For Quick Alerts
ALLOW NOTIFICATIONS  
For Daily Alerts

ಬಾಹುಬಲಿ ಸಿನಿಮಾ ಹೀರೋ ಪ್ರಭಾಸ್‌‌ನ ಫಿಟ್ನೆಸ್ ರಹಸ್ಯ ಬಯಲು!

ಕಟ್ಟುಮಸ್ತಾದ ದೇಹ ಪಡೆಯಲು ಪ್ರಭಾಸ್ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ! ಈ ಚಿತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಹೇಳಲಾಯಿತಂತೆ!

By Hemanth
|

ಬಾಹುಬಲಿ 2 ನೋಡಿದ ಮಂದಿಗೆ ತಮ್ಮ ದೇಹ ಕೂಡ ಪ್ರಭಾಸ್ ರೀತಿಯೇ ಆಗಬೇಕು ಎನ್ನುವ ಬಯಕೆ ಬಂದಿರಬಹುದು. ಮಹಿಳೆಯರಿಗೆ ತಮ್ಮ ಪತಿ ಪ್ರಭಾಸ್ ನಂತೆ ಫಿಟ್ನೆಸ್ ಕಾಯ್ದುಕೊಳ್ಳಬೇಕೆಂಬ ಆಸೆ ಚಿಗುರೊಡೆದಿರಬಹುದು. ಇದು ಸಾಮಾನ್ಯ ಕೂಡ. ಯಾಕೆಂದರೆ ಪ್ರಭಾಸ್ ದೇಹದಾರ್ಢ್ಯವನ್ನು ನೋಡಿದವರಿಗೆ ಕನಸಿನಲ್ಲೂ ಅದು ಕಾಣಿಸಬಹುದು.

ಆದರೆ ಇಂತಹ ಕಟ್ಟುಮಸ್ತಾದ ದೇಹ ಪಡೆಯಲು ಪ್ರಭಾಸ್ ಎಷ್ಟು ಕಷ್ಟಪಟ್ಟಿರಬಹುದು ಎಂದು ನಿಮಗೆಲ್ಲ ತಿಳಿದಿಲ್ಲ. ಪ್ರಭಾಸ್‌ ಗೆ ಈ ಚಿತ್ರಕ್ಕಾಗಿ 20 ಕೆಜಿ ತೂಕ ಹೆಚ್ಚಿಸಿಕೊಳ್ಳಲು ಹೇಳಲಾಯಿತಂತೆ! ಬಾಲಿವುಡ್ ನಟರ ಫಿಟ್ನೆಸ್ ರಹಸ್ಯಗಳು

ಆರು ಅಡಿ ಎರಡು ಇಂಚು ಎತ್ತರವಿದ್ದ ಪ್ರಭಾಸ್ 80 ಕೆಜಿ ತೂಕವಿದ್ದರು. ಇದರ ಬಳಿಕ ತೂಕ ಹೆಚ್ಚಿಸಿಕೊಳ್ಳಲು ಡಬ್ಲ್ಯೂ ಡಬ್ಲ್ಯೂ ಎಫ್ ರಸ್ಲರ್‌ಗಳ ದಿನಚರಿಯನ್ನು ತಿಳಿದುಕೊಂಡಿದ್ದಾರೆ. ಪ್ರಭಾಸ್ ಯಾವ ರೀತಿ ತಮ್ಮ ತೂಕ ಹೆಚ್ಚಳ ಮಾಡಿರುವುದು ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ದಿನನಿತ್ಯ3 ರಿಂದ 6 ಗಂಟೆಗಳ ಕಾಲ ವ್ಯಾಯಾಮ

ದಿನನಿತ್ಯ3 ರಿಂದ 6 ಗಂಟೆಗಳ ಕಾಲ ವ್ಯಾಯಾಮ

ಪ್ರಭಾಸ್ ತೂಕ ಹೆಚ್ಚಿಸಿಕೊಳ್ಳಲು ಪ್ರತೀ ದಿನ ಸುಮಾರು 3-6 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಲಿದ್ದರು. ಕೆಲವೊಂದು ದಿನಗಳಲ್ಲಿ 4-6 ಗಂಟೆಗಳ ಕಾಲ ಕೂಡ ಕಠಿಣ ವ್ಯಾಯಾಮದಲ್ಲಿ ತೊಡಗಿಕೊಂಡಿರುವುದು ಇದೆ. ಆದರೆ ನಮಗೆ ಬಾಹುಬಲಿಯಂತಹ ಪಾತ್ರ ಮಾಡಬೇಕಿಲ್ಲ. ಇದರಿಂದ ಈ ರೀತಿ ಕಠಿಣ ಅಭ್ಯಾಸ ಮಾಡಬೇಕಿಲ್ಲ.

ಓಟ, ಈಜು ಮತ್ತು ಬೈಕಿಂಗ್

ಓಟ, ಈಜು ಮತ್ತು ಬೈಕಿಂಗ್

ಬೆಳಗ್ಗಿನ ಅವಧಿಯಲ್ಲಿ ಓಟ, ಈಜು ಮತ್ತು ಬೈಕಿಂಗ್ ನಡೆಸಲಾಗುತ್ತಿತ್ತು. ಸಂಜೆಯ ಸಮಯದಲ್ಲಿ ಭಾರ ಎತ್ತುವ ಕಸರತ್ತು ಮಾಡುತ್ತಲಿದ್ದರು.

ಕ್ರಮಬದ್ಧವಾದ ಆಹಾರಪಥ್ಯ

ಕ್ರಮಬದ್ಧವಾದ ಆಹಾರಪಥ್ಯ

ಚಿತ್ರದಲ್ಲಿ ನಿಭಾಯಿಸಿದ ಶಿವುಡು ಪಾತ್ರದ ಬಗ್ಗೆ ಪ್ರಭಾಸ್‌ಗೆ ಹೆಚ್ಚಿನ ಬದ್ಧತೆಯಿತ್ತು. ಇದರಿಂದಾಗಿಯೇ ಅವರು ತನ್ನ ಆಹಾರಪಥ್ಯದಲ್ಲಿ ಎಚ್ಚರಿಕೆ ವಹಿಸಿದ್ದರು. ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ನ್ನು ಸೇವಿಸುತ್ತಲೇ ಇರಲಿಲ್ಲ. ಕಟ್ಟುಮಸ್ತಾದ ದೇಹವನ್ನು ಪಡೆಯಲು ಪ್ರಭಾಸ್ ಅನ್ನದಿಂದ ದೂರವಿದ್ದರು. ಪ್ರಭಾಸ್ ಅನ್ನ, ಓಟ್ಸ್ ಮತ್ತು ಪಾಸ್ತಾದಿಂದ ಸಂಪೂರ್ಣವಾಗಿ ದೂರವಿದ್ದ ಕಾರಣದಿಂದ ಬಾಹುಬಲಿಯಾಗಿದ್ದಾರೆ.

ಬೆಳಿಗ್ಗೆ ಉಪಹಾರಕ್ಕೆ ಮೊಟ್ಟೆಯ ಬಿಳಿ ಭಾಗ

ಬೆಳಿಗ್ಗೆ ಉಪಹಾರಕ್ಕೆ ಮೊಟ್ಟೆಯ ಬಿಳಿ ಭಾಗ

ಬೆಳಿಗ್ಗೆ ಉಪಹಾರಕ್ಕೆ ಮೊಟ್ಟೆಯ ಬಿಳಿ ಭಾಗ ಮತ್ತು ಪ್ರೋಟೀನ್ ಪೌಡರ್ ಸೇವಿಸುತ್ತಾ ಇದ್ದರು. ದಿನಕ್ಕೆ 40 ಮೊಟ್ಟೆಗಳ ಬಿಳಿಭಾಗವನ್ನು ಪ್ರಭಾಸ್ ಸಮಯದ ಅಂತರ ನೀಡಿ ತಿನ್ನುತ್ತಲಿದ್ದರು. 250 ಗ್ರಾಂ ಕೋಳಿ ಮತ್ತು ಹಣ್ಣುಗಳು ಕೂಡ ಉಪಹಾರದಲ್ಲಿ ಇರುತ್ತಿದ್ದವು.

ಕ್ಯಾಲರಿಯುಕ್ತ ಆಹಾರ

ಕ್ಯಾಲರಿಯುಕ್ತ ಆಹಾರ

ಪ್ರತೀದಿನ 2000-4000 ಕ್ಯಾಲರಿಯಿರುವ ಆಹಾರವನ್ನು ಪ್ರಭಾಸ್ ಸೇವಿಸುತ್ತಾ ಇದ್ದರು. ಅತಿಯಾದ ಭಾರ ಎತ್ತುವ ಕಸರತ್ತು ಮಾಡುವ ಹೊರತಾಗಿ ದಿನಕ್ಕೆ 2500 ಕ್ಯಾಲರಿ ಸೇವನೆ ಮಾಡುವುದು ಯೋಗ್ಯವಲ್ಲ.

ವಿದೇಶದಿಂದ ವ್ಯಾಯಮದ ಸಲಕರಣೆಗಳ ಆಮದು!

ವಿದೇಶದಿಂದ ವ್ಯಾಯಮದ ಸಲಕರಣೆಗಳ ಆಮದು!

ವಿದೇಶದಿಂದ ವ್ಯಾಯಮದ ಸಲಕರಣೆಗಳನ್ನು ತರಿಸಿಕೊಳ್ಳಲು ಸುಮಾರು 1.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಹಲವಾರು ವರ್ಷಗಳ ಕಾಲ ಇಂತಹ ಕಠಿಣ ಅಭ್ಯಾಸ ಹಾಗೂ ಆಹಾರ ಪಥ್ಯವನ್ನು ಅನುಸರಿಸುವುದು ಸುಲಭದ ಮಾತಲ್ಲ. ಆದರೆ ಪ್ರಭಾಸ್ ಪರಿಶ್ರಮಕ್ಕೆ ಒಳ್ಳೆಯ ಪತಿಫಲ ಸಿಕ್ಕಿದೆ.

English summary

Diet And Fitness Secrets Of Bahubali Prabhas!

Any man and every man would dream to look like Bahubali! Huge, strong, muscular, fit, powerful and magnetic! Yes, Prabhas who played the role of Bahubali is an inspiration to many. Prabhas was initially asked to gain 20 kilos to play the role. Gaining 20 kilos of muscle isn't an easy job. And then he had to show variation between two roles he played in the film. Now let us take a look at what went into his fitness efforts....
X
Desktop Bottom Promotion