For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಬೇಕೇ? ದಿನಕ್ಕೆ ಒಂದು ಕಪ್ ಮೊಸರು ಸೇವಿಸಿ!

By Arshad
|

ನಮ್ಮ ಜೀರ್ಣಕ್ರಿಯೆಗೆ ಸಹಕರಿಸುವ ಸ್ನೇಹಿ ಬ್ಯಾಕ್ಟೀರಿಯಾಗಳೇ ತುಂಬಿರುವ ಮೊಸರು ಅತ್ಯಂತ ಸುಲಭವಾಗಿ ಜೀರ್ಣವಾಗುವ ಆರೋಗ್ಯಕರ ಆಹಾರವಾಗಿದ್ದು ರುಚಿಕರವೂ ಆಗಿದೆ. ಸಾಮಾನ್ಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಕೊಬ್ಬನ್ನು ಸಂಗ್ರಹಿಸಲು ನೆರವಾಗುವ ಮೂಲಕ ತೂಕ ಹೆಚ್ಚಿಸುತ್ತವೆ.

ಆದರೆ ಮೊಸರು ಸಹಾ ಹಾಲಿನ ಉತ್ಪನ್ನವೇ ಆಗಿದ್ದರೂ ಈ ಸ್ನೇಹಿ ಬ್ಯಾಕ್ಟೀರಿಯಾಗಳ ಕಾರಣ ತೂಕವನ್ನು ಏರದಿರಲು, ಬದಲಿಗೆ ಇಳಿಸಲು ಸಹಾ ನೆರವಾಗುತ್ತದೆ. ಆದರೆ ಇದರ ಬಳಕೆ ಸರಿಯಾದ ರೀತಿಯಲ್ಲಿ ಆಗಬೇಕು.

ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಹೆಚ್ಚಿನವರು ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುತ್ತಾರೆ. ಇದು ರುಚಿಕರವಾಗಿದ್ದರೂ ಮೊಸರಿನಿಂದ ಇಳಿಯಬಹುದಾಗಿದ್ದ ತೂಕ ಸಕ್ಕರೆಯ ಕಾರಣದಿಂದ ದುಪ್ಪಟ್ಟು ಏರುತ್ತದೆ. ಅಲ್ಲದೆ ವಿನಾ ಕಾರಣ ಮೊಸರಿನ ಮೇಲೆ ಗೂಬೆ ಕೂರಿಸುತ್ತೇವೆ. ಹಾಗಾದರೆ ಮೊಸರಿನ ಸರಿಯಾದ ಬಳಕೆ ಹೇಗೆ? ಮುಂದೆ ಓದಿ...

ತೂಕ ಇಳಿಸಲು ಮೊಸರಿನ ಸೇವನೆಯ ವಿಧಾನ

ತೂಕ ಇಳಿಸಲು ಮೊಸರಿನ ಸೇವನೆಯ ವಿಧಾನ

ತೂಕ ಇಳಿಸಬೇಕಾದರೆ ಮೊಸರನ್ನು ಸೇವಿಸುವುದು ಹೇಗೆ? ಇದಕ್ಕೇನಾದರೂ ಒಂದು ನಿಯಮವಿದೆಯೇ? ಈ ಪ್ರಶ್ನೆಯನ್ನು ತಜ್ಞರಿಗೆ ಕೇಳಿದಾಗ ಈ ವಿವರಗಳು ದೊರಕಿವೆ:

ತಜ್ಞರ ಪ್ರಕಾರ ತೂಕ ಇಳಿಸಲು ಇಚ್ಛಿಸುವ ವ್ಯಕ್ತಿ ಪ್ರತಿದಿನ ಸುಮಾರು ಆರು ಔನ್ಸ್‌ನಷ್ಟು ಸಾದಾ (ಸಕ್ಕರೆರಹಿತ), ಕೊಬ್ಬು ರಹಿತ ಮೊಸರನ್ನು ಒಂದು ಹೊತ್ತಿನಂತೆ ದಿನಕ್ಕೆ ಮೂರು ಬಾರಿ ಅಂದರೆ ಒಟ್ಟು ಹದಿನೆಂಟು ಔನ್ಸುಗಳಷ್ಟು ಸೇವಿಸಬೇಕು.

ತೂಕ ಇಳಿಸಲು ಮೊಸರಿನ ಸೇವನೆಯ ವಿಧಾನ

ತೂಕ ಇಳಿಸಲು ಮೊಸರಿನ ಸೇವನೆಯ ವಿಧಾನ

ಈ ಮೂರು ಹೊತ್ತುಗಳು ನಮ್ಮ ಉಪಾಹಾರ ಮಧ್ಯಾಹ್ನದ ಮತ್ತು ರಾತ್ರಿಯ ಊಟದ ಬಳಿಕ ಆದರೆ ತುಂಬಾ ಉತ್ತಮ. ಅಗತ್ಯವೆನಿಸಿದರೆ ಒಂದು ಹೊತ್ತನ್ನು ಸಂಜೆಯ ಉಪಾಹಾರಕ್ಕೂ ಬದಲಿಸಿಕೊಳ್ಳಬಹುದು.

ತೂಕ ಇಳಿಸಲು ಮೊಸರಿನ ಸೇವನೆಯ ವಿಧಾನ

ತೂಕ ಇಳಿಸಲು ಮೊಸರಿನ ಸೇವನೆಯ ವಿಧಾನ

ಆದರೆ ಮೊಸರಿಗೆ ಸಕ್ಕರೆ, ಜೇನು, ಒಣಫಲಗಳು, ಓಟ್ಸ್ ಮೊದಲಾದ ಧಾನ್ಯಗಳು ಇತ್ಯಾದಿಗಳನ್ನು ಬೆರೆಸಿ ತಿನ್ನಬಹುದಾದರೂ ಇವುಗಳ ಪ್ರಮಾಣ ನಿಮ್ಮ ತೂಕ ಇಳಿಸುವಿಕೆಗೆ ಅಡ್ಡಿಯಾಗಬಾರದಷ್ಟು ಮಾತ್ರವೇ ಇರಬೇಕು.

ರಾತ್ರಿ ಹೊತ್ತು ಮೊಸರನ್ನು ಸೇವಿಸದಿರಿ, ಇಲ್ಲಿದೆ ಪರಿಹಾರ

ಸೂಕ್ತ ಮೊಸರಿನ ಆಯ್ಕೆ

ಸೂಕ್ತ ಮೊಸರಿನ ಆಯ್ಕೆ

* ಇಂದು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಮೊಸರುಗಳು ಮತ್ತು ಇತರ ಆಹಾರಗಳೊಡನೆ ಸಂಯೋಜನೆಗೊಂಡ ವೈವಿಧ್ಯ ಕಾಣಸಿಗುತ್ತವೆ. ಇವುಗಳಲ್ಲಿ ತೂಕ ಹೆಚ್ಚಿಸುವುದು ಯಾವುವು? ತೂಕ ಇಳಿಸಲು ನೆರವಾಗುವುವು ಯಾವುವು ಎಂಬುದನ್ನು ಹೇಳುವವರು ಯಾರೂ ಇಲ್ಲದೇ ಸರಿಯಾದ ಉತ್ಪನ್ನದ ಆಯ್ಕೆ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹಾಗಾದರೆ ಕೆಳಗಿನ ಮಾಹಿತಿ ನಿಮ್ಮ ನೆರವಿಗೆ ಬರಬಲ್ಲುದು:

* ಮಾರುಕಟ್ಟೆಯಲ್ಲಿ ಒಂದು ವೇಳೆ ಗ್ರೀಕ್ ಕರ್ಡ್ ಎಂಬ ಉತ್ಪನ್ನ ಲಭ್ಯವಿದ್ದರೆ ತೂಕ ಇಳಿಸಲು ಇದು ಅತ್ಯುತ್ತಮವಾದ ಆಯ್ಕೆಯಾಗಿದೆ. ಇದರಲ್ಲಿ ಕೇವಲ ತೊಂಬತ್ತು ಕ್ಯಾಲೋರಿಗಳು ಹಾಗೂ ಕೇವಲ ಏಳು ಗ್ರಾಂ ಸಕ್ಕರೆ ಇದ್ದು ಆರೋಗ್ಯಕ್ಕೆ ಪೂರಕ ಹಾಗೂ ತೂಕ ಇಳಿಸಲು ಸಮರ್ಪಕವಾಗಿದೆ.

ಸೂಕ್ತ ಮೊಸರಿನ ಆಯ್ಕೆ

ಸೂಕ್ತ ಮೊಸರಿನ ಆಯ್ಕೆ

* ಇದರ ಹೊರತಾಗಿ ಬೇರೆ ಮೊಸರು ಲಭ್ಯವಿದ್ದರೆ ಇದರಲ್ಲಿ ಮುದ್ರಿತವಾಗಿರುವ ಕ್ಯಾಲೋರಿಗಳ ಸಂಖ್ಯೆಯನ್ನು ಗಮನಿಸಿ. ಇದು 130ಕ್ಕಿಂತ ಕಡಿಮೆ ಇದ್ದು ಪ್ರತಿ ಬಾರಿಯ ಸೇವನೆಯ ಪ್ರಮಾಣದಲ್ಲಿ ಒಂದು ಗ್ರಾಂಗಿತಲೂ ಕಡಿಮೆ ಕೊಬ್ಬು ಇದ್ದರೆ ಇವು ಸಹಾ ತೂಕ ಇಳಿಕೆಗೆ ಸಹಕಾರಿಯಾಗಿರುತ್ತವೆ.

* ಇಂದು ಮೊಸರಿನ ಪ್ಯಾಕ್ ಮೇಲೆ ದೊಡ್ಡದಾಗಿ ಕಾಣುವಂತೆ 'ಲೋ ಫ್ಯಾಟ್' ಹಾಗೂ 'ಲೋ ಕ್ಯಾಲೋರಿ' ಎಂದು ಬರೆದಿರುವ ಉತ್ಪನ್ನಗಳೂ ಲಭ್ಯವಿವೆ. ಈ ಕವಚಗಳು ಅತ್ಯಂತ ಆಕರ್ಷಕವಾಗಿದ್ದು ಈ ಹೆಸರುಗಳಿಂದ ತೂಕ ಏರಲಾರದು ಎಂದುಕೊಂಡಿದ್ದರೆ ನಿಮಗೆ ಭ್ರಮನಿರಸನವಾಗುವುದು ಖಚಿತ.

ಸೂಕ್ತ ಮೊಸರಿನ ಆಯ್ಕೆ

ಸೂಕ್ತ ಮೊಸರಿನ ಆಯ್ಕೆ

ಏಕೆಂದರೆ ಇವುಗಳಲ್ಲಿ ಕೊಬ್ಬು ಕಡಿಮೆ ಮಾಡಿದ್ದರೂ ಸಕ್ಕರೆ ಮಾತ್ರ ಇತರ ಮೊಸರಿಗಿಂತಲೂ ಹೆಚ್ಚೇ ಇರುತ್ತದೆ. ಅಷ್ಟೇ ಅಲ್ಲ, ಕೊಬ್ಬು ರಹಿತವಾಗಿಸಿದಾಗ ಕೊಂಚ ಕಹಿಯಾಗುವ ಕಾರಣ ಕೃತಕ ರುಚಿಕಾರಕಗಳನ್ನೂ ಸೇರಿಸಿರಲಾಗಿರುತ್ತದೆ. ಇವುಗಳಲ್ಲಿ ಮೆಕ್ಕೆ ಜೋಳದ ಸಿರಪ್ ಪ್ರಮುಖವಾಗಿದೆ. ಇದರಲ್ಲಿ ಫ್ರುಕ್ಟೋಸ್ ಎಂಬ ಸಕ್ಕರೆ ಅತಿ ಹೆಚ್ಚಾಗಿದ್ದು ಕೊಬ್ಬು ಸಂಗ್ರಹಕ್ಕೆ ನೇರವಾಗಿ ಕಾರಣವಾಗಿದೆ. ಹಾಗಾಗಿ ಲೋ ಫ್ಯಾಟ್ ಇದ್ದರೂ ಹೈ ಶುಗರ್ ಎಂದು ಎಲ್ಲೂ ಬರೆದಿಲ್ಲದ ಕಾರಣ ಈ ಮೊಸರನ್ನು ಆಯ್ಕೆ ಮಾಡದಿರುವುದೇ ಉಚಿತ.

* ಮೊಸರಿನ ಪ್ಯಾಕ್ ಮೇಲೆ ಮುದ್ರಿತವಾಗಿರುವ ಪ್ರೋಟೀನುಗಳ ಮಟ್ಟ ಹಾಗೂ ಕ್ಯಾಲೋರಿಗಳನ್ನೂ ಗಮನಿಸಿ. ಉತ್ತಮ ಕಡಿಮೆ ಕೊಬ್ಬಿನ ಮೊಸರಿನಲ್ಲಿ ಕನಿಷ್ಠ ಹನ್ನೆರಡರಿಂದ ಹದಿನೈದು ಗ್ರಾಮ್ ಪ್ರೋಟೀನು ಇದ್ದರೆ ಇದು ಮುಂದಿನ ಆಹಾರಸೇವನೆಯ ಹೊತ್ತಿನವರೆಗೂ ಹೊಟ್ಟೆಯನ್ನು ತುಂಬಿರುವಂತೆ ಮಾಡಲು ನೆರವಾಗುತ್ತದೆ.

ಈ ಕ್ರಮಗಳನ್ನು ಅನುಸರಿಸಲು ಮರೆಯದಿರಿ

ಈ ಕ್ರಮಗಳನ್ನು ಅನುಸರಿಸಲು ಮರೆಯದಿರಿ

ತೂಕ ಕಡಿಮೆ ಮಾಡಿಕೊಳ್ಳಲು ಸೂಕ್ತವಾದ ಮೊಸರನ್ನು ಆಯ್ದುಕೊಳ್ಳಲು ಕೆಲವು ಮುಖ್ಯ ಅಂಶಗಳು ಹೀಗಿವೆ:

ಪ್ರತಿಬಾರಿ ತಾಜಾ ಮೊಸರನ್ನೇ ಕೊಳ್ಳಿ. ಮಾರುಕಟ್ಟೆಯಿಂದ ತಂದಿದ್ದರೂ, ಮನೆಯಲ್ಲಿಯೇ ಹೆಪ್ಪು ಹಾಕಿದ್ದರೂ ಮೊಸರನ್ನು ತುಂಬಿಸಿದ ಜಾಡಿ ಗಾಳಿಯಾಡದಂತೆ ಮುಚ್ಚಳ ಮುಚ್ಚುವಂತಿರಬೇಕು ಹಾಗೂ ತಡಮಾಡದೇ ಫ್ರಿಜ್ಜಿನಲ್ಲಿರಿಸಬೇಕು.

ಯಾವುದೇ ಕಾರಣಕ್ಕೂ ಮೊಸರನ್ನು ಫ್ರೀಜರ್ ನಲ್ಲಿ ಇಡಬಾರದು ಹಾಗೂ ಹೀಗೆ ಇರಿಸಿದ್ದನ್ನೂ ಸೇವಿಸಬಾರದು. ಪ್ರತಿಬಾರಿ ಮೊಸರನ್ನು ಸೇವಿಸುವ ಕೊಂಚ ಹೊತ್ತಿಗೂ ಮುನ್ನ ಫ್ರಿಜ್ಜಿನಿಂದ ಹೊರತೆಗೆದು ಸಾಮಾನ್ಯ ತಾಪಮಾನಕ್ಕೆ ಬಂದ ಬಳಿಕವೇ ಸೇವಿಸಬೇಕು.

English summary

Why And How Should You Eat Curd For Losing Weight?

We all know that curd or yogurt is a delicious treat for our taste buds with lots of health benefits. But did you know that the food itself helps in keeping our body weight under control by eliminating additional pounds? Yes, curd can make your weight loss journey smoother with its magical effects. Let’s explore...
Story first published: Thursday, June 22, 2017, 20:51 [IST]
X
Desktop Bottom Promotion