For Quick Alerts
ALLOW NOTIFICATIONS  
For Daily Alerts

  ತಪ್ಪದೇ ಓದಿ, ಜಪಾನ್ ತರುಣಿಯರ ಸೌಂದರ್ಯದ ಗುಟ್ಟು....

  By Manu
  |

  ಜಪಾನ್ ಎಂದಾಕ್ಷಣ ನಿಮ್ಮ ಮನಸ್ಸಿಗೇನು ಹೊಳೆಯಿತು? ಆಧುನಿಕ ಎಲೆಕ್ಟ್ರಾನಿಕ್ ಸಾಧನಗಳು, ತ್ಸುನಾಮಿ, ಕಾರುಗಳ ತಂತ್ರಜ್ಞಾನ, ರುಚಿಕರ ಸುಶಿ, ಅಥವಾ ಜಪಾನ್ ತರುಣಿಯರು? ಇವುಗಳಲ್ಲಿ ಮೊದಲಿನ ಎಲ್ಲವೂ ಸತ್ಯವಾದರೂ ಕಡೆಯದು ಮಾತ್ರ ಅಪ್ಪಟ ಸತ್ಯವಲ್ಲ. ಏಕೆಂದರೆ ಚಿತ್ರಗಳಲ್ಲಿ ತಾರುಣ್ಯವೇ ಸೂಸುವ ತರುಣಿಯರ ಚಿತ್ರದಲ್ಲಿರುವವರು ವಯಸ್ಸಿನಲ್ಲಿ ತರುಣಿಯರು ಎಂದು ನಾವು ಕರೆಯುವ ವಯಸ್ಸನ್ನು ಎಂದೋ ದಾಟಿದವರು!   ವಿದೇಶಿ ಮಹಿಳೆಯರ ಸೌಂದರ್ಯ ರಹಸ್ಯ ಯಾವುದು ಗೊತ್ತೇ?

  ವಾಸ್ತವ ಅರಿತು ಅವಾಕ್ಕಾದಿರಾ? ಸೌಂದರ್ಯದ ವಿಷಯದಲ್ಲಿ ಸಾಂಪ್ರಾದಾಯಿಕ ವಿಧಾನಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವ ಮೂರು ರಾಷ್ಟ್ರಗಳೆಂದರೆ ಭಾರತ, ಚೀನಾ ಮತ್ತು ಜಪಾನ್. ಭಾರತ ಕೇಶಾಲಂಕಾರಕ್ಕಾಗಿ ಹೆಚ್ಚು ಜನಪ್ರಿಯವಾಗಿದ್ದರೆ ಚೀನಾ ತೆಳು ಮೈಕಟ್ಟಿಗೂ ಮತ್ತು ಜಪಾನ್ ತಾರುಣ್ಯ ಸೂಸುವ ಚರ್ಮಕ್ಕೂ ಹೆಚ್ಚು ಜನಪ್ರಿಯವಾಗಿದೆ. ಅದರಲ್ಲೂ ಜಪಾನಿನ ಸಾಂಪ್ರಾದಾಯಿಕ 'ಗೀಷಾ' ಎಂಬ ನೃತ್ಯಪ್ರಾಕಾರದ ಕಲಾವಿದರು ನೀಡುವ ಅದ್ಭುತ ಪ್ರದರ್ಶನ ಮನಸೂರೆಗೊಂಡರೆ ಅವರ ತಾರುಣ್ಯ ದಂಗುಬಡಿಸುತ್ತದೆ.

  Japanese Beauty Secrets Every Girl Must Know!
   

  ಹಾಗಾದರೆ ಈ ತಾರುಣ್ಯ ಉಳಿಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯವಾಯಿತು? ಸಾಮಾನ್ಯವಾಗಿ ಇಂತಹ ಗುಟ್ಟುಗಳನ್ನು ಯಾರೂ ಹೇಳುವುದಿಲ್ಲ. ಆದರೆ ಬೋಲ್ಡ್ ಸ್ಕೈ ತಂಡ ಜಪಾನೀಯರ ಸಾಂಪ್ರಾದಾಯಿಕ ಗುಟ್ಟನ್ನು ಇಂದು ನಿಮ್ಮೊಂದಿಗೆ ಹಂಚಿಕೊಂದು ನಿಮ್ಮ ಸೌಂದರ್ಯವರ್ಧನೆಯ ಮೂಲಕ ಧನ್ಯತೆ ಪಡೆಯಲು ಯತ್ನಿಸುತ್ತಿದೆ: ಬನ್ನಿ, ಈ ಗುಟ್ಟುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೋಡೋಣ:

  ಸೌಂದರ್ಯದ ಗುಟ್ಟು #1

  ಜಪಾನೀಯರ ಪ್ರಕಾರ ಆಹಾರದಲ್ಲಿ ಕಟ್ಟುನಿಟ್ಟಾಗಿ ಮಿತಿಗಳನ್ನು ಅನುಸರಿಸುವುದು ಸೌಂದರ್ಯದ ಮೊದಲ ಲಕ್ಷಣವಾಗಿದೆ. ಇವರು ತಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚಾಗಿ ಹಣ್ಣು, ಮೀನು ಮತ್ತು ಹಸಿರು ತರಕಾರಿಗಳನ್ನೇ ಸೇವಿಸುತ್ತಾರೆ. ಇದರಿಂದ ಇವರ ಚರ್ಮಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟುಗಳು ಲಭಿಸುತ್ತವೆ. ವಿಶೇಷವಾಗಿ ವಿಟಮಿನ್ ಇ ಮತ್ತು ಒಮೆಗಾ ೩ ಕೊಬ್ಬಿನ ಆಮ್ಲವಿರುವ ಆಹಾರಗಳನ್ನೇ ಅವರು ಹೆಚ್ಚು ಸೇವಿಸುತ್ತಾರೆ. ಇದು ಇವರ ಹೊಳೆಯುವ ಮತ್ತು ಬೆಳ್ಳಗಿನ ಚರ್ಮಕ್ಕೆ ತಳಪಾಯವಾಗಿದೆ.

  ಸೌಂದರ್ಯದ ಗುಟ್ಟು #2

  ಜಪಾನ್ ಯುವತಿಯರ (ವಯಸ್ಸಿನಲ್ಲಿ ಅಲ್ಲ) ಪ್ರಕಾರ ಅವರ ನಿತ್ಯಬಳಕೆಯ ಸೌಂದರ್ಯ ಪ್ರಸಾದನಗಳಲ್ಲಿ ಲ್ಯಾವೆಂಡರ್ ಎಣ್ಣೆ, ಗಂಧದ ಎಣ್ಣೆ ಮೊದಲಾದ ಅವಶ್ಯಕ ತೈಲಗಳು ಇರಲೇ ಬೇಕು. ಈ ಅವಶ್ಯಕ ತೈಲಗಳು ಚರ್ಮಕ್ಕೆ ಆರ್ದ್ರತೆ ನೀಡುವ ಮೂಲಕ ಚರ್ಮದಾಳದಿಂದ ಪೋಷಣೆ ನೀಡುತ್ತವೆ. ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಒಳಗಿಳಿದು ಕಲ್ಮಶವನ್ನು ನಿವಾರಿಸುತ್ತವೆ. ಅಲ್ಲದೇ ಮೇಕಪ್ ಗಾಗಿ ಬಳಸುವ ಪ್ರಸಾಧನಗಳು ಚರ್ಮಕ್ಕೆ ಹಾನಿ ಒದಗಿಸದಂತೆ ರಕ್ಷಣೆಯನ್ನೂ ಮೇಕಪ್ ಸಮಯದ ಬಳಿಕ ಸುಲಭವಾಗಿ ನಿವಾರಿಸಲು ಸಾಧ್ಯವಾಗುವಂತೆಯೂ ಮಾಡುತ್ತವೆ.    ಚೀನಾ-ಜಪಾನ್ ಸುಂದರಿಯರ ಸೌಂದರ್ಯದ ಸೀಕ್ರೆಟ್..

  ಸೌಂದರ್ಯದ ಗುಟ್ಟು#3

  ಜಪಾನ್ ನಲ್ಲಿ ಸಾಂಪ್ರಾದಾಯಿಕ ಸೌಂದರ್ಯ ಮಳಿಗೆಗಳಿಗೇ ಹೆಚ್ಚು ಮಹತ್ವವಿದೆ. ಬಿಸಿಲಿಗೆ ಹೋಗಬೇಕಾದ ಸಂದರ್ಭದಲ್ಲಿ ಸೂರ್ಯನ ಕಿರಣಗಳ ಪ್ರಭಾವವನ್ನು ಮತ್ತು ವಿಶೇಷವಾಗಿ ಅತಿನೇರಳೆ ಕಿರಣಗಳ ಪ್ರಭಾವವನ್ನು ಯಾವುದೇ ಸನ್ ಸ್ಕ್ರೀನ್ ಲೇಪನನೂ ಪೂರ್ಣಪ್ರಮಾಣದ ರಕ್ಷಣೆಯನ್ನು ಒದಗಿಸಲಾರದು.

  Japanese Beauty Secrets Every Girl Must Know!
   

  ಆದ್ದರಿಂದ ಸಾಧ್ಯವಾದಷ್ಟು ಸೂರ್ಯನ ಬೆಳಕಿಗೆ ಒಡ್ಡುವುದನ್ನು ತಡೆಯಿರಿ ಎಂದು ಜಪಾನಿನ ಮಹಿಳೆಯರು ಮತ್ತು ಸೌಂದರ್ಯ ಪರಿಣಿತರು ಸಲಹೆ ಮಾಡುತ್ತಾರೆ. ಒಂದು ವೇಳೆ ಸೂರ್ಯನ ಬೆಳಕಿಗೆ ಹೋಗಲೇಬೇಕೆಂದರೆ ಕಿರಣಗಳು ಮೈಸೋಕದಂತೆ ಉಡುಪುಗಳನ್ನು ತೊಡಿ ಎನ್ನುತ್ತಾರೆ. ಇದೇ ಕಾರಣಕ್ಕೆ ಅವರ ಸಾಂಪ್ರಾದಾಯಿಕ ಉಡುಪುಗಳು ದೊಗಲೆಯಾಗಿ ಮೈತುಂಬಿದ್ದು ತಲೆಯ ಮೇಲಿನ ಟೊಪ್ಪಿ ಸಹಾ ಬಿಸಿಲು ಬೀಳದಂತೆ ತಡೆಯುತ್ತದೆ.

  ಸೌಂದರ್ಯದ ಗುಟ್ಟು #4

  ಜಪಾನ್ ಮಹಿಳೆಯರು ಸಾಂಪ್ರಾದಾಯಿಕ ವಿಧಾನವೊಂದನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. 'ದ್ರವಲೇಪದ ಮುಖವಾಡ' ಎಂಬ ಅರ್ಥವಿರುವ ಈ ವಿಧಾನದಲ್ಲಿ ಇವರು ತೆಳ್ಳಗಿನ ಮಸ್ಲಿನ್ ಅಥವಾ ಹತ್ತಿಯ ಬಟ್ಟೆಯನ್ನು ಟೋನರ್ ಗುಣವಿರುವ ದ್ರವದಲ್ಲಿ ಅದ್ದಿ ಚರ್ಮದ ಮೇಲೆ ಹತ್ತು ನಿಮಿಷಗಳಾದರೂ ಇರಿಸಿಕೊಳ್ಳುತ್ತಾರೆ. ಇದರಿಂದ ಚರ್ಮದ ಸೆಳೆತ ಹೆಚ್ಚುವ ಮತ್ತು ವೃದ್ದಾಪ್ಯದ ಚಿಹ್ನೆಗಳು ಮೂಡುವ ಸಾಧ್ಯತೆ ಕಡಿಮೆಯಾಗುತ್ತದೆ.

  Japanese Beauty Secrets Every Girl Must Know!
   

  ಜಪಾನಿನ ಯುವತಿಯ ತಾರುಣ್ಯ ಉಳಿಸಿಕೊಳ್ಳಲು ನೆರವಾಗಿರುವ ಈ ವಿಧಾನಗಳು ಭಾರತೀಯರಾದ ನಮಗೂ ನೆರವಾಗಬಾರದು ಎಂದೇನೂ ಇಲ್ಲವಲ್ಲ. ಹಾಗಾಗಿ ಮೇಲೆ ತಿಳಿಸಿದ ವಿಧಾನಗಳನ್ನು ಅನುಸರಿಸಿ ತಾರುಣ್ಯ ಉಳಿಸಿಕೊಳ್ಳಲು ಏಕೆ ನೀವು ಪ್ರಯತ್ನಿಸಬಾರದು?

  English summary

  Japanese Beauty Secrets Every Girl Must Know!

  Many of us would have heard of the famous Japanese 'Geishas' who are traditional entertainers known for their exceptional skills in dancing, singing and also their mesmerising beauty! Now, we know that every country has its own set of traditions and culture, it is not different when it comes to certain remedies and tips that concerns beauty.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more