ಮಂಡಿ ನೋವೇ? ಮಾತ್ರೆ ಬಿಟ್ಟುಬಿಡಿ, 'ಯೋಗಾಸನ' ಶುರು ಮಾಡಿ

By: Hemanth
Subscribe to Boldsky

ಹಿಂದಿನ ಕಾಲದಲ್ಲಿ ವಯಸ್ಸಾದವರಲ್ಲಿ ಗಂಟು ನೋವು ಅಥವಾ ಮಂಡಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಯಾರಾದರೂ ಮಂಡಿ ನೋವೆಂದು ಹೇಳಿದರೆ ಅವರಿಗೆ ವಯಸ್ಸಾಗುತ್ತಾ ಇದೆ ಎಂದು ನಾವು ತಿಳಿಯಬಹುದಾಗಿತ್ತು. ಆದರೆ ಈಗ ಕಾಲ ಬಲದಾಗಿದೆ. ಸಣ್ಣ ಪ್ರಾಯದಲ್ಲೂ ಮಂಡಿ ನೋವು ಕಾಣಿಸಿಕೊಳ್ಳಲು ಆರಂಭವಾಗಿದೆ. ಇದಕ್ಕೆ ಪ್ರಮುಖ ಕಾರಣ ನಾವು ದಿನವಿಡಿ ಕುಳಿತುಕೊಂಡೇ ಕೆಲಸ ಮಾಡುವುದು ಮತ್ತು ವ್ಯಾಯಾಮವಿಲ್ಲದ ಜೀವನ.  ಮಂಡಿ ನೋವೇ? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

ಪ್ರತಿನಿತ್ಯ ವ್ಯಾಯಾಮ ಮಾಡಿದರೆ ಮಂಡಿ ನೋವಿನಂತಹ ಸಮಸ್ಯೆಗಳು ಕಡಿಮೆಯಾಗಬಹುದು. ಆದರೆ ಇಂದಿನ ದಿನಗಳಲ್ಲಿ ವ್ಯಾಯಾಮ ಮಾಡಲು ಸಮಯವೇ ಇಲ್ಲ. ಹೀಗಾಗಿ ಮಂಡಿ ಭಾದಿಸುತ್ತಾ ಇರುತ್ತದೆ. ಇಂತಹವರಿಗಾಗಿ ಈ ಲೇಖನದಲ್ಲಿ ಕೆಲವೊಂದು ಯೋಗಾಸನಗಳನ್ನು ಹೇಳಿಕೊಡಲಿದ್ದೇವೆ. ಇದರಿಂದ ಗಂಟು ನೋವಿನಿಂದ ಮುಕ್ತಿಯನ್ನು ಪಡೆಯಬಹುದು. ಮಂಡಿ ನೋವಿಗೆ ಶೀಘ್ರ ಪರಿಹಾರ- ಇಲ್ಲಿದೆ ಸರಳ ಮನೆಮದ್ದು

ಯಾವುದೇ ಮಾತ್ರೆಗಳು ಅಥವಾ ನೋವು ನಿವಾರಕಗಳು ಇಲ್ಲದೆ ಗಂಟು ನೋವು ಅಥವಾ ಮಂಡಿ ನೋವು ಕಡಿಮೆಯಾಗಬೇಕು ಎಂದಿದ್ದರೆ ನೀವು ಖಂಡಿತವಾಗಿಯೂ ಯೋಗಾಸನ ಮಾಡಬೇಕು. ಸಮಯವಿಲ್ಲವೆಂದು ಕುಳಿತರೆ ಅದರಿಂದ ನಿಮಗೆ ಮತ್ತಷ್ಟು ನಷ್ಟ ಉಂಟಾಗುವುದು ಖಚಿತ. ಇದರಿಂದ ನಿಮ್ಮ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿಕೊಳ್ಳುತ್ತಾ ಇಲ್ಲಿ ಕೊಟ್ಟಿರುವ ಯೋಗಾಸನಗಳನ್ನು ಅಭ್ಯಾಸ ಮಾಡುತ್ತಾ ಸಾಗಿ....  

ಸೇತು ಬಂಧಾಸನ (ಸೇತುವೆಯಂತಹ ಭಂಗಿ)

ಸೇತು ಬಂಧಾಸನ (ಸೇತುವೆಯಂತಹ ಭಂಗಿ)

ಸೇತು ಬಂಧಾಸನ ಮಾಡುವುದನ್ನು ಹಂತಹಂತವಾಗಿ ವಿವರಿಸಿಕೊಡಲಿದ್ದೇವೆ.

*ನೆಲದ ಮೇಲೆ ಬೆನ್ನು ಒರಗಿಸಿಕೊಂಡು ಮಲಗಿ ಮಂಡಿಗಳನ್ನು ಮಡಚಿ.

*ಕೈಗಳನ್ನು ನೇರವಾಗಿ ಇಟ್ಟುಕೊಂಡು ಅಂಗೈ ನೆಲಕ್ಕೆ ತಾಗುತ್ತಾ ಇರಲಿ.

*ನಿಧಾನವಾಗಿ ಬೆನ್ನನ್ನು ಮೇಲಕ್ಕೆತ್ತಿ. ಗಲ್ಲವು ಎದೆಗೆ ತಾಗುವ ತನಕ.

*ಎರಡು ತೊಡೆಗಳು ಸರಿಸಮನವಾಗಿರಲಿ.

*ದೇಹವನ್ನು ಸಮತೋಲದಲ್ಲಿಟ್ಟು ಕೆಲವು ಸೆಕೆಂಡುಗಳ ಕಾಲ ಈ ಆಸನದಲ್ಲಿರಿ.

ವೀರಭದ್ರಾಸನ

ವೀರಭದ್ರಾಸನ

ವೀರಭದ್ರಾಸನ ಮಾಡುವ ಹಂತಹಂತದ ವಿವರಣೆ

*ಕಾಲುಗಳನ್ನು ಸ್ವಲ್ಪ ಚಾಚಿಕೊಂಡು ನೇರವಾಗಿ ನಿಂತುಕೊಳ್ಳಿ. ಕೈಗಳು ಎರಡು ಕಡೆಗಿರಲಿ.

*ಬಲದ ಕಾಲನ್ನು 90 ಡಿಗ್ರಿಯಲ್ಲಿ ಇಟ್ಟುಕೊಳ್ಳಿ. ಎಡದ ಕಾಲು 15 ಡಿಗ್ರಿಯಲ್ಲಿರಲಿ.

*ಎರಡು ಕೈಗಳನ್ನು ಭುಜದ ನೇರಕ್ಕೆ ಎತ್ತಿ.

*ಉಸಿರನ್ನು ಹೊರಗೆ ಬಿಡಿ. ಬಲದ ಮಂಡಿಯನ್ನು ಬಗ್ಗಿಸಿ. ನಿಧಾನವಾಗಿ ತಲೆಯನ್ನು ಬಲಕ್ಕೆ ತಿರುಗಿಸಿ ಎಳೆಯಿರಿ.

*ಸೊಂಟವನ್ನು ಕೆಳಗೆ ಮಾಡಿಕೊಂಡು ದೀರ್ಘವಾದ ಉಸಿರು ತೆಗೆದುಕೊಳ್ಳಿ.

*ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಬನ್ನಿ. ಇದನ್ನು ಎರಡು ಕಾಲುಗಳಿಗೆ ಹತ್ತು ಬಾರಿ ಮಾಡಿ. ವೀರಭದ್ರಾಸನ: ಕುರ್ಚಿ-ಮೇಜು ಆಧಾರಿತ ಉದ್ಯೋಗಿಗಳಿಗೆ ವರದಾನ

ಧನುರಾಸನ

ಧನುರಾಸನ

ಧನುರಾಸನ ಮಾಡುವ ಹಂತಹಂತದ ವಿವರಣೆ

*ಹೊಟ್ಟೆ ನೆಲಕ್ಕೆ ತಾಗುತ್ತಿರುವಂತೆ ಮಲಗಿಕೊಳ್ಳಿ. ಕೈಗಳು ಆರಾಮವಾಗಿರಲಿ ಮತ್ತು ಎರಡು ಕಡೆಗಳಲ್ಲಿ ಇರಲಿ.

*ಈಗ ಮಂಡಿಯನ್ನು ಮಡಿಚಿಕೊಂಡು ಕೈಗಳಿಂದ ಹಿಂಗಾಲನ್ನು ಹಿಡಿಯಿರಿ.

*ದೀರ್ಘವಾದ ಉಸಿರನ್ನು ತೆಗೆದುಕೊಂಡು ಎದೆಯನ್ನು ಮೇಲಕ್ಕೆತ್ತಿ. ಕೈಗಳ ನೆರವಿನಿಂದ ಕಾಲುಗಳನ್ನು ಎತ್ತಿ.

* ದೇಹವು ಬಿಲ್ಲಿನಂತಿರಬೇಕು.

*ದೀರ್ಘವಾದ ಉಸಿರು ತೆಗೆದುಕೊಳ್ಳುತ್ತಾ ಕೆಲವು ಸೆಕೆಂಡುಗಳ ಕಾಲ ಈ ಆಸನದಲ್ಲಿರಿ. ಬಳಿಕ ಮತ್ತೆ ಮೊದಲಿನ ಸ್ಥಿತಿಗೆ ಬನ್ನಿ.

ಮಕರ ಅಧೋ ಮುಖ ಸ್ವಾನಾಸನ

ಮಕರ ಅಧೋ ಮುಖ ಸ್ವಾನಾಸನ

ಮಕದ ಅಧೋ ಮುಖ ಸ್ವಾನಾಸನದ ಹಂತ ಹಂತ ವಿವರಣೆ

*ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿಕೊಳ್ಳಿ. ಕೈಗಳು ದೇಹಕ್ಕೆ ತಾಗುತ್ತಿರಲಿ.

*ದೀರ್ಘವಾಗಿ ಉಸಿರಾಡಿ. ಮೊಣಕೈ ನೆಲದ ಮೇಲಿರಲಿ. ಮೊಣಕೈಯು ಭುಜವನ್ನು ತಾಗುವಂತಿರಲಿ.

*ಕುತ್ತಿಗೆ ಮತ್ತು ಭುಜಗಳು ನೇರವಾಗಿರಲಿ. ಅಂಗೈಗಳನ್ನು ಹತ್ತಿರಕ್ಕೆ ತನ್ನಿ.

*ಪಾದಗಳನ್ನು ಸ್ವಲ್ಪ ಮೇಲಕ್ಕೆತ್ತಿ ದೇಹವನ್ನು ಸಮತೋಲನದಲ್ಲಿಡಿ.

*ಕೆಲವು ಸೆಕೆಂಡುಗಳ ಕಾಲ ಈ ಆಸನದಲ್ಲಿರಿ ಮತ್ತು ನಿಧಾನವಾಗಿ ಮೊದಲಿನ ಸ್ಥಿತಿಗೆ ಬನ್ನಿ. ಹೊಟ್ಟೆಯ ಸ್ನಾಯುಗಳ ಬಲವರ್ಧನೆಗೆ-ಮಕರ ಅಧೋಮುಖ ಸ್ವಾನಾಸನ

 
English summary

Yoga Asanas To Relieve Knee pain

Today in this article we will be explaining about a few of the yoga asanas that will help to relieve joint pains. These yoga asanas have been tried and tested by yoga experts.
Subscribe Newsletter