For Quick Alerts
ALLOW NOTIFICATIONS  
For Daily Alerts

ಬರೀ ಎರಡು ವಾರಗಳಲ್ಲಿ ಎರಡು ಇಂಚಿನಷ್ಟು ಬೊಜ್ಜು ಕರಗಿಸಿ!

By Hemanth
|

ಡೊಳ್ಳು ಹೊಟ್ಟೆ ಹಿಡಿದುಕೊಂಡು ಹೊರಗಡೆ ಹೋದರೆ ಹೆಚ್ಚಿನವರ ಕಣ್ಣು ಆ ವ್ಯಕ್ತಿಯ ಮೇಲೆಯೇ ಇರುತ್ತದೆ. ಇಂತಹ ಹೊಟ್ಟೆ ಬರಲು ಎಷ್ಟು ತಿನ್ನುತ್ತಿರಬಹುದು ಎಂದು ಅವರು ಗೇಲಿ ಮಾಡುತ್ತಾರೆ. ಆದರೆ ಕೆಲಸದ ಒತ್ತಡ, ಸಮಯದ ಅಭಾವ, ಸರಿಯಾದ ಆಹಾರ ಕ್ರಮ ಪಾಲಿಸದೆ ಇರುವುದು ದೊಡ್ಡ ಹೊಟ್ಟೆ ಬರಲು ಪ್ರಮುಖ ಕಾರಣವಾಗಿದೆ.

ಬೊಜ್ಜು ಹೊಂದಿರುವ ಹೊಟ್ಟೆಯಿಂದ ನಿಮಗೆ ಮುಜುಗರವಾಗುವುದು ಮಾತ್ರವಲ್ಲದೆ ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆಗಳು ನಿಮ್ಮನ್ನು ವಕ್ಕರಿಸುವುದು ಖಚಿತ. ಹೊಟ್ಟೆಯ ಬೊಜ್ಜು ಕರಗಿಸುವುದು ನಿಮಗೆ ತುಂಬಾ ಕಠಿಣ ಕೆಲಸವೆಂದು ಅನಿಸಬಹುದು. ಆದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನೀಡಿರುವಂತಹ ಸಲಹೆಗಳನ್ನು ಪಾಲಿಸಿಕೊಂಡು ಹೋದರೆ ಅದರಿಂದ ನೀವು ಖಂಡಿತವಾಗಿಯೂ ಎರಡೇ ವಾರದಲ್ಲಿ ಹೊಟ್ಟೆಯ ಬೊಜ್ಜು ಕಡಿಮೆ ಮಾಡಬಹುದು. ವಯಸ್ಸು ನಿಮಗೆ ಅಡ್ಡಿಯಾಗುತ್ತಿದೆಯೆಂಬ ಕಾರಣ ಬಿಟ್ಟು ಈ ಸಲಹೆ ಪಾಲಿಸಿ ಹೊಟ್ಟೆಯ ಬೊಜ್ಜು ಕರಗಿಸಿ...

ಬೇಗ ದಿನವನ್ನು ಆರಂಭಿಸಿ

ಬೇಗ ದಿನವನ್ನು ಆರಂಭಿಸಿ

ನಿಮ್ಮ ಹೊಟ್ಟೆ ಮತ್ತು ಹಾಸಿಗೆಯು ತುಂಬಾ ದೀರ್ಘ ಕಾಲ ತನಕ ಜತೆಯಾಗಿ ಇರಲು ಬಿಡಬೇಡಿ. ಸರಿಯಾದ ನಿದ್ರೆಯಿಂದ ಚಯಾಪಚಯಾ ಕ್ರಿಯೆ ಸರಿಯಾಗಿ ಆಗುವುದು. ಆದರೆ ಅತಿಯಾದ ನಿದ್ರೆಯಿಂದ ಬೊಜ್ಜು ಹೆಚ್ಚಾಗುವುದು. ಒಂದು ವರದಿಯ ಪ್ರಕಾರ ಬೆಳಗ್ಗೆ ಸುಮಾರು 10 ಗಂಟೆ ಬಳಿಕ ನಿದ್ರೆಯಿಂದ ಏಳುವವರು ಬೇಗನೆ ಏಳುವವರಿಗಿಂತ ಸುಮಾರು 250 ಕ್ಯಾಲರಿ ಹೆಚ್ಚಿಗೆ ಸೇವನೆ ಮಾಡುವರು. ಬೇಗನೆ ಎದ್ದೇಳುವವರಿಗಿಂತ ಹೆಚ್ಚಿನ ಉಪ್ಪು, ಸಕ್ಕರೆ ಮತ್ತು

ಟ್ರಾನ್ಸ್ ಫ್ಯಾಟ್ ಹೊಂದಿರುವ ಆಹಾರವನ್ನು ಇವರು ಸೇವಿಸುವರು. ಬೇಗನೆ ಎದ್ದೇಳುವವರ ಚಯಾಪಚಾಯ ಕ್ರಿಯೆಯು ಸರಿಯಾಗಿರುವುದು ಎಂದು ನಾರ್ತ್ ವೆಸ್ಟರ್ನ್ ಯೂನಿರ್ವಸಿಟಿಯು ಅಧ್ಯಯನದಿಂದ ಕಂಡುಕೊಂಡಿದೆ.

ಬೆರ್ರಿಗಳ ಸೇವಿಸಿ

ಬೆರ್ರಿಗಳ ಸೇವಿಸಿ

ಹೆಚ್ಚು ಸಕ್ಕರೆಯಂಶವಿರುವ ಸಿಹಿಗಳನ್ನು ಸೇವಿಸುವ ಬದಲಿಗೆ ಬೆರ್ರಿಗಳನ್ನು ಸೇವಿಸಿ. ಇದು ಬೊಜ್ಜನ್ನು ಕಡಿಮೆ ಮಾಡುವುದು. ಬೆರ್ರಿಗಳಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ನೆರವಾಗುವುದು. ಮಿಚೆಗೆನ್ ಯೂನಿವರ್ಸಿಟಿಯು ಬೊಜ್ಜು ದೇಹದ ಇಲಿಗಳಿಗೆ ಸರಿಯಾದ ಪ್ರಮಾಣದಲ್ಲಿ ಬೆರ್ರಿಗಳನ್ನು ನೀಡಿದಾಗ ಅವುಗಳ ಬೊಜ್ಜು ಕಡಿಮೆಯಾಗಿರುವುದು ಕಂಡಿಕೊಳ್ಳಲಾಗಿದೆ. ಸ್ಟ್ರಾಬೆರ್ರಿ, ರಸ್ಬೇರ್ರಿ, ಬ್ಲೂಬೆರ್ರಿಗಳನ್ನು ಸೇವಿಸಬೇಕು. ಇವುಗಳಲ್ಲಿ ರೆಸ್ವಾರೆಟ್ರೋಲ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಇದೆ. ಇದು ಬೊಜ್ಜನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು.

ಹೈಡ್ರೋಜನೀಕರಿಸಿದ ಎಣ್ಣೆ ತ್ಯಜಿಸಿ

ಹೈಡ್ರೋಜನೀಕರಿಸಿದ ಎಣ್ಣೆ ತ್ಯಜಿಸಿ

ನಿಮ್ಮ ಆಹಾರ ಕ್ರಮದಲ್ಲಿ ಇರುವಂತಹ ಟ್ರಾನ್ಸ್ ಫ್ಯಾಟ್ ಗಳು ನೀವು ಪ್ರತೀ ಸಲ ಅವುಗಳನ್ನು ತಿಂದಾಗ ಬೊಜ್ಜನ್ನು ಹೆಚ್ಚಿಸುವುದು. ನೀವು ತಿನ್ನುವಂತಹ ಆಹಾರವು ಹೈಡ್ರೋಜನೀಕರಿಸಿದ ಎಣ್ಣೆಯಿಂದ ತಯಾರಿಸಲ್ಪಡುತ್ತಾ ಇದ್ದರೆ ಆಗ ಖಂಡಿತವಾಗಿಯೂ ನೀವು ಟ್ರಾನ್ಸ್ ಫ್ಯಾಟ್ ತಿನ್ನುತ್ತಿದ್ದೀರಿ ಎನ್ನಬಹುದು. ಇದರಿಂದ ಅಧಿಕ ಕೊಲೆಸ್ಟ್ರಾಳ್, ಹೃದಯ ಕಾಯಿಲೆ ಮತ್ತು ಬೊಜ್ಜಿನಂತಹ ಸಮಸ್ಯೆ ಬರುವುದು. ವೇಕ್ ಫಾರೆಸ್ಟ್ ಯೂನಿವರ್ಸಿಟಿಯಲ್ಲಿ ನಡೆಸಿರುವಂತಹ ಅಧ್ಯಯನದ ಪ್ರಕಾರ ಶೇ.8ರಷ್ಟು ಟ್ರಾನ್ಸ್ ಫ್ಯಾಟ್ ತಿನ್ನುವಂತಹ ಮಂಗಗಳು ತಮ್ಮ ದೇಹದ ಬೊಜ್ಜನ್ನು ಸುಮಾರು 7.2ರಷ್ಟು ಹೆಚ್ಚಿಸಿಕೊಂಡಿವೆ ಎಂದು ಆರು ವರ್ಷಗಳಿಂದ ನಡೆಸಿರುವ ತಿಳಿದುಬಂದಿದೆ. ಏಕಪರ್ಯಾಪ್ತ ಕೊಬ್ಬು ಸ್ವಲ್ಪ ಪ್ರಮಾಣದ ಬೊಜ್ಜು ಮಾತ್ರ ಹೆಚ್ಚಿಸಿದೆ.

ಮೊಳಕೆ ಕಾಳುಗಳ ಬ್ರೆಡ್ ತಿನ್ನಿ

ಮೊಳಕೆ ಕಾಳುಗಳ ಬ್ರೆಡ್ ತಿನ್ನಿ

ಬೊಜ್ಜು ಕರಗಿಸುವ ವೇಳೆ ಬ್ರೆಡ್ ತಿಂದರೆ ಅದರಿಂದ ಅಡ್ಡಪರಿಣಾಮ ಉಂಟಾಗಬಹುದು ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಸರಿಯಾದ ಬ್ರೆಡ್ ಸೇವಿಸಿದರೆ ಅದು ಬೊಜ್ಜು ಕರಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಮೊಳಕೆಕಾಳುಗಳಿಂದ ತಯಾರಿಸಿರುವಂತಹ ಬ್ರೆಡ್ ಸೇವನೆ ಮಾಡಿದರೆ ನಿಮ್ಮ ಹೊಟ್ಟೆಯ ಬೊಜ್ಜು ಕರಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮೊಳಕೆ ಕಾಳುಗಳಲ್ಲಿ ಇನುಲಿನ್ ಎನ್ನುವ ಅಂಶವಿದೆ. ಇನುಲಿನ್ ಇರುವ ಆಹಾರ ಕ್ರಮವನ್ನು ಅನುಸರಿಸಿದ ವ್ಯಕ್ತಿಗಳಲ್ಲಿ ಬೊಜ್ಜಿನ ಪ್ರಮಾಣವು ಇನುಲಿನ್ ಇಲ್ಲದ ಆಹಾರ ಕ್ರಮ ಅನುಸರಿಸಿದವರಿಗಿಂತ ತುಂಬಾ ಕಡಿಮೆಯಿತ್ತು ಎಂದು ನ್ಯೂಟ್ರಿಷನ್ ಆ್ಯಂಡ್ ಮೆಟಾಬೊಲಿಸಮ್ ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ.

ಸಿಹಿಯಿಂದ ಆದಷ್ಟು ದೂರವಿರಲು ಪ್ರಯತ್ನಿಸಿ

ಸಿಹಿಯಿಂದ ಆದಷ್ಟು ದೂರವಿರಲು ಪ್ರಯತ್ನಿಸಿ

ಹೊಟ್ಟೆಯ ಸುತ್ತಲಿನ ಬೊಜ್ಜು ನಿವಾರಣೆ ಮಾಡವಂತಹವರು ಕೆಲವು ಸಲ ಕೃತಕ ಸಕ್ಕರೆಗೆ ಹೊಂದಿಕೊಂಡಿರುತ್ತಾರೆ. ಆದರೆ ಇಂತಹ ಸಕ್ಕರೆ ಕೂಡ ಕೆಲವೊಂದು ಸಲ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಧ್ಯಯನಗಳ ಪ್ರಕಾರ ಕೃತಕ ಸಕ್ಕರೆಯು ಹೊಟ್ಟೆಯ ಬೊಜ್ಜು ಮತ್ತು ತೂಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಇದು ತಿನ್ನುವ ಬಯಕೆ ಹೆಚ್ಚು ಮಾಡಿ ಸಾಮಾನ್ಯ ಸಕ್ಕರೆಯಂತೆ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವುದು.

ಬೀಜಗಳು

ಬೀಜಗಳು

ದೇಹದ ತೂಕ ಕರಗಿಸಬೇಕೆಂದರೆ ಕೆಲವು ಸಲ ನೀವು ಬೀಜಗಳನ್ನು ತಿನ್ನುವುದು ಅತೀ ಅಗತ್ಯವಾಗಿದೆ. ಬೀಜಗಳು ಹೊಟ್ಟೆಯ ಸುತ್ತಲು ಹರಡುವ ಬೊಜ್ಜಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ಬೀಜಗಳಲ್ಲಿ ಇರುವಂತೆ ಏಕಪರ್ಯಾಪ್ತ ಕೊಬ್ಬನ್ನು ತಿಂದವರು ಸುಮಾರು 28 ದಿನಗಳ ಹೊಟ್ಟೆಯ ಬೊಜ್ಜು ಕಡಿಮೆ ಬೆಳೆಸಿದ್ದಾರೆ. ಆದರೆ ಪರಿಷ್ಕರಿಸಿದ ಕೊಬ್ಬು ಸೇವನೆ ಮಾಡಿದವರಲ್ಲಿ ಬೊಜ್ಜು ಹೆಚ್ಚಾಗಿತ್ತು.

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ

ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ

ಒಂದು ಪಿಯರ್, ಒಂದು ಲಿಂಬೆ, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಹಿಡಿ ಪಾಲಕ ಸೊಪ್ಪು ತೆಗೆದುಕೊಳ್ಳಿ. ಇದನ್ನು ರುಬ್ಬಿಕೊಂಡು ದಪ್ಪಗಿನ ಜ್ಯೂಸ್ ಮಾಡಿಕೊಳ್ಳಿ. ಈ ಜ್ಯೂಸ್ aನ್ನು ಮಲಗುವ ಮೊದಲು ಒಂದು ವಾರ ಕಾಲ ಕುಡಿಯಬೇಕು. ಇದನ್ನು ಕೆಲವು ದಿನ ಹೆಚ್ಚು ಕಾಲ ಸೇವನೆ ಮಾಡಬಹುದು. ಇದರಿಂದ ಹೊಟ್ಟೆಯಲ್ಲಿರುವ ಮತ್ತಷ್ಟು ಕೊಬ್ಬು ಕರಗುವುದು. ಇದು ಚಯಾಪಚಾಯ ಕ್ರಿಯೆ ಹೆಚ್ಚಿಸಿ, ಹಸಿವನ್ನು ಕಡಿಮೆ ಮಾಡಿ ಸಂಪೂರ್ಣ ದೇಹದಲ್ಲಿ ಕೊಬ್ಬಿನ ಕೋಶಗಳನ್ನು ವಿಘಟಿಸುವುದು. ಈ ಪಾನೀಯದಲ್ಲಿ ಇರುವ ಸಿಟ್ರಿಕ್ ಅಂಶವು ಹೊಟ್ಟೆಯಲ್ಲಿನ ಕೊಬ್ಬನ್ನು ಕರಗಿಸಲು ಪ್ರಮುಖ ಪಾತ್ರ ನಿರ್ವಹಿಸುವುದು. ಇದು ಯಕೃತ್ ಅನ್ನು ಶುದ್ಧೀಕರಿಸಿ ಜೀರ್ಣಕ್ರಿಯೆಗೆ ನೆರವಾಗುವುದು. ಕೊಬ್ಬು ಕಡಿಮೆ ಮಾಡಲು ದೇಹಕ್ಕೆ ಬೇಕಾಗುವ ನಾರಿನಾಂಶವು ಪಿಯರ್‪ನಲ್ಲಿ ಇರುವುದು. ಇದು ಆಗಾಗ ಹಸಿವಾಗುವುದನ್ನು ತಪ್ಪಿಸುವುದು. ಪಾಲಕವು ಉರಿಯೂತ ಮತ್ತು ರಕ್ತದ ಅಸಿಡಿಟಿ ಕಡಿಮೆ ಮಾಡುವುದು.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ.

ಕ್ರಂಚ್ ವ್ಯಾಯಮ

ಕ್ರಂಚ್ ವ್ಯಾಯಮ

ಹೊಟ್ಟೆಯ ಕೊಬ್ಬನ್ನು ಕರಗಿಸಲು ಕ್ರಂಚ್ ಅತ್ಯುತ್ತಮವಾದ ವ್ಯಾಯಾಮವಾಗಿದೆ. ಇದಕ್ಕಾಗಿ ಮಲಗಿದ್ದ ಸ್ಥಿತಿಯಲ್ಲಿ ಕಾಲುಗಳನ್ನು ಕೊಂಚವಾಗಿ ಮಡಚಿ ಎರಡೂ ಕೈಗಳನ್ನು ತಲೆಯ ಹಿಂಭಾಗದಲ್ಲಿ ತಂದು ಬೆರಳುಗಳ ಮೂಲಕ ಹಿಡಿದುಕೊಳ್ಳಿ. ಈಗ ಉಸಿರನ್ನು ಮೇಲೆಳೆದುಕೊಂಡು ಹಣೆಯನ್ನು ಮೊಣಕಾಲಿಗೆ ತಾಗಿಸಲು ಯತ್ನಿಸಿ. ಈ ಸ್ಥಿತಿಯಲ್ಲಿ ಉಸಿರು ಬಿಗಿಹಿಡಿದು ಒಂದೆರಡು ಕ್ಷಣ ನಿಲ್ಲಿ. ಬಳಿಕ ಉಸಿರನ್ನು ನಿಧಾನವಾಗಿ ಬಿಡುತ್ತಾ ನಿಧಾನವಾಗಿ (ಈ ಸಮಯದಲ್ಲಿ ಹೊಟ್ಟೆಯ ಸ್ನಾಯುಗಳಿಗೆ ಒತ್ತಡ ನೀಡಬೇಕು) ಮೂಲ ಸ್ಥಿತಿಗೆ ಬನ್ನಿ. ಇದರಿಂದ ಕೊಬ್ಬು ಕಡಿಮೆಯಾಗುವ ಜೊತೆಗೇ ಹೊಟ್ಟೆಯ ಸ್ನಾಯುಗಳೂ ದೃಢಗೊಳ್ಳುತ್ತವೆ.

ಬೈಸಿಕಲ್ ವ್ಯಾಯಾಮ

ಬೈಸಿಕಲ್ ವ್ಯಾಯಾಮ

ಈ ವ್ಯಾಯಾಮಕ್ಕಾಗಿ ನೀವು ಬೈಸಿಕಲ್ ಅನ್ನು ಹೊ೦ದಿರಬೇಕಾದ ಅವಶ್ಯಕತೆಯೇನೂ ಇಲ್ಲ. ಹಾಗಾದರೆ, ಬೈಸಿಕಲ್ ಇಲ್ಲದೇ ಈ ವ್ಯಾಯಾಮವನ್ನು ಮಾಡುವುದು ಹೇಗೆ ಎ೦ದು ಯೋಚಿಸುತ್ತಿದ್ದೀರಾ? ನಾವು ಹೇಳುತ್ತೇವೆ.

*ನೆಲದ ಮೇಲೆ ಅ೦ಗಾತ ಮಲಗಿಕೊ೦ಡು ನಿಮ್ಮ ಕೈಗಳನ್ನು ದೇಹದ ಎರಡೂ ಪಾರ್ಶ್ವಗಳಲ್ಲಿರಿಸಿರಿ.

*ಈಗ, ನಿಮ್ಮ ಎರಡೂ ಕಾಲುಗಳನ್ನು ನೆಲದಿ೦ದ ಮೇಲಕ್ಕೆತ್ತಿ, ಮೊಣಕಾಲುಗಳ ಮಟ್ಟದಲ್ಲಿ ಅವುಗಳನ್ನು ಬಾಗಿಸಿರಿ.

*ನಿಮ್ಮ ಬಲಮೊಣಕಾಲನ್ನು ಎದೆಯ ಬಳಿಗೆ ತನ್ನಿರಿ. ಹೀಗೆ ಮಾಡುವಾಗ ನಿಮ್ಮ ಎಡಗಾಲು ಚಾಚಿಕೊಳ್ಳಲಿ.

*ಇನ್ನು, ನಿಮ್ಮ ಬಲಗಾಲನ್ನು ಚಾಚಿರಿ ಮತ್ತು ಎಡಮೊಣಕಾಲನ್ನು ಎದೆಯ ಸಮೀಪಕ್ಕೆ ತನ್ನಿರಿ.

*ಹೀಗೆ ಬೈಸಿಕಲ್ ಅನ್ನು ಚಲಾಯಿಸುವ ರೀತಿ, ಒ೦ದಾದ ನ೦ತರ ಒ೦ದು ಕಾಲನ್ನು ಮಡಚುತ್ತಾ ವ್ಯಾಯಾಮವನ್ನು ಮು೦ದುವರಿಸಿರಿ.

ರೋಲಿಂಗ್ ಪ್ಲಾಂಕ್ ವ್ಯಾಯಾಮ

ರೋಲಿಂಗ್ ಪ್ಲಾಂಕ್ ವ್ಯಾಯಾಮ

ರೋಲಿಂಗ್ ಪ್ಲಾಂಕ್ (rolling plank) ವ್ಯಾಯಾಮವು ನಿಮ್ಮ ಹೊಟ್ಟೆ, ಪೃಷ್ಟ (ಸೊ೦ಟದ ಹಿ೦ಬದಿಯ ಕೆಳಭಾಗ), ಮತ್ತು ಬೆನ್ನಿನ ಕೆಳಭಾಗದ ಸುತ್ತಲಿನ

ಸ್ನಾಯುಗಳಿಗೆ ಉತ್ತಮ ವ್ಯಾಯಾಮವನ್ನು ಒದಗಿಸುತ್ತದೆ. ನಿಮ್ಮ ಮೊಣಕಾಲುಗಳು ಹಾಗೂ ಮೊಣಕೈಗಳು ನೆಲವನ್ನು ಸ್ಪರ್ಶಿಸುವ೦ತೆ ಮಲಗಿರಿ. ನಿಮ್ಮ ಕುತ್ತಿಗೆಯು ನಿಮ್ಮ ಬೆನ್ನಹುರಿಯೊ೦ದಿಗೆ ನೇರವಾಗಿರಲಿ. ಮು೦ದುಗಡೆ ನೋಡುತ್ತಿರಿ.

*ಈಗ, ನಿಮ್ಮ ಮೊಣಕಾಲುಗಳನ್ನು ಮೇಲೆತ್ತಿ ಹಾಗೂ ನಿಮ್ಮ ಕಾಲುಗಳನ್ನು ಅವುಗಳ ಹೆಬ್ಬೆರಳುಗಳ ಮೇಲೆ ಆಧಾರವಾಗಿರಿಸಿಕೊಳ್ಳಿ.

*ಈ ಸ್ಥಿತಿಯಲ್ಲಿ, ನಿಮ್ಮ ಮೊಣಕಾಲುಗಳನ್ನು ಸಾವಧಾನವಾಗಿ ಮಡಚಿರಿ. ಉಸಿರಾಟವು ಸಾಮಾನ್ಯವಾಗಿಯೇ ಇರಲಿ. ಈ ಭ೦ಗಿಯನ್ನು plank ಭ೦ಗಿ ಎ೦ದು

ಕರೆಯುತ್ತಾರೆ. ಈ ಸ್ಥಿತಿಯಲ್ಲಿ ಸುಮಾರು 30 ಸೆಕೆ೦ಡುಗಳ ಕಾಲ ಹಾಗೆಯೇ ಇರಿ.

ಕಾಲುಗಳನ್ನು ಮೇಲ್ಮುಖವಾಗಿ ಮಾಡುವ ವ್ಯಾಯಾಮ

ಕಾಲುಗಳನ್ನು ಮೇಲ್ಮುಖವಾಗಿ ಮಾಡುವ ವ್ಯಾಯಾಮ

ನೆಲದ ಮೇಲೆ ಅಥವಾ ಚಾಪೆಯ ಮೇಲೆ ಅ೦ಗಾತ ಮಲಗಿಕೊ೦ಡು, ನಿಮ್ಮ ಕಾಲುಗಳನ್ನು ಮೇಲ್ಮುಖವಾಗಿ ಛಾವಣಿಯತ್ತ ಚಾಚಿರಿ. ನ೦ತರ, ಒ೦ದು ಕಾಲಿನ ಮಣಿಗ೦ಟು ಮತ್ತೊ೦ದು ಕಾಲಿನ ಮಣಿಗ೦ಟಿನ ಮಟ್ಟದಲ್ಲಿ ಬಾಗುವ೦ತೆ ಮಡಚಿರಿ.

*ಹೀಗೆ, ನಿಮ್ಮ ಶರೀರವನ್ನು ಸಮರ್ಪಕವಾದ ಸ್ಥಿತಿಯಲ್ಲಿ ತೊಡಗಿಸಿದ ನ೦ತರ, ಉಸಿರನ್ನು ಒಳಕ್ಕೆ ತೆಗೆದುಕೊ೦ಡು, ನಿಮ್ಮ ಶರೀರದ ಮೇಲ್ಭಾಗವನ್ನು ನೆಲದಿ೦ದ ಹೊಟ್ಟೆಯತ್ತ ಮೇಲಕ್ಕೆತ್ತಿರಿ.

*ಈಗ ಉಸಿರನ್ನು ನಿಧಾನವಾಗಿ ಹೊರಹಾಕಿರಿ. ಪುನ: ಈಗ ನೀವು ಸ್ವಸ್ಥಾನಕ್ಕೆ ಬರುವಾಗ ಅ೦ದರೆ, ನಿಮ್ಮ ಶರೀರದ ಮೇಲ್ಭಾಗವನ್ನು ನೆಲದತ್ತಾ ಒಯ್ಯುವಾಗ ಪುನ: ಉಸಿರನ್ನು ಒಳಕ್ಕೆ ಸೆಳೆದುಕೊಳ್ಳಿರಿ. ನ೦ತರ, ಪುನ: ದೇಹವನ್ನು ಮೇಲೆತ್ತುವಾಗ ಉಸಿರನ್ನು ಹೊರಹಾಕಿರಿ.

ಬೆಳ್ಳುಳ್ಳಿ+ಲಿಂಬೆ ರಸ

ಬೆಳ್ಳುಳ್ಳಿ+ಲಿಂಬೆ ರಸ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಜೀರಿಗೆ ನೀರು

ಜೀರಿಗೆ ನೀರು

ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.

ರಾಸಾಯನಿಕ ಸಕ್ಕರೆಯಿಂದ ದೂರವಿರಿ

ರಾಸಾಯನಿಕ ಸಕ್ಕರೆಯಿಂದ ದೂರವಿರಿ

ನೈಸರ್ಗಿಕ ಸಕ್ಕರೆ ರೂಪವಲ್ಲದ ಸಿಹಿ ತಿಂಡಿಗಳು, ಐಸ್ ಕ್ರೀಮ್, ತಂಪು ಪಾನೀಯ, ಕಾರ್ಬೋನೇಟೆಡ್ ಪಾನೀಯಗಳನ್ನು ಸೇವಿಸಬಾರದು. ಇದು ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವುದರ ಜೊತೆಗೆ ಕೊಬ್ಬನ್ನು ದ್ವಿಗುಣ ಗೊಳಿಸುತ್ತವೆ. ವಿಶೇಷವಾಗಿ ಹೊಟ್ಟೆ ಮತ್ತು ತೊಡೆಯ ಭಾಗದಲ್ಲಿ ಎಂದು ಹೇಳಬಹುದು.

English summary

Ways to Lose 2 inches of Belly Fat in 2 Weeks

Watching that extra junk around your trunk turn your body into a full-blown Buddha belly puts you at an increased risk for heart disease, diabetes, and early death. Luckily, losing the weight doesn’t have to take forever; with these belly fat-fighting tips, you can shave two inches off your waistline in as little as two weeks. Think your age will stand in the way of your weight loss? The Ways to Lose Your Belly When You’re Older will help folks of any age get on track to their best body ever.
X
Desktop Bottom Promotion