March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ!

ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 06 (March 06 Horoscope)ರ ನಿಮ್ಮ ರಾಶಿಫಲ ನೋಡೋಣ:

ಮೇಷ ರಾಶಿ

ಮೇಷ ರಾಶಿ ಜನರಿಗೆ ಈ ದಿನವು ಮಿಶ್ರಫಲವನ್ನು ತರಲಿದೆ. ನಿಮ್ಮ ವ್ಯವಹಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಿ. ಬ್ಯಾಂಕಿಂಗ್ ವಿಚಾರ ಸಂಬಂಧಿಸಿದಂತೆ ಇಂದು ಹಿನ್ನಡೆ ಅನುಭವಿಸಬಹುದು. ಆಪ್ತರಿಂದ ನಿಮಗೆ ಬರುವ ಹಣ ಮತ್ತೆ ಸಿಲುಕಬಹುದು.

ವೃಷಭ ರಾಶಿ

ವೃಷಭ ರಾಶಿ ಜನರಿಗೆ ಈ ದಿನವು ಅನಾನುಕೂಲಗಳ ತರಬಹುದು. ನೀವು ಮಾಡಬೇಕಿದ್ದ ಕೆಲಸದಲ್ಲಿ ಅಡ್ಡಿಗಳಿವೆ. ಹಲವು ಸಮಯದಿಂದ ನೀವು ಮಾಡಿದ್ದ ಕೆಲಸವು ಮತ್ತೊಬ್ಬರ ಪಾಲಾಗಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಯಾರಿಗಾದರು ವಸ್ತು ನೀಡುವುದು ಬಾಕಿ ಉಳಿದಿದ್ದರೆ ಇಂದು ಪೂರ್ಣ ಮಾಡುವಿರಿ.

March-06-2025-daily-horoscope-prediction

ಮಿಥುನ ರಾಶಿ

ಮಿಥುನ ರಾಶಿ ಜನರಿಗೆ ಇಂದು ಪ್ರಯಾಣಗಳ ಮಾಡಬೇಕಾದ ದಿನವಾಗುತ್ತದೆ. ನಿಮ್ಮ ಸಂಬಂಧಿಕರ ಜೊತೆಗಿನ ಒಡನಾಟದಿಂದ ನಿಮ್ಮಲ್ಲಿ ಖರ್ಚುಗಳು ಹೆಚ್ಚಾಗುವ ಸಂಭವವಿದೆ, ವಾಹನ ಸಂಬಂಧಿತ ವಿಚಾರವಾಗಿ ನೀವು ಎಚ್ಚರಿಕೆಯಿಂದ ಇರುವುದು ಉತ್ತಮ.

ಕರ್ಕ ರಾಶಿ

ಕರ್ಕ ರಾಶಿಯ ಜನರಿಗೆ ಅನುಕೂಲಕರ ದಿನ. ಇಂದು ನಿಮಗೆ ಹಣಕಾಸು ವಿಚಾರದಲ್ಲಿ ಶುಭವಿದೆ. ಪ್ರೇಮಿಗಳು, ದಾಂಪತ್ಯ ವಿಚಾರದಲ್ಲಿನ ಅಡ್ಡಿಗಳು ನಿವಾರಣೆಯಾಗಲಿದೆ. ನಿಮ್ಮ ಬಹು ಸಮಯದ ಅನಾರೋಗ್ಯವೊಂದು ನಿವಾರಣೆಯಾಗಲಿದೆ. ವ್ಯಾಪಾರಿಗಳಿಗೆ ಶುಭ ದಿನ.

ಸಿಂಹ ರಾಶಿ

ಸಿಂಹ ರಾಶಿಯ ಜನರಿಗೆ ಈ ದಿನವು ಅನುಕೂಲಕರ ವಾತಾವರಣ ತರಲಿದೆ. ಆಪ್ತರೊಬ್ಬರಿಂದ ನಿಮಗೆ ಬರಬೇಕಿದ್ದ ಹಣ ಕೈ ಸೇರಲಿದೆ. ಯಾರೊಂದಿಗಾದರು ಹಣ ಕಾಸಿನ ವ್ಯವಹಾರ ಮಾಡುತ್ತಿದ್ದರೆ ನಿಮ್ಮ ಮಾತುಗಳ ಮೇಲೆ ಹಿಡಿತ ಹಾಗೂ ತಾಳ್ಮೆ ಇಟ್ಟುಕೊಳ್ಳಿ. ದಾಂಪತ್ಯ ಸುಖವಿದೆ.

ಕನ್ಯಾ ರಾಶಿ

ಕನ್ಯಾ ರಾಶಿ ಜನರಿಗೆ ಈ ದಿನದಲ್ಲಿ ಬಹಳ ಅನುಕೂಲವಿದೆ, ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಮನೆಯ ಬೆಂಬಲವಿದೆ. ಸರ್ಕಾರಿ ದಾಖಲಾತಿ ವಿಚಾರವಾಗಿ ನೀವು ಚಿಂತೆಯಲ್ಲಿದ್ದರೆ ನಿವಾರಣೆಯಾಗುವ ಸಮಯವಿದು. ಬ್ಯಾಂಕ್ ಸಂಬಂಧಿಸಿದ ಕೆಲಸಗಳು ಪೂರ್ಣವಾಗುವ ನಿರೀಕ್ಷೆ ಇದೆ.

ತುಲಾ ರಾಶಿ

ತುಲಾ ರಾಶಿಯ ಜನರಿಗೆ ಈ ದಿನವು ಅನುಕೂಲವನ್ನು ತರಲಿದೆ. ಯಾರಿಂದಾದರು ನೀವು ಸಹಾಯ ಬಯಸಿದ್ದರೆ ಅನುಕೂಲಕರ ವಾತಾವರಣವಿದೆ. ಮದುವೆ ಕಾರ್ಯ ಸಂಬಂಧಿತ ವಿಚಾರವಾಗಿ ಚರ್ಚೆಗಳಿವೆ. ವಾಹನ ಲಾಭವಿದೆ. ಸ್ವಂತ ವ್ಯವಹಾರದಲ್ಲಿ ಶುಭ ನೋಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯ ಜನರಿಗೆ ಈ ಸಮಯವು ಮಿಶ್ರಫಲಕ್ಕೆ ಕಾರಣವಾಗುತ್ತಿದೆ. ಗೃಹಿಣಿಯರು ಖರ್ಚು ಮಾಡುವ ಮುನ್ನ ಆಲೋಚಿಸುವುದು ಉತ್ತಮ. ಯಾರಿಂದಾದರು ಹಣ ಪಡೆಯುವ ಬಯಕೆ ಈಡೇರಬಹುದು. ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ.

ಧನು ರಾಶಿ

ಧನು ರಾಶಿಯ ಜನರಿಗೆ ಈ ದಿನವು ಬಹಳ ಅನುಕೂಲ. ನೀವು ಮಾಡಬೇಕಿದ್ದ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸುವಿರಿ. ಆಪ್ತರೊಬ್ಬರಿಂದ ನಿಮ್ಮ ಕೆಲಸದಲ್ಲಿ ಸಹಕಾರವಿದೆ. ಸ್ನೇಹಿತರ ವಲಯವನ್ನು ಭೇಟಿಯಾಗಬಹುದು. ಯಾರಿಗಾದರು ಸಾಲ ನೀಡುವಾಗ ಎಚ್ಚರ ವಹಿಸಿ.

ಮಕರ ರಾಶಿ

ಮಕರ ರಾಶಿಯಲ್ಲಿ ಗೃಹಿಣಿಯರು ಇಂದು ವಾಹನ ಸಂಬಂಧಿತ ಸಮಸ್ಯೆ ಎದುರಿಸಬಹುದು. ಪ್ರಯಾಣಗಳಲ್ಲಿ ಅಶುಭವಾಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಮಾಡಬೇಕಿದ್ದ ಕೆಲಸ ಮುಂದೂಡುವಿರಿ. ಮನೆಗಾಗಿ ನೀವು ಖರ್ಚು ಮಾಡುವಿರಿ.

ಕುಂಭ ರಾಶಿ

ಕುಂಭ ರಾಶಿಯ ಜನರಲ್ಲಿ ಈ ದಿನವು ಪ್ರಯಾಣಗಳಿಂದ ತುಂಬಿರಬಹುದು. ಸ್ವಂತ ಉದ್ಯೋಗಿಗಳು ದೊಡ್ಡ ಮಟ್ಟದಲ್ಲಿ ಲಾಭ ನೋಡಬಹುದು. ಬಹು ಸಮಯದ ನಿಮ್ಮ ಬಯಕೆಯು ಈಡೇರಲಿದೆ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಶುಭ ಸಮಯ ಇದಾಗುತ್ತಿದೆ.

ಮೀನ ರಾಶಿ

ಮೀನ ರಾಶಿಯ ಜನರಿಗೆ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವ ದಿನವಾಗಲಿದೆ. ನೀವು ಮಾಡಬೇಕಿದ್ದ ಕೆಲಸಗಳ ಕಡೆ ಗಮನವಿಡಿ. ವಾಹನ ವಿಚಾರದಲ್ಲಿ ನಿಮಗೆ ಅಡೆತಡೆಗಳು ಇರಬಹುದು. ತಂದೆ ತಾಯಿಯ ಆರೋಗ್ಯದ ಕಡೆಗೆ ಗಮನವಿಡಿ.

English summary

March-06-2025-daily-horoscope-prediction-for-12-zodiac-signs-in-kannada

Here is Horoscope Today, 06 March Horoscope: Daily Horoscope Prediction For 12 Zodiac signs In Kannada
Story first published: Friday, March 6, 2026, 5:00 [IST]
X
Desktop Bottom Promotion