For Quick Alerts
ALLOW NOTIFICATIONS  
For Daily Alerts

ಕಟ್ಟುಮಸ್ತಾದ ದೇಹಕ್ಕೆ ಇಲ್ಲಿದೆ ಪರಿಣಾಮಕಾರಿ ವ್ಯಾಯಮ

By Deepu
|

ಇತ್ತೀಚಿನ ದಿನಗಳಲ್ಲಿ ಹಲವಾರು ಹಿಂದಿ ಮತ್ತು ಕನ್ನಡ ಚಿತ್ರನಟರೂ ತಮ್ಮ ದೇಹವನ್ನು ಹುರಿಗಟ್ಟಿಸಿ ಸಿನಿ ಪ್ರಿಯರ ಎದೆಯಲ್ಲಿ ಬೆಚ್ಚನೆಯ ಚಳಿ ಹುಟ್ಟಿಸುವುದರ ಜೊತೆಗೆ, ಯುವಕರಲ್ಲಿಯೂ ಕಟ್ಟುಮಸ್ತಾದ ದೇಹ ಹೊಂದುವತ್ತ ಪ್ರೇರೇಪಿಸುತ್ತಿದ್ದಾರೆ. ಆದರೆ ಈ ಕಟ್ಟುಮಸ್ತಾದ ದೇಹವನ್ನು ಪಡೆಯುವುದು ಅಷ್ಟು ಸುಲಭವಲ್ಲ. ಸತತ ವ್ಯಾಯಾಮ ಹಾಗೂ ಸೂಕ್ತ ಆಹಾರ ನಿದ್ರೆಗಳೂ ಮುಖ್ಯ. ದೇಹದ ಎದೆ, ಕೈಕಾಲುಗಳು ಮತ್ತು ಭುಜದ ಸ್ನಾಯುಗಳನ್ನು ಹುರಿಗಟ್ಟಿಸುವ ಮೂಲಕ ಸುಂದರ ಶರೀರವನ್ನು ಪಡೆಯಬಹುದು.

ಈ ಸ್ನಾಯುಗಳನ್ನು ಹುರಿಗಟ್ಟಿಸಲು ಕೆಲವು ಸರಳ ಆದರೆ ಪ್ರಬಲವಾದ ವ್ಯಾಯಾಮವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಕೇವಲ ವ್ಯಾಯಾಮದಿಂದ ಸ್ನಾಯುಗಳು ಹುರಿಗಟ್ಟುವುದಿಲ್ಲ. ವ್ಯಾಯಾಮಕ್ಕೂ ಮೊದಲು ಶರೀರವನ್ನು ಬೆಚ್ಚಗಾಗಿಸುವುದು, ಶರೀರವನ್ನು ಸಡಿಲಗೊಳಿಸುವುದು ಹಾಗೂ ನಿತ್ಯಕರ್ಮಗಳ ಒತ್ತಡದಿಂದ ಪಾರಾಗಿರುವುದು ಮುಖ್ಯವಾಗಿದೆ. ಅತ್ಯುತ್ತಮ ಶರೀರಕ್ಕಾಗಿ ಅತ್ಯುತ್ತಮ ವ್ಯಾಯಾಮಗಳು ಇಲ್ಲಿವೆ ಮುಂದೆ ಓದಿ...

ಸಂಯುಕ್ತ ವ್ಯಾಯಾಮ

ಸಂಯುಕ್ತ ವ್ಯಾಯಾಮ

ಒಂದಕ್ಕಿಂತ ಹೆಚ್ಚು ಸ್ನಾಯು ಗುಂಪು ಮತ್ತು ಒಂದಕ್ಕಿಂತ ಹೆಚ್ಚು ಜಂಟಿ ಸ್ನಾಯುಗಳನ್ನು ಬಳಸಿಕೊಂಡು (ಅಳವಡಿಸಿಕೊಂಡಿರುವ/ಹೊಂದಿರುವ) ಮಾಡುವ ವ್ಯಾಯಾಮವೇ ಸಂಯುಕ್ತ ವ್ಯಾಯಾಮ. ಸ್ನಾಯು ಬಲ ಹೆಚ್ಚಿಸಲು ಇದು ಸರಿಯಾದ ವ್ಯಾಯಾಮ ಕ್ರಮವಾಗಿದೆ.

ಬಸ್ಕಿ ಮತ್ತು ತೂಕದೊಂದಿಗಿನ ಬಸ್ಕಿ (Squats And Dead Lift)

ಬಸ್ಕಿ ಮತ್ತು ತೂಕದೊಂದಿಗಿನ ಬಸ್ಕಿ (Squats And Dead Lift)

ಚಿಕ್ಕವರಿದ್ದಾಗ ಗುರುಗಳು ಕಿವಿ ಹಿಡಿದು ಬಸ್ಕಿ ಹೊಡೆಯಲು ನೀಡುತ್ತಿದ್ದ ಶಿಕ್ಷೆ ಈಗ ತೊಡೆಗಳ ಮತ್ತು ಮೀನಖಂಡಗಳ ಸ್ನಾಯುಗಳನ್ನು ಹುರಿಗಟ್ಟಿಸಲು ನೆರವಾಗುತ್ತದೆ. ಬಸ್ಕಿಯಲ್ಲಿ ಯಾವುದೇ ತೂಕವಿಲ್ಲದೇ ಕೇವಲ ಕೈಗಳನ್ನು ಭೂಮಿಗೆ ಸಮಾನಾಂತರವಾಗಿ ಚಾಚುವ ಮೂಲಕ, ಸರಳ ತೂಕವನ್ನು ಹಿಡಿಯುವ ಮೂಲಕ ಉತ್ತಮ ವ್ಯಾಯಾಮ ದೊರಕುತ್ತದೆ. ತೂಕದೊಂದಿಗಿನ ಬಸ್ಕಿಯಲ್ಲಿ ಮಾತ್ರ ಹೆಚ್ಚಿನ ತೂಕದೊಂದಿಗೆ ನಿಲ್ಲುವ ಮೂಲಕ ತೊಡೆ ಮತ್ತು ಮೀನಖಂಡಗಳ ಸ್ನಾಯುಗಳು ಕೊಂಚ ಹೆಚ್ಚಿನ ಸೆಳೆತ ಪಡೆಯುತ್ತವೆ.

ಅಲ್ಪದೂರವನ್ನು ಅತಿವೇಗವಾಗಿ ಕ್ರಮಿಸುವುದು (Sprints)

ಅಲ್ಪದೂರವನ್ನು ಅತಿವೇಗವಾಗಿ ಕ್ರಮಿಸುವುದು (Sprints)

ಇಡಿಯ ದೇಹದ ಅಷ್ಟೂ ಸ್ನಾಯುಗಳಿಗೆ ಪೂರ್ಣಪ್ರಮಾಣದ ಸೆಳೆತ ನೀಡಲು ಸ್ಪ್ರಿಂಟ್ ಓಟ ಅತ್ಯುತ್ತಮವಾಗಿದೆ. ಆದರೆ ಈ ಓಟಕ್ಕೂ ಮೊದಲು ಶರೀರ ಸಂಪೂರ್ಣವಾಗಿ ಬೆಚ್ಚಗಾಗಿರುವುದು, ಎಲ್ಲಾ ಸೆಳೆತದ ವ್ಯಾಯಾಮಗಳನ್ನು ಪೂರ್ಣಗೊಳಿಸಿರುವುದು ಮುಖ್ಯವಾಗಿದೆ. ದಿನದ ವ್ಯಾಯಾಮದ ಕೊನೆಯ ಹಂತದಲ್ಲಿ ಈ ಓಟವನ್ನು ಓಡಿ ಶರೀರವನ್ನು ಪೂರ್ಣವಾಗಿ ದಣಿಸಿ ಬಳಿಕ ವಿಶ್ರಾಂತಿ ಪಡೆಯುವುದು ಆರೋಗ್ಯಕರವಾಗಿದೆ.

 ಕಡಿಮೆ ತೂಕವನ್ನು ಬಳಸುವ ವ್ಯಾಯಾಮಗಳು

ಕಡಿಮೆ ತೂಕವನ್ನು ಬಳಸುವ ವ್ಯಾಯಾಮಗಳು

ಹೆಚ್ಚು ತೂಕವನ್ನು ಬಳಸಿ ಹತ್ತು ಬಾರಿ ಮಾಡುವ ವ್ಯಾಯಾಮಕ್ಕಿಂತ ಕಡಿಮೆ ತೂಕ ಬಳಸಿ ಪ್ರತಿಸಲ ಹತ್ತರಂತೆ ಐದು ಅಥವಾ ಹತ್ತು ಬಾರಿ ಪುನರಾವರ್ತಿಸುವುದರಿಂದ ಸ್ನಾಯುಗಳು ಹೆಚ್ಚು ಹುರಿಗಟ್ಟುತ್ತವೆ. ಒಂದರ್ಥದಲ್ಲಿ ಕುಲುಮೆಯ ಕಬ್ಬಿಣದ ಪೆಟ್ಟಿಗೂ ಅಕ್ಕಸಾಲಿಗನ ನವಿರಾದ ಪೆಟ್ಟಿಗೂ ಇರುವ ವ್ಯತ್ಯಾಸದಂತೆ.

 ಸರಿಯಾಗಿ ನೀರು ಸೇವಿಸಿ

ಸರಿಯಾಗಿ ನೀರು ಸೇವಿಸಿ

ದ್ರವ ಮತ್ತು ನೀರನ್ನು ಹೆಚ್ಚು ಸೇವನೆ ಮಾಡುವುದು ದೇಹದಾರ್ಢ್ಯ ಮತ್ತು ಸ್ನಾಯುಗಳ ಬೆಳವಣಿಗಗೆ ಅತಿ ಮುಖ್ಯ. ದಿನವಿಡೀ ತುಂಬಾ ನೀರು ಕುಡಿಯಿರಿ. ಇದರಿಂದ ವ್ಯಾಯಾಮದ ವೇಳೆ ನಿರ್ಜಲೀಕರಣವಾಗುವುದು ತಪ್ಪುತ್ತದೆ. ವ್ಯಾಯಾಮದ ವೇಳೆ ಪ್ರತೀ 10-20 ನಿಮಿಷಕ್ಕೊಮ್ಮೆ ನೀರು ಕುಡಿಯಿರಿ. ನಿರ್ಜಲೀಕರಣವಾದರೆ ಅದು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಸ್ನಾಯುಗಳ ಬೆಳವಣಿಗೆಗೆ ಸೇವಿಸಬೇಕಾದ ಆಹಾರಗಳು

ಸ್ನಾಯುಗಳ ಬೆಳವಣಿಗೆಗೆ ಸೇವಿಸಬೇಕಾದ ಆಹಾರಗಳು

ಕೆಂಪು ಮಾಂಸದಲ್ಲಿ ಕಬ್ಬಿನಾಂಶವು ಸಮೃದ್ಧವಾಗಿದೆ. ಇದು ಮಾಂಸಖಂಡಗಳ ಬೆಳವಣಿಗೆಗೆ ಮುಖ್ಯ. ದೇಹವನ್ನು ಕಟ್ಟುಮಸ್ತಾಗಿಸಲು ಮೊಟ್ಟೆ ಕೂಡ ಮುಖ್ಯ. ವಿವಿಧ ಪ್ರೋಟೀನ್ ಮೂಲಗಳಿಂದ ವಿವಿಧ ರೀತಿಯ ಪೌಷ್ಠಿಕಾಂಶಗಳನ್ನು ಪಡೆಯಬಹುದು.

English summary

The Best Total-Body Exercises for Men

Besides the exercises that give you a toned body, your regime must include certain aspects including warming up and stretching. We will discuss all the ways to get a toned body- points that include ways to get toned arms, a toned chest and toned thighs. Let us go ahead and look at these exercises for the perfect body
X
Desktop Bottom Promotion