ಪರೀಕ್ಷಾ ಸಮಯದಲ್ಲಿ ಈ ಯೋಗಾಸನಗಳನ್ನು ಮಾಡಿ- ಏಕಾಗ್ರತೆ ಹೆಚ್ಚುತ್ತೆ...

By: Arshad
Subscribe to Boldsky

ಹತ್ತನೆಯ ಮತ್ತು ಹನ್ನೆರಡನೆಯ ತರಗತಿಯ ಬೋರ್ಡ್ ಪರೀಕ್ಷೆಗಳು ಇನ್ನೇನು ಆಗಮಿಸಲಿವೆ. ಪರೀಕ್ಷೆಗಳು ಹತ್ತಿರಾಗುತ್ತಿದ್ದಂತೆಯೇ ಇದನ್ನು ಎದುರಿಸುವ ವಿದ್ಯಾರ್ಥಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಲು ಪ್ರಾರಂಭವಾಗುತ್ತದೆ. ವಿದ್ಯಾರ್ಥಿಗಳಿಗಿಂತಲೂ ಅವರ ತಂದೆ ತಾಯಿಯರಿಗೇ ಹೆಚ್ಚಿನ ಆತಂಕ ಮತ್ತು ಉದ್ವೇಗ ಎದುರಾಗುತ್ತದೆ. ಮಿದುಳನ್ನು ಚುರುಕುಗೊಳಿಸುವ ಹೊಸ ಯೋಗ!

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನೋಸ್ಥೈರ್ಯವನ್ನು ಕಳೆದುಕೊಳ್ಳುವ ಮೂಲಕ ಏಕಾಗ್ರತೆಯ ಕೊರತೆ ಮತ್ತು ಸಕಾಲದಲ್ಲಿ ಉತ್ತರಗಳನ್ನು ನೆನಪಿಗೆ ತಂದುಕೊಳ್ಳಲು ವಿಫಲರಾಗುತ್ತಾರೆ. ಈ ಕೊರತೆಯನ್ನು ನೀಗಿಸಲು ಕೇವಲ ಹತ್ತು ನಿಮಿಷದ ಕಾಲ ಅನುಸರಿಸಬಹುದಾದ ಯೋಗಾಸನಗಳು ಲಭ್ಯವಿದ್ದು ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಿ ಪರೀಕ್ಷೆಯನ್ನು ಎದುರಿಸಲು ಮನೋಸ್ಥೈರ್ಯವನ್ನು ಹೆಚ್ಚಿಸುತ್ತದೆ. ಇದರೊಂದಿಗೆ ಮನಸ್ಸನ್ನು ಪರೀಕ್ಷೆಯ ಸಮಯದಲ್ಲಿ ನಿರಾಳವಾಗಿರಿಸಿ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರವನ್ನು ಪಡೆಯಲು ಸಹಕರಿಸುತ್ತದೆ. 10 ಅಸಾಮಾನ್ಯ ಕಾಯಿಲೆಗಳಿಗೆ ಮದ್ದು ಯೋಗದಲ್ಲಿದೆ!

ಇದಕ್ಕಾಗಿ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳು ತಮ್ಮ ಓದುವ ಸಮಯದ ನಡುವೆ ಕೇವಲ ಹತ್ತು ನಿಮಿಷ ವ್ಯಯಿಸಿದರೆ ಸಾಕಾಗುತ್ತದೆ. ಇದಕ್ಕೆ ಮುಂಜಾನೆಯ ಸಮಯವೇ ಅತ್ಯುತ್ತಮವಾಗಿದೆ. ಇದನ್ನು ಅನುಸರಿಸುವ ಮೂಲಕ ಏಕಾಗ್ರತೆ ಹೆಚ್ಚುವುದು ಮಾತ್ರವಲ್ಲ ದಿನವಿಡೀ ಚೇತನಶೀಲರಾಗಿರಲು ಸಹಕರಿಸುತ್ತದೆ. ಈ ನಿಟ್ಟಿನಲ್ಲಿ ಒಟ್ಟು ಐದು ಆಸನಗಳಿದ್ದು ಇವುಗಳು ಏಕಾಗ್ರತೆಯನ್ನು ಹೇಗೆ ಹೆಚ್ಚಿಸುತ್ತವೆ ಎಂಬುದನ್ನು ಈಗ ನೋಡೋಣ..... 

ವೀರಾಸನ (ನಾಯಕನ ಭಂಗಿ)

ವೀರಾಸನ (ನಾಯಕನ ಭಂಗಿ)

*ಮೊದಲು ಮೊಣಕಾಲುಗಳನ್ನು ಮಡಚಿ ಮಂಡಿಯೂರಿ ಕುಳಿತುಕೊಳ್ಳಿ. ಕೈಗಳನ್ನು ಮೊಣಕಾಲ ಮೇಲಿರಿಸಿ

*ಮೊಣಕಾಲುಗಳು ಒಂದಕ್ಕೊಂದು ತಾಕುವಂತಿರಲಿ. ಕಾಲುಬೆರಳುಗಳು ಚಾಪೆಯ ಮೇಲೆ ಪೂರ್ಣವಾಗಿ ಬಾಗಿದ್ದು ಪೂರ್ಣ ಹಿಡಿತ ಸಾಧಿಸುವಂತಿರಲಿ.

*ಈಗ ನಿಧಾನವಾಗಿ ಕುಳಿತುಕೊಳ್ಳಿ. ಎರಡೂ ಹಿಮ್ಮಡಿಗಳು ಪ್ರಷ್ಠಭಾಗಕ್ಕೆ ತಗಲುವಂತಿರಬೇಕು.

*ಇನ್ನು ಕಾಲುಬೆರಳುಗಳನ್ನು ಮಡಚಿ ಉಗುರುಗಳು ಚಾಪೆಗೆ ತಾಕುವಂತಿರಿಸಿ.

ವೀರಾಸನ (ನಾಯಕನ ಭಂಗಿ)

ವೀರಾಸನ (ನಾಯಕನ ಭಂಗಿ)

*ಈಗ ಪೂರ್ಣ ಉಸಿರನ್ನೆಳೆದುಕೊಂಡು ಹೊಟ್ಟೆಯನ್ನು ಒಳೆಗೆಳೆದುಕೊಳ್ಳಿ. ಈ ಭಂಗಿಯಲ್ಲಿ ಉಸಿರು ಕಟ್ಟಿ ಸುಮಾರು ಮೂವತ್ತು ಸೆಕೆಂಡುಗಳ ಕಾಲ ಹಾಗೇ ಇರಿ. ಬಳಿಕ ನಿಧಾನವಾಗಿ ಪೂರ್ಣ ಉಸಿರನ್ನು ಬಿಡಿ

*ಈ ಪರಿಯನ್ನು ಸುಮಾರು ನಾಲ್ಕರಿಂದ ಐದು ಬಾರಿ ಪುನರವರ್ತಿಸಿ. ಯೋಗ ಟಿಪ್ಸ್: ವೀರಾಸನ - ಪಚನ ಕಾರ್ಯಕ್ಕೆ ಸಹಕಾರಿ

ವೃಕ್ಷಾಸನ

ವೃಕ್ಷಾಸನ

*ಮೊದಲು ತಾಡಾಸನವನ್ನು ಅನುಸರಿಸಿ ನೆಟ್ಟಗೆ ನಿಂತುಕೊಳ್ಳಿ. ಎರಡೂ ಕೈಗಳು ಪಕ್ಕದಲ್ಲಿದ್ದು ತೊಡೆಗಳನ್ನು ತಾಕುವಂತಿರಲಿ.

*ಒಂದು ಪಾದವನ್ನು ಮೇಲೆತ್ತಿ ಸಮತೋಲನವನ್ನು ಕಾಯ್ದಿರಿಸಿಕೊಳ್ಳುತ್ತಾ ಇನ್ನೊಂದುಕಾಲಿನ ತೊಡೆಯ ಮೇಲೆ ಬರುವಂತೆ ಮಡಚಿ.

*ಇನ್ನೊಂದು ಕಾಲು ನೆಟ್ಟಗಿದ್ದು ದೇಹದ ಸಮತೋಲನವನ್ನು ಕಾಯ್ದುಕೊಂಡಿರುವಂತಿರಲಿ.

*ಈಗ ಉಸಿರನ್ನು ಪೂರ್ಣವಾಗಿ ಒಳಗೆಳೆದುಕೊಳ್ಳುತ್ತಾ ಎರಡೂ ಕೈಗಳನ್ನು ಪೂರ್ಣವಾಗಿ ಚಾಚಿ ಮೇಲಕ್ಕೆತ್ತಿ ತಲೆಯ ಮೇಲೆ ಕೈಮುಗಿಯುವಂತೆ ಜೋಡಿಸಿ.

ವೃಕ್ಷಾಸನ

ವೃಕ್ಷಾಸನ

*ನಿಮ್ಮ ಬೆನ್ನು ಪೂರ್ಣವಾಗಿ ನೆಟ್ಟಗಿದ್ದು ನಿಮ್ಮ ದೃಷ್ಟಿ ಕಣ್ಣಿನ ಅಂತರದ ವಸ್ತುವಿನ ಮೇಲೆ ಕೇಂದ್ರೀಕೃತವಾಗಿರಬೇಕು.

* ಈ ಉಸಿರನ್ನು ನಿಮ್ಮ ಸಾಮರ್ಥಕ್ಕೆ ಅನುಸಾರವಾಗಿ ಗರಿಷ್ಠ ಹೊತ್ತು ಕಟ್ಟಬೇಕು. ಬಳಿಕ ನಿಧಾನವಾಗಿ ಉಸಿರು ಬಿಡುತ್ತಾ ಮೊದಲ ಹಂತಕ್ಕೆ ಬನ್ನಿ.

*ಇದೇ ವಿಧಾನವನ್ನು ಇನ್ನೊಂದು ಕಾಲಿಗೂ ಅನುಸರಿಸಿ.ಕಡಿಮೆ ರಕ್ತದೊತ್ತಡ ಸಮಸ್ಯೆ-ಮಾತ್ರೆ ಬಿಡಿ, ವೃಕ್ಷಾಸನ ಮಾಡಿ

ಪವನಮುಕ್ತಾಸನ

ಪವನಮುಕ್ತಾಸನ

*ಮೊದಲು ಚಾಪೆಯ ಮೇಲೆ ಅಂಗಾತರಾಗಿ ಮಲಗಿಕೊಂಡು ಕೈಗಳನ್ನು ಪಕ್ಕಕ್ಕೆ ಚಾಚಿ.

*ಈಗ ಒಂದೇ ಕಾಲನ್ನು ಮೇಲಕ್ಕೆತ್ತಿ ಮಡಚಿ ಎದೆಯ ಮೇಲೆ ಬರುವಂತೆ ಮಾಡಿ. ಇನ್ನೊಂದು ಕಾಲು ನೆಲದಿಂದ ಮೇಲೇಳಬಾರದು, ಹಾಗೇ ಇರಬೇಕು.

*ಈಗ ನಿಮ್ಮ ಕೈಗಳನ್ನು ನಿಧಾನವಾಗಿ ಮೇಲಕ್ಕೆತ್ತಿ ಮೊಣಕಾಲನ್ನು ಒತ್ತಿಕೊಳ್ಳಿ. ನಿಮ್ಮ ಮೊಣಕಾಲು ನಿಮ್ಮ ಗದ್ದಕ್ಕೆ ತಾಕಲು ಸಾಧ್ಯವಾಗುವಂತಿರಲಿ.

*ಈಗ ದೀರ್ಘವಾದ ಉಸಿರೆಳೆದುಕೊಂಡು ಕೈಗಳಿಂದ ಮೊಣಕಾಲನ್ನು ಒತ್ತಿ ಕುತ್ತಿಗೆಯನ್ನು ಮುಂದೆ ಬಾಗಿ ಗದ್ದವನ್ನು ಮೊಣಕಾಲುಗಳ ನಡುವೆ ಹುದುಗಿಸುವಂತೆ ಮಾಡಿ.

*ಈ ಭಂಗಿಯಲ್ಲಿ ಉಸಿರುಕಟ್ಟಿ ಎಷ್ಟು ಹೊತ್ತು ಸಾಧ್ಯವೋ ಅಷ್ಟೂ ಹೊತ್ತು ಹಾಗೇ ಇರಿ.

*ಬಳಿಕ ನಿಧಾನವಾಗಿ ಮೊದಲ ಹಂತಕ್ಕೆ ಬನ್ನಿ.

*ಇದೇ ವಿಧಾನವನ್ನು ಇನ್ನೊಂದು ಕಾಲಿಗೆ ಅನುಸರಿಸಿ. ಪ್ರತಿ ಕಾಲನ್ನೂ ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ.

ಭ್ರಹ್ಮರಿ ಪ್ರಾಣಾಯಾಮ

ಭ್ರಹ್ಮರಿ ಪ್ರಾಣಾಯಾಮ

* ಸಾಧ್ಯವಾದರೆ ಪದ್ಮಾಸನದಲ್ಲಿ, ಸಾಧ್ಯವಾಗದಿದ್ದರೆ ಚಕ್ಕಲೆ ಮಕ್ಕಲೆ ಹಾಕಿ ಆರಾಮವಾಗಿ ಕುಳಿತುಕೊಳ್ಳಿ.

*ಈಗ ಕಣ್ಣುಗಳನ್ನು ಮುಚ್ಚಿಕೊಂಡು ಎರಡೂ ಕೈಬೆರಳುಗಳಿಂದ ಕಣ್ಣುಗಳನ್ನು ಮುಚ್ಚಿಕೊಳ್ಳಿ. ಮೊಣಕೈಗಳು ಭೂಮಿಗೆ ಸಮಾನಾಂತರವಾಗಿರಬೇಕು.

* ಹಾಗೇ ಎರಡೂ ಹೆಬ್ಬೆರಳುಗಳನ್ನು ಕಿವಿಯ ಚಿಕ್ಕಮೂಳೆಯನ್ನು ಮಡಚಿ ಹೊರಗಿನ ಶಬ್ದ ಕೇಳಿಸದಂತೆ ಮಾಡಿ.

ಭ್ರಹ್ಮರಿ ಪ್ರಾಣಾಯಾಮ

ಭ್ರಹ್ಮರಿ ಪ್ರಾಣಾಯಾಮ

* ಈಗ ಪೂರ್ಣ ಉಸಿರೆಳೆದುಕೊಂಡು ಕೇವಲ ಮನಸ್ಸಿನ ಮೇಲೆ ಏಕಾಗ್ರತೆಯಿಂದ ಓಂ ಮಂತ್ರದ ಮ್ ಮ್ ಮ್ ಸದ್ದನ್ನು ಮಾತ್ರ ಉಚ್ಛರಿಸಿ. ಈ ಉಚ್ಚಾರಣೆಯ ಕಂಪನವನ್ನು ನೀವು ಸ್ವತಃ ಕೇಳುವಂತಾಗಬೇಕು..

*ಬಳಿಕ ಉಸಿರು ಬಿಟ್ಟು ಮತ್ತೊಮ್ಮೆ ಇದೇ ವಿಧಾನವನ್ನು ಪುನರಾವರ್ತಿಸಿ.

* ಈ ವಿಧಾನವನ್ನುಸುಮಾರು ಆರು ಬಾರಿ ಪುನರಾವರ್ತಿಸಿ. ಆರೋಗ್ಯಕ್ಕೆ ನವ ಚೈತನ್ಯ ತುಂಬುವ ಪ್ರಾಣಾಯಾಮ

 
English summary

10-Minute Yoga Asanas To Improve Concentration During Exams

Listed are a few of the yoga asanas that help in improving concentration, especially during the exams. Read on to know more.
Subscribe Newsletter