For Quick Alerts
ALLOW NOTIFICATIONS  
For Daily Alerts

ನಿಂಬೆ ಮತ್ತು ಶುಂಠಿಯ ಮೋಡಿ, ನಿಮ್ಮ ತೂಕ ಇಳಿಯುವುದು ನೋಡಿ...

By Divya Pandith
|

ಶುಂಠಿ ಮತ್ತು ನಿಂಬೆಯು ಆರೋಗ್ಯವನ್ನು ಕಾಪಾಡುವ ಉತ್ತಮ ಔಷಧೀಯ ಗುಣಗಳನ್ನು ಒಳಗೊಂಡಿದೆ. ಇವುಗಳ ಆರೋಗ್ಯದ ಗುಣಗಳು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಶುಂಠಿಯು ವಿಶೇಷವಾಗಿ ಉರಿಯೂತ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುವ ಗುಣಲಕ್ಷಣಗಳನ್ನು ಒಳಗೊಂಡಿದೆ.

ಇದನ್ನು ಅನೇಕ ಆರೋಗ್ಯ ಸಮಸ್ಯೆಗಳ ನಿವಾರಣೆ ಹಾಗೂ ಆರೈಕೆಗಾಗಿ ಬಳಸಲಾಗುತ್ತದೆ. ಇದರಿಂದ ತೂಕವನ್ನು ಸಹ ಗಣನೀಯ ಪ್ರಮಾಣದಲ್ಲಿ ಇಳಿಸಬಹುದು. ಜೀರ್ಣಕಾರಿ ಕಾರ್ಯವನ್ನು ಸುಲಭವಾಗಿ ನಿರ್ವಹಿಸುತ್ತದೆ. ಇದರಲ್ಲಿರುವ ಥರ್ಮೋಜೆನಿಕ್ ಗುಣವು ಪರಿಣಾಮಕಾರಿಯಾಗಿ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುತ್ತದೆ. ಜೊತೆಗೆ ಪ್ರಬಲವಾದ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಕರಗಿಸುತ್ತದೆ.

ನಿಂಬೆಯು ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಯಿಂದ ಹಿಡಿದು ದೊಡ್ಡ ದೊಡ್ಡ ಆರೋಗ್ಯ ಸಮಸ್ಯೆಗಳಿಗೂ ವಿಶೇಷ ಬಗೆಯ ಚಿಕಿತ್ಸೆಯನ್ನು ನೀಡುತ್ತದೆ. ಹಾಗಾಗಿ ಇದನ್ನು ಆರೋಗ್ಯ ಸುಧಾರಣೆಗೆ ಸಹಾಯ ಮಾಡುವ ವಿಶೇಷ ಉತ್ತೇಜಕ ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿರುವ ವಿಷಕಾರಿ ಹಾಗೂ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕಿಬ್ಬೊಟ್ಟೆಯ ಸಮಸ್ಯೆ ಹಾಗೂ ಕೊಬ್ಬನ್ನು ಗಣನೀಯವಾಗಿ ಇಳಿಸಲು ಸಹಾಯ ಮಾಡುವುದು....

ನಿಂಬೆ ಮತ್ತು ಶುಂಠಿ ಚಹಾ

ನಿಂಬೆ ಮತ್ತು ಶುಂಠಿ ಚಹಾ

ನಿಂಬೆ ಮತ್ತು ಶುಂಠಿಯನ್ನು ಸೇರಿಸಿ ಚಹಾ ಮಾಡಿ, ಸೇವಿಸಿದರೆ ಉತ್ತಮ ರುಚಿ ಹಾಗೂ ಆರೋಗ್ಯಕರವಾಗಿರುತ್ತದೆ. ಈ ವಿಧಾನವು ಬಹಳ ಸರಳ ಹಾಗೂ ಸುಲಭವಾಗಿರುವುದರಿಂದ ಇದನ್ನು ತಯಾರಿಸುವುದು ಹಾಗೂ ಸೇವಿಸುವುದು ಕಷ್ಟವಾಗದು.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಒಂದು ಪಾತ್ರೆಯಲ್ಲಿ ನೀರನ್ನು ಬಿಸಿಮಾಡಲು ಇಡಿ. ನೀರಿ ಬಿಸಿಯಾಗಿ ಕುದಿಯಲು ಆರಂಭಿಸಿದ ಮೇಲೆ ಉರಿಯನ್ನು ಆರಿಸಿ. ಬಳಿಕ ನೀರಿಗೆ ಶುಂಠಿಯ ತುಂಡನ್ನು ಸೇರಿಸಿ. ಅದನ್ನು 5 ನಿಮಿಷಗಳವರೆಗೆ ಮುಚ್ಚಿ. ನಂತರ ನಿಂಬೆ ರಸವನ್ನು ಸೇರಿಸಿ. ಬೆಳಗಿನ ತಿಂಡಿ ಮಾಡುವ ಮುನ್ನ ಈ ಚಹಾವನ್ನು ಸೇವಿಸುವುದು ಉತ್ತಮ ಪರಿಣಾಮಕಾರಿಯಾಗಿ ಇರುತ್ತದೆ.

ನಿಂಬೆ ಮತ್ತು ಶುಂಠಿ ಪಾನಕ

ನಿಂಬೆ ಮತ್ತು ಶುಂಠಿ ಪಾನಕ

ನಿಂಬೆಯ ಪಾನಿಯದ ಜೊತೆ ಶುಂಠಿಯನ್ನು ಸೇರಿಸುವುದು ಒಂದು ಉತ್ತಮವಾದ ಪಾಕವಿಧಾನ. ಇದನ್ನು ಸೇವಿಸುವುದರಿಂದ ಆರೋಗ್ಯ ಬಹಳ ಉತ್ತಮವಾಗಿರುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಕಾರಣವಾಗುವುದು.

ನೀವು ಏನು ಮಾಡಬೇಕು?

ನೀವು ಏನು ಮಾಡಬೇಕು?

ಸಾಮಾನ್ಯವಾಗಿ ನಿಂಬೆ ಪಾನಕವನ್ನು ತಯಾರಿಸುವಂತೆ ಮಾಡಿ. ಸಿಹಿಯನ್ನು ಹೆಚ್ಚಿಸಲು ಸಂಸ್ಕರಿಸಿದ ಸಕ್ಕರೆಯನ್ನು ಬಳಸಬೇಡಿ. ನಂತರ ತುರಿದ ಶುಂಠಿಯನ್ನು ಸುಮಾರು ಒಂದು ಟೀ ಚಮಚದಷ್ಟು ಸೇರಿಸಿ. ನಿಮಗೆ ಇಷ್ಟವಾಗಿದ್ದರೆ ಎಲೆಕೋಸು ಎಲೆಯನ್ನು ಸೇರಿಸಬಹುದು. ಇದು ನಿರ್ವಿಶೀಕರಣವನ್ನು ಬಲಪಡಿಸುತ್ತದೆ. ಮುಂಜಾನೆಯ ತಿಂಡಿಮಾಡುವ ಮೊದಲು ಈ ಪಾನೀಯವನ್ನು ಸೇವಿಸಿ.

ಶುಂಠಿ ಮತ್ತು ನಿಂಬೆಯ ಮಿಶ್ರಣ

ಶುಂಠಿ ಮತ್ತು ನಿಂಬೆಯ ಮಿಶ್ರಣ

ಶುಂಠಿ ಮತ್ತು ನಿಂಬೆಯ ಪ್ರಯೋಜನವನ್ನು ಪಡೆಯಲು ಇದೊಂದು ಪರ್ಯಾಯವಾದ ವಿಧಾನ. ಇದರ ಉಪಯೋಗ ಪಡೆಯಲು ಚಹಾವನ್ನು ತಯಾರಿಸಿ ಸೇವಿಸಬೇಕೆಂದೇನೂ ಇಲ್ಲ.

ನೀವು ಏನು ಮಾಡಬೇಕು?

ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿಕೊಂಡ ಶುಂಠಿಗೆ ನಿಂಬೆ ರಸವನ್ನು ಸೇರಿಸಿ. ನಂತರ ಇಷ್ಟವಾದ ಸಲಾಡ್ ಜೊತೆಗೆ ಸೇವಿಸುವುದರೊಂದಿಗೆ ಆನಂದಿಸಿ.

ಶುಂಠಿ ಮತ್ತು ನಿಂಬೆಯ ಇತರ ಪ್ರಯೋಜನಗಳು

ಶುಂಠಿ ಮತ್ತು ನಿಂಬೆಯ ಇತರ ಪ್ರಯೋಜನಗಳು

ಈ ಮೇಲೆ ಹೇಳಿದಂತೆ ಶುಂಠಿ ಮತ್ತು ನಿಂಬೆ ಅನೇಕ ಆರೋಗ್ಯ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ಆರೋಗ್ಯವನ್ನು ವಿವಿಧ ರೀತಿಯಲ್ಲಿ ಕಾಪಾಡುತ್ತದೆ. ತೂಕ ನಷ್ಟವನ್ನು ಉತ್ತೇಜಿಸುತ್ತದೆ. ಮೇಲೆ ಹೇಳಿದ ವಿಧಾನದ ಅನ್ವಯದಿಂದ ಬಹು ಬೇಗ ತೂಕವನ್ನು ಇಳಿಸಿಕೊಳ್ಳಬಹುದು.

 ರಕ್ತವನ್ನು ಶುಚಿಗೊಳಿಸುವುದು

ರಕ್ತವನ್ನು ಶುಚಿಗೊಳಿಸುವುದು

ಇವೆರಡು ಮಿಶ್ರಣದಿಂದ ಅನಗತ್ಯ ಜೀವಾಣು ಮತ್ತು ತ್ಯಾಜ್ಯಗಳನ್ನು ಹೊರಹಾಕಬಹುದು. ರಕ್ತದ ಶುದ್ಧೀಕರಣಕ್ಕೆ ಪ್ರೋತ್ಸಾಹ ನೀಡುವುದು. ಈ ಎರಡು ಉತ್ಪನ್ನವು ನೈಸರ್ಗಿಕವಾಗಿ ಆರೋಗ್ಯವಾಗಿಡಲು ಸಹಾಯಮಾಡುವ ಅತ್ಯುತ್ತಮ ಘಟಕ ಎನ್ನಲಾಗುವುದು. ಆರೋಗ್ಯಕರ ಕೊಲೆಸ್ಟ್ರಾಲ್‍ಅನ್ನು ಉತ್ತೇಜಿಸಿ, ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ತೆರವುಗೊಳಿಸುತ್ತದೆ.

ಚರ್ಮದ ಆರೈಕೆಯಲ್ಲಿ ಸಹಾಯ ಮಾಡುವುದು

ಚರ್ಮದ ಆರೈಕೆಯಲ್ಲಿ ಸಹಾಯ ಮಾಡುವುದು

ಶುಂಠಿ ಮತ್ತು ನಿಂಬೆ ಮಿಶ್ರಣದಲ್ಲಿ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಅದು ಚರ್ಮವನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ. ತ್ವಚೆಯ ಮೇಲೆ ಉಂಟಾಗುವ ಸುಕ್ಕುಗಳನ್ನು ನಿವಾರಿಸಿ ಸದಾ ತಾಜಾತನದಿಂದ ಕೂಡಿರುವಂತೆ ಮಾಡುತ್ತವೆ.

ಉತ್ತಮ ಜೀರ್ಣಕ್ರಿಯೆಗೆ ಪ್ರೋತ್ಸಾಹ

ಉತ್ತಮ ಜೀರ್ಣಕ್ರಿಯೆಗೆ ಪ್ರೋತ್ಸಾಹ

ಇವು ಕರುಳಿನ ಚಲನೆ ಮತ್ತು ದ್ರವದ ಧಾರಣವನ್ನು ಹೆಚ್ಚಿಸಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಜಠರದ ಉರಿಯಿಂದ ಬಳಲುತ್ತಿದ್ದರೆ ಇವುಗಳ ಸೇವನೆಯನ್ನು ಮಾಡಬಾರದು. ಇದರ ಹೊರತಾಗಿ ಜೀರ್ಣ ಕ್ರಿಯೆಗೆ ಪರಿಪೂರ್ಣ ಸಂಯೋಜನೆಯಾಗಿದೆ.

ನೆನಪಿಡಿ

ನೆನಪಿಡಿ

ಈ ಮಿಶ್ರಣವನ್ನು ನೀವು ತೆಗೆದುಕೊಂಡು ತೂಕ ಇಳಿಸುವ ಮನಸ್ಸು ಮಾಡುತ್ತಿದ್ದೀರಿ ಎಂದಾದರೆ ಜಂಕ್ ಫುಡ್, ಫಾಸ್ಟ್ ಫುಡ್, ಪಾನೀಯಗಳು, ಕೊಬ್ಬು ಭರಿತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು. ಈ ಮಿಶ್ರಣ ಸೇವಿಸುವುದರ ಜೊತೆಗೆ ಸೂಕ್ತ ಬಗೆಯ ವ್ಯಾಯಾಮ ಹಾಗೂ ದಿನಕ್ಕೆ ಕಡಿಮೆ ಎಂದರೂ ಎರಡು ಲೀಟರ್ ನೀರನ್ನು ಕುಡಿಯಬೇಕು. ಈ ಬಗೆಯ ಜೀವನ ಶೈಲಿ ಅನುಸರಿಸಿದರೆ ಬಹು ಬೇಗ ತೂಕವನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.

English summary

Ginger and Lemon, a Perfect Combination for Weight Loss

Ginger is a well-known root around the world for all of its health properties, especially as an anti-inflammatory and for its gastric properties that assist the digestive system. This root is used as a slimming formula because its properties promote weight loss. Not only does it improve digestive functions but it also has a “thermogenic” effect that helps activate the metabolism, making it a potent fat and calorie-burner.
X
Desktop Bottom Promotion