For Quick Alerts
ALLOW NOTIFICATIONS  
For Daily Alerts

  ಪ್ರತಿದಿನ ಒಂದೆರಡು ಬಾಳೆ ಹಣ್ಣು ತಿಂದರೆ ಸಾಕು, ದೇಹದ ತೂಕ ಇಳಿಯುತ್ತೆ!

  |

  ವರ್ಷವಿಡೀ ಸುಲಭ ದರದಲ್ಲಿ, ಎಲ್ಲಾ ಕಡೆಗಳಲ್ಲಿ ಸಿಗುವ ಸುಲಭ ಆಹಾರವೆಂದರೆ ಬಾಳೆಹಣ್ಣು. ತೂಕ ಇಳಿಸುವವರಿಗೆ ಇದು ಸೂಕ್ತವಲ್ಲ ಎಂಬ ಹಣೆಪಟ್ಟಿಯನ್ನು ಪಡೆದಿದ್ದರೂ ವ್ಯಾಯಾಮದ ಬಳಿಕ ಸೇವಿಸಲು ಬಾಳೆಹಣ್ಣು ಉತ್ತಮವಾದ ಆಹಾರವೇ ಆಗಿದೆ. ಈ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಅವಶ್ಯಕ ವಿಟಮಿನ್ನುಗಳು, ಖನಿಜಗಳು, ಹಾಗೂ ಕರಗದ ನಾರು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ರಕ್ತದಲ್ಲಿ ಸಕ್ಕರೆ ಸೇರುವ ಗತಿಯನ್ನು ಸೂಚಿಸುವ ಗ್ಲೈಸೆಮಿಕ್ ಕೋಷ್ಟಕದಲ್ಲಿ ಕಡಿಮೆ ಮಾಪನವನ್ನೂ ಪಡೆದಿದೆ. ಅಲ್ಲದೇ ಜೀರ್ಣಗೊಳ್ಳುವ ಸಮಯದಲ್ಲಿ ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ತೂಕ ಇಳಿಕೆಗೂ ನೆರವಾಗುತ್ತದೆ.

  ಹೌದು, ನೀವು ಸರಿಯಾಗಿಯೇ ಓದಿದಿರಿ, ಬಾಳೆಹಣ್ಣು ತೂಕ ಇಳಿಸಲೂ ನೆರವಾಗುತ್ತದೆ. ಆದರೆ ಇದನ್ನು ತಿನ್ನಲು ಕೆಲವು ಸಮಯದ ಕಟ್ಟುಪಾಡುಗಳಿವೆ. ಸೂಕ್ತ ಸಮಯ ಯಾವುದು ಎಂಬುದನ್ನು ಇಂದಿನ ಲೇಖನದಲ್ಲಿ ಅರಿಯೋಣ. ಮುಂಜಾನೆಯ ಪ್ರಥಮ ಆಹಾರವಾಗಿ ಅಥವಾ ಉಪಾಹಾರದ ರೂಪದಲ್ಲಿ ಬಾಳೆಹಣ್ಣನ್ನು ಇನ್ನೊಂದು ಹಣ್ಣಿನೊಂದಿಗೆ ಸೇವಿಸುವ ಮೂಲಕ ಸಂಗ್ರಹವಾಗಿದ್ದ ಕೊಬ್ಬು ಕರಗಲು ಸಾಧ್ಯವಾಗುತ್ತದೆ.

  banana

  ವ್ಯಾಯಾಮಕ್ಕೂ ಕೊಂಚ ಹೊತ್ತಿನ ಮುನ್ನ ಸೇವಿಸಲು ಈ ಹಣ್ಣು ಅತ್ಯುತ್ತಮ ಆಯ್ಕೆಯಾಗಿದೆ ಹಾಗೂ ಇದರಲ್ಲಿ ತುಂಬಿರುವ ಪೋಷಕಾಂಶಗಳು ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಬಾಳೆಹಣ್ಣು ಅತಿ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರವಾಗಿದ್ದು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳುವವರಿಗೆ ಸೂಕ್ತವಾಗಿದೆ. ಆದರೆ ಕೊಬ್ಬನ್ನು ಕರಗಿಸಲು ಕೇವಲ ಒಂದೇ ಆಹಾರಕ್ಕೆ ಸಾಧ್ಯವಾಗುವುದಿಲ್ಲ.

  ಅದರಲ್ಲೂ ವಿಶೇಷವಾಗಿ ಕರಗಿಸಲು ಕಷ್ಟಸಾಧ್ಯವಾಗಿರುವ ಸೊಂಟದ ಕೊಬ್ಬನ್ನು ಕರಗಿಸಲು ಕ್ಯಾಲೋರಿಗಳನ್ನು ಬಳಸುವ ಕಾರ್ಯಕ್ರಮಗಳಿಗೆ ಅನಿವಾರ್ಯವಾಗಿ ಒಗ್ಗಿಕೊಳ್ಳಬೇಕಾಗುತ್ತದೆ. ದೈನಂದಿನ ಸರಾಸರಿಯನ್ನು ಪರಿಗಣಿಸಿದರೆ ಸೇವಿಸಿದ ಆಹಾರಕ್ಕಿಂತಲೂ 10-15% ರಷ್ಟು ಹೆಚ್ಚು ಕ್ಯಾಲೋರಿಗಳನ್ನು ಬಳಸುವ ಮೂಲಕ ತೂಕ ಯಾವುದೇ ಅಡ್ಡಪರಿಣಾಮವಿಲ್ಲದೇ ಇಳಿಯಲು ಸಾಧ್ಯವಾಗುತ್ತದೆ.

  banana

  ಅಷ್ಟಕ್ಕೂ ತೂಕ ಇಳಿಕೆಗೆ ಬಾಳೆಹಣ್ಣನ್ನೇಕೆ ಸೇವಿಸಬೇಕು?

  ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಕಾರ್ಬೋಹೈಡ್ರೇಟುಗಳು, ವಿಟಮಿನ್ನುಗಳು, ಕರಗದ ನಾರು, ಖನಿಜಗಳು ಹಾಗೂ ಶಕ್ತಿ ತುಂಬಿವೆ. ಯಾವುದೇ ವಯಸ್ಸಿನವರೂ ಈ ಹಣ್ಣನ್ನು ಯಾವುದೇ ಅಳುಕಿಲ್ಲದೇ ಸೇವಿಸಬಹುದು. ಸುಮಾರು ನೂರು ಗ್ರಾಂ ಬಾಳೆಹಣ್ಣಿನ ಸೇವನೆಯಿಂದ ಸುಮಾರು 90 ಕ್ಯಾಲೋರಿಗಳು ಲಭಿಸುತ್ತವೆ ಎಂದು ಕಂಡುಕೊಳ್ಳಲಾಗಿದೆ.

  ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

  ಬಾಳೆಹಣ್ಣಿನಲ್ಲಿರುವ ಆರೋಗ್ಯಕರ ಕಾರ್ಬೋಹೈಡ್ರೇಟುಗಳು ವ್ಯಕ್ತಿಯನ್ನು ಚುರುಕಾಗಿರಿಸಲು ಹಾಗೂ ದೈನಂದಿನ ಚಟುವಟಿಕೆಗಳಿಗಾಗಿ ಹೆಚ್ಚಿನ ಶಕ್ತಿಯನ್ನು ಒದಗಿಸಲು ನೆರವಾಗುತ್ತವೆ. ಇದರಲ್ಲಿ ಅಧಿಕ ಪ್ರಮಾಣದ ಪೊಟ್ಯಾಶಿಯಂ ಇರುವ ಕಾರಣ ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ರಕ್ಷಿಸುತ್ತದೆ ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ತೂಕದ ಹೆಚ್ಚಳದಿಂದ ರಕ್ಷಿಸುತ್ತದೆ.

  banana

  ಇವೆಲ್ಲದರ ಹೊರತಾಗಿ ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಬಿ6 ಸಹಾ ಇದೆ. ಅಲ್ಲದೇ ಇದರಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ರಾಸಾಯನಿಕ ಖಿನ್ನತೆಯಿಂದ ಹೊರಬರಲೂ ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬಾಳೆಹಣ್ಣಿನಲ್ಲಿರುವ ಕಬ್ಬಿಣದ ಅಂಶ ಮಲಬದ್ಧತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಔಷಧಿಯಂತೆ ಪರಿಣಮಿಸುತ್ತದೆ. ಬಾಳೆಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ಶ್ರಮದಾಯಕ ವ್ಯಾಯಾಮದ ಬಳಿಕ ದೇಹ ಕಳೆದುಕೊಂಡಿದ್ದ ಶಕ್ತಿಯನ್ನು ಮರುಪೂರೈಸಲು ನೆರವಾಗುತ್ತದೆ. ಅಲ್ಲದೇ ವ್ಯಾಯಾಮಕ್ಕೂ ಮುನ್ನ ಸೇವಿಸಿದ ಬಾಳೆಹಣ್ಣು ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನೂ ಒದಗಿಸುತ್ತದೆ.

  ಬಾಳೆಹಣ್ಣು ಸೇವಿಸುವ ಸೂಕ್ತ ಸಮಯ ಯಾವುದು?

  ಎಲ್ಲಾ ವಯೋಮಾನದವರು ಸುರಕ್ಷಿತವಾಗಿ ಸೇವಿಸಬಹುದಾದ ಈ ಸುಲಭ ಆಹಾರವನ್ನು ಪ್ರತಿದಿನ ಬೆಳಿಗ್ಗೆ ಇತರ ಹಣ್ಣುಗಳು ಅಥವಾ ಓಟ್ಸ್ ನೊಂದಿಗೆ ಸೇವಿಸಬೇಕು. ಇದು ತೂಕ ಇಳಿಸುವ ಇರಾದೆಯವರಿಗೆ ಸೂಕ್ತವಾದ ಉಪಾಹಾರವಾಗಿದೆ. ಇದರ ಪ್ರಯೋಜನವನ್ನು ಒಮ್ಮೆಲೇ ಕಂಡುಕೊಳ್ಳಲು ಸಾಧ್ಯವಿಲ್ಲ, ಬದಲಿಗೆ ನಿತ್ಯವೂ ಸೇವಿಸುವ ಮೂಲಕ ಕ್ರಮೇಣವಾಗಿ ಇದರ ಪ್ರಯೋಜನವನ್ನು ಕಂಡುಕೊಳ್ಳಬಹುದು. ಬಾಳೆಹಣ್ಣನ್ನು ಹಾಗೇ ಸೇವಿಸಬಹುದು ಅಥವಾ ಇತರ ರುಚಿಕರ ಖಾದ್ಯಗಳ ರೂಪದಲ್ಲಿಯೂ ಸೇವಿಸಬಹುದು. ಹಣ್ಣಿನ ತಿರುಳು ಮಾತ್ರವಲ್ಲ, ಇದರ ಸಿಪ್ಪೆಯಲ್ಲಿಯೂ ಕೆಲವು ಪೋಷಕಾಂಶಗಳಿದ್ದು ತ್ವಚೆಯ ಆರೋಗ್ಯ ಹೆಚ್ಚಿಸುತ್ತವೆ.

  banana milk juice

  ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ರಾತ್ರಿ ಮಲಗುವ ಮುನ್ನ ತ್ವಚೆಗೆ ಹಚ್ಚಿಕೊಂಡು ರಾತ್ರಿಯಿಡೀ ಹಾಗೇ ಬಿಡಬೇಕು. ಬೆಳಿಗ್ಗೆದ್ದ ಬಳಿಕ ತ್ವಚೆಯ ಕಾಂತಿ ಹೆಚ್ಚಿರುವುದನ್ನು ಗಮನಿಸಬಹುದು ಹಾಗೂ ಮೊಡವೆಗಳೂ ಮಾಯವಾಗುತ್ತಿರುವುದನ್ನೂ ಗಮನಿಸಬಹುದು. ಹಲವಾರು ಆರೋಗ್ಯಕರ ಪ್ರಯೋಜನಗಳ ಜೊತೆಗೇ ಇದು ಸೌಂದರ್ಯವನ್ನೂ ವೃದ್ಧಿಸುತ್ತದೆ. ಆದರೆ ಈ ಗುಣಗಳನ್ನು ಪಡೆಯಬೇಕಾದರೆ ಸೇವನೆಯ ಪ್ರಮಾಣವೂ ಮಿತವಾಗಿರಬೇಕು. ಇಲ್ಲದಿದ್ದರೆ ತೂಕ ಇಳಿಯುವ ಬದಲು ಹೆಚ್ಚುವ ಅಪಾಯವಿದೆ!

  ಬಾಳೆಹಣ್ಣಿನ ಊಟ

  ಇಂದು ಮಾರುಕಟ್ಟೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಬಗೆಯ ಬಾಳೆಹಣ್ಣುಗಳು ಲಭ್ಯವಿವೆ. ಹಸಿರು ಬಾಳೆಗಳಲ್ಲಿ ಹೆಚ್ಚಿನ ಪಿಷ್ಟವಿದೆ. ಚೆನ್ನಾಗಿ ಹಣ್ಣಾದ ಬಾಳೆಹಣ್ಣಿನಲ್ಲಿ ಸೂಕ್ತ ಪ್ರಮಾಣದ ಸಕ್ಕರೆ ಇರುವ ಕಾರಣ ಹೆಚ್ಚಿನ ಶಕ್ತಿ ಬೇಡುವ ಕೆಲಸ ಸುಲಭವಾಗುತ್ತದೆ. ಅಲ್ಲದೇ ಬಾಳೆಹಣ್ಣಿನಲ್ಲಿ ವಿಟಮಿನ್ನು, ಖನಿಜಗಳ ಜೊತೆಗೇ ಉತ್ತಮ ಪ್ರಮಾಣದ ಕ್ಯಾಟೆಚಿನ್ ಹಾಗೂ ಡೋಪಮೈನ್ ಎಂಬ ಆಂಟಿ ಆಕ್ಸಿಡೆಂಟುಗಳೂ ಇವೆ. ಇವು ವ್ಯಾಯಾಮದ ಸಮಯದಲ್ಲಿ ಅಗತ್ಯವಾದ ಪೋಷಣೆಯನ್ನು ಒದಗಿಸುತ್ತವೆ.

  ಈ ಮೊದಲೇ ತಿಳಿಸಿದಂತೆ ಬಾಳೆಹಣ್ಣನ್ನು ಸೇವಿಸಲು ಉತ್ತಮವಾದ ಹೊತ್ತು ಎಂದರೆ ಮುಂಜಾನೆ. ಉಪಾಹಾರದಲ್ಲಿ ಸೇವಿಸುವ ಬಾಳೆಹಣ್ಣು ಹೆಚ್ಚಿನ ಸಮಯದವೆರೆಗೆ ಹೊಟ್ಟೆ ತುಂಬಿದಂತಹ ಭಾವನೆಯನ್ನು ಮೂಡಿಸಿ ಹಸಿವಾಗದಂತೆ ತಡೆಯುತ್ತದೆ. ಅಲ್ಲದೇ ಇರದಲ್ಲಿರುವ ಕರಗನ ನಾರು ಇಡಿಯ ದಿನ ದೇಹದ ಅಂಗಗಳು ಪೂರ್ಣಕ್ಷಮತೆಯಿಂದ ತಮ್ಮ ಕೆಲಸ ನಿರ್ವಹಿಸಲು ನೆರವಾಗುತ್ತದೆ.

  banana

  ಉಪಾಹಾರಕ್ಕಾಗಿ ಚೆನ್ನಾಗಿ ಕಳಿತ, ಅಂದರೆ ಸಿಪ್ಪೆಯಲ್ಲಿ ಚುಕ್ಕೆಗಳು ಬಂದಿರುವ ಒಂದು ದೊಡ್ಡ ಅಥವಾ ಎರಡು ಚಿಕ್ಕ ಬಾಳೆಹಣ್ಣುಗಳನ್ನು ಸೇವಿಸಬಹುದು. ಬದಲಿಗೆ ಒಂದು ಬೋಗುಣಿಯಲ್ಲಿ ಅರ್ಧಭಾಗ ಹಾಲು ತುಂಬಿ ಇದರಲ್ಲಿ ಕಾರ್ನ್ ಪ್ಲೇಕ್ಸ್ ಅಥವಾ ಮೆಕ್ಕೆಜೋಳದ ಹುರಿ ಹಾಗೂ ಚಿಕ್ಕದಾಗಿ ಕತ್ತರಿಸಿದ ಬಾಳೆಹಣ್ಣುಗಳನ್ನು ಹಾಕಿ ಉಪಾಹಾರದ ರೂಪದಲ್ಲಿ ಸೇವಿಸಬಹುದು. ಅಥವಾ ಕೊಂಚ ಓಟ್ಸ್ ರವೆಯನ್ನೂ ಬೆರೆಸಿ ಇನ್ನಷ್ಟು ರುಚಿಕರವಾಗಿಸಬಹುದು.

  ಬೆಳಗ್ಗಿನ ಹೊತ್ತಿನಲ್ಲಿ ಒಂದು ಲೋಟ ಹಾಲು, ಕೆಲವು ರಾತ್ರಿಯಿಡೀ ತಣ್ಣೀರಿನಲ್ಲಿ ನೆನೆಸಿಟ್ಟಿದ್ದ ಬಾದಾಮಿ ಹಾಗೂ ಕೊಂಚ ಓಟ್ಸ್ ರವೆ, ಒಂದು ಚೆನ್ನಾಗಿ ಹಣ್ಣಾದ ಬಾಳೆಹಣ್ಣು ಹಾಗೂ ಒಂದು ಬೇಯಿಸಿದ ಮೊಟ್ಟೆಯನ್ನು ಸೇವಿಸಬಹುದು. ಇದೊಂದು ಪರಿಪೂರ್ಣವಾದ ಉಪಾಹಾರವಾಗಿದ್ದು ದಿನದ ಹೆಚ್ಚಿನ ಹೊತ್ತು ಹೊಟ್ಟೆ ತುಂಬಿರುವಂತೆ ಮಾಡುತ್ತದೆ ಹಾಗೂ ಅಗತ್ಯ ಶಕ್ತಿಯನ್ನು ಒದಗಿಸುತ್ತದೆ.

  ಇದರ ಹೊರತಾಗಿ ಒಂದು ಬಾಳೆಹಣ್ಣನ್ನು ಕೊಂಚ ಹಾಲಿನೊಂದಿಗೆ ಗೊಟಾಯಿಸಿ ಮೊಸರು ಬೆರೆಸಿಯೂ ಸೇವಿಸಬಹುದು. ಇನ್ನೊಂದು ವಿಧಾನದಲ್ಲಿ ಬಾಳೆಹಣ್ಣನ್ನು ಅರೆದು ತಯಾರಿಸಿದ ಹಿಟ್ಟಿನಲ್ಲಿ ದೋಸೆಯನ್ನು ತಯಾರಿಸಿ ಇದರ ಮೇಲೆ ಒಂದು ಚಮಚ ಜೇನು ಸವರಿ ಮುಂಚಾನೆಯ ಉಪಾಹಾರ ಅಥವಾ ಸಂಜೆಯ ತಿಂಡಿಯ ರೂಪದಲ್ಲಿ ಸೇವಿಸಬಹುದು. ಒಂದು ವೇಳೆ ನೀವು ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಿದ್ದರೆ ನೀವು ಹಣ್ಣುಗಳ ಸಾಲಾಡ್ ತಯಾರಿಸಿ ಮಧ್ಯಾಹ್ನದ ಊಟದ ಬದಲಿಗೂ ಸೇವಿಸಬಹುದು.

  banana salad

  ಸಿಹಿಪದಾರ್ಥಗಳಿಗಾಗಿ ಬಾಳೆಹಣ್ಣಿನ ಪುಡ್ಡಿಂಗ್ ಅಥವಾ ಬಾಳೆಹಣ್ಣಿನ ಕಸ್ಟರ್ಡ್ ಮಾಡಿ ಸೇವಿಸಬಹುದು. ಈ ತಿಂಡಿಗಳನ್ನು ಮಕ್ಕಳು ಬಹಳವೇ ಇಷ್ಟಪಡುತ್ತಾರೆ. ಆದ್ದರಿಂದ ಕೊಬ್ಬು ಕರಗಿಸುವ ಮೂಲಕ ತೂಕ ಇಳಿಸಲು ಹಾಗೂ ಸುಂದರ ಅಂಗಸೌಷ್ಟವ ಪಡೆಯಲು ಬಾಳೆಹಣ್ಣಿನ ಉಪಾಹಾರ ನೆರವಾಗುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ...

  ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

  English summary

  Best Time To Eat Banana For Weight Loss

  Bananas can indeed help in promoting weight loss. So, today we shall talk about the best time to eat a banana for weight loss. Having bananas during the morning hours along with some other fruit or oatmeal or preferably for breakfast can help in burning down the stored fat. It is an excellent pre-gym snack with loads of goodness. Bananas are healthy and nutritious foods which form a part of the weight loss program, but no particular food alone can break down the fats.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more