ಮನೆ ಔಷಧಿ: ತೂಕ ಕಳೆದುಕೊಳ್ಳಲು ಇಲ್ಲಿದೆ ನೋಡಿ ಸರಳ ರೆಸಿಪಿ

By: Hemanth
Subscribe to Boldsky

ಕೊಬ್ಬು ಕರಗಿಸಲು ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇದರಿಂದ ಮುಂದೆ ಅಡ್ಡಪರಿಣಾಮಗಳು ಉಂಟಾಗುವುದೇ ಹೆಚ್ಚು. ಇದಕ್ಕಾಗಿ ಮನೆಯಲ್ಲೇ ತಯಾರಿಸುವಂತಹ ಕೆಲವೊಂದು ಬೊಜ್ಜು ಕರಗಿಸುವ ಮನೆಮದ್ದನ್ನು ಬಳಸಿಕೊಂಡರೆ ತುಂಬಾ ಒಳ್ಳೆಯದು.

ಬೋಲ್ಡ್ ಸ್ಕೈ ಇಲ್ಲಿ ಹೇಳಲು ಹೊರಟಿರುವ ಮನೆಮದ್ದು ತಕ್ಷಣ ಕೊಬ್ಬು ಕರಗಿಸುವುದು. ಇದು ತುಂಬಾ ಕಡಿಮೆ ಸಮಯದಲ್ಲಿ ನಿಮ್ಮ ಕೊಬ್ಬು ಕರಗಿಸುವುದು ಮಾತ್ರವಲ್ಲದೆ ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲ. ಈ ಮನೆಮದ್ದು ಬಳಸಿದರೆ ನಿಮಗೆ ಅಚ್ಚರಿ ಮೂಡಿಸುವಂತಹ ಫಲಿತಾಂಶ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ.

belly fat

ಜೀವನ ಶೈಲಿ ಸರಿಯಾಗಿಲ್ಲದೆ ಇರುವದರಿಂದ ಬೊಜ್ಜು ದೇಹವನ್ನು ಆವರಿಸಿಕೊಂಡಿರುತ್ತದೆ. ಸಂಸ್ಕರಿತ ಆಹಾರ, ಕೊಬ್ಬು ಅತಿಯಾಗಿರುವ ಆಹಾರ, ಅತಿಯಾಗಿ ತಿನ್ನುವುದು ಮತ್ತು ದೈಹಿಕ ಚಟುವಟಿಕೆ ಕಡಿಮೆ ಇರುವುದು ಇತ್ಯಾದಿಗಳು ಬೊಜ್ಜು ಬೆಳೆಯಲು ಪ್ರಮುಖ ಕಾರಣವಾಗಿದೆ. ಅನುವಂಶೀಯತೆ ಮತ್ತು ಕೆಲವೊಂದು ಹಾರ್ಮೋನು ಸಮಸ್ಯೆಯಿಂದಲೂ ಬೊಜ್ಜು ಉಂಟಾಗಬಹುದು. ಬೊಜ್ಜಿನಿಂದ ದೇಹವು ಭಾರವಾಗುವುದು ಮಾತ್ರವಲ್ಲದೆ ಇದರಿಂದ ಹಲವಾರು ರೀತಿಯ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಕಾಯಿಲೆ ಇತ್ಯಾದಿ ಬೊಜ್ಜಿನಿಂದ ಬರಬಹುದು.

 cinnamon

ಬೊಜ್ಜು ಕರಗಿಸಲು ಏನು ಮಾಡಬೇಕೆಂದು ಇಂಟರ್ನೆಟ್‌ಗೆ ಹೋಗಿ ಹುಡುಕಿದರೆ ಸಾವಿರಾರು ಸಲಹೆಗಳು ನಿಮಗೆ ಸಿಗುವುದು. ಆದರೆ ಇದು ಎಷ್ಟು ನಿಖರವಾಗಿದೆ ಎಂದು ತಿಳಿಯಲು ಸಾಧ್ಯವಿಲ್ಲ. ಕೆಲವೊಂದು ಮನೆಮದ್ದು ಕೊಬ್ಬು ಕರಗಿಸಿ ದೇಹದ ತೂಕ ಕಡಿಮೆ ಮಾಡಲು ಪ್ರಮುಖ ಪಾತ್ರ ನಿರ್ವಹಿಸಿದೆ. ಇದರ ಬಗ್ಗೆ ನೀವು ಒಮ್ಮೆ ಪ್ರಯತ್ನ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು

*ಒಂದು ಚಮಚ ದಾಲ್ಚಿನ್ನಿ

*2 ಚಮಚ ಜೇನುತುಪ್ಪ

*ನೀರು

Honey

ತಯಾರಿ

250 ಮಿ.ಲೀ. ಕುದಿಯುವ ನೀರಿಗೆ ದಾಲ್ಚಿನ್ನಿ ಹಾಕಿ. ಇದು ತಣ್ಣಗಾದ ಬಳಿಕ ಎರಡು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ.

ಜೇನುತುಪ್ಪ ಹಾಕುವ ಮೊದಲು ನೀರು ತಣ್ಣಗಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಿ.

ಇದರಿಂದ ಪೋಷಕಾಂಶಗಳು ಹಾಗೆ ಉಳಿದುಕೊಂಡು ನಿಮಗೆ ಇದರ ಲಾಭ ಸಿಗುವುದು.

English summary

2-ingredient Remedy To Lose Your Weight In No Time

This fat-burning remedy, which we have introduced here, helps in burning fat almost instantly. Adopting crash diets and unachievable workout goals is not going to help you out much. This Indian home remedy to lose weight can provide you with promised results in no time at all. This miraculous weight loss recipe can provide you with some incredible weight loss results.
Subscribe Newsletter