Latest Updates
-
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ? -
ಹವಾಮಾನ ಇಲಾಖೆ ಎಚ್ಚರಿಕೆ: ಬಿರುಗಾಳಿ ಮಳೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ?
ಆಲಸ್ಯ ಬಿಟ್ಟು ದಿನಾ ಜಾಗಿಂಗ್‌ಗೆ ಮಾಡಿ- ಫಿಟ್ ಆಗಿರುವಿರಿ
ಬೆಳಿಗ್ಗೆ ಎದ್ದು ಜಾಗಿಂಗ್ ಮಾಡುವುದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಸಮಯವಿದ್ದವರು ಜಾಗಿಂಗ್ ಮಾಡುತ್ತಾರೆ. ಇನ್ನು ಕೆಲವರು ಹಾಸಿಗೆಯಲ್ಲೇ ಸಮಯ ಕಳೆಯುತ್ತಾರೆ. ಜಾಗಿಂಗ್ ಮಾಡುವುದರಿಂದ ಸೊಂಟ ಹಾಗೂ ಮೊಣಕಾಲಿನ ಅಸ್ಥಿಸಂಧಿವಾತದ ಸಮಸ್ಯೆ ಕಡಿಮೆಯಿರುತ್ತದೆ. ಜಾಗಿಂಗ್ ಮಾಡದೆ ಇರುವವರು ಹಾಗೂ ಸ್ಪರ್ಧಾತ್ಮಕ ಓಟಗಾರರಲ್ಲಿ ಇದು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ಹೇಳಿವೆ.
15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಕಾಲ ಒಂದೇ ಮಟ್ಟದಲ್ಲಿ ಜಾಗಿಂಗ್ ಮಾಡುವುದರಿಂದ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಜರ್ನಲ್ ಆಫ್ ಆರ್ಥಪೆಡಿಕ್ ಮತ್ತು ಸ್ಪೋರ್ಟ್ಸ್ ಫಿಸಿಕ್ ಥೆರಪಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನದಲ್ಲಿ ಹೇಳಲಾಗಿದೆ.

ಈ ಅಧ್ಯಯನದಿಂದ ತಿಳಿದುಬಂದಂತಹ ವಿಚಾರವೆಂದರೆ ಓಟ ಮತ್ತು ಅಸ್ಥಿಸಂದಿವಾತಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಅಮೆರಿಕಾದ ಮಿನ್ನೆಸೊಟಾ ರೊಚೆಸ್ಟರ್ ನಲ್ಲಿರುವ ಮಯೊ ಕ್ಲಿನಿಕ್ ನ ಆರ್ಥೋಪೆಡಿಕ್ ಸರ್ಜರಿ ವಿಭಾಗದ ಎಡ್ವರ್ಡ್ ಅಲೆಂರ್ಟೊನ್ ಗೆಲಿ ತಿಳಿಸಿದ್ದಾರೆ.
ಅಸ್ಥಿಸಂಧಿವಾತ ಮತ್ತು ಓಟ ನಡುವಿನ ಸಂಬಂಧ ಸ್ಪರ್ಧಾತ್ಮಕ ಓಟಗಾರರಲ್ಲಿ ಇರುತ್ತದೆ. ಆದರೆ ಜಾಗಿಂಗ್ ಮಾಡುವವರಲ್ಲಿ ಅಲ್ಲ ಎನ್ನುವುದು ನಮ್ಮ ಅಧ್ಯಯನದಿಂದ ಕಂಡುಬಂದಿದೆ ಎಂದು ಅಲೆಂರ್ಟೊನ್ ಗೆಲಿ ವಿವರಿಸಿದರು. ಸ್ಪೇನ್, ಸ್ವೀಡನ್, ಕೆನಡಾ ಮತ್ತು ಅಮೆರಿಕಾದಲ್ಲಿ ಇರುವಂತಹ ಹಲವಾರು ಸಂಶೋಧನಾ ತಂಡಗಳು ಓಟ ಮತ್ತು ಅಸ್ಥಿಸಂಧಿವಾತದ ನಡುವಿನ ಸಂಬಂಧದ ಬಗ್ಗೆ ಹಲವಾರು ವರ್ಷಗಳಿಂದ ಅಧ್ಯಯನ ನಡೆಸುತ್ತಾ ಇದೆ.
ತೂಕವನ್ನು ತಡೆದುಕೊಳ್ಳುವಂತಹ ಗಂಟುಗಳ ಅಸ್ಥಿಸಂಧಿವಾತ ಮತ್ತು ಓಟದ ಮಧ್ಯೆ ಯಾವುದಾದರೂ ಸಂಬಂಧ ಇದೆಯಾ ಎಂದು ತಿಳಿಯಲು ಸಂಶೋಧನೆಗಳು ಕ್ರಮಬದ್ಧವಾಗಿ ಹಲವಾರು ರೀತಿಯ ಅಧ್ಯಯನಗಳನ್ನು ನಡೆಸಿವೆ. ಈ ಅಧ್ಯಯನಕ್ಕಾಗಿ ಸುಮಾರು 114,829 ಜನರನ್ನು ಒಳಪಡಿಸಿದೆ.
ವೃತ್ತಿಪರ, ಅಗ್ರ ಅಥವಾ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗಿಯಾದ ಓಟಗಾರರನ್ನು ಸ್ಪರ್ಧಾತ್ಮಕ ಓಟಗಾರರು ಎಂದು ಪರಿಗಣಿಸಲಾಗುತ್ತದೆ. ವೃತ್ತಿಪರವಲ್ಲದ ಅಥವಾ ಅಮೆಚೂರ್ ಓಟದಲ್ಲಿ ಭಾಗಿಯಾದವರನ್ನು ರಿಕ್ರಿಯೇಷನಲ್ ಓಟಗಾರರು ಎಂದು ಪರಿಗಣಿಸಲಾಗಿದೆ.
ಶೇ.3.5 ರಷ್ಟು ರಿಕ್ರಿಯೇಷನಲ್ ಓಟಗಾರರು ಮಾತ್ರ ಸೊಂಟ ಹಾಗೂ ಮೊಣಕಾಲಿನ ಅಸ್ಥಿಸಂಧಿವಾತಕ್ಕೆ ಗುರಿಯಾಗಿದ್ದಾರೆ. ಆದರೆ ಪುರುಷ ಹಾಗೂ ಮಹಿಳಾ ಓಟಗಾರರು ಹೆಚ್ಚು ಅಸ್ಥಿರಂಧ್ರತೆಗೆ ಒಳಗಾಗಿರುವ ಉದಾಹರಣೆಗಳಿವೆ.
ಕೇವಲ ವ್ಯಾಯಾಮಕ್ಕಾಗಿ ಓಡುವಂತಹ ವ್ಯಕ್ತಿಗಳಲ್ಲಿ ಮೊಣಕಾಲು ಹಾಗೂ ಸೊಂಟದ ಅಸ್ಥಿಸಂಧಿವಾತವು ಶೇ.10.2ರಷ್ಟು ಇರುತ್ತದೆ. ಅದೇ ಸ್ಪರ್ಧಾತ್ಮಕವಾಗಿ ಓಡುವಂತಹ ವ್ಯಕ್ತಿಗಳಲ್ಲಿ ಅಸ್ಥಿಸಂಧಿವಾತದ ಸಾಧ್ಯತೆಯು ಶೇ.13.3ರಷ್ಟು ಇರುತ್ತದೆ ಎಂದು ಅಧ್ಯಯನಗಳು ಹೇಳಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








