಕ್ರಿಯೆ, ತೂಕ ಇಳಿಕೆ ಮತ್ತು ಸರ್ವದನ್ನೂ ಒಂದೇ ಸಮಯದಲ್ಲಿ ಮಾಡುವ ಮಾಂತ್ರಿಕ ಗಿಡಮೂಲಿಕೆ ಇದಾಗಿದೆ. ನಿರ್ವಿಷಗೊಳಿಸಲು ಇದು ಸಹಕಾರಿಯಾಗಿದ್ದು, ಚಯಾಪಚಯ ಕ್ರಿಯೆಯನ್ನು ಇದು ಹೆಚ್ಚಿಸುತ್ತದೆ ಮತ್ತು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಲಿಂಬೆ ರಸದೊಂದಿಗೆ ಅಲೋವೆರಾವನ್ನು ಬಳಸಿ. ಇದಕ್ಕೆ ಜೇನನ್ನು ಸೇರಿಸಿಕೊಳ್ಳಿ. ನಿಮ್ಮ ದೇಹದ ತೂಕ ಇಳಿಕೆ ಪ್ರಕ್ರಿಯೆಯೊಂದಿಗೆ ಇದೂ ಕೂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಕರಿಬೇವು

ಕರಿಬೇವು

ಕೊಬ್ಬು ಕರಗಿಸುವ ಅದ್ಭುತ ಗಿಡಮೂಲಿಕೆಯಾಗಿದೆ ಕರಿಬೇವು. ತೂಕ ಇಳಿಕೆಯಲ್ಲಿ ಈ ಔಷಧೀಯ ಸಸ್ಯದ್ದು ಅದರದ್ದೇ ಆದ ಹೆಸರಿದೆ. ತೂಕ ಇಳಿಸುವ ಅಂಶಗಳಲ್ಲದೆ, ನಿಮ್ಮ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಉತ್ಕರ್ಷಣ ನಿರೋಧಿ ಅಂಶಗಳೂ ಇದರಲ್ಲಿದೆ. ಸಣ್ಣ ಕರುಳು ಮತ್ತು ಹೊಟ್ಟೆಯ ಉತ್ತಮ ಕಾರ್ಯನಿರ್ವಹಣೆಗೆ ಇದು ಸಹಾಯ ಮಾಡುತ್ತದೆ. ನೀವು ತಯಾರಿಸುವ ದಾಲ್ ಮತ್ತು ಪಲ್ಯದಲ್ಲಿ ಕೂಡ ಕರಿಬೇವನ್ನು ಬಳಸಬಹುದಾಗಿದೆ. ಬಿಸಿನೀರಿನಲ್ಲಿ ಇದನ್ನು ಕುದಿಸಿ ನಂತರ ಅದನ್ನು ಸೇವಿಸಿ.

ಸಾಸಿವೆ ಕಾಳು

ಸಾಸಿವೆ ಕಾಳು

ಸಾಸಿವೆ ಕಾಳು ಖನಿಜ ಸೆಲೆನಿಯಮ್ನ ಉತ್ತಮ ಮೂಲವಾಗಿದೆ. ಇದು ಸರಿಯಾದ ಥೈರಾಯ್ಡ್ ಕ್ರಿಯೆ ಮತ್ತು ಫಲಿತಾಂಶಗಳನ್ನು ಉತ್ತೇಜಿಸುತ್ತದೆ. ಇದಲ್ಲದೆ, ಈ ಸಣ್ಣ ಬೀಜಗಳು ದೇಹದಲ್ಲಿ ಉರಿಯೂತದ ಪರಿಣಾಮವನ್ನು ಹೊಂದಿರುವುದು ಕಂಡುಬಂದಿದೆ, ಅದು ನಿಮ್ಮ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅವರ ದೃಢವಾದ ಪರಿಮಳವನ್ನು ಅಕ್ಕಿ ಭಕ್ಷ್ಯಗಳು ಮತ್ತು ಮೇಲೋಗರಗಳೊಂದಿಗೆ ಉತ್ತಮವಾಗಿ ಬಡಿಸಲಾಗುತ್ತದೆ. ಇದರಿಂದ ನೀವು ಅವರಿಗೆ ಹೆಚ್ಚಿನ ಪೌಷ್ಟಿಕತೆಯನ್ನು ಪಡೆಯುತ್ತೀರಿ. ಅಲ್ಲದೆ ದೇಹದಲ್ಲಿ ಅನುಪಯುಕ್ತವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುವುದು.

ಓಟ್ಸ್

ಓಟ್ಸ್

ಓಟ್ಸ್ ಕೇವಲ ಅಗ್ಗದ ಮಾತ್ರವಲ್ಲ, ಆದರೆ ಅವುಗಳು ನಂಬಲಾಗದ ತೂಕ ನಷ್ಟ ಹೆಚ್ಚಿಸುವ ಗುಣಲಕ್ಷಣಗಳನ್ನು ಹೊಂದಿವೆ. ಅಮೆರಿಕನ್ ಕಾಲೇಜ್ ಆಫ್ ನ್ಯೂಟ್ರಿಷನ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನ ಬೇಯಿಸಿದ ಸರಕುಗಳಿಗೆ ಓಟ್ ಗಳನ್ನು ಸೇರಿಸಿ, ಪ್ಯಾನ್ಕೇಕ್ ಬ್ಯಾಟರ್, ಬ್ರೆಡ್ ಗಾಗಿ ಆರೋಗ್ಯಕರ ಪರ್ಯಾಯವನ್ನು ಬಳಸಿ ಅಥವಾ ಪಾಕವಿಧಾನಗಳಲ್ಲಿ ನಿಯಮಿತವಾದ ಎಲ್ಲಾ-ಉದ್ದೇಶಿತ ಹಿಟ್ಟನ್ನು ಬದಲಿಸಲು ಒಂದು ಹಿಟ್ಟು ಆಗಿ ರುಬ್ಬಿಕೊಳ್ಳಿ. ಓಟ್ಸ್ ಹೆಚ್ಚಿನ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

ಮೊಸರು

ಮೊಸರು

ನಿಯಮಿತವಾಗಿ ಮೊಸರನ್ನು ಸೇವಿಸುವ ಮೂಲಕ ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ ಹಾಗೂ ದೇಹದಲ್ಲಿ ನಿಶಕ್ತಿಯಾಗದಂತೆ ತಡೆಯುತ್ತದೆ. ಹಾಲು ಮೊಸರಾಗುವ ಸಮಯದಲ್ಲಿ ಹಾಲಿನಲ್ಲಿರುವ ಸಕ್ಕರೆಗಳು ಒಡೆದು ಒಂದು ಬಗೆಯ ಆಮ್ಲವಾಗಿ ಪರಿವರ್ತಿತವಾಗುತ್ತದೆ. ಈ ಆಮ್ಲವೇ ಮೊಸರಿನ ಹುಳಿಯಾದ ರುಚಿಗೆ ಕಾರಣವಾಗಿದ್ದು ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ಹಸಿವು ಹಾಗೂ ನಿಶಕ್ತಿಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮೊಸರು ಅತ್ಯುತ್ತಮವಾದ ಆಹಾರವಾಗಿದೆ.ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. ಒಂದು ಒಳ್ಳೆಯ ಊಟಕ್ಕೆ ಉಪಸಂಹಾರ ಆಡುವುದೇ ಮೊಸರು. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ.

English summary

how to lose weight naturally at home remedy

Research has also shown that herbs and spices have the potential to boost metabolism, promote satiety (read: contentment), aid weight management and improve the overall quality of a diet. So spruce up your daily cooking with a dash of spice and attain your desired weight loss.
Story first published: Saturday, March 24, 2018, 18:27 [IST]
X
Desktop Bottom Promotion