For Quick Alerts
ALLOW NOTIFICATIONS  
For Daily Alerts

ಸಂಧಿವಾತ ಸಮಸ್ಯೆಗೆ 'ಎಲೆಕೋಸಿನ ಎಲೆಗಳೇ' ಪರ್ಫೆಕ್ಟ್ ಮನೆಮದ್ದು

By Arshad
|

ಎಲೆಕೋಸು ಉತ್ತಮ ಪೋಷಕಾಂಶಗಳುಳ್ಳ ತರಕಾರಿಯಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು, ಫೋಲೇಟ್, ತಾಮ್ರ, ವಿಟಮಿನ್ ಬಿ1, ಪೊಟ್ಯಾಷಿಯಂ, ಮ್ಯಾಂಗನೀಸ್, ವಿಟಮಿನ್ ಬಿ, ಸಿ ಮತ್ತು ಕೆ ಗಳು ಇವೆ. ಅಲ್ಲದೇ ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಕೋಲೈನ್, ಮೆಗ್ನೇಶಿಯಂ, ಪ್ಯಾಂಟೋಥೀನಿಕ್ ಆಮ್ಲ, ನಿಯಾಸಿ, ಮತ್ತು ಗಂಧಕಗಳೂ ಕೊಂಚ ಪ್ರಮಾಣದಲ್ಲಿವೆ. ನಿತ್ಯ ಎಲೆಕೋಸಿನ ಜ್ಯೂಸ್ ಕುಡಿದು ಆರೋಗ್ಯವಾಗಿರಿ!

ಹಿಂದಿನಿಂದಲೂ ಉಳುಕು, ಊತ, ಕರುಳಿನ ಹುಣ್ಣು, ಜಜ್ಜಿದ ಭಾಗ, ಗಾಯ, ಸಂಥಿವಾತ, ಮೂಳೆಸಂದುಗಳಲ್ಲಿ ಉರಿ ಮೊದಲಾದ ತೊಂದರೆಗಳಿಗೆ ಎಲೆಕೋಸನ್ನು ಬಳಸುತ್ತಾ ಬರಲಾಗಿದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ನಿವಾರಿಸಲು ಸೂಕ್ತವಾಗಿದೆ. ಈ ನೋವಿನಿಂದ ಬಳಲುತ್ತಿದ್ದ ಹಲವಾರು ರೋಗಿಗಳು ತಮಗೆ ಎಲೆಕೋಸಿನ ಆರೈಕೆಯಿಂದ ಪೂರ್ಣವಾಗಿ ಗುಣವಾಗಿದೆ ಎಂದು ತಿಳಿಸುತ್ತಾರೆ. ಊಹೆಗೂ ನಿಲುಕದ ಪ್ರಯೋಜನ-ಈ ಎಲೆಕೋಸಿನಲ್ಲಿದೆ!

ಆದರೆ ಕೆಲವರು ಕಡಿಮೆಯೇನೋ ಆಗಿದೆ, ಪೂರ್ಣವಾಗಿ ಹೋಗಿಲ್ಲ ಎಂದು ತಿಳಿಸುತ್ತಾರೆ. ಆದ್ದರಿಂದ ಕೋಸಿನ ವಿಧಾನ ಪರಿಪೂರ್ಣ ಎಂದು ಎಲ್ಲಿಯೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದರೆ ಈ ವಿಧಾನವನ್ನು ಪ್ರಯತ್ನಿಸುವುದರಲ್ಲಿ ಯಾವುದೇ ಆತಂಕವಿಲ್ಲ. ಅಡ್ಡಪರಿಣಾಮಗಳಿಲ್ಲದೇ ಇದ್ದರೂ ಈ ವಿಧಾನಗಳನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ...

ಹಂತ #1

ಹಂತ #1

ಮೊದಲು ಕೊಂಚ ಎಲೆಕೋಸಿನ ಎಲೆಗಳನ್ನು ಬಿಡಿಸಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಫ್ರೀಜರಿನಲ್ಲಿಡಿ. ಯಾವಾಗ ಸಂಧಿವಾತದ ತೊಂದರೆ ಪ್ರಾರಂಭವಾಗುತ್ತದೆಯೋ ಆಗ ಪ್ಲಾಸ್ಟಿಕ್ಕಿನಿಂದ ಈ ಎಲೆಗಳನ್ನು ಹೊರತೆಗೆದು ತಣ್ಣಗಿದ್ದಂತೆಯೇ ನೋವಿರುವ ಭಾಗಕ್ಕೆ ಆವರಿಸಿ ಇದರ ಮೇಲೊಂದು ದಪ್ಪ ಟವೆಲ್ ಸುತ್ತಿ ಕೊಂಚ ಕಾಲ ಹಾಗೇ ಇರಲು ಬಿಡಿ.ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

ಹಂತ #2

ಹಂತ #2

ಮ್ಮ ದೇಹದ ತಾಪಮಾನ ಕೋಸಿನ ಎಲೆಗಳ ತಣುಪನ್ನು ತಡೆದುಕೊಳ್ಳಲು ಬಳಕೆಯಾಗುತ್ತಿದ್ದಂತೆಯೇ ಎಲೆಕೋಸಿನಲ್ಲಿದ್ದ ಕೆಲವು ಪೋಷಕಾಂಶಗಳು ಚರ್ಮದ ಮೂಲಕ ಹೀರಲ್ಪಡುತ್ತವೆ. ಈ ಪೋಷಕಾಂಶಗಳು ನೋವಿರುವ ಭಾಗದಲ್ಲಿರುವ ಯೂರಿಕ್ ಆಮ್ಲವನ್ನು ಕರಗಿಸಿ ನಿವಾರಿಸಲು ನೆರವಾಗುತ್ತವೆ. ತನ್ಮೂಲಕ ನೋವು ಕಡಿಮೆಯಾಗಿಸುತ್ತದೆ. ನೋವು ಪೂರ್ಣವಾಗಿ ಹೋಗದೇ ಇದ್ದರೂ ಈ ಭಾಗದ ಉರಿಯಂತೂ ಖಂಡಿತಾ ಕಡಿಮೆಯಾಗುತ್ತದೆ.

ಹಂತ #3

ಹಂತ #3

ಒಂದು ವೇಳೆ ನಿಮ್ಮ ಪಾದಗಳು ಊದಿಕೊಂಡಿದ್ದರೆ ಪಾದಗಳನ್ನು ಸೊಂಟಕ್ಕಿಂತ ಕೊಂಚವೇ ಮೇಲಿರುವಂತೆ ಎತ್ತಿಟ್ಟು ಎಲೆಕೋಸಿನ ಎಲೆಗಳನ್ನು ಪಾದಗಳು ಪೂರ್ಣವಾಗಿ ಆವರಿಸುವಂತೆ ದಪ್ಪ ಟವೆಲ್ಲಿನಿಂದ ಕಟ್ಟಿ ಸುಮಾರು ಅರ್ಧ ಘಂಟೆ ಹಾಗೇ ಬಿಡಿ. ಇದರಿಂದ ಊದಿಕೊಂಡಿರುವ ಪಾದಗಳು ಸಜಹಸ್ಥಿತಿಗೆ ಮರಳಬಹುದು.

ಕೋಸಿನ ಎಲೆಗಳ ಪ್ರಯೋಜನಗಳನ್ನು ಪಡೆಯಲು ಇನ್ನೊಂದು ವಿಧಾನವಿದೆ.

ಕೋಸಿನ ಎಲೆಗಳ ಪ್ರಯೋಜನಗಳನ್ನು ಪಡೆಯಲು ಇನ್ನೊಂದು ವಿಧಾನವಿದೆ.

ಹಂತ #1

ಫ್ರಿಜ್ಜಿನಲ್ಲಿಡುವ ಬದಲು ಈ ಎಲೆಗಳನ್ನು ಚಿಕ್ಕಚಿಕ್ಕದಾಗಿ ಚಿವುಟಿ ಅಥವಾ ಚೂಪಾದ ಸಲಕರಣೆಯೊಂದರಿಂದ ಚಿಕ್ಕ ಚಿಕ್ಕ ಗಾಯಗಳಾಗುವಂತೆ ಮಾಡಿ ಇದರೊಳಗಿನ ರಸ ಹೊರಗೆ ಒಸರುವಂತೆ ಮಾಡಿ.

ಹಂತ #2

ಹಂತ #2

ಕಾವಲಿಯನ್ನು ಕೊಂಚವೇ ಬಿಸಿ ಮಾಡಿ ಈ ಎಲೆಗಳನ್ನು ಬಿಸಿಮಾಡಿ. ಬಿಸಿ ಎಂದರೆ ಕೊಂಚವೇ ತಾಕಬೇಕೇ ವಿನಃ ಸುಡಬಾರದು. ಈ ಎಲೆಗಳನ್ನು ಊದಿಕೊಂಡ ಭಾಗದ ಮೇಲೆ ಇರಿಸಿ ಬಟ್ಟೆಯ ಪಟ್ಟಿಯಿಂದ ಜಾರದಂತೆ ಕಟ್ಟಿ. ಬಳಿಕ ಸುಮಾರು ಮುಕ್ಕಾಲು ಘಂಟೆ ಹಾಗೇ ಬಿಡಿ. ಇದರಿಂದ ನೋವು ಶೀಘ್ರವೇ ಕಡಿಮೆಯಾಗುತ್ತದೆ.

ಎಚ್ಚರಿಕೆ

ಎಚ್ಚರಿಕೆ

ಒಂದು ವೇಳೆ ನಿಮ್ಮ ಪಾದಗಳು ಎಲೆಕೋಸಿಗೆ ಅಲರ್ಜಿ ಹೊಂದಿದ್ದರೆ ಈ ಎಲೆಗಳನ್ನು ಹಚ್ಚಿದ ಮರುಕ್ಷಣದಲ್ಲಿಯೇ ತುರಿಕೆ ಪ್ರಾರಂಭವಾಗುತ್ತದೆ. ಒಂದು ವೇಳೆ ತುರಿಕೆ ಅನ್ನಿಸಿದರೆ ತಕ್ಷಣವೇ ಎಲೆಯನ್ನು ನಿವಾರಿಸಿ ವೈದ್ಯರ ಸಲಹೆ ಪಡೆಯಿರಿ.

English summary

Gout Pain? Try Cabbage Leaf Remedy!!

cabbage leaves reduce gout pain. Some say that it can completely eliminate the pain. There isn't any clear scientific proof that this remedy works. But there isn't harm in trying it out at least once especially if you have gout pain. But to be on the safe side, talk to your doctor before trying it out.
X
Desktop Bottom Promotion