ಜಪಾನೀಯರ 'ಜೀರೋ ಫಿಗರ್' ಹಿಂದಿರುವ ಫಿಟ್‌ನೆಸ್‌‌ನ ರಹಸ್ಯ!

By: manu
Subscribe to Boldsky

ಈ ಜಗತ್ತಿನ ಪ್ರತಿ ದೇಶದಿಂದಲೂ ಕಲಿತುಕೊಳ್ಳಬೇಕಾದ ಪಾಠಗಳಿವೆ. ಪ್ರತಿ ಸಂಸ್ಕೃತಿಯಲ್ಲಿಯೂ ಕೆಲವಾರು ಒಳ್ಳೆಯ ಅಂಶಗಳಿದ್ದು ಇವುಗಳಿಂದಲೂ ಕಲಿಯಬೇಕಾದುದು ಬಹಳಷ್ಟಿದೆ. ಉದಾಹರಣೆಗೆ ಭಾರತ ಕಲಿಸುವ ಯೋಗ ಹಾಗೂ ಆಯುರ್ವೇದ. ಇದೇ ರೀತಿ ಜಪಾನ್ ದೇಶದಿಂದ ಕಲಿಯಬೇಕಾದ ಶಿಸ್ತು, ಕ್ರಮಬದ್ಧತೆ, ಉತ್ಕೃಷ್ಟತೆ ಇತ್ಯಾದಿ.

ಅಷ್ಟೇ ಅಲ್ಲ, ಜಪಾನ್ ದೇಶದ ಮಹಿಳೆಯರು ತೆಳ್ಳಗಿದ್ದು ತಮ್ಮ ಸಹಜಸೌಂದರ್ಯವನ್ನು ದೀರ್ಘಕಾಲದವರೆಗೆ ಉಳಿಸಿಕೊಂಡು ಹೋಗುವುದನ್ನು ಕಂಡು ಅಚ್ಚರಿ ಪಡುವವರಿಗೆ ಇದಕ್ಕೆ ಕಾರಣ ಅವರ ಆಹಾರಾಭ್ಯಾಸವೆಂದು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗಿಲ್ಲ. ತಪ್ಪದೇ ಓದಿ, ಜಪಾನ್ ತರುಣಿಯರ ಸೌಂದರ್ಯದ ಗುಟ್ಟು.... 

ಜಪಾನ್‪ನಲ್ಲಿ ಹೆಚ್ಚಿನ ಸಂಖ್ಯೆಯ ವೃದ್ಧರು ಇರುವುದು ಹಾಗೂ ನಡುವಯಸ್ಸು ದಾಟಿದ ಬಳಿಕವೂ ತಾರುಣ್ಯದ ತ್ವಚೆಯನ್ನು ಉಳಿಸಿಕೊಂಡು ಬಂದಿರುವುದಕ್ಕೆ ಅವರ ಜೀವನಕ್ರಮವೂ ಇನ್ನೊಂದು ಕಾರಣ ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ.... 

ಇವರು ಹಸಿರು ಟೀಯನ್ನೇ ಸೇವಿಸುತ್ತಾರೆ

ಇವರು ಹಸಿರು ಟೀಯನ್ನೇ ಸೇವಿಸುತ್ತಾರೆ

ಹಸಿರು ಟೀ ಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಇದು ಕ್ಯಾನ್ಸರ್ ಕಾರಕ ಹಾಗೂ ಚರ್ಮವನ್ನು ಸಡಿಲಿಸುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಮೂಲಕ ವಯಸ್ಸಾಗುವ ಗತಿಯನ್ನು ನಿಧಾನಗೊಳಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ಕೊಬ್ಬು ಸಂಗ್ರಹವಾಗಲು ಬಿಡದೇ ತೂಕ ಇಳಿಸಲು ನೆರವಾಗುತ್ತದೆ. ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳು ಆವರಿಸುವ ಸಾಧ್ಯತೆಗಳನ್ನೂ ಕಡಿಮೆಗೊಳಿಸುತ್ತದೆ. ಎಲ್ಲಾ ಜಪಾನೀಯರು ನಿತ್ಯವೂ

ಒಂದರಿಂದ ಎರಡು ಕಪ್ ಹಸಿರು ಟೀ ಸೇವಿಸುತ್ತಾರೆ.

ಪ್ರತಿದಿನ ಗ್ರೀನ್ ಟೀ ಸೇವಿಸಿದರೆ ಖಂಡಿತ ಮೋಸವಿಲ್ಲ..!

ಇವರಿಗೆ ಸಾಗರ ಉತ್ಪನ್ನಗಳೇ ಇಷ್ಟ

ಇವರಿಗೆ ಸಾಗರ ಉತ್ಪನ್ನಗಳೇ ಇಷ್ಟ

ಜಪಾನೀಯರಿಗೆ ಕೋಳಿ ಅಥವಾ ಕೆಂಪು ಮಾಂಸಕ್ಕಿಂತ ಸಾಗರ ಉತ್ಪನ್ನಗಳೇ ಹೆಚ್ಚು ಇಷ್ಟ. ಕೆಂಪು ಮಾಂಸದ ಸೇವನೆಯಿಂದ ಉರಿಯೂತ, ಕೊಲೆಸ್ಟ್ರಾಲ್, ಸ್ಥೂಲಕಾಯ ಮೊದಲಾದ ಸಮಸ್ಯೆಗಳು ಎದುರಾಗುತ್ತವೆ. ಕೆಂಪು ಮಾಂಸದ ಬದಲು ಸಾಗರ ಉತ್ಪನ್ನಗಳ ಬಿಳಿ ಮಾಂಸ, ಅಂದರೆ ಸಾಲ್ಮನ್, ಟ್ಯೂನಾ ಮತ್ತು ಸಿಗಡಿಗಳನ್ನು ಇವರು ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಮೀನಿನಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲ ಹಾಗೂ ಪ್ರೋಟೀನುಗಳಿದ್ದು ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ.

ಇವರು ಹುದುಗುಬರಿಸಿದ ಆಹಾರಗಳನ್ನೂ ಇಷ್ಟಪಡುತ್ತಾರೆ

ಇವರು ಹುದುಗುಬರಿಸಿದ ಆಹಾರಗಳನ್ನೂ ಇಷ್ಟಪಡುತ್ತಾರೆ

ಕೆಲವು ಆಹಾರಗಳು ಹುದುಗುಬಂದ ಬಳಿಕವೇ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತವೆ. ಇವರ ಆಹಾರಗಳಾದ ಕಿಮ್ಚಿ, ಟೆಂಪೇಹ್, ಮೀಸೋ, ಸಾವರ್ಕ್ರಾವ್ತ್, ಕೊಂಬುಚಾ ಹಾಗೂ ಕೆಫೀರ್ ಎಂಬ ಖಾದ್ಯಗಳು ಹುದುಗುಬರಿಸಿದ ಸಾಮಾಗ್ರಿಗಳನ್ನು ಹೊಂದಿದ್ದು ಇವನ್ನು ಜಪಾನೀಯರು ಹೆಚ್ಚು ಇಷ್ಟಪಡುತ್ತಾರೆ. ಹುದುಗು ಬಂದ ಆಹಾರಗಳಲ್ಲಿ ಹೆಚ್ಚಿನ ಕಿಣ್ವಗಳು, ವಿಟಮಿನ್ನುಗಳ ಜೊತೆಗೇ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಬ್ಯಾಕ್ಟೀರಿಯಾಗಳೂ ಇರುತ್ತವೆ. ಇವು ಸುಲಭವಾಗಿ ಜೀರ್ಣಗೊಂಡು ಆರೋಗ್ಯವನ್ನು ವೃದ್ಧಿಸುತ್ತವೆ.

ಮನಸ್ಸಿನ ಒತ್ತಡ ನಿಯಂತ್ರಣಕ್ಕೆ-ಜಪಾನೀಯರ ಸಿಂಪಲ್ ಟ್ರಿಕ್ಸ್!

ಇವರು ತುಂಬಾ ನಡೆಯುತ್ತಾರೆ

ಇವರು ತುಂಬಾ ನಡೆಯುತ್ತಾರೆ

ಒಂದು ಸಂಶೋಧನೆಯ ಪ್ರಕಾರ ಪ್ರತಿ ಜಾಪಾನಿ ನಾಗರಿಕನೂ ಪ್ರತಿದಿನ ಕೊಂಚವಾದರೂ ನಡೆದೇ ನಡೆಯುತ್ತಾರೆ. ನಡೆಯುವುದರಿಂದ ಮನಸ್ಸಿನ ಒತ್ತಡ ಕಡಿಮೆಯಾಗುವುದು ಮಾತ್ರವಲ್ಲ, ಸ್ಥೂಲಕಾಯ ಆವರಿಸದೇ ಇರಲೂ ನೆರವಾಗುತ್ತದೆ.

ಮಾರ್ಷಲ್ ಕಲೆ

ಮಾರ್ಷಲ್ ಕಲೆ

ಜಪಾನ್‌ನಲ್ಲಿ ಮಾರ್ಷಲ್ ಆರ್ಟ್ಸ್ ಅಥವಾ ಜುಡೋ, ಕರಾಟೆ, ಅಕಿಡೋ ಮೊದಲಾದ ಮೈಮುರಿಯುವ ಕ್ರೀಡೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದ್ದು ಪುರುಷರೂ ಮಹಿಳೆಯರೂ ಸರಿಸಮಾನವಾಗಿ ಇದರಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುತ್ತಾರೆ. ಈ ಕಲೆಯನ್ನು ಅಭ್ಯಸಿಸುವ ಮೂಲಕ ದೇಹದಾರ್ಢ್ಯತೆ, ಶಕ್ತಿ, ಮೈಬಗ್ಗಿಸುವುದು ಹಾಗೂ ಕಷ್ಟಸಹಿಷ್ಣುತೆಗಳನ್ನು ಸಾಧಿಸುತ್ತಾರೆ. ಇವೆಲ್ಲವನ್ನೂ ನಿಯಮಿತವಾಗಿ ಅನುಸರಿಸುವ ಮೂಲಕ ಇವರು ವೃದ್ದಾಪ್ಯವನ್ನು ಯಶಸ್ವಿಯಾಗಿ ಮುಂದೂಡುತ್ತಾರೆ.

ಇವರು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತಾರೆ!

ಇವರು ಕಡಿಮೆ ಪ್ರಮಾಣದಲ್ಲಿ ತಿನ್ನುತ್ತಾರೆ!

ಜಪಾನೀಯರ ಆಹಾರದ ಪ್ರಮಾಣ ಕಡಿಮೆ ಇರುತ್ತದೆ. ಅಂದರೆ ಇವರು ತಮ್ಮ ಆಹಾರದ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ನಿತ್ಯವೂ ಸೇವಿಸುವ ಒಟ್ಟಾರೆ ಕ್ಯಾಲೋರಿಗಳು ಕಡಿಮೆ ಇರುವಂತೆ ನೋಡಿಕೊಳ್ಳುತ್ತಾರೆ. ಇದರಿಂದ ತೂಕವನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು ಸುಲಭವಾಗುತ್ತದೆ.

ಜಪಾನಿಯರ ಈ ರಹಸ್ಯ ಕ್ರಮ ಅನುಸರಿಸಿ-10 ಕೇಜಿ ತೂಕ ಇಳಿಸಿಕೊಳ್ಳಿ!

ದಿನನಿತ್ಯ ಧ್ಯಾನ!

ದಿನನಿತ್ಯ ಧ್ಯಾನ!

ಧ್ಯಾನವನ್ನು ಅನುಸರಿಸುವುದು ಇವರ ಸಂಸ್ಕೃತಿಯ ಒಂದು ಭಾಗವಾಗಿದೆ. ಚಿಕ್ಕ ಮಕ್ಕಳಿಂದ ತೊಡಗಿ ವೃದ್ಧರವರೆಗೂ, ಪುರುಷರೂ ಮಹಿಳೆಯರೂ ಕಡ್ಡಾಯವಾಗಿ ಧ್ಯಾನದಲ್ಲಿ ನಿರತರಾಗುತ್ತಾರೆ. ಬಹುಷಃ ಇವರ ನೆಮ್ಮದಿ ಹಾಗೂ ಆರೋಗ್ಯಕ್ಕೆ ಇದು ಪ್ರಮುಖ ಕಾರಣವಿರಬಹುದು.

English summary

How Do Japanese Stay So Slim?

If you have ever wondered why Japanese women never seem to grow old then you must take a look at their lifestyle habits. And yes, almost all of them seem to be slim and healthy with glowing skin. How do they manage that? Let us take a look at their lifestyle.
Subscribe Newsletter