For Quick Alerts
ALLOW NOTIFICATIONS  
For Daily Alerts

ಎಚ್ಚರ: ದಿನನಿತ್ಯ ವ್ಯಾಯಮ ಮಾಡುವವರು, ಮದ್ಯಪಾನದಿಂದ ದೂರವಿರಿ!

ಆರೋಗ್ಯ ತಜ್ಞರ ಪ್ರಕಾರ, ವ್ಯಾಯಾಮದ ಮುನ್ನ ಅಥವಾ ಬಳಿಕದ ಮದ್ಯಪಾನದಿಂದ ಇತರ ಹೊತ್ತಿಗಿಂತಲೂ ಹೆಚ್ಚಿನ ಅಪಾಯವಿದೆಯಂತೆ!

By Arshad
|

ಒಂದು ವೇಳೆ ನೀವು ಭಾರ ಎತ್ತುವ ವ್ಯಾಯಾಮಗಳನ್ನು ಮಾಡುತ್ತಿದ್ದರೆ ಮದ್ಯಪಾನದಿಂದ ದೂರವಿದ್ದಷ್ಟೂ ನಿಮಗೇ ಒಳ್ಳೆಯದು. ಏಕೆಂದರೆ ಇದರ ಪರಿಣಾಮ ನಿಮ್ಮ ದೇಹದ ಮೇಲೆ ಹಲವು ರೀತಿಯಲ್ಲಾಗುತ್ತದೆ. ನಿಜವಾಗಿ ಹೇಳಬೇಕೆಂದರೆ ಆರೋಗ್ಯಕ್ಕೆ ಮದ್ಯಪಾನವೇ ಮಾರಕ. ವ್ಯಾಯಾಮ ಮಾಡದೇ ಇದ್ದರೂ ಮದ್ಯಪಾನದಿಂದ ಹೊರಬರುವುದೇ ಉತ್ತಮ ಮಾರ್ಗ. ಕಟ್ಟುಮಸ್ತಾದ ದೇಹಕ್ಕೆ ಇಲ್ಲಿದೆ ಪರಿಣಾಮಕಾರಿ ವ್ಯಾಯಮ

ನೀವು ಮದ್ಯಪಾನ ಏಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ವಿಶ್ವದ ಅತಿಹೆಚ್ಚು ಸಾಮಾನ್ಯ ಉತ್ತರವೆಂದರೆ ಇದರಿಂದ ಮನಸ್ಸು ನಿರಾಳವಾಗುತ್ತದೆ, ಚಿಂತೆ, ನೋವು ಮರೆಯಲು ಸಾಧ್ಯವಾಗುತ್ತದೆ ಎಂಬುದು. ಆದರೆ ವಾಸ್ತವವಾಗಿ ಮದ್ಯಪಾನದಿಂದ ನರವ್ಯವಸ್ಥೆ ಕುಂಠಿತಗೊಂಡು ಯೋಚನಾಸಾಮರ್ಥ್ಯ ಕುಂದುವುದನ್ನೇ ಹೆಚ್ಚಿನವರು ನೋವು ಮರೆಯುವ ಆಧಾರವೆಂದುಕೊಂಡಿದ್ದಾರೆ. ಕೊಬ್ಬು ಕರಗಿಸುವ ಸರಳ ವ್ಯಾಯಮ- ಒಮ್ಮೆ ಪ್ರಯತ್ನಿಸಿ!
ವಿಶೇಷವಾಗಿ ವ್ಯಾಯಾಮದ ಮುನ್ನ ಅಥವಾ ಬಳಿಕದ ಮದ್ಯಪಾನದಿಂದ ಇತರ ಹೊತ್ತಿಗಿಂತಲೂ ಹೆಚ್ಚಿನ ಅಪಾಯವಿದೆ. ಬನ್ನಿ, ಈ ಅಪಾಯಗಳು ಯಾವುವು ಎಂಬುದನ್ನು ನೋಡೋಣ....

ವಾಸ್ತವಾಂಶ #1

ವಾಸ್ತವಾಂಶ #1

ಮದ್ಯದ ವಿಶೇಷವೆಂದರೆ ಸೇವನೆಯ ಕೆಲವೇ ನಿಮಿಷಗಳಲ್ಲಿ ಇದು ಹೊಟ್ಟೆಯಿಂದ ಹೀರಲ್ಪಟ್ಟು ನೇರವಾಗಿ ರಕ್ತವನ್ನು ಸೇರುತ್ತದೆ. ಹಾಗಾಗಿ ವ್ಯಾಯಾಮಕ್ಕೂ ಮುನ್ನ ಮದ್ಯ ಸೇವಿಸಿದರೆ ತೂಕ ಎತ್ತುವಾಗ ಬೇಕಾಗುವ ಏಕಾಗ್ರತೆ, ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗದೇ ಅಪಾಯ ಎದುರಾಗಬಹುದು.

ವಾಸ್ತವಾಂಶ #2

ವಾಸ್ತವಾಂಶ #2

ರಕ್ತದಲ್ಲಿ ಮದ್ಯದ ಅಂಶವಿದ್ದಾಗ ಎರಡು ಕಡೆ ಭಾರವಿರುವ (ಉದಾಹರಣೆಗೆ ಪವರ್ ಪ್ರೆಸ್) ಭಾರಗಳನ್ನು ಎತ್ತುವ ವೇಳೆ ಅಗತ್ಯವಾಗಿ ಬೇಕಾಗಿದ್ದ ಸಾಮರ್ಥ್ಯ ಮತ್ತು ಆ ಹೊತ್ತಿಗೆ ನಮ್ಮ ನರವ್ಯವಸ್ಥೆ ನೀಡಬೇಕಾದ ಸೂಚನೆಗಳನ್ನು ಸಕಾಲದಲ್ಲಿ ಗ್ರಹಿಸದೇ ಸಮತೋಲನ ತಪ್ಪಿ ಭಾರ ಒಂದು ಬದಿ ಬಿದ್ದು ಅಪಘಾತಕ್ಕೀಡಾಗುವ ಸಂಭವವಿದೆ.

ವಾಸ್ತವಾಂಶ #3

ವಾಸ್ತವಾಂಶ #3

ವ್ಯಾಯಾಮದ ಬಳಿಕ ಮದ್ಯ ಸೇವಿಸಿದರೆ ಮದ್ಯದ ಪ್ರಭಾವದಿಂದ ಜೀವರಾಸಾಯನಿಕ ಕ್ರಿಯೆ ಹಾಗೂ ಇತರ ಕಾರ್ಯಗಳು ಸರಿಯಾಗಿ ನಡೆಯದೇ ವ್ಯಾಯಾಮದ ಮೂಲ ಉದ್ದೇಶವೇ ನೆರವೇರದೇ ಹೋಗಬಹುದು.

ವಾಸ್ತವಾಂಶ #4

ವಾಸ್ತವಾಂಶ #4

ಒಂದು ವೇಳೆ ವ್ಯಾಯಾಮಕ್ಕೂ ಮುನ್ನ ಸೇವಿಸಿದ ಮದ್ಯ ಪ್ರಭಾವವಾಗುತ್ತಿದೆ ಎಂದೆನ್ನಿಸಿದರೆ ಅಂದಿನ ವ್ಯಾಯಾಮವನ್ನು ಮಾಡದೇ ಹೋಗುವುದೇ ಜಾಣತನದ ಕ್ರಮ. ಏಕೆಂದರೆ ಅಮಲು ಏರಿದಂತೆ ತೂಕ ಮತ್ತು ಸಾಮರ್ಥ್ಯದ ಬಗ್ಗೆ ಪೊಳ್ಳು ಸಾಮರ್ಥ್ಯವೇರಿ ಇದು ಅಪಾಯಕ್ಕೆ ಎದುರು ಮಾಡಿಕೊಡಬಹುದು. ಆದ್ದರಿಂದ ಮದ್ಯದ ಅಮಲು ಪೂರ್ಣವಾಗಿ ಇಳಿದುಹೋಗುವವರೆಗೂ ವ್ಯಾಯಾಮ ಮಾಡದೇ ಇರುವುದೇ ಲೇಸು.

ವಾಸ್ತವಾಂಶ #5

ವಾಸ್ತವಾಂಶ #5

ಮದ್ಯದ ಇನ್ನೊಂದು ಪ್ರಭಾವವೆಂದರೆ ನಿರ್ಜಲೀಕರಣ. ವ್ಯಾಯಾಮಕ್ಕೂ ಮುನ್ನ ಮದ್ಯ ಸೇವಿಸಿದರೆ ದೇಹದಲ್ಲಿ ಎದುರಾಗುವ ನೀರಿನ ಕೊರತೆಯ ಸಮಯದಲ್ಲಿಯೇ ವ್ಯಾಯಾಮ ಮಾಡಿದರೆ ಸ್ನಾಯುಗಳು ಅತಿ ಹೆಚ್ಚಾಗಿ ಬಳಲುತ್ತವೆ. ಈ ಭಾರವನ್ನು ಹೊರಲಾರದೇ ದೇಹ ಕುಸಿದೂ ಬೀಳಬಹುದು.

ವಾಸ್ತವಾಂಶ #6

ವಾಸ್ತವಾಂಶ #6

ಮದ್ಯದ ಇನ್ನೊಂದು ಪ್ರಭಾವವೆಂದರೆ ಸುಸ್ತು. ವ್ಯಾಯಾಮದ ಬಳಿಕ ಎದುರಾಗುವ ಸುಸ್ತನ್ನು ಮದ್ಯದ ಪ್ರಭಾವ ಇನ್ನಷ್ಟು ಹೆಚ್ಚಿಸುತ್ತದೆ. ದೇಹದ ಎಲ್ಲಾ ಅಂಗಗಳು ಇನ್ನಿಲ್ಲದಷ್ಟು ಬಳಲಿ ಅತಿ ಹೆಚ್ಚಿನ ವಿಶ್ರಾಂತಿ ಬೇಡುತ್ತವೆ. ಆದರೆ ಮರುದಿನ ಬೆಳಿಗ್ಗೆ ಕಛೇರಿಗೆ, ಕೆಲಸಕ್ಕೆ ಹೋಗಲೇಬೇಕಾದ ಸಂದರ್ಭದಲ್ಲಿ ಸೂಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ನಿಮ್ಮ ಕಾರ್ಯಕ್ಷಮತೆ ಉಡುಗಬಹುದು. ಇದರ ಪರೋಕ್ಷ ಪರಿಣಾಮಗಳು ಭೀಕರವಾಗಬಹುದು.

ವಾಸ್ತವಾಂಶ #7

ವಾಸ್ತವಾಂಶ #7

ಇನ್ನೊಂದು ಕಟುವಾಸ್ತವವೆಂದರೆ ಮದ್ಯದ ಸೇವನೆಯಿಂದ ಜೀರ್ಣಾಂಗಗಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಉಡುಗುವುದು. ಆದ್ದರಿಂದ ವ್ಯಾಯಾಮದ ಕಾರಣದಿಂದ ಬಳಲಿದ ಸ್ನಾಯುಗಳಿಗೆ ಸಾಕಷ್ಟು ಶಕ್ತಿ ದೊರಕದೇ ಶಕ್ತಿಹೀನವಾಗುತ್ತವೆ ಹಾಗೂ ಅಪಾರವಾದ ಮೈ ಕೈ ನೋವು ಕಾಣಿಸಿಕೊಳ್ಳುತ್ತದೆ.

ವಾಸ್ತವಾಂಶ #8

ವಾಸ್ತವಾಂಶ #8

ವ್ಯಾಯಾಮದ ಬಳಿಕ ಸ್ನಾಯುಗಳ ಬೆಳವಣಿಗೆಗೆ ಹಾಗೂ ಹೆಚ್ಚಿನ ಭಾರದ ಕಾರಣ ತುಂಡಾಗಿದ್ದ ಸ್ನಾಯುಗಳ ಅಂಗಾಂಶಗಳು ರಿಪೇರಿಗೊಳ್ಳಲು ಸಾಕಷ್ಟು ನಿದ್ದೆಯ ಅವಶ್ಯಕತೆ ಇದೆ. ಮದ್ಯದ ಪ್ರಭಾವದಿಂದ ನಿದ್ದೆ ಬರದೇ ಕೇವಲ ಅಮಲಿನ ಅರೆಬರೆ ನಿದ್ದೆ ಇರುವ ಕಾರಣ ಸ್ನಾಯುಗಳು ರಿಪೇರಿಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಾಯಾಮದ ಪ್ರಯೋಜನ ಪಡೆಯುವುದಿರಲಿ, ಇರುವ ಸ್ನಾಯುಗಳೂ ನಷ್ಟಗೊಳ್ಳುವ ಸಾಧ್ಯತೆ ಹೆಚ್ಚು.

English summary

Negative Effects of Alcohol After Exercise

Here are just a few of the myriad number of ill effects of alcohol on people who lift weights or engage in fitness activities.
X
Desktop Bottom Promotion