For Quick Alerts
ALLOW NOTIFICATIONS  
For Daily Alerts

ಹೊಟ್ಟೆಯ ಬೊಜ್ಜು ಕರಗಿಸುವ 'ಹಣ್ಣುಗಳು'- ರಿಸಲ್ಟ್ ಗ್ಯಾರಂಟಿ...

By Arshad
|

ತೂಕ ಇಳಿಸಲು ಸೂಕ್ತವಾದ ಆಹಾರವೆಂದರೆ ಹಣ್ಣು ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳು. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ, ಕೊಬ್ಬನ್ನು ದಹಿಸುವ ಆಹಾರಗಳ ಪೈಕಿ ಹಣ್ಣುಗಳು ಪ್ರಮುಖವಾಗಿದ್ದು ಇದಕ್ಕೆ ಕಾರಣ ಆಂಥೋಸೈಯಾನಿನ್ ಎಂಬ ಫ್ಲೇವನಾಯ್ಡ್ ಆಗಿದೆ. ಇವು ಆಯಾ ಹಣ್ಣುಗಳಿಗೆ ವಿಶಿಷ್ಟ ಬಣ್ಣವನ್ನು ನೀಡುವ ಜೊತೆಗೇ ಕೊಬ್ಬುರಹಿತವಾಗಿದ್ದು ಇವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಸಂಗ್ರಹಗೊಂಡಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುವುದೇ ತೂಕ ಇಳಿಕೆಯ ಗುಟ್ಟಾಗಿದೆ. ಆಶ್ಚರ್ಯಕರ, ಅಲ್ಲವೇ?

ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಆಹಾರದ ರೂಪದಲ್ಲಿ ಹಣ್ಣುಗಳನ್ನು ಸೇವಿಸುವುದು ಒಂದು ಅದ್ಬುತವಾದ ಪರ್ಯಾಯವಾಗಿದೆ ಹಾಗೂ ಆಹಾರದ ಮೂಲಕ ಪಡೆಯಬಹುದಾದ ಎಲ್ಲಾ ಪೋಷಕಾಂಶಗಳನ್ನು ಮತ್ತು ಕ್ಯಾಲೋರಿಗಳನ್ನು ಇವುಗಳಿಂದ ಪಡೆಯಬಹುದು. ಕೆಲವು ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದ್ದು ಇದರ ಸೇವನೆಯಿಂದ ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತಿದ್ದು ಅನಗತ್ಯ ಆಹಾರ ಸೇವನೆಯಿಂದ ತಡೆಯುವ ಮೂಲಕವೂ ತೂಕ ಇಳಿಕೆಗೆ ನೆರವಾಗುತ್ತದೆ.

ಇತ್ತೀಚಿನ ಅಧ್ಯಯನಗಳಲ್ಲಿ ಕಂಡುಕೊಂಡಂತೆ ಕೆಲವು ವಿಶಿಷ್ಟ ಹಣ್ಣುಗಳನ್ನು ಆಹಾರದ ರೂಪದಲ್ಲಿ ಸೇವಿಸುವ ಮೂಲಕ ಕರಗಿಸಲು ಕಷ್ಟಕರವಾದ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ ಹಾಗೂ ತೂಕ ಇಳಿಕೆಯ ಹಾದಿಯನ್ನು ಇನ್ನಷ್ಟು ಸುಗಮವಾಗಿಸುತ್ತದೆ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಸಮಯದಲ್ಲಿ ಹಾಗೂ ಸಂಜೆಯ ತಿಂಡಿಯ ವೇಳೆಯಲ್ಲಿಯೂ ಈ ರುಚಿಕರ ಹಣ್ಣುಗಳನ್ನು ಸೇವಿಸಬಹುದು. ಬನ್ನಿ, ಸೊಂಟದ ಕೊಬ್ಬನ್ನು ಕರಗಿಸಲು ನೆರವಾಗುವ ಈ ಹಣ್ಣುಗಳು ಯಾವುವು ಎಂಬುದನ್ನು ನೋಡೋಣ

1. ಬೆರ್ರಿ ಹಣ್ಣುಗಳು

1. ಬೆರ್ರಿ ಹಣ್ಣುಗಳು

ಸ್ಟ್ರಾಬೆರಿ, ರಾಸ್ಪ್ರೆರಿ, ಬ್ಲೂಬೆರಿ ಮೊದಲಾದ ಹಣ್ಣುಗಳಲ್ಲಿ ಪಾಲಿಫೆನಾಲ್ ಗಳು ಸಮೃದ್ದವಾಗಿವೆ. ಇವು ಕೊಂಚ ಹುಳಿಯಾದ ರುಚಿಯನ್ನು ಹೊಂದಿದ್ದು ತೂಕ ಇಳಿಸಲು ನೆರವಾಗುವ ಅದ್ಭುತ ನೈಸರ್ಗಿಕ ರಾಸಾಯನಿಕಗಳಾಗಿವೆ. ತೂಕ ಇಳಿಕೆಯ ವಿಷಯದಲ್ಲಿ ಬ್ಲೂಬೆರಿ ಹಣ್ಣುಗಳು ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಗರಿಷ್ಟ ಪ್ರಮಾಣದಲ್ಲಿವೆ ಹಾಗೂ ಇವುಗಳ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆಯೂ ಚುರುಕುಗೊಳ್ಳುತ್ತದೆ. ತನ್ಮೂಲಕ ಹೆಚ್ಚಿನ ಕ್ಯಾಲೋರಿಗಳನ್ನು ದಹಿಸಿ ತೂಕ ಇಳಿಸಲು ನೆರವಾಗುತ್ತದೆ.

2. ಚಕ್ಕೋತ (Grapefruit)

2. ಚಕ್ಕೋತ (Grapefruit)

ಚಕ್ಕೋತವನ್ನು ನಿತ್ಯವೂ ಸೇವಿಸುವ ಮೂಲಕ ತೂಕ ಇಳಿಕೆಯ ಹಾದಿ ಇನ್ನಷ್ಟು ಸುಗಮವಾಗುತ್ತದೆ. ಇದರಲ್ಲಿ ಹೆಚ್ಚಿನ ನೀರಿನ ಅಂಶವಿದೆ ಹಾಗೂ ದೇಹದ ಕಲ್ಮಶಗಳನ್ನು ನಿವಾರಿಸಲು ಈ ಹಣ್ಣಿನ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ದೇಹದ ನೀರಿನ ಅಗತ್ಯತೆಯನ್ನು ಪೂರೈಸುತ್ತದೆ ಹಾಗೂ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯುವ ಮೂಲಕ ಅನಗತ್ಯ ಆಹಾರಸೇವನೆಗೆ ಕಡಿವಾಣ ಹಾಕುತ್ತದೆ. ಈ ಹಣ್ಣಿನಲ್ಲಿರುವ ಕೆಲವು ಕಿಣ್ವಗಳನ್ನು ಜೀರ್ಣಿಸಿಕೊಳ್ಳಲು ಅತಿಯಾದ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುವ ಮೂಲಕ ಸೊಂಟದ ಕೊಬ್ಬು ಶೀಘ್ರವಾಗಿ ಕಡಿಮೆಯಾಗುತ್ತದೆ.

3. ಬೆಣ್ಣೆಹಣ್ಣು

3. ಬೆಣ್ಣೆಹಣ್ಣು

ಈ ಹಣ್ಣುಗಳಲ್ಲಿ ಹಲವಾರು ಪೋಷಕಾಂಶಗಳಿದ್ದು ಸೊಂಟದ ಕೊಬ್ಬು ಕರಗಿಸಲು ಸಮರ್ಥವಾಗಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಒಮೆಗಾ ೬ ಕೊಬ್ಬಿನ ಆಮ್ಲಗಳಿವೆ. ಇವು ಅಪರ್ಯಾಪ್ತ ಕೊಬ್ಬುಗಳಾಗಿದ್ದು ಆರೋಗ್ಯಕರ ಕೊಬ್ಬುಗಳೆಂದು ಪರಿಗಣಿಸಲಾಗಿದೆ. ದೇಹ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಕಾರ್ಯವನ್ನು ಬೆಣ್ಣೆಹಣ್ಣು ತೀವ್ರಗೊಳಿಸುತ್ತದೆ ಹಾಗೂ ಈ ಮೂಲಕ ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಿ ತೂಕ ಇಳಿಕೆಗೆ ನೆರವಾಗುತ್ತದೆ.

4. ಸೇಬುಹಣ್ಣು:

4. ಸೇಬುಹಣ್ಣು:

ಸೇಬುಹಣ್ಣುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಹಾಗೂ ಪಾಲಿಫೆನಾಲುಗಳಿವೆ ಹಾಗೂ ಇವು ಜೀವ ರಾಸಾಯನಿಕ ಕ್ರಿಯೆಯನ್ನು ತೀವ್ರಗೊಳಿಸುತ್ತವೆ. ವಿಶೇಷವಾಗಿ ಸೇಬಿನ ಸಿಪ್ಪೆಯಲ್ಲಿ ಕೊಬ್ಬು ಕರಗಿಸಲು ನೆರವಾಗುವ ಪೋಷಕಾಂಶಗಳಿವೆ. ಅಲ್ಲದೇ ಸೇಬುಗಳಲ್ಲಿರುವ amylase inhibitors ಎಂಬ ಪೋಷಕಾಂಶಗಳು ಕರುಳಿನಿಂದ ಅಗತ್ಯಕ್ಕೂ ಹೆಚ್ಚಿನ ಸಕ್ಕರೆ ಮತ್ತು ಪಿಷ್ಟವನ್ನು ಹೀರಿಕೊಳ್ಳದಂತೆ ತಡೆಯುವ ಮೂಲಕ ತೂಕ ಏರುವುದನ್ನು ತಡೆಯುತ್ತದೆ.

5. ತೆಂಗಿನ ಕಾಯಿ

5. ತೆಂಗಿನ ಕಾಯಿ

ತೆಂಗಿನ ಕಾಯಿ ನಮ್ಮ ಅಡುಗೆಗಳಲ್ಲಿ ಹೆಚ್ಚು ಬಳಸಲ್ಪಡುವ ಸಾಮಾಗ್ರಿಯಾಗಿದ್ದು ಹಸಿಯಾಗಿ ತಿನ್ನಲೂ ಯೋಗ್ಯವಾಗಿದೆ. ಒಂದು ವೇಳೆ ಎರಡು ಹೊತ್ತಿನ ಊಟಗಳ ನಡುವೆ ಏನಾದರೂ ತಿನ್ನುವ ಬಯಕೆಯುಂಟಾದಾಗ ಕೊಂಚ ತೆಂಗಿನ ತುರಿಯನ್ನು ತಿನ್ನುವ ಮೂಲಕ ಈ ಬಯಕೆಯನ್ನು ಪೂರೈಸಿಕೊಳ್ಳಬಹುದು ಹಾಗೂ ಅತಿ ಕಡಿಮೆ ಕ್ಯಾಲೋರಿಗಳನ್ನು ಹೊಂದುವ ಮೂಲಕ ತೂಕ ಹೆಚ್ಚಳಕ್ಕೆ ಕಡಿವಾಣ ಹಾಕಬಹುದು. ತೆಂಗಿನಲ್ಲಿ ಮಧ್ಯಮ-ಸಂಕಲೆಯ-ಟ್ರೈಗ್ಲಿಸರೈಡ್ ಗಳಿವೆ. ಇವು ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಲು ನೆರವಾಗುತ್ತವೆ.

6. ದಾಳಿಂಬೆ

6. ದಾಳಿಂಬೆ

ದಾಳಿಂಬೆಗಳಲ್ಲಿ ಪಾಲಿಫೆನಾಲ್ ಗಳು ಉತ್ತಮ ಪ್ರಮಾಣದಲ್ಲಿವೆ ಹಾಗೂ ಇವು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಆಂಟಿ ಆಕ್ಸಿಡೆಂಟುಗಳೂ ಆಗಿವೆ. ಈ ಹಣ್ಣುಗಳು ಹಸಿವನ್ನು ನಿಗ್ರಹಿಸುತ್ತವೆ ಹಾಗೂ ನಡುನಡುವೆ ಹಸಿವಾಗುವುದನ್ನು ತಪ್ಪಿಸಿ ಸೊಂಟದ ಕೊಬ್ಬು ಏರದಂತೆ ತಡೆಯುತ್ತದೆ. ಉತ್ತಮ ಪರಿಣಾಮಕ್ಕಾಗಿ ದಾಳಿಂಬೆ ಹಣ್ಣಿನ ರಸವನ್ನು ಬೆಳಗ್ಗಿನ ಉಪಾಹಾರದೊಂದಿಗೆ ಸೇವಿಸಬಹುದು ಅಥವಾ ನಿತ್ಯದ ಸಾಲಾಡ್ ನೊಂದಿಗೂ ಬೆರೆಸಿ ಸೇವಿಸಬಹುದು.

7. ಚೆರ್ರಿ ಹಣ್ಣುಗಳು (Tart Cherries)

7. ಚೆರ್ರಿ ಹಣ್ಣುಗಳು (Tart Cherries)

ಈ ಪುಟ್ಟ ಹಣ್ಣುಗಳನ್ನು ಸೇವಿಸುವ ಮೂಲಕ ತೂಕವನ್ನು ಇಳಿಸುವ ಜೊತೆಗೇ ಹೃದಯದ ಆರೋಗ್ಯವನ್ನೂ ಉತ್ತಮಗೊಳಿಸಬಹುದು. ಇದರಲ್ಲಿ ಆಂಟಿ ಆಕ್ಸಿಡೆಂಟುಗಳ ಮಟ್ಟ ಹಾಗೂ ಪೋಷಕಾಂಶಗಳ ಪ್ರಮಾಣವೂ ಅಧಿಕವಾಗಿದೆ. ಇವುಗಳ ಸೇವನೆಯಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿದಂತಿರುತ್ತದೆ. ಪರಿಣಾಮವಾಗಿ ತೂಕ ಇಳಿಕೆಗೆ ನೆರವಾಗುತ್ತದೆ. ನಿಯಮಿತವಾಗಿ ಈ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಸೆಳೆತವೂ ಹೆಚ್ಚುತ್ತದೆ ಹಾಗೂ ವೃದ್ದಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ.

8. ಲಿಂಬೆ

8. ಲಿಂಬೆ

ಲಿಂಬೆರಸ ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಮತ್ತು ಕೊಬ್ಬನ್ನು ನಿವಾರಿಸಲು ಅತ್ಯುತ್ತಮವಾದ ಆಹಾರವಾಗಿದೆ. ವಿಶೇಷವಾಗಿ ಯಕೃತ್ ನಲ್ಲಿರುವ ಕಲ್ಮಶಗಳನ್ನಿ ನಿವಾರಿಸುತ್ತದೆ ಹಾಗೂ ಆಹಾರವನ್ನು ಜೀರ್ಣಿಸಿಕೊಳ್ಳಲು ಕೊಬ್ಬನ್ನು ಹೆಚ್ಚಾಗಿ ಬಳಸಿಕೊಳ್ಳುವ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ. ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಿಕ್ಕ ಚಮಚ ಜೇನು ಮತ್ತು ಒಂದು ಲಿಂಬೆಯ ರಸವನ್ನು ಮಿಶ್ರಣ ಮಾಡಿ ಬೆಳಗ್ಗಿನ ಮೊದಲ ಆಹಾರವಾಗಿ ಸೇವಿಸಿದರೆ ಹೊಟ್ಟೆಯ ಕೊಬ್ಬು ಶೀಘ್ರವಾಗಿ ಕರಗುತ್ತದೆ.

9. ಕಲ್ಲಂಗಡಿ

9. ಕಲ್ಲಂಗಡಿ

ಕಲ್ಲಂಗಡಿ ಹಣ್ಣುಗಳಲ್ಲಿಯೂ ಹೆಚ್ಚಿನ ತೂಕವನ್ನು ಇಳಿಸುವ ಪೋಶಕಾಂಶಗಳಿವೆ. ಅಲ್ಲದೇ ಇದರಲ್ಲಿ ನೀರಿನ ಪ್ರಮಾಣ ಅತ್ಯಧಿಕವಾಗಿದ್ದು ದೇಹದಿಂದ ಕಲ್ಮಶಗಳನ್ನು ನಿವಾರಿಸಲು ಹಾಗೂ ಹೆಚ್ಚು ಹೊತ್ತು ಹಸಿವಾಗದಂತೆ ತಡೆಯಲು ಸಮರ್ಥವಾಗಿವೆ. ಒಂದು ವೇಳೆ ಸೊಂಟದ ಕೊಬ್ಬನ್ನು ನಿವಾರಿಸುವುದು ನಿಮ್ಮ ಮುಖ್ಯ ಉದ್ದೇಶವಾಗಿದ್ದರೆ ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸಲು ಇಂದೇ ಪ್ರಾರಂಭಿಸಿ.

10. ಪೀಚ್ ಹಣ್ಣುಗಳು:

10. ಪೀಚ್ ಹಣ್ಣುಗಳು:

ಪೀಚ್ ಗಳಲ್ಲಿರುವ ಫಿನಾಲಿಕ್ ಸಂಯುಕ್ತಗಳು ಮಧುಮೇಹಿಗಳಿಗೆ ಒಂದು ನೈಸರ್ಗಿಕ ಆಹಾರದಂತಿವೆ ಹಾಗೂ ಸ್ಥೂಲದೇಹದ ಮೂಲಕ ಎದುರಾಗುವ ಕೆಲವಾರು ರೋಗಗಳಿಗೆ ಔಷಧಿಯಂತೆ ಕಾರ್ಯನಿರ್ವಹಿಸುತ್ತವೆ. ಇದರಲ್ಲಿರುವ ನೈಸರ್ಗಿಕ ಸಕ್ಕರೆಯಾದ ಫ್ರುಕ್ಟೋಸ್ ಒಂದು ಆಂಟಿ ಆಕ್ಸಿಡೆಂಟ್ ಸಹಾ ಆಗಿದ್ದು ಹೊಟ್ಟೆಯ ಕೊಬ್ಬನ್ನು ಸಂಗ್ರಹಿಸಲು ತಡೆಯೊಡ್ಡುತ್ತದೆ ಹಾಗೂ ಈ ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ.

ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

10 Best Fruits That Burn Belly Fat

Did you know that fruits are very good for losing weight? Researchers have suggested that when it comes to fat-burning foods, the fruits rich in flavonoids called anthocyanins, a compound that give fruits their purple or red colour, boast of zero fat. Surprising, isn't it? Eating fruits is a fantastic way to lose weight because they are low in calories and are packed with nutrients. Some fruits are also packed with fibre, which keeps your stomach full for a long period of time, thus aiding in weight loss.
Story first published: Friday, March 16, 2018, 16:59 [IST]
X
Desktop Bottom Promotion