For Quick Alerts
ALLOW NOTIFICATIONS  
For Daily Alerts

ಮಿದುಳನ್ನು ಚುರುಕುಗೊಳಿಸುವ ಹೊಸ ಯೋಗ!

|

ಚಿಕ್ಕಂದಿನಲ್ಲಿರುವ ಏನಾದರೂ ತಪ್ಪು ಮಾಡಿದರೆ ಟೀಚರ್ಸ್ ಕೊಡುವ ಶಿಕ್ಷೆಗಳಲ್ಲಿ ಕಿವಿ ಹಿಡಿದು ಬಸ್ಕಿ ಹೊಡೆಯುವುದು. ನಮ್ಮ ಕಿವಿಯನ್ನು ನಾವೇ ಹಿಡಿದು 50 ಅಥವಾ 100 ಬಾರಿ ಬಸ್ಕಿ ಹೊಡೆಯುವುದು. ಈ ಶಿಕ್ಷೆ ಬಹುತೇಕ ಎಲ್ಲರೂ ಅನುಭವಿಸಿರುತ್ತೀರಿ. ಬಸ್ಕಿ ಹೊಡೆಸುತ್ತಾರೆ ಎಂಬ ಭಯದಿಂದ ನಮ್ಮ ತುಂಟಾಟಗಳಿಗೆ ಕಡಿವಾಣ ಹಾಕಿರುತ್ತೇವೆ ಕೂಡ. ಹೌದಲ್ಲವೇ?

ಒಂದು ವೇಳೆ ನೀವು ಬಸ್ಕಿ ಹೊಡೆದಿದ್ದರೆ ನಿಮಗೆ ಅದರಿಂದ ಒಂದು ಅದ್ಭುತ ಪ್ರಯೋಜನ ದೊರೆತಿರುತ್ತದೆ, ಅದೇನೆಂದು ಗೊತ್ತ? ನಿಮ್ಮ ಬ್ರೈನ್ ಅಂದರೆ ಮಿದುಳಿನ ಸಾಮರ್ಥ್ಯ ಹೆಚ್ಚಾಗಲು ಕೂಡ ಅದು ಸಹಾಯ ಮಾಡಿರುತ್ತದೆ! ಹೌದು ಇತ್ತೀಚಿಗೆ ನಡೆಸಿದ ಸಂಶೋಧನೆಯಿಂದ ಕಿವಿ ಹಿಡಿದರೆ ಮಿದುಳಿಗೆ ಎಲೆಕ್ಟ್ರಾನಿಕ್ಸ್ ಸಂದೇಶ ರವಾನೆಯಾಗಿ ಮಿದುಳು ಚುರುಕಾಗುವುದು ಎಂದು ತಿಳಿದು ಬಂದಿದೆ.

The New Yoga That Improves The Brain

ಇದು ಹೇಗೆ ಸಹಾಯ ಮಾಡುತ್ತದೆ?
ಫಿಲೋಸಫಿ ಪ್ರಕಾರ ಮಿದುಳಿಗೆ ಜೋಡಣೆಯಾಗಿರುವ ನರಗಳು ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಬಲ ಕಿವಿಯ ನರಗಳು ಮಿದುಳಿನ ಎಡ ಭಾಗಕ್ಕೆ ಜೋಡಣೆಯಾದರೆ, ಎಡ ಕಿವಿಯ ನರಗಳು ಮಿದುಳಿನ ಬಲ ಭಾಗಕ್ಕೆ ಜೋಡಣೆಯಾಗಿದೆ. ಕಿವಿಗೆ ಮತ್ತು ಮಿದುಳಿಗೆ ಒಂದಕ್ಕೊಂದು ಸಂಬಂಧವಿದೆ.

ಆದ್ದರಿಂದ ಕಿವಿಯನ್ನು ಹಿಡಿದಾಗ ಅಥವಾ ಮಸಾಜ್ ಮಾಡಿದಾಗ ಆ ಶಕ್ತಿಯ ಸಂದೇಶವೂ ಮಿದುಳಿಗೆ ರವಾನೆಯಾಗಿ ಮಿದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಕಿವಿ ಪಾತ್ರವಲ್ಲ ಹಣೆ, ಗಂಟಲು ಮತ್ತು ಹೃದಯ ಕೂಡ ಮಿದುಳಿನ ಸಾಮರ್ಥ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಯೋಗ
ಮಿದುಳಿನ ಸಾಮರ್ಥ್ಯ ಹೆಚ್ಚಿಸಲು ಒಂದು ಯೋಗವಿದೆ. ಅದು ಬ್ರಾಹ್ಮೀ ಪ್ರಾಣಯಾಮ. ಇದನ್ನು ಪಾಲಿಸುತ್ತಿದ್ದರೆ ಬುದ್ಧಿ ಶಕ್ತಿ ಚುರುಕಾಗಿ ಇರುವುದು. ಇದನ್ನು ಸೂಪರ್ ಬ್ರೈನ್ ಯೋಗವೆಂದು ಕರೆಯಬಹುದು.

English summary

The New Yoga That Improves The Brain

As per a new form of yoga, that which was considered to be a severe punishment in school — where you touch your ears — is actually a simple effective technique to energise and recharge the brain. 
X
Desktop Bottom Promotion