ಕೀಲುಗಳ ನೋವು: ಶೀಘ್ರ ಪರಿಹಾರಕ್ಕೆ ಸುಲಭ ಉಪಾಯಗಳು

By: manu
Subscribe to Boldsky

ನಮ್ಮ ದೇಹದ ಚಲನವಲನಕ್ಕೆ ಮೂಳೆಗಳು ಕೀಲುಗಳಲ್ಲಿರುವಲ್ಲಿ ಬಾಗುವುದು ಅತ್ಯಂತ ಅಗತ್ಯವಾಗಿದೆ. ಈ ಕೀಲುಗಳಲ್ಲಿ ಜಾರುಕದಂತೆ ದ್ರವವೊಂದು ಸದಾ ಇರಬೇಕು. ಈ ದ್ರವ ಕಡಿಮೆಯಾದರೆ ಮೂಳೆಗಳಿಗೆ ಜಾರುವಿಕೆ ಸಾಧ್ಯವಾಗದೇ ನೋವು ಆರಂಭವಾಗುತ್ತದೆ. ಈ ಸ್ಥಿತಿಗೆ ಸಂಧಿವಾತ (arthritis) ಎಂದು ಕರೆಯುತ್ತಾರೆ. ಮೈಕೈ ನೋವೇ? ಹಾಗಾದರೆ ಈ ಆಹಾರ ತಿನ್ನಿ

ಅಷ್ಟೇ ಅಲ್ಲದೆ ಗಂಟುಗಳ ಅಥವಾ ಕೀಲುಗಳ ನೋವಿಗೆ ಇತರ ಕಾರಣಗಳೂ ಇರಬಹುದು. ಈ ನೋವು ಚಲನವಲನವನ್ನು ಅಪಾರವಾಗಿ ಬಾಧಿಸುವ ಕಾರಣ ತಕ್ಷಣವೇ ವೈದ್ಯರ ಬಳಿ ಧಾವಿಸಿ ಚಿಕಿತ್ಸೆ ಪಡೆಯಬೇಕು. ಒಂದೇ ವಾರದಲ್ಲಿ ಕೀಲು ನೋವಿನ ಹುಟ್ಟಡಗಿಸುವ ಜ್ಯೂಸ್...

ಆದರೆ ಒಂದು ವೇಳೆ ನೋವು ಈಗತಾನೇ ಪ್ರಾರಂಭವಾಗಿದ್ದು ಇನ್ನೂ ವೈದ್ಯರ ಮಾತ್ರೆಯನ್ನು ಸೇವಿಸಲು ಪ್ರಾರಂಭಿಸಿರದಿದ್ದರೆ ಕೆಲವು ವಿಧಾನಗಳಿಂದ ಈ ನೋವನ್ನು ತಕ್ಷಣವೇ ಕಡಿಮೆಗೊಳಿಸಬಹುದು. ಬನ್ನಿ, ಕೆಲವು ಸಮರ್ಥ ವಿಧಾನಗಳು ಯಾವುವು ಎಂಬುದನ್ನು ನೋಡೋಣ....  

ಸಲಹೆ #1

ಸಲಹೆ #1

ಒಂದು ಲಿಂಬೆಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. ಎಲ್ಲಾ ತುಂಡುಗಳನ್ನು ಒಂದು ಬಟ್ಟೆಯಲ್ಲಿ ಹಾಕಿ ಬಟ್ಟೆಯನ್ನು ಸುರುಳಿ ಸುತ್ತಿ. ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಸುರುಳಿ ಸುತ್ತಿದ ಬಟ್ಟೆಯಲ್ಲಿದ್ದ ಲಿಂಬೆ ತುಂಡುಗಳಿರುವ ಭಾಗ ಎಣ್ಣೆಯಲ್ಲಿ ನೆನೆಯುವಂತೆ ಮುಳುಗಿಸಿ. ಈಗ ಈ ಬಟ್ಟೆಯನ್ನು ನೋವಿರುವ ಗಂಟಿನ ಭಾಗಕ್ಕೆ ಕೊಂಚವೇ ಬಿಗಿಯಾಗಿ ಕಟ್ಟಿ ಸುಮಾರು ಐದು ನಿಮಿಷ ಹಾಗೇ ಬಿಡಿ.

ಸಲಹೆ #2

ಸಲಹೆ #2

ಒಂದು ಕಪ್ ನೀರನ್ನು ಕುದಿಸಿ ಇದರಲ್ಲಿ ಹಸಿ ಶುಂಠಿಯ ಚಿಕ್ಕ ತುಂಡನ್ನು ಕತ್ತರಿಸಿ ಜಜ್ಜಿ ಸೇರಿಸಿ ಚಿಟಿಕೆಯಷ್ಟು ಅರಿಶಿನವನ್ನೂ ಸೇರಿಸಿ. ಬಳಿಕ ಚಿಕ್ಕ ಉರಿಯಲ್ಲಿ ಹತ್ತು ನಿಮಿಷ ಬೇಯಿಸಿ. ಬಳಿಕ ಉರಿ ಆರಿಸಿ ಒಂದು ಹನಿ ಜೇನನ್ನು ಬೆರೆಸಿ ಕುಡಿಯಿರಿ. ಈ ವಿಧಾನವನ್ನು ದಿನಕ್ಕೆರಡು ಬಾರಿ ಅನುಸರಿಸಿ.ಶುಂಠಿ ಜಜ್ಜಿ ಹಾಕಿದ ಬಿಸಿ ನೀರು ಕುಡಿದರೆ-ತೂಕ ಇಳಿಕೆ...

ಸಲಹೆ #3

ಸಲಹೆ #3

ಸತತವಾಗಿ ಏಳು ದಿನಗಳ ಕಾಲ ಬೆಳಿಗ್ಗೆ ಎದ್ದ ತಕ್ಷಣ ಪ್ರಥ ಆಹಾರವಾಗಿ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯಿರಿ. ಆರೋಗ್ಯಕರವಾದ ತ್ವಚೆಗಾಗಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ!

ಸಲಹೆ #4

ಸಲಹೆ #4

ಒಂದು ವಾರದ ಕಾಲ ನೋವಿರುವ ಭಾಗವನ್ನು ಆಲಿವ್ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡಿ. ಬೆಳಿಗ್ಗೆ ಮತ್ತು ಸಂಜೆ ಈ ವಿಧಾನವನ್ನು ಅನುಸರಿಸಿ.

ಸಲಹೆ #5

ಸಲಹೆ #5

ಒಂದು ದೊಡ್ಡ ಚಮಚ ಕಲ್ಲುಪ್ಪನ್ನು ಅರ್ಧ ಬಕೆಟ್ ಅಥವಾ ಅಗಲವಾದ ಪಾತ್ರೆಯಲ್ಲಿನ ಬಿಸಿನೀರಿಗೆ ಸೇರಿಸಿ ಕಲಕಿ. ಈ ನೀರಿನಲ್ಲಿ ನೋವಿರುವ ಗಂಟು ಮುಳುಗುವಂತೆ ಸುಮಾರು ಹದಿನೈದು ನಿಮಿಷ ಇರಿಸಿ ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಿ.

ಸಲಹೆ #6

ಸಲಹೆ #6

ನೋವಿರುವ ಭಾಗವನ್ನು ಹರಳೆಣ್ಣೆಯಿಂದ ಮಸಾಜ್ ಮಾಡಿ. ದಿನಕ್ಕೆರಡು ಬಾರಿಯಂತೆ ಸತತವಾಗಿ ಏಳು ದಿನಗಳ ಕಾಲ ಅನುಸರಿಸಿ.ಹಳ್ಳಿಗಾಡಿನ 'ಎತ್ತಿನ ಗಾಡಿಯ ಎಣ್ಣೆ' ನಮ್ಮ ಹರಳೆಣ್ಣೆ!

 
English summary

Joint Pain: Simple Remedies For Quick Relief!

If your joint pain is due to arthritis or chronic inflammation, it is better to visit a doctor and get it treated. But when the joint pains are due to minor lifestyle issues, you can surely try some simple remedies first before popping in a pill. You will be able to gain some quick relief if you try any of these following home remedies for joint pain.
Please Wait while comments are loading...
Subscribe Newsletter