ಓಟಗಾರನಾದರೆ ವೈದ್ಯರ ಬಳಿ ಒಮ್ಮೆ ಪರಿಶೀಲಿಸಿಕೊಳ್ಳಿ!

By: Hemanth
Subscribe to Boldsky

ಅಥ್ಲೆಟಿಕ್‌ಗಳಾಗಿರುವುದು ತುಂಬಾ ಒಳ್ಳೆಯ ವಿಚಾರ. ಇದರಿಂದ ಆರೋಗ್ಯವು ಚೆನ್ನಾಗಿರುತ್ತದೆ ಮತ್ತು ನೀವು ಪ್ರತಿನಿಧಿಸುತ್ತಿರುವ ರಾಜ್ಯ ಮತ್ತು ದೇಶಕ್ಕೆ ಒಂದೆರಡು ಪದಕಗಳು ಬರಬಹುದು. ಅದರಲ್ಲೂ ಮ್ಯಾರಥಾನ್ ಓಟಗಾರರಿದ್ದಾರಲ್ಲ ಅವರ ಜೀವನ ತುಂಬಾ ಭಿನ್ನವಾಗಿರುತ್ತದೆ. ಯಾಕೆಂದರೆ ಅವರು ಪ್ರತೀ ದಿನವೂ ಇಂತಿಷ್ಟು ಗಂಟೆ ಓಡಬೇಕು ಮತ್ತು ತಮ್ಮ ದೇಹದ ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಬೇಕು.   ನಿಧಾನವಾದ ಓಟ, ಮೆದುಳಿಗೆ ಊಟ, ಇದು ನಿತ್ಯದ ಪಾಠ!

ಆದರೆ ಯಾವುದಾದರೂ ಅನಾರೋಗ್ಯ ಕಾಡಿದಾಗ ನೀವು ವೈದ್ಯರಲ್ಲಿಗೆ ಹೋಗುತ್ತಾ ಇದ್ದರೆ ಅವರಲ್ಲಿ ನೀವು ಓಟಗಾರ ಅಥವಾ ದಿನಾ ಬೆಳಿಗ್ಗೆ ವಾಕಿಂಗ್ ಮಾಡುತ್ತೀರಿ ಎಂದು ಹೇಳಲು ಮರೆಯಬಾರದು. ಓಟಗಾರ ಎನ್ನುವ ವಿಚಾರವನ್ನು ನೀವು ವೈದ್ಯರಲ್ಲಿ ಹೇಳದೇ ಇದ್ದರೆ ಆಗ ಅವರಿಗೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವಾಗದು. ಆರೋಗ್ಯ ಟಿಪ್ಸ್: ದಿನನಿತ್ಯ ಓಟ, ಖಿನ್ನತೆ ದೂರ ಬಲುದೂರ!

ನೀವು ವೈದ್ಯರಲ್ಲಿ ನೀವು ಓಟಗಾರ ಎನ್ನುವುದನ್ನು ಸರಿಯಾಗಿ ಹೇಳಿದರೆ ಆಗ ನಿಮ್ಮ ಸಮಸ್ಯೆಯನ್ನು ಕಂಡು ಹಿಡಿದು ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ನೀವು ಓಟಗಾರ ಎಂದು ವೈದ್ಯರಲ್ಲಿ ಹೇಳುವುದು ಎಷ್ಟು ಅಗತ್ಯ ಎನ್ನುವ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ಹೇಳಿಕೊಡಲಿದೆ....   

ಹೃದಯ ಭಿನ್ನವಾಗಿ ವರ್ತಿಸಬಹುದು

ಹೃದಯ ಭಿನ್ನವಾಗಿ ವರ್ತಿಸಬಹುದು

ಅಥ್ಲೆಟಿಕ್‌ಗಳ ಹೃದಯದ ವಿನ್ಯಾಸ ಸ್ವಲ್ಪ ಭಿನ್ನವಾಗಿರುತ್ತದೆ. ಯಾಕೆಂದರೆ ವರ್ಷಗಟ್ಟಲೆ ಅಭ್ಯಾಸ ನಡೆಸುತ್ತಾ ಇರುವ ಕಾರಣದಿಂದ ಹೃದಯದ ಗಾತ್ರವು ಸ್ವಲ್ಪ ದೊಡ್ಡದಾಗಿರಬಹುದು. ಇದು ಸ್ವಲ್ಪ ನಿಧಾನವಾಗಿ ಬಡಿದುಕೊಂಡು ಪ್ರತೀ ಬಡಿತದ ವೇಳೆ ಹೆಚ್ಚಿನ ರಕ್ತವನ್ನು ಹೊರಹಾಕಬಹುದು. ಕೆಲವೊಂದು ಸಲ ಇದು ವೈದ್ಯಕೀಯವಾಗಿ ಅಸಹಜವಾಗಿರಬಹುದು. ಇದರಿಂದ ವೈದ್ಯರಿಗೆ ನೀವು ಓಟಗಾರನೆಂದು ಹೇಳುವುದು ಅಗತ್ಯ.

ಪ್ರದರ್ಶನದ ಮೇಲೆ ಪರಿಣಾಮ

ಪ್ರದರ್ಶನದ ಮೇಲೆ ಪರಿಣಾಮ

ಅತಿಯಾದ ರಕ್ತದೊತ್ತಡದಿಂದ ಬಳಲುತ್ತಾ ಇರುವ ಓಟಗಾರರು ತಾನು ಓಟಗಾರನೆನ್ನುವುದನ್ನು ವೈದ್ಯರಲ್ಲಿ ತಿಳಿಸಿ. ಯಾಕೆಂದರೆ ಕೆಲವೊಂದು ಚಿಕಿತ್ಸೆಗಳು ನಿಮ್ಮ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದು.

ಗಾಯಾಳುವಾಗಬಹುದು

ಗಾಯಾಳುವಾಗಬಹುದು

ಕಿಡ್ನಿಯ ರೋಗ, ಸೈನಸ್ ನಂತಹ ರೋಗಗಳಿಗೆ ನೀಡುವಂತಹ ಕೆಲವೊಂದು ಚಿಕಿತ್ಸೆಗಳು ನಿಮ್ಮ ಸ್ನಾಯುಗಳನ್ನು ದುರ್ಬಲಗೊಳಿಸಬಹುದು. ಇದರಿಂದ ನೀವು ಗಾಯಾಳುವಾಗುವ ಸಾಧ್ಯತೆ ಹೆಚ್ಚಿದೆ.

ತೂಕ ಹೆಚ್ಚಳ

ತೂಕ ಹೆಚ್ಚಳ

ದೈಹಿಕವಾಗಿ ನೀವು ಹೆಚ್ಚಿನ ವ್ಯಾಯಾಮ ಮಾಡುತ್ತಾ ಇದ್ದರೂ ತೂಕ ಹೆಚ್ಚಳವಾಗುತ್ತಾ ಇದ್ದರೆ ನೀವು ಖಂಡಿತವಾಗಿಯೂ ವೈದ್ಯರಿಗೆ ಇದರ ಬಗ್ಗೆ ತಿಳಿಸಬೇಕು. ನಿದ್ರೆಯಲ್ಲಿ ಉಸಿರು ಗಟ್ಟುವಿಕೆ ಮತ್ತು ಹೈಪರ್ ಥೈರಾಯ್ಡ್ ನಿಂದಾಗಿ ಈ ಸಮಸ್ಯೆಯಾಗಬಹುದು.

 
English summary

Reasons Why Your Doctor Needs To Know You're A Runner

Your running habits can explain a lot about your health, and withholding this information from the doctor is totally not advisable. Letting your doctor know about this will help you get an accurate diagnosis, safe treatment and much more. Continue reading this article to know why a doctor should know that you are a runner.
Story first published: Tuesday, March 14, 2017, 23:31 [IST]
Please Wait while comments are loading...
Subscribe Newsletter