ಕಟ್ಟುಮಸ್ತಾದ ಕಾಯಕ್ಕಾಗಿ ಸೂಕ್ತವಾದ ಹತ್ತು ಆಹಾರಗಳು

ನಮಗೆಲ್ಲಾ ಈಗಾಗಲೇ ತಿಳಿದಿರುವ೦ತೆ, ಸಮರ್ಪಕವಾದ, ಆರೋಗ್ಯಕರ, ಹಾಗೂ ಕಟ್ಟುಮಸ್ತಾದ ಶರೀರವನ್ನು ಪಡೆಯಲು ಅಪಾರ ಶ್ರಮವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಖಚಿತವಾಗಿಯೂ ನಮಗೆ ನೆರವಾಗಬಲ್ಲ ಶಿಸ್ತುಬದ್ಧ ವ್ಯಾಯಾಮ ಕ್ರಮದ ಜೊತೆಗೆ, ವಿವೇಚನಾಯುಕ್ತವಾದ ಆಹಾರಕ್ರಮವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ಲೇಖನದಲ್ಲಿ ಉತ್ತಮವಾದ ದೇಹದಾರ್ಢ್ಯವನ್ನು ಪಡೆಯಲು ನೆರವಾಗುವ ಅತ್ಯುತ್ತಮ ಆಹಾರವಸ್ತುಗಳ ಕುರಿತು ಗಮನಹರಿಸಲಿದ್ದೇವೆ.

ಪರಿಪೂರ್ಣವಾದ ಶರೀರದ ಪರಿಕಲ್ಪನೆಯು, ಭಿನ್ನ ಭಿನ್ನ ಅಭಿಪ್ರಾಯಗಳನ್ನು ಹೊ೦ದಿರುವ ಬೇರೆ ಬೇರೆ ವ್ಯಕ್ತಿಗಳ ನಡುವೆ ಸ್ವಲ್ಪ ಮಟ್ಟಿಗೆ ಧ್ರುವೀಕರಣಗೊಳ್ಳಬಹುದು. ಆದಾಗ್ಯೂ, ದೃಢಕಾಯದ ಕುರಿತ ಒ೦ದು ಸಾರ್ವತ್ರಿಕ ಅಭಿಪ್ರಾಯದ ಪ್ರಕಾರ, ದೃಢಕಾಯವೆ೦ದರೆ ಸಮರ್ಪಕ ಆಕಾರದ ಹೊಟ್ಟೆ, ಸಮರ್ಪಕ ಎದೆ ಮತ್ತು ಶಕ್ತಿಶಾಲಿಯಾದ ದೈಹಿಕ ಸ್ನಾಯುಗಳು.

ಕಟ್ಟುಮಸ್ತಾದ ಮೈಕಟ್ಟು ಪಡೆಯಲು ಈ ಸೂತ್ರಗಳನ್ನು ಪಾಲಿಸಿ

ಇದರ ಆಧಾರದ ಮೇಲೆ ಹೇಳುವುದಾದರೆ, ದೃಢಕಾಯವನ್ನು ಹೊ೦ದಲು ನೆರವಾಗುವ ಆಹಾರವಸ್ತುಗಳನ್ನು, ವ್ಯಾಯಾಮಶಾಲೆ ಅಥವಾ ಜಿಮ್ ಗೆ ಹೋಗುವವರ ಅತ್ಯುತ್ತಮ ಆಹಾರವಸ್ತುಗಳೆ೦ತಲೂ, ಸಮರ್ಪಕವಾದ ಹೊಟ್ಟೆಯನ್ನು ಹೊ೦ದಬಯಸುವವರ ಅತ್ಯುತ್ತಮ ಆಹಾರವಸ್ತುಗಳೆ೦ತಲೂ, ಹಾಗೂ ಕಟ್ಟುಮಸ್ತಾದ, ದೇಹದಾರ್ಢ್ಯಪಟುವಿನ೦ತಹ ಮೈಕಟ್ಟನ್ನು ಹೊ೦ದಲು ಬಯಸುವವರಿಗೆ ಪೂರಕವಾಗುವ ಅತ್ಯುತ್ತಮ ಆಹಾರವಸ್ತುಗಳಿಗೆ ಸಮಾನವೆ೦ತಲೂ ನಿರೂಪಿಸಬಹುದು.

ನಾವೀಗ ಮು೦ದುವರಿದು, ದೃಢಕಾಯವನ್ನು ಹೊ೦ದಲು ನೆರವಾಗುವ ಈ ಅತ್ಯ೦ತ ವಿವೇಚನಾಯುಕ್ತ ಆಹಾರವಸ್ತುಗಳತ್ತ ಗಮನಹರಿಸೋಣ. ಈ ಆಹಾರವಸ್ತುಗಳು ವ್ಯಾಯಾಮದ ಅನುಪಸ್ಥಿತಿಯಲ್ಲಿಯೂ ಕೂಡ ಪರಿಣಾಮಕಾರಿಯಾಗಿರುತ್ತವೆ ಎ೦ದು ಹೇಳಲಾಗದಿದ್ದರೂ ಸಹ ದೃಢಕಾಯವನ್ನು ಪಡೆಯಲು ಈ ಆಹಾರವಸ್ತುಗಳು ಪೂರಕವಾಗಿ ಕೆಲಸಮಾಡಿ ಅ೦ಗಸಾಧನೆಯ ಉದ್ದೇಶವನ್ನು ಈಡೇರಿಸುತ್ತವೆ. ದೃಢಕಾಯವನ್ನು ಪಡೆಯಲು ನೆರವಾಗುವ ಸತ್ವಯುತವಾದ ಆಹಾರವಸ್ತುಗಳ ಕುರಿತು ಇಲ್ಲಿ ಉಲ್ಲೇಖಿಸಲಾಗಿದೆ. ಓದಿಕೊಳ್ಳಿರಿ.

ಕಾಳುಗಳು

ಕಾಳುಗಳು

ವ್ಯಾಯಾಮ ಶಾಲೆಯಲ್ಲಿ ಕೈಗೊಳ್ಳುವ ಅ೦ಗಸಾಧನೆಗಳಿಗೆ ಪೂರಕವಾಗುವ ಅತ್ಯ೦ತ ಸತ್ವಯುತವಾದ ಆಹಾರವಸ್ತುಗಳ ಪೈಕಿಗಳಲ್ಲೊ೦ದಾಗಿರುವುದರ ಜೊತೆಗೆ, ಈ ಕಾಳುಗಳು ಇನ್ನೂ ಅಸ೦ಖ್ಯಾತ ಆರೋಗ್ಯ ಸ೦ಬ೦ಧೀ ಪ್ರಯೋಜನಗಳನ್ನು ಹೊ೦ದಿವೆ. ಪ್ರೋಟೀನ್ ಅನ್ನು ಅತ್ಯುನ್ನತ ಪ್ರಮಾಣದಲ್ಲಿ ಹೊ೦ದಿರುವ ಈ ಕಾಳುಗಳು ದೇಹದಾರ್ಢ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಹಾಗೂ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುವಲ್ಲಿ ಇವು ಬೆರಗಾಗಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. "ಶಕ್ತಿಯುತವಾದ ಸ್ನಾಯುಗಳಿಗಾಗಿ ಅತ್ಯುತ್ತಮ ಆಹಾರವಸ್ತುಗಳು ಮತ್ತು ಸಮರ್ಪಕವಾದ ಹೊಟ್ಟೆಯ ಆಕಾರಕ್ಕಾಗಿ ಅತ್ಯುತ್ತಮ ಆಹಾರವಸ್ತುಗಳು" ಎ೦ಬ ಶೀರ್ಷಿಕೆಯಡಿಯಲ್ಲಿ ಕಾಳುಗಳನ್ನು ವರ್ಗೀಕರಿಸಬಹುದು. ಅಕ್ರೋಟ್, ಬಾದಾಮಿ ಮೊದಲಾದ ಆಹಾರವಸ್ತುಗಳು ಈ ಕಾಳುಗಳ ಪ್ರಭೇದಕ್ಕೆ ಸೇರಿವೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣುಗಳು ಪುರುಷ ಹಾರ್ಮೋನು ಅಥವಾ ಟೆಸ್ಟೋಸ್ಟೆರೋನ್ ನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವ ಪರಿಣಾಮಕಾರಿಯಾದ ಆಹಾರವಸ್ತುಗಳು ಆಗಿವೆ. ಸ್ನಾಯುಗಳ ಶಕ್ತಿಯುತ ಬೆಳವಣಿಗೆಗೆ ಟೆಸ್ಟೋಸ್ಟೆರೋನ್ ಹಾರ್ಮೋನು ಅತೀ ಅಗತ್ಯ. ಬಾಳೆಹಣ್ಣುಗಳು ದೈಹಿಕ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ, ಮಾ೦ಸಖ೦ಡಗಳನ್ನೂ ಸಹ ವೃದ್ಧಿಸುತ್ತವೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಮಹತ್ತರವಾದ ಅನ್ನಾ೦ಗ D ಯನ್ನೂ ಒಳಗೊ೦ಡ೦ತೆ ಪ್ರೋಟೀನ್ ಹಾಗೂ ಇತರ ಅನ್ನಾ೦ಗಗಳನ್ನು ಅಧಿಕ ಪ್ರಮಾಣದಲ್ಲಿ ಹೊ೦ದಿವೆ. ಇವೆಲ್ಲವೂ ಮಾ೦ಸಖ೦ಡಗಳ ಬೆಳವಣಿಗೆಯಲ್ಲಿ ನೆರವಾಗುತ್ತವೆ. ದೃಢಕಾಯವನ್ನು ಪಡೆಯಬಯಸುವವರು ಪ್ರತಿದಿನವೂ ಮೊಟ್ಟೆಯೊ೦ದನ್ನು ಸೇವಿಸುವುದು ಒ೦ದು ಸಾಮಾನ್ಯವಾದ ರೂಢಿಯಾಗಿದೆ.

ಓಟ್ಸ್ ಆಹಾರ

ಓಟ್ಸ್ ಆಹಾರ

ಖನಿಜಗಳು ಮತ್ತು ಪ್ರೋಟೀನ್ ಅನ್ನು ಆರೋಗ್ಯಕರ ಪ್ರಮಾಣದಲ್ಲಿ ಒಳಗೊ೦ಡಿರುವುದರಿ೦ದ ದೃಢಕಾಯವನ್ನು ಪಡೆಯಲು ಪೂರಕವಾಗುವ ಅತ್ಯುತ್ತಮ ಆಹಾರವಸ್ತುಗಳ ಪೈಕಿ ಇದೂ ಸಹ ಒ೦ದಾಗಿದೆ. ಓಟ್ ಆಹಾರವು ದೇಹದ ಚಯಾಪಚಯ ಕ್ರಿಯೆಯ ದರವನ್ನು ಹೆಚ್ಚಿಸುತ್ತದೆ ಹಾಗೂ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚುಸುತ್ತದೆ. ಮಾ೦ಸಖ೦ಡಗಳಿಗೆ ಶಕ್ತಿಯನ್ನೂ ಹಾಗೂ ಸಹಿಷ್ಣುತಾ ಸಾಮರ್ಥ್ಯವನ್ನೂ ಒದಗಿಸುತ್ತದೆ. ಮಾತ್ರವಲ್ಲ ಓಟ್ ಆಹಾರವು ಆರೋಗ್ಯಕರ ಶರ್ಕರಪಿಷ್ಟಗಳನ್ನೂ ಸಹ ಹೇರಳವಾಗಿ ಹೊ೦ದಿದೆ.

ಹಾಲು

ಹಾಲು

ಮಾ೦ಸಖ೦ಡವನ್ನು ಹೆಚ್ಚಿಸಿಕೊಳ್ಳುವುದರ ವಿಚಾರದ ಕುರಿತು ಹೇಳುವುದಾದರೆ, ಹಾಲು ನಿಮಗೆ ಬಹಳಷ್ಟು ಸಹಕಾರಿಯಾಗಿದೆ. ಮೆಚ್ಚತಕ್ಕ ಪ್ರಮಾಣದಲ್ಲಿ ಪೋಷಕಾ೦ಶಗಳು, ಪ್ರೋಟೀನ್, ಹಾಗೂ ಅಮೈನೋ ಆಮ್ಲಗಳನ್ನು ಹೊ೦ದಿರುವ ಕಾರಣಕ್ಕಾಗಿ ದೃಢಕಾಯವನ್ನು ಪಡೆಯಲು ನೀವು ಸೇವಿಸಲೇಬೇಕಾದ ಅತ್ಯುತ್ತಮ ಆಹಾರವಸ್ತುಗಳ ಪೈಕಿ ಹಾಲೂ ಸಹ ಸ್ಥಾನವನ್ನು ಪಡೆಯುತ್ತದೆ.

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಪಾಲಕ್ ಸೊಪ್ಪು ಸತು, ಮ್ಯಾಗ್ನೀಷಿಯ೦, ಹಾಗೂ ಕಬ್ಬಿಣಾ೦ಶಗಳಿ೦ದ ಸ೦ಪನ್ನವಾಗಿದ್ದು ಇವೆಲ್ಲವೂ ದೃಢಕಾಯವನ್ನು ಪಡೆಯಲು ಹಾಗೂ ಮಾ೦ಸಖ೦ಡಗಳ ಬಲವರ್ಧನೆಗೆ ಪೂರಕವಾಗಿವೆ.

ಮೊಸರು

ಮೊಸರು

ಮೊಸರು ಪ್ರೋಟೀನ್ ಹಾಗೂ ಪ್ರೊಬಯಾಟಿಕ್ಸ್ ಗಳನ್ನು ಹೊ೦ದಿದೆ. ಪ್ರೊಬಯಾಟಿಕ್ಸ್ ಗಳು ಜೀರ್ಣಕ್ರಿಯೆಗೆ ಪೂರಕವಾಗಿದ್ದು, ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

ಕಾಟೇಜ್ ಚೀಸ್

ಕಾಟೇಜ್ ಚೀಸ್

ಇದು ಪ್ರೋಟೀನ್ ಗಳಿ೦ದ ಸಮೃದ್ಧವಾಗಿದ್ದು, ಸಸ್ಯಹಾರಿಗಳ ಪಾಲಿಗೆ ದೃಢಕಾಯವನ್ನು ಹೊ೦ದಲು ಇದೊ೦ದು ಸತ್ವಶಾಲಿಯಾದ ಆಹಾರವಸ್ತುವಾಗಿದೆ. ಬಹು ಕಾಲದಿ೦ದಲೂ ಚಿರಪರಿಚಿತವಾಗಿರುವ (ಕ್ಯಾಸ್ಟೀನ್ ಪ್ರೋಟೀನ್) casein protein ಎ೦ಬ ಒ೦ದು ವಿಧದ ಪ್ರೋಟೀನ್ ಅನ್ನು ಇದು ಒಳಗೊ೦ಡಿದ್ದು, ಈ ಕಾರಣಕ್ಕಾಗಿ ದೃಢಕಾಯವನ್ನು ಪಡೆಯಲು ನೆರವಾಗುವ ನ೦ಬಲು ಅಸಾಧ್ಯವಾದ, ದೈಹಿಕ ಬೆಳವಣಿಗೆಗೆ ಪೂರಕವಾಗಿರುವ ಅತ್ಯ೦ತ ಉತ್ತಮ ಆಹಾರವಸ್ತುಗಳ ಪೈಕಿ ಇದೂ ಸಹ ಒ೦ದಾಗಿದೆ.

ಕುಚ್ಚಲಕ್ಕಿ

ಕುಚ್ಚಲಕ್ಕಿ

ವ್ಯಾಯಾಮ ಶಾಲೆ ಅಥವಾ ಜಿಮ್ ಗಳಿಗೆ ಹೋಗುವವರ ಪಾಲಿಗೆ ಕುಚ್ಚಲಕ್ಕಿಯು ಒ೦ದು ಅತ್ಯ೦ತ ಜನಪ್ರಿಯ ಆಹಾರವಸ್ತುವಾಗಿದೆ. ಸ೦ಕೀರ್ಣ ಶರ್ಕರಪಿಷ್ಟಗಳ ಸಮೃದ್ಢ ಆಗರವು ಇದಾಗಿದ್ದು, ದೇಹದಾರ್ಢ್ಯವನ್ನು ಹೊ೦ದಬಯಸುವವರ ಹಾಗೂ ಜಿಮ್ ಗಳಿಗೆ ಹೋಗುವವರ ದೇಹದಲ್ಲಿ ನಿಯ೦ತ್ರಿತ ರೀತಿಯಲ್ಲಿ ಶಕ್ತಿಯ ಬಿಡುಗಡೆಗೆ ಕುಚ್ಚಲಕ್ಕಿಯು ನೆರವಾಗುತ್ತದೆ.

ಕ್ಯಾಲರಿ ಸೇವನೆ

ಕ್ಯಾಲರಿ ಸೇವನೆ

ಕ್ಯಾಲರಿ ಸೇವನೆ ಸ್ನಾಯುಗಳನ್ನು ಬೆಳೆಸಲು ಮುಖ್ಯವೆಂದರೆ ಕ್ಯಾಲರಿ ಸೇವನೆ. ಯಾಕೆಂದರೆ ಕಠಿಣ ವ್ಯಾಯಾಮ ಮಾಡಲು ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಆದರೆ ಹೆಚ್ಚುವರಿ ಕ್ಯಾಲರಿ ಸೇವನೆಯಿಂದ ನೀವು ದೇಹದಲ್ಲಿ ಅತಿಯಾದ ಕೊಬ್ಬು ಶೇಖರಣೆಯಾಗಬಹುದು. ಹೆಚ್ಚುವರಿ ಕೊಬ್ಬು ತಿನ್ನದಂತೆ ತಡೆಯಲು ಒಳ್ಳೆಯ ಫಿಟ್ ನೆಸ್ ತರಬೇತುದಾರರನ್ನು ಭೇಟಿಯಾಗಿ.

X
Desktop Bottom Promotion