Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ತೂಕ ಇಳಿಸುವ ಟಿಪ್ಸ್: ಅಡುಗೆ ಸೋಡಾ+ಲಿಂಬೆ-ಮಹಿಮೆ ಮಾತ್ರ ಅಪಾರ!
ಪ್ರತಿಯೊಬ್ಬರಿಗೂ ಸ್ಲಿಮ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇದ್ದೇ ಇರುತ್ತದೆ. ಬೊಜ್ಜು ದೇಹದವರಾದೆರ ಹೀಯಾಳಿಕೆ ಕಟ್ಟಿಟ್ಟ ಬುತ್ತಿಯಾಗಿರುವ ಕಾರಣ ಅವರು ಕೂಡ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಬಯಸುತ್ತಾರೆ. ಆದರೆ ದೇಹದ ತೂಕ ಇಳಿಸುವುದು ಅಷ್ಟು ಸುಲಭದ ಕೆಲಸವಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ದೇಹದ ತೂಕವನ್ನು ಹೇಗಾದರೂ ಮಾಡಿ ಹೆಚ್ಚಿಸಿಕೊಳ್ಳಬಹುದು. ಆದರೆ ಅದನ್ನು ಇಳಿಸುವುದು ಮಾತ್ರ ತುಂಬಾ ಕಠಿಣ ಎಂದು ಇದರ ಪ್ರಯತ್ನ ಮಾಡಿದವರಿಗೆ ತಿಳಿದಿದೆ.
ತೂಕ ಕಳೆದುಕೊಳ್ಳಲು ಹಲವಾರು ರೀತಿಯ ವ್ಯಾಯಾಮಗಳು ಇವೆ. ಇದರೊಂದಿಗೆ ಸರಿಯಾದ ಆಹಾರ ಕ್ರಮ ಪಾಲಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಆದರೆ ಬೋಲ್ಡ್ ಸ್ಕೈ ಹೇಳಲು ಹೊರಟಿರುವುದು ಅಡುಗೆ ಸೋಡಾದಿಂದ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು. ಸರಿಯಾದ ರೀತಿಯಲ್ಲಿ ಅಡುಗೆ ಸೋಡಾವನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ತೂಕ ಕಳೆದುಕೊಳ್ಳುವ ಪ್ರಕ್ರಿಯೆಯು ದ್ವಿಗುಣವಾಗುವುದು. ಅಡುಗೆ ಸೋಡಾವು ಅಜೀರ್ಣಕ್ಕೆ ಸಂಬಂಧಿಸಿದ ನೋವನ್ನು ನಿವಾರಣೆ ಮಾಡಿ ಕೊಬ್ಬನ್ನು ವಿಭಜನೆ ಮಾಡಿ ಚಯಾಪಚಾಯ ಕ್ರಿಯೆ ಹೆಚ್ಚಿಸುವುದು.
ಅಡುಗೆ ಸೋಡಾವು ದೇಹದಲ್ಲಿ ಶಕ್ತಿಯ ಕೊರತೆ ಉಂಟು ಮಾಡಿ ದೇಹದಲ್ಲಿ ಕರಗುವ ಕ್ಯಾಲರಿಗಿಂತ ನೀವು ತಿನ್ನುವ ಕ್ಯಾಲರಿ ಕಡಿಮೆಯಾಗುವುವಂತೆ ನೋಡಿಕೊಳ್ಳುವುದು. ವ್ಯಾಯಾಮದ ವೇಳೆ ಲ್ಯಾಕ್ಟಿಕ್ ಆಮ್ಲವು ರಚನೆಯಾಗುವುದನ್ನು ಅಡುಗೆ ಸೋಡಾವು ತಟಸ್ಥಗೊಳಿಸುವುದು. ಕೊಬ್ಬು ಹೆಚ್ಚಿರುವ ಆಹಾರಗಳಲ್ಲಿ ಇದು ಆಮ್ಲೀಯತೆಯನ್ನು ತಟಸ್ಥಗೊಳಿಸುವುದು. ತೂಕ ಕಳೆದುಕೊಳ್ಳಲು ಬಯಸುವಂತಹವರು ಇನ್ನು ಮುಂದೆ ತಮ್ಮ ಆಹಾರ ಕ್ರಮದಲ್ಲಿ ಅಡುಗೆ ಸೋಡಾವನ್ನು ಹೇಗೆ ಬಳಸುವುದು ಎಂದು ಹೇಳಿಕೊಡಲಿದೆ...

ಬೇಕಾಗುವ ಸಾಮಗ್ರಿಗಳು
*ಅರ್ಧ ಟೀ ಚಮಚ ಅಡುಗೆ ಸೋಡಾ

ಬೇಕಾಗುವ ಸಾಮಗ್ರಿಗಳು
*½ ಕಪ್ ನೀರು

ಬೇಕಾಗುವ ಸಾಮಗ್ರಿಗಳು
* ಅರ್ಧ ಲಿಂಬೆರಸ

ತಯಾರಿಸುವ ವಿಧಾನ
ಒಂದು ಲೋಟ ನೀರಿಗೆ ಅಡುಗೆ ಸೋಡಾ ಹಾಕಿಕೊಂಡು ಸಂಪೂರ್ಣವಾಗಿ ಕರಗುವ ತನಕ ಇದನ್ನು ಕಲಸಿಕೊಳ್ಳಿ.

ತಯಾರಿಸುವ ವಿಧಾನ
ಇದಕ್ಕೆ ಲಿಂಬೆರಸವನ್ನು ಹಾಕಿಕೊಂಡು, ಚೆನ್ನಾಗಿ ಕಲಸಿಕೊಳ್ಳಿ, ಬೆಳಿಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ.

ತಯಾರಿಸುವ ವಿಧಾನ
ಪ್ರತಿನಿತ್ಯ ಇದನ್ನು ಸೇವಿಸಿ ಫಲಿತಾಂಶ ಕಾಣಿರಿ. ಈ ಪಾನೀಯವು ಕೊಬ್ಬು ಕರಗಿಸುವ ಪ್ರಕ್ರಿಯೆಯನ್ನು ವೇಗವಾಗಿಸಿ ತೂಕ ಕಳೆದುಕೊಳ್ಳಲು ನೆರವಾಗುವುದು.



Click it and Unblock the Notifications
