ತೂಕ ಕಳೆದುಕೊಳ್ಳಲು ಎಲೆಕೋಸು ಮತ್ತು ಸೇಬಿನ ಜ್ಯೂಸ್

By Deepu
Subscribe to Boldsky

ಪ್ರತಿಯೊಬ್ಬರಿಗೂ ಫಿಟ್ ಆಗಿರಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇದರಿಂದಾಗಿ ಹೆಚ್ಚಿನ ಜನರು ಫಿಟ್ ಆಗಿರಲು ಸಾಕಷ್ಟು ಕಸರತ್ತುಗಳನ್ನು ನಡೆಸುವರು. ಇನ್ನು ಬೊಜ್ಜು ದೇಹದವರನ್ನು ಕೇಳುವುದೇ ಬೇಡ. ಅವರು ತಮ್ಮ ದೇಹ ತೂಕ ಇಳಿಸಲು ಇನ್ನಿಲ್ಲದ ಶ್ರಮ ವಹಿಸುವರು. ಆದರೆ ಆರೋಗ್ಯಕಾರಿ ಜೀವನಶೈಲಿ ಬೆಳೆಸಿಕೊಂಡು ಹೋದರೆ ಅದರಿಂದ ದೇಹವು ಫಿಟ್ ಆಗಿರುವುದು ಮತ್ತು ಆರೋಗ್ಯವು ಚೆನ್ನಾಗಿರುವುದು.

ದೇಹ ತೂಕ ಇಳಿಸಲು ನೀವು ಹಲವಾರು ವ್ಯಾಯಾಮ ಹಾಗೂ ಜ್ಯೂಸ್ ಗಳ ಬಗ್ಗೆ ಓದಿರಬಹುದು. ಈ ಲೇಖನದಲ್ಲಿ ನಿಮಗೆ ಎಲೆಕೋಸು ಮತ್ತು ಸೇಬಿನ ಜ್ಯೂಸ್ ನಿಂದ ದೇಹವನ್ನು ಫಿಟ್ ಆಗಿಡುವುದು ಹೇಗೆ ಎಂದು ತಿಳಿಸಿಕೊಡಲಿದ್ದೇವೆ. ಕುಂಬಳಕಾಯಿ ಮತ್ತು ಪಾಲಕ ಕೂಡ ಇದರೊಂದಿಗೆ ಬಳಸಬಹುದು.

ತೂಕ ಇಳಿಸಲು ಮತ್ತು ಹೊಟ್ಟೆಯ ಆರೋಗ್ಯಕ್ಕೆ ಎಲೆಕೋಸು-ಸೇಬಿನ ಜ್ಯೂಸ್‌ನ ಲಾಭಗಳು

ಎಲೆಕೋಸಿನಲ್ಲಿ ಆಹಾರದ ನಾರಿನಾಂಶವಿದೆ ಮತ್ತು ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆಯಿದೆ. ಇದರಿಂದ ಇದು ತೂಕ ಕಳೆದುಕೊಳ್ಳಲು ಅತ್ಯುತ್ತಮ ಪಾನೀಯ. ಒಂದು ಕಪ್ ಎಲೆಕೋಸಿನಲ್ಲಿ 22 ಕ್ಯಾಲರಿ ಮತ್ತು 0.09ನಷ್ಟು ಕೊಬ್ಬಿನಾಂಶವಿದೆ. ತಾಜಾ ಎಲೆಕೋಸಿನಿಂದ ಮಾಡಿರುವ ಜ್ಯೂಸ್ ನ್ನು ವಾರಕ್ಕೊಂದು ಸಲ ಕುಡಿದರೆ ಒಂದು ವರ್ಷದಲ್ಲಿ  ಸುಮಾರು 1.5 ಪೌಂಡ್ ನಷ್ಟು ತೂಕ ಕಡಿಮೆ ಮಾಡಬಹುದು.

Cabbage juice

ಇದರ ಜತೆಗೆ ಸೇಬನ್ನು ಸೇರಿಸಿದರೆ ಆಗ ಅದರ ಲಾಭವು ದುಪ್ಪಟ್ಟಾಗುವುದು. ಸೇಬಿನಲ್ಲಿ ಕೆಲವೊಂದು ರೀತಿಯ ಪೋಷಕಾಂಶಗಳು ಇರುವುದರಿಂದ ಇದು ತೂಕ ಇಳಿಸಲು ಸಹಕಾರಿ. ತೂಕ ಕಳೆದುಕೊಳ್ಳುವುದು ಮಾತ್ರವಲ್ಲದೆ, ಕ್ಯಾನ್ಸರ್, ಟೈಪ್-2 ಮಧುಮೇಹದ ಅಪಾಯ ತಗ್ಗಿಸುವುದು, ಪ್ರತಿರೋಧಕ ಶಕ್ತಿ ಹೆಚ್ಚಳ, ಮೂತ್ರದಲ್ಲಿನ ಕಲ್ಲು ತಡೆಯುವುದು. ಸೇಬಿನಲ್ಲಿ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಹಾರದ ನಾರಿನಾಂಶ ಹಾಗೂ ಫೈಥೋನ್ಯೂಟ್ರಿಯಂಟ್ಸ್ ಗಳಿವೆ. ಇದು ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಣ ದಲ್ಲಿಡುವುದು, ಮೆದುಳಿನ ಕ್ರಿಯೆ ಸರಾಗವಾಗಿಸುವುದು, ಹೃದಯದ ಆರೋಗ್ಯ ಕಾಪಾಡುವುದು ಮತ್ತು ಅಝೈಮರ್ ನಂತಹ ಕಾಯಿಲೆ ಹಾಗೂ ಮಧುಮೇಹ ತಡೆಗಟ್ಟುವುದು.

ಎಲೆಕೋಸಿನ ಜ್ಯೂಸ್ ನಲ್ಲಿ ಹಲವಾರು ರೀತಿಯ ವಿಟಮಿನ್ ಗಳು ಹಾಗೂ ಖನಿಜಾಂಶಗಳು ಇವೆ. ವಿಟಮಿನ್ ಸಿ, ಎ, ಬಿ1, ಬಿ2, ವಿಟಮಿನ್ ಬಿ6, ಇ, ವಿಟಮಿನ್ ಕೆ ಮತ್ತು ಖನಿಜಾಂಶಗಳಾದ ಕ್ಯಾಲ್ಸಿಯಂ, ಕಬ್ಬಿಣ, ಪೊಟಾಶಿಯಂ, ಐಯೋಡಿನ್, ಸಲ್ಫರ್ ಮತ್ತು ಫೋಸ್ಪರಸ್ ಇದೆ. ಎಲೆಕೋಸಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಸುಲ್ಫರಾಫಾನ್, ಐಸೋಥಿಯೋಸಯನೇಟ್ ಮತ್ತು ಇಂಡೊಲ್ -3-ಕಾರ್ಬಿನಾಲ್ ಎನ್ನುವ ಅಂಶವಿದೆ. ಇವುಗಳು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಕಾರ್ಯಕ್ಕೆ ವೇಗ ನೀಡುವುದು ಮತ್ತು ದೇಹದಲ್ಲಿ ವಿಷಕಾರಿ ಅಂಶ ಮತ್ತು ಹಾನಿಕಾರಕ ಹಾರ್ಮೋನುಗಳನ್ನು ಹೊರಹಾಕುವುದು.

ಎಲೆಕೋಸು ಮತ್ತು ಸೇಬಿನ ಜ್ಯೂಸ್ ಕರುಳಿನ ಮೇಲಿನ ಭಾಗವನ್ನು ಶುದ್ಧೀಕರಿಸಲು ತುಂಬಾ ಒಳ್ಳೆಯ ವಿಧಾನ. ಇದು ಜೀರ್ಣಕ್ರಿಯೆ ಸುಧಾರಿಸಿ, ತೂಕ ಇಳಿಸಲು ನೆರವಾಗುವುದು. ಕರುಳಿನಲ್ಲಿ ಅತಿಯಾಗಿ ಕಲ್ಮಷವು ತುಂಬಿದ್ದರೆ ಆಗ ಹೊಟ್ಟೆಯು ಭಾರವಾಗುವುದು. ಇದರಿಂದ ಎಲೆಕೋಸು ಮತ್ತು ಸೇಬಿನ ಜ್ಯೂಸ್ ಕುಡಿದರೆ ಹೊಟ್ಟೆ ಉಬ್ಬರ ಸಮಸ್ಯೆ ನಿವಾರಣೆಯಾಗುವುದು.

ತೂಕ ಇಳಿಸಲು ಎಲೆಕೋಸಿನ ಲಾಭಗಳು

ಎಲೆಕೋಸಿನಲ್ಲಿ ಸಣ್ಣ ಪ್ರಮಾಣದಲ್ಲಿ ಸೂಕ್ಷ್ಮಪೋಷಕಾಂಶಗಳು ಇವೆ. ಇದರಲ್ಲಿ ಕಬ್ಬಿಣ, ವಿಟಮಿನ್ ಎ ಮತ್ತು ರಿಬೊಫ್ಲಾವಿನ್ ಇದೆ. ಎಲೆಕೋಸಿನಲ್ಲಿ ವಿಟಮಿನ್ ಬಿ6 ಮತ್ತು ಫಾಲಟೆ ಇದ್ದು, ಇದು ಚಯಾಪಚಯಾ ಕ್ರಿಯೆಗೆ ಶಕ್ತಿ ತುಂಬುವುದು ಮತ್ತು ನರಗಳ ಕ್ರಿಯೆಯು ಸರಾಗವಾಗುವಂತೆ ಮಾಡುವುದು. ಹಲವಾರು ದಳಗಳನ್ನು ಹೊಂದಿರುವ ಎಲೆಕೋಸು ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ನಿಂದಾಗಿ ಕರುಳಿನ ಉರಿಯೂತ ನಿವಾರಣೆ ಮಾಡುವುದು.

ಎಲೆಕೋಸು ತಿನ್ನುವುದರಿಂದ ದೇಹದಲ್ಲಿರುವ ಕೆಲವೊಂದು ಉರಿಯೂತವನ್ನು ನಿವಾರಣೆ ಮಾಡಬಹುದು ಎಂದು ಅಧ್ಯಯನಗಳು ಕೂಡ ಹೇಳಿವೆ. ಎಲೆಕೋಸಿನಲ್ಲಿರುವ ವಿಟಮಿನ್ ಸಿ ಯಿಂದ ಚರ್ಮಕ್ಕೆ ಒಳ್ಳೆಯ ವಿನ್ಯಾಸ ಮತ್ತು ಸ್ಥಿತಿಸ್ಥಾಪಕತ್ವ ಸಿಗುವುದು. ವಿಟಮಿನ್ ಸಿ ಯಿಂದ ಮೂಳೆಗಳು, ಸ್ನಾಯುಗಳು ಮತ್ತು ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸುವುದು. ಆಂಥೋಸಿಯಾನ್ಸಿಸ್ ಎನ್ನುವ ಅಂಸವು ಹೃದಯ ಕಾಯಿಲೆಗಳನ್ನು ತಡೆಯುವುದು. ಎಲೆಕೋಸಿನಲ್ಲಿ ಉತ್ತಮ ಪ್ರಮಾಣದ ಶೇ.85ರಷ್ಟು ವಿಟಮಿನ್ ಕೆ1 ಇದೆ. ಈ ವಿಟಮಿನ್ ರಕ್ತ ಹೆಪ್ಪುಗಟ್ಟುವಿಕೆಗೆ ನೆರವಾಗುವ ಕಿಣ್ವಗಳಿಗೆ ಸಹಯೋಗಿಯಾಗಿ ಕೆಲಸ ಮಾಡುವುದು.

ತೂಕ ಕಳೆದುಕೊಳ್ಳಲು ಸೇಬಿನ ಜ್ಯೂಸ್‌ನ ಲಾಭಗಳು

ಸೇಬು ತಿಂದರೆ ನಿಮ್ಮ ನರಕೋಶಗಳ ಆರೋಗ್ಯವು ಚೆನ್ನಾಗಿರುವುದು ಮತ್ತು ಅಲ್ಝೈಮರ್ ನಂತಹ ರೋಗಗಳು ಬರದಂತೆ ತಡೆಯಬಹುದು. ವಯಸ್ಸಾದ ಮಹಿಳೆಯರು ದಿನಕ್ಕೆ ಒಂದು ಸೇಬು ತಿಂದರೆ ಅವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಶೇ.23ರಷ್ಟು ಕಡಿಮೆಯಾಗಿರುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಶೇ.4ರಷ್ಟು ಹೆಚ್ಚಾಗುವುದು. ಸೇಬಿನಲ್ಲಿ ಇರುವಂತಹ ಕೆಲವು ಜೈವಿಕ ಕ್ರಿಯೆ ಅಂಶಗಳು ಬೊಜ್ಜಿನ ಸಮಸ್ಯೆ ನಿವಾರಣೆ ಮಾಡುವುದು ಮತ್ತು ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.

ತೂಕ ಇಳಿಸಲು ಕುಂಬಳಕಾಯಿಯ ಲಾಭಗಳು

ಬೇಸಿಗೆಯಲ್ಲಿ ಹೆಚ್ಚಾಗಿ ಕಂಡುಬರುವಂತಹ ಕುಂಬಳಕಾಯಿಯಲ್ಲಿ ಕಡಿಮೆ ಕ್ಯಾಲರಿ, ನೈಸರ್ಗಿಕ ಸಕ್ಕರೆ ಮತ್ತು ಪಿಷ್ಠವಿದೆ. ಇದರಲ್ಲಿ ಒಳ್ಳೆಯ ಗುಣಮಟ್ಟದ ವಿಟಮಿನ್ ಎ, ಸಿ, ಪೊಟಾಶಿಯಂ ಮತ್ತು ನಾರಿನಾಂಶವಿದೆ. ಒಂದು ಮಧ್ಯಮ ಗಾತ್ರದ ಕುಂಬಳಕಾಯಿಯಲ್ಲಿ 33 ಕ್ಯಾಲರಿ, 0 ಕೊಬ್ಬು, 2 ಗ್ರಾಂ ನಾರಿನಾಂಶ, 5 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 2 ಗ್ರಾಂ ಪ್ರೋಟೀನ್, 3 ಗ್ರಾಂ ಸಕ್ಕರೆ, 3 ಮಿ.ಗ್ರಾಂ ವಿಟಮಿನ್ ಸಿ, ಮೆಗ್ನಿಶಿಯಂ, ರಿಬೊಫ್ಲಾವಿನ್, 4 ಮಿ.ಗ್ರಾಂ ವಿಟಮಿನ್ ಬಿ6, ಕೆ, 57 ಮಿ.ಗ್ರಾಂ ಫಾಲಟೆ ಮತ್ತು 514 ಮಿ.ಗ್ರಾಂ ಪೊಟಾಶಿಯಂ ಇದೆ.

ತೂಕ ಇಳಿಸಲು ಪಾಲಕ್ ನ ಲಾಭಗಳು

ಪಾಲಕ್ ಸೊಪ್ಪು ತುಂಬಾ ಆರೋಗ್ಯಕರಾರಿ ಸಸ್ಯ ತರಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಉನ್ನತ ಮಟ್ಟದ ಕಬ್ಬಿನಾಂಶ, ಕಡಿಮೆ ಕ್ಯಾಲರಿ ಮತ್ತು ಕೊಬ್ಬು ಇದೆ. ಇದು ತೂಕ ಕಳೆದುಕೊಳ್ಳಲು ಪರಿಣಾಮಕಾರಿ ಮತ್ತು ಕೊಬ್ಬು ಹೀರಿಕೊಳ್ಳುವ ಆಹಾರದ ನಾರಿನಾಂಶವಿದೆ. ಆಹಾರದ ನಾರಿನಾಂಶವು ಜೀರ್ಣಕ್ರಿಯೆ ಸುಧಾರಿಸುವುದು, ರಕ್ತದಲ್ಲಿನ ಸಕ್ಕರೆ ಮಟ್ಟ ತಗ್ಗಿಸುವುದು, ಮಲಬದ್ಧತೆ ನಿವಾರಣೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುವುದು.

ಎಲೆಕೋಸು ಮತ್ತು ಸೇಬಿನ ಜ್ಯೂಸ್ ಮಾಡಿಕೊಳ್ಳುವುದು ಹೇಗೆ?

ಬೇಕಾಗುವ ಸಾಮಗ್ರಿಗಳು

1 ಮಧ್ಯಮ ಗಾತ್ರದ ಎಲೆಕೋಸು

1 ಸೇಬು

1 ಕುಂಬಳಕಾಯಿ

200 ಗ್ರಾಂ ಪಾಲಕ್

ವಿಧಾನ

*ಎಲೆಕೋಸನ್ನು ಅರ್ಧ ಮಾಡಿಕೊಂಡು ಸಣ್ಣದಾಗಿ ಕತ್ತರಿಸಿಕೊಳ್ಳಿ.

*ಇದನ್ನು ಜ್ಯೂಸರ್‌ಗೆ ಹಾಕಿ.

*ಸೇಬಿನ ಸಣ್ಣ ತುಂಡುಗಳನ್ನು ಜ್ಯೂಸರ್‌ಗೆ ಹಾಕಿ.

*ಕುಂಬಳಕಾಯಿ ತುಂಡುಗಳನ್ನು ಹಾಕಿ.

*ಸ್ವಲ್ಪ ಪಾಲಕ ಸೊಪ್ಪನ್ನು ಜ್ಯೂಸರ್‌ಗೆ ಹಾಕಿ.

*ಅರ್ಧ ಕಪ್ ನಷ್ಟು ನೀರನ್ನು ಜ್ಯೂಸರ್‌ಗೆ ಹಾಕಿ.

*ಇದನ್ನು ಸೋಸಿಕೊಂಡು ಕುಡಿಯಿರಿ.

For Quick Alerts
ALLOW NOTIFICATIONS
For Daily Alerts

    English summary

    Cabbage-Apple Juice For Weight Loss And Gut Health

    Making wise and healthy lifestyle choices can definitely help you in losing weight and preventing obesity and other related diseases. Weight loss juices and drinks seem to be perfectly healthy, such as cabbage and apple juice for weight loss, which is discussed here. Cabbage and apple juice will not only provide your body with nutrients but will also deliver zero calories. This healthy juice also has other powerful and healthy ingredients like spinach and zucchini.
    Story first published: Thursday, May 24, 2018, 14:23 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more