For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗೆ ಸಹಾಯ ಮಾಡುವುದು ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ರಸ

By Divya Pandit
|

ಬೊಜ್ಜು ಎನ್ನುವುದು ನಮ್ಮ ಶರೀರದ ಅಥವಾ ವ್ಯಕ್ತಿತ್ವದ ಆಕರ್ಷಣೆಯನ್ನು ಕುಂದಿಸುತ್ತದೆ. ಜೊತೆಗೆ ಒಂದಿಷ್ಟು ರೋಗಗಳನ್ನು ಆಹ್ವಾನಿಸುವುದು. ಹಾಗಾಗಿ ಎಲ್ಲರೂ ದೇಹದ ತೂಕವನ್ನು ಇಳಿಸಲು ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನಿಸುತ್ತಾರೆ. ದೇಹದ ಎತ್ತರಕ್ಕೆ ಸರಿಯಾಗಿ ತೂಕವನ್ನು ಹೊಂದಿದ್ದರೆ ದೇಹವು ಆರೋಗ್ಯವಾಗಿರುವುದಲ್ಲದೆ ಆಕರ್ಷಕವಾಗಿ ಕಾಣುವುದು. ನಿತ್ಯ ನಾವು ಸೇವಿಸುವ ಆಹಾರ ಕ್ರಮ ಹಾಗೂ ಜೀವನ ಶೈಲಿಯು ನಮ್ಮ ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ದೇಹದ ತೂಕ ಬಲು ಸುಲಭವಾಗಿ ಇಳಿಸಲು ಸಾಕಷ್ಟು ಹಣ್ಣು ಹಾಗೂ ತರಕಾರಿಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಕಿತ್ತಳೆ ಹಾಗೂ ಗಜರಿಯ ಪಾತ್ರವೂ ಬಹಳ ಪ್ರಮುಖವಾದದ್ದು. ಈ ಎರಡು ನೈಸರ್ಗಿಕ ಘಟಕಗಳಿಂದ ಸಿಗುವ ರಸವು ತೂಕವನ್ನು ಬಹಬೇಗ ಇಳಿಸುವುದು. ಈ ಎರಡು ಪದಾರ್ಥಗಳ ರಸಗಳ ಸಂಯೋಜನೆಯು ಶಕ್ತಿಯುತವಾದ ಶುದ್ಧೀಕರಣದ ಪೇಯಗಳಾಗಿ ಕಾರ್ಯ ನಿರ್ವಹಿಸುತ್ತವೆ. ಇವು ದೇಹದ ತೂಕ ನಷ್ಟಗೊಳಿಸುವುದರ ಜೊತೆಗೆ ಆರೋಗ್ಯದ ಸುಧಾರಣೆಗೂ ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ಸಹಾಯ ಮಾಡುವುದು ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ರಸ | Boldsky
ತೂಕ ಇಳಿಕೆಗೆ ಸಹಾಯ ಮಾಡುವುದು ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ರಸ

ಎರಡು ರಸಗಳು ದೇಹಕ್ಕೆ ಅಗತ್ಯವಾದ ಜೀವಸತ್ವ, ಖನಿಜಗಳು ಸೇರಿದಂತೆ ಇನ್ನಿತರ ಪೋಷಕಾಂಶಗಳನ್ನು ಒದಗಿಸುತ್ತವೆ. ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಅಗತ್ಯವಾದ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ಪೊಟ್ಯಾಸಿಯಮ್, ಕ್ಯಾಲ್ಸಿಯಮ್‍ಗಳನ್ನು ಒಳಗೊಂಡಿವೆ. ಇವು ಅದ್ಭುತ ಫೈಬರ್ ಅಂಶಗಳನ್ನು ಹೊಂದಿರುವುದರಿಂದ ದೇಹವನ್ನು ಶುಚಿಗೊಳಿಸುತ್ತದೆ.

ಮಕ್ಕಳಿಂದ ವೃದ್ಧರವರೆಗೂ ಇಷ್ಟವಾಗುವಂತಹ ಕಿತ್ತಳೆ ಹಣ್ಣಿನ ರಸ ಹಾಗೂ ಗಜರಿಯ ರಸವು ನಂಬಲಾಗದಷ್ಟು ಪೋಷಕಾಂಶಗಳನ್ನು ದೇಹಕ್ಕೆ ನೀಡುತ್ತವೆ. ಅಲ್ಲದೆ ಹೃದಯಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು, ರಕ್ತನಾಳದ ಕಾಯಿಲೆ, ಕ್ಯಾನ್ಸರ್, ಜಠರ ಸಮಸ್ಯೆ, ಕರುಳಿನ ಸಮಸ್ಯೆ ಸೇರಿದಂತೆ ಇನ್ನಿತರ ರೋಗಗಳನ್ನು ಬರದಂತೆ ತಡೆಯುತ್ತವೆ.

ತೂಕ ಇಳಿಸುವಲ್ಲಿ ಗಜರಿ ಮತ್ತು ಕಿತ್ತಳೆ ಹಣ್ಣಿನ ರಸವು ಹೇಗೆ ಕಾರ್ಯನಿರ್ವಹಿಸುತ್ತವೆ?

ಗಜರಿ ಮತ್ತು ಕಿತ್ತಳೆ ಹಣ್ಣಿನ ರಸವು ದೇಹದ ಜೀವಾಣು ನಿರ್ಮೂಲನಕ್ಕೆ ಉತ್ತೇಜಿಸುವ ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಕೊಬ್ಬುಗಳನ್ನು ಉತ್ಪಾದಿಸುವಂತಹ ಜೀವಾಣುಗಳನ್ನು ಇವು ನಿಯಂತ್ರಿಸುತ್ತವೆ.

ತೂಕ ಇಳಿಕೆಯಲ್ಲಿ ಗಜರಿಯ ಪಾತ್ರ:

ಗಜರಿಯು ಆಹಾರದಲ್ಲಿ ಅತ್ಯುತ್ತಮ ನಾರಿನಂಶವನ್ನು ಒಳಗೊಂಡಿದೆ. ಹಾಗಾಗಿ ಇದನ್ನು ತೂಕನಷ್ಟಕ್ಕೆ ಸಹಾಯ ಮಾಡುವ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ. ಉತ್ತಮ ನಾರಿನಂಶ ಇರುವಾಗ ಜೀರ್ಣಕ್ರಿಯೆಯು ಸುಗಮವಾಗಿ ನಡೆಯುವುದು. ಜೊತೆಗೆ ದೇಹದ ತ್ಯಾಜ್ಯಗಳನ್ನು ಹೊರ ನೂಕಲು ಸಹಾಯಮಾಡುತ್ತದೆ. ಇದನ್ನು ಆಹಾರದಲ್ಲಿ ಬೆರೆಸುವುದರಿಂದ ನಾಲಿಗೆಯ ರುಚಿಯ ಮೊಗ್ಗುಗಳು ತೃಪ್ತಿಯನ್ನು ಪಡೆದುಕೊಳ್ಳುವುದು. ಊಟದ ನಡುವೆ ಗಜರಿಯನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲೋರಿ ಪಡೆದುಕೊಳ್ಳುವುದನ್ನು ತಡೆಯಬಹುದು.

ಕಿತ್ತಳೆ ಬಣ್ಣದ ತರಕಾರಿಗಳು ನಿರ್ವಿಶೀಕರಣವನ್ನು ಉತ್ತೇಜಿಸುತ್ತವೆ. ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸಿ ದೇಹದ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತವೆ. ಗಜರಿ ಮೂತ್ರಪಿಂಡಕ್ಕೆ ಅತ್ಯುತ್ತಮವಾದದ್ದು. ಮೂತ್ರವನ್ನು ವೃದ್ಧಿಸುತ್ತವೆ. ಜೊತೆಗೆ ಹೆಚ್ಚುವರಿ ದ್ರವವನ್ನು ತೊಡೆದುಹಾಕಲು ಮೂತ್ರಪಿಂಡವನ್ನು ಪ್ರಚೋದಿಸುತ್ತದೆ. ಗಜರಿಯಲ್ಲಿ ಜೀವಸತ್ವ, ಖನಿಜ, ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿವೆ. ಇದರಲ್ಲಿ ನೀರಿನಂಶ ಹೆಚ್ಚಿರುವುದರಿಂದ ಅನಗತ್ಯ ಕ್ಯಾಲೋರಿಯನ್ನು ನಿವಾರಿಸಲು ಸಹಾಯ ಮಾಡುವುದು.

ಗಜರಿಯಲ್ಲಿ ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ6ರ ಉತ್ತಮ ಮೂಲವಾಗಿರುವುದರಿಂದ ಜೀವಸತ್ವಗಳು ಗ್ಲುಕೋಸ್, ಕೊಬ್ಬು ಮತ್ತು ಪ್ರೋಟಿನ್‍ಗಳನ್ನು ನಿಯಂತ್ರಿಸುತ್ತದೆ. ಸ್ನಾಯುಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುವುದು. ಉತ್ತಮ ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುವುದರ ಮೂಲಕ ತೂಕನಷ್ಟಕ್ಕೆ ಸಹಾಯ ಮಾಡುವುದು.

ತೂಕ ನಷ್ಟದಲ್ಲಿ ಕಿತ್ತಳೆ ಹಣ್ಣಿನ ಪಾತ್ರ:

ಕಿತ್ತಳೆ ಹಣ್ಣು ವಿಟಮಿನ್ ಸಿ ಅನ್ನು ಸಮೃದ್ಧವಾಗಿ ಪಡೆದುಕೊಂಡಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಅಲ್ಲದೆ ಅನೇಕ ಕಾಯಿಲೆಗಳನ್ನು ತಡೆಯುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಸಹ ಸಮೃದ್ಧವಾಗಿರುತ್ತವೆ. ಹೃದಯಕ್ಕೆ ಉತ್ತಮ ಆರೋಗ್ಯ ಕಲ್ಪಿಸಿಕೊಡುವುದರ ಜೊತೆಗೆ ಚರ್ಮದ ಕೋಶಗಳನ್ನು ಪುನರುತ್ಪಾದನೆ ಮಾಡುವುದು.

ಇದರಲ್ಲಿ ಇರುವ ಕಿತ್ತಳೆಯ ಆಮ್ಲ, ಆಂಟಿಆಕ್ಸಿಡೆಂಟ್, ನಾರಿನಂಶ, ಮೆಟಾಬಾಲಿಸಮ್ ವೇಗವನ್ನು ಹೆಚ್ಚಿಸುವುದು. ಹೆಚ್ಚಿನ ಕ್ಯಾಲೋರಿಯನ್ನು ಕಡಿತಗೊಳಿಸಿ ತೂಕ ನಷ್ಟಗೊಳಿಸುವಲ್ಲಿ ಸಹಾಯ ಮಾಡುವುದು. ಅಲ್ಲದೆ ಕಿತ್ತಳೆ ರಸದಲ್ಲಿ ಪಾಸ್ಪರಸ್, ಪೊಟ್ಯಾಸಿಯಮ್, ಥಯಾಮಿನ್, ವಿಟಮಿನ್ ಬಿ6, ಮತ್ತು ಪೋಲೇಟ್ ಇರುವುದನ್ನು ನಾವು ಕಾಣಬಹುದು.

ಗಜರಿ ಮತ್ತು ಕಿತ್ತಳೆ ರಸದ ಇತರ ಪ್ರಯೋಜನಗಳು:

ಪ್ರತಿರೋಧಕವನ್ನು ಸುಧಾರಿಸಲು ಕ್ಯಾರೆಟ್ ಜ್ಯೂಸ್ ಸಹಾಯ ಮಾಡುತ್ತದೆ. ಹೃದಯ ರೋಗ ನಿಯಂತ್ರಣ, ಕೊಲೆಸ್ಟ್ರಾಲ್ ನಿಯಂತ್ರಿಸುವುದು, ರಕ್ತ ಹೆಪ್ಪುಗಟ್ಟುವಿಕೆ ತಡೆಯುವುದು, ಕ್ಯಾನ್ಸರ್ ತಡೆಯುವುದು, ಮೂಳೆ ಆರೋಗ್ಯದ ವೃದ್ಧಿ, ಸೋಂಕುಗಳಿಂದ ಮುಕ್ತಿ, ಕಣ್ಣಿನ ಆರೋಗ್ಯ ಸುಧಾರಣೆ, ಚರ್ಮದ ಆರೋಗ್ಯ ಸುಧಾರಣೆ, ಮೆದುಳಿನ ಆರೋಗ್ಯ ರಕ್ಷಣೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸುವುದು.

ಕಿತ್ತಳೆ ರಸವು ರಕ್ತದೊತ್ತಡದ ಮಟ್ಟವನ್ನು ಕಾಪಾಡುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕ್ಯಾನ್ಸರ್ ತಡೆಗಟ್ಟುವುದು, ಗ್ಯಾಸ್ಟ್ರಿಕ್ ಹುಣ್ಣುಗಳ ನಿವಾರಣೆ, ಮೂತ್ರಪಿಂಡದ ಕಲ್ಲು ತಡೆಯುವುದು, ಹೃದಯಘಾತದ ಅಪಾಯ ಕಡಿಮೆ ಮಾಡುವುದು ಹಾಗೂ ರಕ್ತ ಹೀನತೆಗೆ ಚಿಕಿತ್ಸೆ ನೀಡುವುದು.

ತೂಕ ಇಳಿಕೆಗೆ ಗಜರಿ ಮತ್ತು ಕಿತ್ತಳೆ ರಸ ತಯಾರಿಸುವುದು ಹೇಗೆ?

ಬೇಸಿಗೆಯ ಸಂದರ್ಭದಲ್ಲಿ ಹೆಚ್ಚು ದ್ರವ ಪದಾರ್ಥ ಹಾಗೂ ನೀರನ್ನು ಸೇವಿಸಬೇಕು. ಪ್ರತಿಬಾರಿಯೂ ಒಂದು ಗ್ಲಾಸ್ ನೀರನ್ನು ಸೇವಿಸುತ್ತಾ ಕುಳಿತುಕೊಳ್ಳುವುದು ಎಂದರೆ ಒಂದು ಬಗೆಯ ಬೇಸರ ಉಂಟಾಗುವುದು. ಹಾಗಾಗಿ ದ್ರವದ ಅವಶ್ಯಕತೆಯನ್ನು ಪೂರೈಸುವ ಆಂಟಿಆಕ್ಸಿಡೆಂಟ್ ಭರಿತ ರಸವನ್ನು ಸೇವಿಸುವುದರ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಜೊತೆಗೆ ನಾಲಿಗೆಯ ರುಚಿಯು ಉತ್ತಮಗೊಳ್ಳುವುದು.

ಗಜರಿ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ ತಯಾರಿಸಲು ಏನುಬೇಕು?

* ಗಜರಿ -2
* ಕಿತ್ತಳೆ -1
* ನಿಂಬೆ ಹಣ್ಣು (ನಿಮ್ಮ ಆಯ್ಕೆಗೆ ತಕ್ಕಂತೆ)
* ಸಿಪ್ಪೆ ತೆಗೆದ ಶುಂಠಿ - 1-2 ಇಂಚು
* ನೀರು -1/4 ಕಪ್

ವಿಧಾನ:

- ಗಜರಿ ಅಥವಾ ಕ್ಯಾರೆಟ್ ಮತ್ತು ಕಿತ್ತಳೆಯನ್ನು ನೀರಿನಲ್ಲಿ ತೊಳೆದುಕೊಳ್ಳಿ.
- ಗಜರಿಯ ಸಿಪ್ಪೆ ತೆಗೆದು ತುಂಡರಿಸಿ, ಮಿಕ್ಸರ್ ಪಾತ್ರೆಗೆ ಹಾಕಿ, ಹಾಗೆಯೇ ಕಿತ್ತಳೆ ಹಣ್ಣನ್ನು ಸಿಪ್ಪೆ ಬಿಡಿಸಿ ಮಿಕ್ಸಿಯಲ್ಲಿ ಹಾಕಿ.
- 1/4 ಕಪ್ ನೀರನ್ನು ಸೇರಿಸಿ.
- 2-3 ಹನಿ ನಿಂಬೆ ರಸವನ್ನು ಸೇರಿಸಿ.
- ಎಲ್ಲವನ್ನು ಒಟ್ಟಿಗೆ ಮೃದುವಾಗಿ ರುಬ್ಬಿ.
- ಮೃದುವಾದ ಪೇಸ್ಟ್‍ನಂತೆ ಆಗುವುದು.
- ನಂತರ ಸೂಕ್ಷ್ಮವಾದ ಜರಡಿ ಅಥವಾ ತೆಳುವಾದ ಕಾಟನ್ ಬಟ್ಟೆಯಲ್ಲಿ ಜರಡಿ ಹಿಡಿದು ರಸವನ್ನು ಬೇರ್ಪಡಿಸಿ, ಸೇವಿಸಿ.

ಎಚ್ಚರಿಕೆ:

ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದವರು ಗಜರಿ ಮತ್ತು ಕಿತ್ತಳೆ ರಸವನ್ನು ಅಥವಾ ಜ್ಯೂಸ್‍ಅನ್ನು ಸೇವಿಸದಿರಿ. ಇವುಗಳ ಸೇವನೆಯಿಂದ ಆರೋಗ್ಯ ಸಮಸ್ಯೆ
ದ್ವಿಗುಣವಾಗುವುದು. ಇಲ್ಲವೇ ಎದೆಯುರಿ, ಆಮ್ಲ ಹಿಮ್ಮುಖ, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆ ಸಂಭವಿಸಬಹುದು.

English summary

Carrot and Orange Juice Diet for Weight Loss

Who doesn't crave for natural homemade juices? Almost everyone does, given the fact that they are packed with valuable nutrients. However, when it comes to losing weight, there are many juices that can help speed up your weight loss. One of them is carrot and orange juice for weight loss. The wonderful combination of these two ingredients makes this juice a potent cleansing agent that will enhance your immunity while facilitating weight loss.
X
Desktop Bottom Promotion