ಮಂಡಿ ನೋವಿಗೆ ಶೀಘ್ರ ಪರಿಹಾರ- ಇಲ್ಲಿದೆ ಸರಳ ಮನೆಮದ್ದು

By: manu
Subscribe to Boldsky

ಮಂಡಿ ನೋವು ಅಥವಾ ಮಂಡಿ ನೋವು ಅನ್ನೋದು ಈಗ ಸಾಮಾನ್ಯ ಅನ್ನಿಸಿಬಿಟ್ಟಿದೆ. ಮೊದಲು ವಯಸ್ಸಾದವರಿಗೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಮಂಡಿ ನೋವು ಇದೀಗ ಎಲ್ಲ ವಯೋಮಾನದವರಿಗೂ ಹಂಚಿಹೋಗಿದೆ.

ನಮ್ಮ ದೇಹ ತೂಕದ ನಾಲ್ಕರಷ್ಟು ಹೆಚ್ಚು ಭಾರ ನಮ್ಮ ಮಂಡಿಯ ಮೇಲೆ ಇರುವ ಕಾರಣ ನೋವು ಆಗಾಗೆ ಹೆಚ್ಚುತ್ತಲೇ ಇರುತ್ತದೆ. ಆರ್ಥೊಪೆಡಿಕ್ ತಜ್ಞರು ಮತ್ತು ವೈದ್ಯರ ಪ್ರಕಾರ ಇದಕ್ಕೆ ಹಲವಾರು ಕಾರಣಗಳು ಇರುತ್ತವೆಯಂತೆ. ಇವು ಮಂಡಿಗಳನ್ನು ಗಟ್ಟಿ ಮಾಡುತ್ತದೆ, ಹಾಗೂ ಇದರಿಂದ ಜನರು ಆಗಾಗ ಕಾಲುಗಳನ್ನು ನೇರ ಮಾಡಿ ಸಡಿಲ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ, ಇದರಿಂದ ಅವರಿಗೆ ಮತ್ತಷ್ಟು ನೋವು ಕಾಡಲು ಪ್ರಾರಂಭವಾಗುತ್ತದೆ... ಮಂಡಿನೋವನ್ನು ಸಂಪೂರ್ಣವಾಗಿ ಗುಣಪಡಿಸುವ ಸರಳ ಮನೆಮದ್ದು

ಇದು ವಯಸ್ಸು ಮತ್ತು ಇನ್ನಿತರ ಕಾರಣಗಳ ಸಲುವಾಗಿ ಮಂಡಿಗಳಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಪರಿಣಾಮಕಾರಿಯಾದ ಕೆಲವೊಂದು ಮನೆಮದ್ದುಗಳು ದೊರೆಯುತ್ತವೆ. ಅವು ಈ ನೋವುಗಳಿಗೆ ಖಂಡಿತ ಉಪಶಮನವನ್ನು ನೀಡುತ್ತವೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ....  

ಅರಿಶಿನ

ಅರಿಶಿನ

ಕೊಂಚ ಅರಿಶಿನವನ್ನು ನೀರಿನೊಂದಿಗೆ ಬೆರೆಸಿ ಲೇಪನ ತಯಾರಿಸಿ ನೋವಿದ್ದ ಕಡೆ ದಿನಕ್ಕೆರಡು ಬಾರಿ ಕೊಂಚವೇ ಮಸಾಜ್ ನೊಂದಿಗೆ ಹಚ್ಚಿ ಒಣಗಲು ಬಿಡಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡರೆ ಶೀಘ್ರವೇ ನೋವು ಕಡಿಮೆಯಾಗುತ್ತದೆ.

ಓಮ

ಓಮ

ಇದಕ್ಕಾಗಿ ಕೊಂಚ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಅರಿಶಿನ ಬೆರೆಸಿದ ಹಾಲು ಕುಡಿಯಿರಿ

ಅರಿಶಿನ ಬೆರೆಸಿದ ಹಾಲು ಕುಡಿಯಿರಿ

ಅರಿಶಿನ ಬೆರೆತ ಹಾಲು ಸೇವನೆ ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಿಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಉತ್ಕರ್ಷಣ ನಿರೋಧಿ, ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಅರಿಶಿನದ ಹಾಲು ತಯಾರಿಸುವ ವಿಧಾನ....

ಅರಿಶಿನದ ಹಾಲು ತಯಾರಿಸುವ ವಿಧಾನ....

ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಸ್ವಲ್ಪ ನೀಲಗಿರಿ ಎಣ್ಣೆಯನ್ನು ತೆಗೆದುಕೊಂಡು ನೋವು ಇರುವ ಭಾಗಕ್ಕೆ ಇದನ್ನು ನೇರವಾಗಿ ಲೇಪಿಸಿ, ಮಸಾಜ್ ಮಾಡಿ. ಮೊಣಕಾಲು ನೋವಿಗೆ ಇದು ಒಂದು ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ

ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ

ಸ್ವಲ್ಪ ತೆಂಗಿನ ಎಣ್ಣೆ ಅಥವಾ ಆಲೀವ್ ಎಣ್ಣೆ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಬಿಸಿ ಮಾಡಿದ ಎಣ್ಣೆಯನ್ನು ನೋವಿರುವ ಜಾಗಕ್ಕೆ 10-15 ನಿಮಿಷಗಳಿಗೆ ಹಚ್ಚಿ ಹಾಗೂ ವೃತ್ತಾಕಾರವಾಗಿ ಮಸಾಜ್ ಮಾಡಿ. ಎಣ್ಣೆ ಮಸಾಜ್ ನೋವಿನಿಂದ ತ್ವರಿತ ಆರಾಮವನ್ನು ನೀಡುತ್ತದೆ.

 
English summary

Easy Home Remedies To Treat Knee Pain

Whichever you experience, there are natural remedies for Knee Pain to manage the pain and ease the symptoms. have a look Home Remedies for Joint Pain.....
Please Wait while comments are loading...
Subscribe Newsletter