ಆರೋಗ್ಯ ಟಿಪ್ಸ್: ಹಿಂಸೆ ನೀಡುವ ಈ 'ಕೀಲು ನೋವಿಗೆ' ತ್ವರಿತ ಪರಿಹಾರ

By: Arshad
Subscribe to Boldsky

ಉತ್ತಮ ಆರೋಗ್ಯಕ್ಕೆ ಸಾಕಷ್ಟು ವ್ಯಾಯಾಮ ಅಗತ್ಯ. ಆದರೆ ವ್ಯಾಯಾಮ ಹೆಚ್ಚಾದರೆ ಇದರ ಹೆಚ್ಚಿನ ಭಾರ ಮೂಳೆ ಸಂದುಗಳ ಮೇಲೆ ಬೀಳುತ್ತದೆ. ಪರಿಣಾಮವಾಗಿ ಈ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ವ್ಯಾಯಾಮದ ಉತ್ಸಾಹವನ್ನೇ ಉಡುಗಿಸಿಬಿಡುತ್ತದೆ. ಬರೆಯ ವ್ಯಾಯಾಮದ ಉತ್ಸಾಹ ಮಾತ್ರವಲ್ಲ, ದಿನನಿತ್ಯದ ಚಟುವಟಿಕೆಗಳೂ ಕಷ್ಟಕರವಾಗುತ್ತದೆ.

ಇದು ಮನೆಯ ಸದಸ್ಯರಿಗೂ ಅನಾನುಕೂಲತೆ ಉಂಟಾಗಬಹುದು. ಕೀಲು ನೋವಿಗೆ ಮೂಳೆಸಂಧುಗಳ ಸೋಂಕು, ಮೂಳೆ ಮತ್ತು ಸ್ನಾಯುಗಳು ಸಂಧಿಸುವ ಅಂಗಾಂಶಗಳು ಅಗತ್ಯಕ್ಕೂ ಹೆಚ್ಚು ಸೆಳೆತಕ್ಕೊಳಪಡುವುದು ಅಥವಾ ಸೋಂಕಿಗೆ ಒಳಗಾಗುವ ಮೂಲಕ ನೋವಿಗೆ ಕಾರಣವಾಗುತ್ತದೆ. ಕೀಲುಗಳ ನೋವು: ಶೀಘ್ರ ಪರಿಹಾರಕ್ಕೆ ಸುಲಭ ಉಪಾಯಗಳು

ಕೀಲು ನೋವಿಗೆ ಇನ್ನೂ ಕೆಲವಾರು ಕಾರಣಗಳಿವೆ. ಬಿದ್ದು ಆದ ಪೆಟ್ಟು, ವೈರಲ್ ಸೋಂಕು, ಸ್ಥೂಲಕಾಯ, ಅಸಮರ್ಪಕ ಆಹಾರ ಕ್ರಮ, ವ್ಯಾಯಾಮದ ಕೊರತೆ, ಸಂಧಿವಾತ, ಕ್ಯಾಲ್ಸಿಯಂ ಕೊರತೆ ಮೊದಲಾದವು ನೋವಿಗೆ ಕಾರಣವಾಗಬಹುದು. ಸಂಧುಗಳಲ್ಲಿ ನೋವು ನಿತ್ಯದ ಕೆಲಸಗಳು, ಓಡಾಟ, ಪ್ರಾರ್ಥನೆ ಮೊದಲಾದ ನಿತ್ಯಕರ್ಮಗಳಿಗೆ ಬಾಧೆಯುಂಟುಮಾಡಬಹುದು. ಅಲ್ಲದೇ ಸತತವಾಗಿ ನೋವು ಬಾಧಿಸುವುದು ಮಾನಸಿಕವಾಗಿಯೂ ಕುಗ್ಗಿಸಬಹುದು. ಆದ್ದರಿಂದ ನೋವು ಕಾಣಿಸಿಕೊಂಡ ಪ್ರಾರಭಂದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳದೇ ಇದ್ದರೆ ಈ ನೋವು ದಿನೇದಿನೇ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?

ತಜ್ಞರು ಈ ನೋವಿಗೆ ನುಂಗುವ ಮಾತ್ರೆ, ನೋವಿರುವ ಭಾಗದಲ್ಲಿ ಹಚ್ಚಲು ಮುಲಾಮು ಮೊದಲಾದವುಗಳನ್ನು ಸಲಹೆ ಮಾಡುತ್ತಾರೆ. ನೋವು ಕಡಿಮೆ ಮಾಡಲು ನೋವು ನಿವಾರಕ ಗುಳಿಗೆಗಳನ್ನೂ ಶಿಫಾರಸ್ಸು ಮಾಡಬಹುದು. ಆದರೆ ಈ ಔಷಧಿಗಳು ಅಡ್ಡಪರಿಣಾಮದಿಂದ ಹೊರತಾಗಿಲ್ಲ. ಆದರೆ ನಿಸರ್ಗ ಈ ನೋವನ್ನು ಕಡಿಮೆ ಮಾಡಲು ಒಂದು ವಿಧಾನವನ್ನು ನೀಡಿದ್ದು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಸುರಕ್ಷಿತವಾಗಿದೆ ಹಾಗೂ ಶೀಘ್ರವಾಗಿ ಸಂಧುನೋವನ್ನು ಕಡಿಮೆ ಮಾಡುತ್ತದೆ. ಬನ್ನಿ, ಈ ವಿಧಾನ ಯಾವುದೆಂದು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಕೊಬ್ಬರಿ ಎಣ್ಣೆ: ಒಂದು ದೊಡ್ಡಚಮಚ

ಎಲೆಕೋಸಿನ ರಸ: ಕಾಲು ಕಪ್

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತಸಂಚಾರವನ್ನು ಮೂಳೆಸಂದುಗಳಿಗೆ ಹೆಚ್ಚಿಸುವ ಮೂಲಕ ಉರಿಯೂತವನ್ನು ಕಡಿಮೆ ಮಾಡಿ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯಲ್ಲಿ ಒಮೆಗಾ-3-ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿದ್ದು ಮೂಳೆಸಂಧುಗಳಿಗೆ ಅಗತ್ಯವಿರುವ ಜಾರುಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ಮೂಳೆಗಳ ಚಲನೆ ಸುಲಭವಾಗಿ ನೋವು ಕಡಿಮೆಯಾಗುತ್ತದೆ.ಬೇಸಿಗೆಯ ಸುಡು ಬಿಸಿಲಿಗೆ ಕೊಬ್ಬರಿ ಎಣ್ಣೆ ಬಳಕೆಯ ಮಹತ್ವವೇನು?

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಒಂದು ಕಪ್‌ನಲ್ಲಿ ಇವೆರಡೂ ಸಾಮಾಗ್ರಿಗಳನ್ನು ಬೆರೆಸಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಪ್ರಥಮ ಆಹಾರವಾಗಿ ಸೇವಿಸಿ ಕೊಂಚ ಹೊತ್ತಿನ ಬಳಿಕ ಉಪಾಹಾರ ಸೇವಿಸಿ. ಈ ಕ್ರಮವನ್ನು ಸತತವಾಗಿ ಎರಡು ತಿಂಗಳ ಕಾಲ ಮುಂದುವರೆಸಿ.

 
English summary

Easy Cabbage Home Remedy For Joint Pain!

There may be various causes that lead to joint pain, for example, injury, viral infections, obesity, unhealthy diet, lack of exercise, arthritis, calcium deficiency, etc. So, here is a safe, yet effective home remedy to treat joint pain quickly!
Story first published: Monday, March 13, 2017, 23:32 [IST]
Subscribe Newsletter