ಕಟ್ಟು ಮಸ್ತಾದ ದೇಹದಾರ್ಢ್ಯಕ್ಕೆ ಪ್ರೋಟೀನ್‌ಯುಕ್ತ ತರಕಾರಿಗಳು

By: Arshad
Subscribe to Boldsky

ದೇಹದಾರ್ಧ್ಯ ಸ್ಪರ್ಧಿಗಳು ಮಾಂಸಾಹಾರಿಗಳಾಗಿರಬೇಕು ಎಂಬ ಅಲಿಖಿತ ನಂಬಿಕೆಯೊಂದು ನಮ್ಮಲ್ಲಿ ಆಳವಾಗಿ ಬೇರೂರಿಬಿಟ್ಟಿದೆ. ಏಕೆಂದರೆ ಸ್ನಾಯುಗಳನ್ನು ಹುರಿಗಟ್ಟಿಸಲು ಪ್ರೋಟೀನು ಅಗತ್ಯವಾಗಿದ್ದು ಇದು ಮಾಂಸಾಹಾರದ ಮೂಲಕ ಯಥೇಚ್ಛವಾಗಿ ಲಭ್ಯವಾಗುವ ಕಾರಣ ವ್ಯಾಯಾಮದ ಫಲ ಇತರರಿಗಿಂತ ಹೆಚ್ಚಾಗಿಯೇ ಸಿಗುವುದು ನಿಜ.   ಪ್ರೋಟೀನ್‌ಯುಕ್ತ ಆಹಾರಗಳ ಹಿಂದಿರುವ ಸತ್ಯ-ಮಿಥ್ಯ

ಮಾಂಸ ಮೀನು ಮುಟ್ಟುವುದಿಲ್ಲವಾದರೂ ಕನಿಷ್ಠ ಮೊಟ್ಟೆಯನ್ನಾದರೂ ತಿನ್ನದೇ ಇದ್ದರೆ ಹುರಿಗಟ್ಟಿಸುವುದು ಕಷ್ಟ ಎಂದು ನಾವೆಲ್ಲಾ ನಂಬಿದ್ದೇವೆ. ಈ ನಂಬಿಕೆಯಿಂದಲೇ ಎಷ್ಟೋ ಸಸ್ಯಾಹಾರಿ ವ್ಯಕ್ತಿಗಳು ದೇಹದಾರ್ಢ್ಯ ಪಡೆಯುವುದು ನಮ್ಮ ನಸೀಬಿನಲ್ಲಿಯೇ ಇಲ್ಲ ಎಂದು ಕಣದಿಂದ ಹೊರಗೇ ಉಳಿದುಬಿಡುತ್ತಾರೆ. ಆದರೆ ಮಾಂಸಾಹಾರದ ಮೂಲಕ ಮಾತ್ರ ಪ್ರೋಟೀನು ಸಿಗುತ್ತದೆ ಎಂಬ ನಂಬಿಕೆ ನಿರಾಧಾರವಾಗಿದ್ದು ಹೆಚ್ಚೂ ಕಡಿಮೆ ಇಷ್ಟೇ ಪ್ರಮಾಣದ ಪ್ರೋಟೀನುಗಳನ್ನು ಸಸ್ಯಾಹಾರದ ಮೂಲಕವೂ ಪಡೆಯಬಹುದು.

ಇದಕ್ಕೆ ಅತ್ಯಂತ ಸಮರ್ಥ ಉದಾಹರಣೆ ಎಂದರೆ ಮೊಳಕೆ ಬರಿಸಿದ ಕಾಳುಗಳು. ನಿಯಮಿತವಾಗಿ ವಿವಿಧ ಪ್ರೋಟೀನುಭರಿತ ತರಕಾರಿ ಮತ್ತು ಸತತ ವ್ಯಾಯಾಮ, ಸರಿಯಾದ ಜೀವನಶೈಲಿ, ಸೂಕ್ತ ನಿದ್ದೆ, ಒತ್ತಡ ರಹಿತ ಜೀವನ ಮೊದಲಾದವುಗಳಿಂದ ಆರೋಗ್ಯಕರವಾಗ ದೇಹ ಹಾಗೂ ಹುರಿಗಟ್ಟಿದ ಸ್ನಾಯುಗಳನ್ನು ಖಂಡಿತಾ ಪಡೆಯಬಹುದು. ಕಟ್ಟುಮಸ್ತಾದ ಕಾಯಕ್ಕಾಗಿ ಸೂಕ್ತವಾದ ಹತ್ತು ಆಹಾರಗಳು

ಎಷ್ಟೋ ವ್ಯಾಯಮ ಶಾಲೆಗಳಲ್ಲಿ ಸಸ್ಯಾಹಾರಿ ವ್ಯಕ್ತಿಗಳೂ ಬಂದು ತಮ್ಮ ಪ್ರಯತ್ನವನ್ನು ನಡೆಸುತ್ತಾರೆ. ಆದರೆ ಇವರ ಶರೀರಕ್ಕಿಂತಲೂ ಮಾಂಸಾಹಾರಿಗಳ ದೇಹ ಬೇಗಬೇಗನೇ ಹುರಿಗಟ್ಟುವುದನ್ನು ಕಂಡು ತಮ್ಮ ಆಹಾರ ಶೈಲಿಯ ಮೇಲೇ ಅನುಮಾನ ಪಟ್ಟುಕೊಳ್ಳುತ್ತಾ ಆತ್ಮವಿಶ್ವಾಸವನ್ನೂ ಕಳೆದುಕೊಳ್ಳುತ್ತಾರೆ. ಆದರೆ ಪ್ರೋಟೀನುಯುಕ್ತ ಆಹಾರಗಳನ್ನು ಇವರು ಆಯ್ಕೆ ಮಾಡಿಕೊಳ್ಳದೇ ಇರುವುದು ಪ್ರಮುಖ ಕೊರತೆಯಾಗಿದ್ದು ಇಂದಿನ ಲೇಖನ ಈ ಕೊರತೆಯನ್ನು ತುಂಬಲಿದೆ. ನಿಮಗೆ ಸೂಕ್ತವಾದುದನ್ನು ಆರಿಸಿ ಮಾಂಸಾಹಾರಿಗಳಿಗಿಂತಲೂ ಉತ್ತಮ ದೇಹದಾರ್ಢ್ಯ ಪಡೆದು ಆತ್ಮವಿಶ್ವಾಸ ಗಳಿಸಲು ನೆರವಾಗಲಿದೆ....   

ಮೊಳಕೆ ಬರಿಸಿದ ಅಲ್ಫಾಲ್ಫಾ ಧಾನ್ಯ: (alfafa)

ಮೊಳಕೆ ಬರಿಸಿದ ಅಲ್ಫಾಲ್ಫಾ ಧಾನ್ಯ: (alfafa)

ಒಂದು ಕಪ್ ಮೊಳಕೆ ಬರಿಸಿದ ಧಾನ್ಯದಲ್ಲಿ (ಕನ್ನಡದಲ್ಲಿ ಕುದುರೆ ಮೇವಿನ ಸೊಪ್ಪಿನ ಬೀಜ) ಸುಮಾರು 33ಗ್ರಾಂ ನಷ್ಟು ಪ್ರೋಟೀನು ಇದೆ. ಈ ಕಾಳುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಸ್ನಾಯುಗಳನ್ನು ಹುರಿಗಟ್ಟಿಸುವುದು ಮಾತ್ರವಲ್ಲ, ದೇಹದಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾ ಮಟ್ಟವನ್ನು ಕಡಿಮೆಗೊಳಿಸಲೂ ಸಾಧ್ಯವಾಗುತ್ತದೆ.ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯಕ್ಕೆ ಉತ್ತಮ

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಮತ್ತು ಬಸಲೆ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅಂಶವಿದ್ದು ರಕ್ತಹೀನತೆಯನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಒಂದು ಕಪ್ ಪಾಲಕ್ ಸೊಪ್ಪಿನಲ್ಲಿ ಸುಮಾರು ಮೂವತ್ತು ಗ್ರಾಂ ನಷ್ಟು ಪ್ರೋಟೀನೂ ಇದೆ. ಈ ಪ್ರೋಟೀನು ಖಂಡಿತವಾಗಿಯೂ ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ.

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ತೂಕ ಇಳಿಸಲು ನೆರವಾಗುತ್ತದೆ. ಆದರೆ ಒಂದು ಕಪ್ ಎಲೆಕೋಸಿನಲ್ಲಿ ಬರೋಬ್ಬರಿ ಎಪ್ಪತ್ತು ಗ್ರಾಂ ಪ್ರೋಟೀನು ಸಹಾ ಇದ್ದು ಸ್ನಾಯುಗಳನ್ನು ಬೆಳೆಸಲು ನೆರವಾಗುತ್ತದೆ. ಅಂದರೆ ಕೊಬ್ಬನ್ನು ಕರಗಿಸಿ ಸ್ನಾಯುಗಳನ್ನು ಬೆಳೆಸಲು ಈ ತರಕಾರಿ ಅತ್ಯುತ್ತಮವಾಗಿದೆ. ಊಹೆಗೂ ನಿಲುಕದ ಪ್ರಯೋಜನ-ಈ ಎಲೆಕೋಸಿನಲ್ಲಿದೆ!

ಶತಾವರಿ (Asparagus)

ಶತಾವರಿ (Asparagus)

ಒಂದು ಕಪ್ ಶತಾವರಿಯಲ್ಲಿ 134 ಗ್ರಾಂನಷ್ಟು ಭಾರೀ ಪ್ರಮಾಣದ ಪ್ರೋಟೀನ್ ಲಭ್ಯವಾಗುವ ಮೂಲಕ ಇದು ತರಕಾರಿಗಳಲ್ಲಿಯೇ ಅತ್ಯಂತ ಶ್ರೀಮಂತ ತರಕಾರಿ ಎಂಬ ಹೆಗ್ಗಳಿಕೆ ಪಡೆದಿದೆ. ಸ್ನಾಯು ಬೆಳೆಸುವವರಿಗೆ ಇದು ಖಂಡಿತವಾಗಿಯೂ ಮಾಂಸಾಹಾರಕ್ಕಿಂತಲೂ ಹೆಚ್ಚಿನ ಫಲ ನೀಡುತ್ತದೆ.

ಬ್ರೋಕೋಲಿ

ಬ್ರೋಕೋಲಿ

ಇದರ ಹಸಿರು ಬಣ್ಣ ಮತ್ತು ಕೊಂಚ ಕಹಿ-ಒಗರು ರುಚಿಯನ್ನು ಹೆಚ್ಚಿನವರು ಇಷ್ಟಪಡುವುದಿಲ್ಲ. ಆದರೆ ಒಂದು ಕಪ್ ಬ್ರೋಕೋಲಿಯಲ್ಲಿ ತೊಂಭತ್ತೊಂದು ಗ್ರಾಂ ಪ್ರೋಟೀನು ಇದೆ. ಈ ಮಾಹಿತಿಯ ಅರಿವಾದ ಬಳಿಕ ಸ್ನಾಯು ಬೆಳೆಸುವ ಇಚ್ಛೆಯುಳ್ಳವರಿಗೆ ಇದರ ರುಚಿ ಈಗ ಅಡ್ಡಿಯಾಗುವುದಿಲ್ಲ.

ಹೂಕೋಸು

ಹೂಕೋಸು

ಹೂಕೋಸು ಸಹಾ ಪ್ರೋಟೀನುಭರಿತ ಆಹಾರವಾಗಿದ್ದು ಒಂದು ಕಪ್ ನಲ್ಲಿ ಸುಮಾರು ನೂರು ಗ್ರಾಂ ಪ್ರೋಟೀನು ಇದೆ. ಅಲ್ಲದೇ ಇದರಲ್ಲಿ ಕೇವಲ ಇಪ್ಪತ್ತೈದು ಕ್ಯಾಲೋರಿಗಳು ಮಾತ್ರವೇ ಇರುವ ಕಾರಣ ಕೊಬ್ಬನ್ನು ಕರಗಿಸಿ ಸ್ನಾಯುಗಳನ್ನು ಹೆಚ್ಚಿಸುವವರಿಗೆ ಸೂಕ್ತವಾದ ಆಹಾರವಾಗಿದೆ. ಊಹೆಗೂ ನಿಲುಕದ ಪ್ರಯೋಜನ-ಈ ಹೂಕೋಸಿನಲ್ಲಿದೆ!

ಅಣಬೆಗಳು

ಅಣಬೆಗಳು

ಬಿಳಿ ಅಣಬೆ ಸಹಾ ಪ್ರೋಟೀನುಯುಕ್ತವಾಗಿದ್ದು ಅತಿ ಕಡಿಮೆ ಕೊಬ್ಬು ಹೊಂದಿದ ಆಹಾರವಾಗಿದೆ. ಒಂದು ಕಪ್ ನಲ್ಲಿ 103 ಗ್ರಾಂ ಪ್ರೋಟೀನು ಇದೆ ಹಾಗೂ ಅಣಬೆಯನ್ನು ಮಾಂಸಾಹಾರದ ಬದಲಿಗೆ ಬಳಸಿ ಮಾಂಸಾಹಾರದ್ದೇ ಮಸಾಲೆಗಳೊಂದಿಗೆ ಖಾದ್ಯ ತಯಾರಿಸುವ ಮೂಲಕ ಮಾಂಸಾಹಾರದ ರುಚಿಯ ಆದರೆ ಸಸ್ಯಾಹಾರಿ ಖಾದ್ಯವನ್ನು ಸವಿಯಬಹುದು ಹಾಗೂ ಸ್ನಾಯುಗಳನ್ನೂ ಬೆಳೆಸಿಕೊಳ್ಳಬಹುದು.ರುಚಿಯಾದ ಅಣಬೆ ನೂಡಲ್ಸ್ ಫ್ರೈ

 
English summary

Protein-Rich Vegetables For Muscle Building!

However, the process of your muscle building seems to be slower, in comparison to people who consume meat and eggs. This is in fact true, because, meat and eggs are direct sources of protein and it is easier for non-vegetarian to build muscles. But, many vegetarians are not aware that there are certain vegetables that can help them gain muscles mass quickly!
Story first published: Wednesday, February 8, 2017, 23:40 [IST]
Subscribe Newsletter